ವಿಜಯಪುರ: ಮಾದಕ ದ್ರವ್ಯ ಸೇವನೆ ನಮ್ಮ ದೇಶದ ಅತೀ ದೊಡ್ಡ ಪಿಡುಗು. ಈ ಪಿಡುಗನ್ನು ತಳ ಮಟ್ಟದಿಂದ ತೊಡೆದು ಹಾಕುವ ಪ್ರಯತ್ನ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇವನೆಗೆ ಯುವ ಜನತೆ ಬಲಿಯಾಗುತ್ತಿದ್ದು, ಯುವಕರ ಜೀವನವೇ ಶೂನ್ಯವಾಗುತ್ತಿದೆ. ಶಾಲಾ-ಕಾಲೇಜುಗಳ ಸುತ್ತಲೂ ಗಾಂಜಾ ಸೇರಿದಂತೆ ಮಾದಕ ವ್ಯಸನ ಸೇವನೆ ಹೆಚ್ಚಾಗುತ್ತಿದ್ದು, ಯುವ ಜನರು ಇದನ್ನು ಸೇವನೆಯನ್ನು ಬಹಿಸ್ಕರಿಸಬೇಕು ಎಂದು ವಿಜಯಪುರ ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಐ.ಎಂ.ದುಂಡಸಿಯ ಹೇಳಿದರು.
ಬುಧವಾರದಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಆದರ್ಶ ನಗರ ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟದ ಕುರಿತು ಜಾಗೃತಿ’ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು. ಮದ್ಯಪಾನ ವ್ಯವಸ್ಥೆ ಇಡೀ ಸಮಾಜವನ್ನೇ ಹಾಳು ಮಾಡುತ್ತಿದೆ. ಮದ್ಯಪಾನ, ಮಾದಕ ದ್ರವ್ಯ ಸೇವನೆ ಮುಂತಾದವುಗಳು ನಮ್ಮ ಸಮಾಜದ ಕೆಟ್ಟ ವ್ಯವಸ್ಥೆಯಾಗಿದೆ. ಯುವಜನರು ಇಂತಹ ದುಃಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ. ಮಕ್ಕಳು ಮಾದಕ ದ್ರವ್ಯ ಸೇವನೆಯಿಂದ ದೂರವಿರುವಂತೆ ಕಾಳಜಿ ವಹಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ವ್ಹಿ.ದೇಶಪಾಂಡೆಯವರು ಮಾತನಾಡುತ್ತ. ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಹಾಳು ಮಾಡುವುದಿಲ್ಲ. ಕುಟುಂಬ ಹಾಗೂ ಸಮಾಜದ ಸ್ವಾಸ್ಥö್ಯವನ್ನು ಹಾಳು ಮಾಡುತ್ತದೆ. ಮಾದಕ ವಸ್ತುಗಳ ಸೇವನೆಗೊಮ್ಮೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಆರ್.ವಿ.ಭುಜಂಗನವರ, ನಿರೂಪಣೆ ಮತ್ತು ವಂದನಾರ್ಪಣೆಯನ್ನು ಎಸ್.ಕೆ.ಶಿಂಧೆಯವರು ನಡೆಸಿಕೊಟ್ಟರು.
Subscribe to Updates
Get the latest creative news from FooBar about art, design and business.
Related Posts
Add A Comment

