ಮುದ್ದೇಬಿಹಾಳ: ಮಳೆಗಾಲ ಪ್ರಾರಂಭವಾಗಿದ್ದು ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಕರುಳು ಬೇನೆ, ಕಾಲರ, ಕಾಮಾಲೆ, ವಿಷಮಶೀತ ಜ್ವರ ಇತ್ಯಾದಿ ಹಾಗೂ ಬಹು ದಿನಗಳವರೆಗೆ ನೀರಿನಲ್ಲಿ ಈಡೀಸ್ ಸೊಳ್ಳೆ ಸಂತಾನೋತ್ಪತ್ತಿ ಮಾಡುವುದರಿಂದ ಹಾಗೂ ಸೊಳ್ಳೆಗಳಿಂದ ಹರಡುಬಹುದಾದ ಡೆಂಗ್ಯೂ, ಚಿಕುನಗುನ್ಯ ಇನ್ನಿತರ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಕೂಡಲೇ ಎಲ್ಲ ಪಂಚಾಯತನ ಅಭಿವೃದ್ಧಿ ಅಧಿಕಾರಿಗಳು ಜಾಗೃತರಾಗಬೇಕು ಎಂದು ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಡಿದರು.
ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಂದ ನಿಯಮಿತವಾಗಿ ಈಡಿಸ್ ಲಾರ್ವ ಸಮೀಕ್ಷೆ ಹಾಗೂ ಕುಡಿಯುವ ನೀರಿನ ಮೂಲಗಳಿಂದ ನೀರಿನ ಮಾದರಿಗಳು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ರೋಗಗಳು ಹರಡದಂತೆ ಗ್ರಾಮ ಪಂಚಾಯತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಿದೆ. ಎಲ್ಲ ಕುಡಿಯುವ ನೀರಿನ ಟ್ಯಾಂಕರ್ ಗಳನ್ನು ಕೋರಿನೆಷನ್ ಮಾಡಿಸಿ (ಬೀಚಿಂಗ್ ಪೌಡರ್ ಹಾಕಿಸಿ) ಶುದ್ಧ ಕುಡಿಯುವ ನೀರನ್ನು ಒದಗಿಸುವುದು, ಕೈ ಪಂಪುಗಳು ಮಿನಿ ವಾಟರ್ ಟ್ಯಾಂಕ್ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಗ್ರಾಮಗಳಲ್ಲಿ ನೀರು ನಿಲ್ಲದಂತೆ ಸೊಳ್ಳೆಗಳ ನಿಯಂತ್ರಣಕ್ಕೆ ತಗ್ಗು ಗುಂಡಿಗಳನ್ನು ಮುಚ್ಚಿಸಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ನೀರಿನ ಸರಬರಾಜು ಪೈಪಿನಲ್ಲಿ ಸೋರಿಕೆ ಇದ್ದಲ್ಲಿ ತಕ್ಷಣವೇ ದುರಸ್ತಿ ಅಥವಾ ಬದಲಾಯಿಸುವುದು, ಕುಡಿಯುವ ನೀರಿನ ಸರಬರಾಜುಗಳ ಕನಿಷ್ಠ ೧೦೦ ಅಡಿ ಸುತ್ತಮುತ್ತಲು ತಿಪ್ಪೆಗುಂಡಿ ಕಸ ಕಡ್ಡಿ ಹಾಗೂ ವಿಸರ್ಜನೆ ಮಾಡದಂತೆ ಕಡ್ಡಾಯವಾಗಿ ನಿಷೇಧಿಸುವುದು, ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯ, ಆನೆಕಾಲುರೋಗ ಡೆಂಗೂ ಜ್ವರ ಚಿಕೂನ್ ಗುನ್ಯಾ ಹರಡದಂತೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಫಾಗಿಂಗ್ ವ್ಯವಸ್ಥೆ ಮಾಡುವುದು, ಶುದ್ಧ ನೀರಿನ ಘಟಕಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಹೀಗೆ ಗ್ರಾಮಗಳಲ್ಲಿ ನೈರ್ಮಲ್ಯವನ್ನು ತೃಪ್ತಿಕರವಾಗಿ ನಿರ್ವಹಿಸುವಂತೆ ತಿಳಿಸಿದರು.
ವ್ಹಿ.ಬಿ.ಡಿ ಮೇಲ್ವಿಚಾರಕ ಎಸ್.ಸಿ.ರುದ್ರವಾಡಿ ಮಾತನಾಡಿ ಪಿಪಿಟಿ ಮೂಲಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ಕೆಎಚ್‌ಪಿಟಿ ಸ್ಫೂರ್ತಿ ಯೋಜನೆಯಲ್ಲಿ ಕಾರ್ಯನಿರ್ವಸುತ್ತಿರುವ ಕೋರ್ಡಿನೇಟರ್ ರ್ಪದ್ಮಾವತಿ ರಡ್ಡೆರ್ ಅವರು ಮಾತನಾಡಿ ಕಾವಲು ಸಮಿತಿಯ ಉದ್ದೇಶಗಳನ್ನು ತಿಳಿಸಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕಾವಲು ಸಮಿತಿಯನ್ನು ರಚನೆ ಮಾಡಿ ಪ್ರತಿ ತಿಂಗಳು ಸಭೆಯನ್ನು ಮಾಡಬೇಕಾಗುತ್ತದೆ ಇದಕ್ಕೆ ಗ್ರಾಮ ಪಂಚಾಯತಿಯಿಂದ ಸಹಕಾರ ನೀಡಬೇಕು ಎಂದರು.
ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಪುನೀತ್ ತಲ್ಲೂರ, ಜಿಲ್ಲಾ ಸ್ವಚ್ಛ ಭಾರತ್ ನ ಭೀಮಪ್ಪ ಲೋಕಪೂರ್, ತಾಲೂಕು ಪಂಚಾಯತ ಪ್ರಭಾರ ಇಓ ಆರ್.ಎಸ್.ಹೊಸಗೌಡರ, ಪಿಡಿಓಗಳಾದ ಆನಂದ ಹಿರೇಮಠ, ಪರಶುರಾಮ ವನಹಳ್ಳಿ, ಶಿವಾನಂದ ಬಡಿಗೇರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯೆ ತೆರದಾಳ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ, ಎಂ.ಎಸ್.ಗೌಡರ ಇದ್ದರು.
Subscribe to Updates
Get the latest creative news from FooBar about art, design and business.
ಡೆಂಗ್ಯೂ-ಚಿಕುನಗುನ್ಯ ಹರಡುವ ಸಾಧ್ಯತೆ; ಜಾಗೃತರಾಗಿರಲು ಪಿಡಿಒಗಳಿಗೆ ಕರೆ
Related Posts
Add A Comment

