Author: editor.udayarashmi@gmail.com

ವಿಜಯಪುರ: ನಾನು ಜಾಸ್ತಿ ದುಡ್ಡು ಮಾಡಬೇಕಾಗಿದ್ರೆ ತೆಲುಗು ತಮಿಳು ಚಿತ್ರರಂಗಕ್ಕೆ ಹೋಗಬೇಕಾಗಿತ್ತು. ಆದ್ರೆ ಕನ್ನಡದ ಪ್ರೇಕ್ಷಕರು, ಅಭಿಮಾನಿಗಳು ಕೊಟ್ಟಿರೋ ಪ್ರೀತಿನೆ ಸಾಕು ಎಂದು ಕನ್ನಡದ ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ಪಾತ್ರ ಮಾಡುತ್ತಾ ಬಂದಿದ್ದೇನೆ, ಉತ್ತರ ಕರ್ನಾಟಕ ಭಾಗದ ಹಳ್ಳಿಗಳು ನನಗೆ ಚಿರಪರಿಚಿತ ಎಂದು ಕನ್ನಡದ ಖ್ಯಾತ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಹೇಳಿದರು.ನಗರದ ಸೊಲ್ಲಾಪುರ ರಸ್ತೆಯಲ್ಲಿ ಕೆಫೆ ಇನ್ ಉದ್ಘಾಟಿಸಿ ಅವರು ಮಾತನಾಡಿದರು, ಡಾ,ರಾಜ್ ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ನಟರೊಂದಿಗೆ ಪಾತ್ರ ಮಾಡಿರೋದು ಪ್ರೇಕ್ಷಕರು ಅಭಿಮಾನಿಗಳ ಆಶೀರ್ವಾದದಿಂದ, ನಾನು ಹುಟ್ಟಿದ್ದು ಬೆಂಗಳೂರು,ಈಗ ಸಿಂಗಾಪುರ ಆಗಿದೆ‌. ನಮ್ಮ ತಂದೆ ಟೆನ್ನಿಸ್ ಕೋಚ್ ಆಗಿದ್ದರು. ನಾನು ಟೆನ್ನಿಸ್ ಕೋಚ್ ಆಗಿದ್ದೆ, ಚಿತ್ರರಂಗಕ್ಕೆ ಬಂದ್ಮೇಲೆ ಟೆನ್ನಿಸ್ ಕೃಷ್ಣ ಅಂತ ಹೆಸರು ಇಟ್ಟುಕೊಂಡೆ, ಚಿತ್ರರಂಗದಲ್ಲಿ ಹೊನ್ನಾಳಿ ಕೃಷ್ಣ, ಬೆಕ್ಕಿನ ಕಣ್ಣು ಕೃಷ್ಣ ಇದ್ದಾರೆ. ಹೀಗಾಗಿ ಟೆನ್ನಿಸ್ ಕೃಷ್ಣ ಎಂದು ಹೆಸರು ಬದಲಾಯಿಸಿಕೊಂಡೆ, ನಾನು ಒಂದೇ ಒಂದು ಡ್ರಾಪ್ ಸಹಿತ ಮದ್ಯ ಸೇವನೆ ಮಾಡೋಲ್ಲ, ಆದ್ರು ಕುಡುಕನ…

Read More

ಮೆ:ಡಬ್ಲೂಆರ್‌ಎಸ್‌ಆರ್ ಪಾವರ್ ಟ್ರಾನ್ಸಮಿಶನ್ ದಿಂದ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ವಿಜಯಪುರ: ಜಿಲ್ಲೆಯ ಕೊಲ್ಹಾರ, ಬಸವನಬಾಗೇವಾಡಿ, ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಒಟ್ಟು ೧೭೭ ಸ್ಥಳಗಳಲ್ಲಿ ವಿದ್ಯುತ್ ಗೋಪುರಗಳನ್ನು ಅಳವಡಿಸಲು ಏಕಾಏಕಿ ಹೋಗಿ ಕಾಮಗಾರಿ ಆರಂಭಿಸದೇ ಸಂಬಂಧಿಸಿದ ಜಮೀನಿನ ಭೂಮಾಲೀಕರಿಗೆ-ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಸೂಕ್ತ ತಿಳುವಳಿಕೆ ನೀಡಿದ ನಂತರ ಕಾಮಗಾರಿ ಆರಂಭಿಸುವಂತೆ ಕಂಪನಿಯವರಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.ಅದಾನಿ ಗ್ರೂಪ್‌ನ ಮೆ: ಡಬ್ಲೂಆರ್‌ಎಸ್‌ಆರ್ ಪಾವರ್ ಟ್ರಾನ್ಸಮಿಶನ್ ಲಿ. ವತಿಯಿಂದ ೭೬೫ ಕೆ.ವಿ. ಪ್ರಸರಣ ಮಾರ್ಗವನ್ನು ಕೂಡಗಿ ವಿದ್ಯುತ್ ಸ್ಥಾವರದ (ನರೇಂದ್ರ-ಹೊಸ) ಸ್ವೀಕರಣಾ (ಕೂಡಗಿ) ಕೇಂದ್ರದಿಂದ ಪುಣೆ(ಜಿಐಎಸ್) ಸ್ವೀಕರಣಾ ಕೇಂದ್ರದವರೆಗೆ ನಿರ್ಮಿಸಲಾಗುತ್ತಿದ್ದು, ಸದರಿ ಕಂಪನಿಯವರು ಸರಿಯಾದ ಮಾಹಿತಿ ನೀಡದೇ ಹಾಗೂ ಪರಿಹಾರ ಸಿಗುವ ನೋಟಿಸ್ ರೈತರಿಗೆ ನೀಡದೇ ಏಕಾಏಕಿ ಹೊಲದಲ್ಲಿ ಕಾಮಗಾರಿ ಆರಂಭಿಸಿರುವ ಕುರಿತು ಸಂಬಂಧಿಸಿದ ಜಮೀನಿನ ರೈತರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.ಈ ದೂರಿನ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸದರಿ ಕಂಪನಿಯೊಂದಿಗೆ ಸಭೆ ನಡೆಸಿ ಸೂಚನೆ ನೀಡಿದ…

Read More

ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಇಂಡಿ ತಾಲೂಕಿನ ಝಳಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಶನಿವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ: ವಲ್ಲಭ ಕಬಾಡೆ ಅಧ್ಯಕ್ಷತೆ ವಹಿಸಿದ್ದರು.ಸಿಕ್ಯಾಬ್ ಮಹಿಳಾ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಮೇತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಉಪನ್ಯಾಸಕರಾದ ಡಾ.ರಮೇಶ ತೇಲಿ ಅವರು ಉಪನ್ಯಾಸ ನೀಡಿ, ಹಲಸಂಗಿ ಗೆಳೆಯರು ೮೦೦ ತ್ರಿಪದಿ ಗರತಿಹಾಡು ಸಂಗ್ರಹಿಸಿ ಅಚ್ಚರಿ ಮೂಡಿಸಿದ್ದು, ತಂದೆ ತಾಯಿಯ ಪ್ರೀತಿ ಹಾಗೂ ದಾಂಪತ್ಯ ಜೀವನದ ಮೌಲ್ಯ ಕುರಿತು ಹಾಗೂ ಹಲಸಂಗಿ ಗೆಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಸಾಹಿತ್ಯದ ಮೂಲಕ ನೀಡಿದ ಕೊಡುಗೆಗಳು, ಮಧುರ ಚೆನ್ನರ ಜೀವನ ಹಾಗೂ ಮಾತಾ ಅರವಿಂದರ ದಾರಿಯ ಬಗ್ಗೆ ಪ್ರೊ: ಡಿ.ಭಿ.ಭಜಂತ್ರಿ ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಹಲಸಂಗಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಸಂತೋಷ ಭೋವಿ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಆರ್.ಎನ್.ಶಿಂಪಿ, ಜೆ.ಎಸ್.ಗಲಗಲಿ, ಚಿದಾನಂದ ಗಲಗಲಿ ಇತರರು ಉಪಸ್ಥಿತರಿದ್ದರು.ವಿರೇಶ ವಾಲಿ ಹಾಗೂ ತಂಡದವರು ಜಾನಪದ…

Read More

ವಿಜಯಪುರ: ಸೇವಾ ಮನೋಭಾವದ ಯುವಕರು ಸಂಘಟಿತರಾದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಡಾ. ಸುರೇಶ್ ಕಾಗಲ್ಕರ್ ರೆಡ್ಡಿ ಹೇಳಿದರು.ನಗರದ ಶಿವಶರಣ ಹರಳಯ್ಯ ಅಂಧರ ಸಂಸ್ಥೆಯಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಪಿಎಸ್ಐ ಸುರೇಶ ಮಂಟೂರ್ ಕೊಡ ಮಾಡಿದ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿವೇಕಾನಂದರು ತಮ್ಮ ಬದುಕಿನಲ್ಲಿ ಸಾಕಷ್ಟು ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು ಅದರಂತೆ ಭಾರತ ಯುವ ವೇದಿಕೆಯು ಕೂಡ ಯುವ ಮನಸುಗಳಿಂದ ಸಮಾಜಕ ಕಳಕಳಿಯ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಉತ್ತಮ ಆದರ್ಶ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿರುವ ಫೌಂಡೇಶನ್ ಅಧ್ಯಕ್ಷರಾದ ಸುನಿಲ್ ಜೈನಾಪುರ್ ಮಾತನಾಡಿ ಸಮಸ್ತ್ರವನ್ನು ಅಂದ ಮಕ್ಕಳಿಗೆ ಉಚಿತವಾಗಿ ವಿತರಿಸುವ ಮೂಲಕ ಪಿಎಸ್ಐ ಸುರೇಶ್ ಮಂಟೂರ ಸಾಮಾಜಿಕ ಕಳಕಳಿ ಮತ್ತು ಮಾನ್ವಿಯ ಮೌಲ್ಯಗಳ ಮೆರೆದಿದ್ದಾರೆ ‘ ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ‘ ಎನ್ನುವ ಮಾತನ್ನು ಎಲ್ಲರೂ ಪಾಲಿಸಿದರೆ ಸಂಕಷ್ಟದಲ್ಲಿರುವವರಿಗೆ ನೆರವಾಗಿರುತ್ತದೆ ಎಂದು ಹೇಳಿದರು.ಕರ್ನಾಟಕ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ…

Read More

ವಿಜಯಪುರ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ ಸಬಲೀಕರಣ ಹಾಗೂ ಕ್ರೀಡೆ ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರ ಸಂಯುಕ್ತ ಆಶ್ರಯದಲ್ಲಿ” ಮಹಾತ್ಮ ಗಾಂಧೀಜಿಯವರ ವಿಚಾರಗಳಲ್ಲಿ ಮಾನ್ವೀಯ ಮೌಲ್ಯಗಳು ” ವಿಷಯ ಕುರಿತು ರಾಜ್ಯ ಮಟ್ಟದ ಒಂದು ದಿನದ ಕಾರ್ಯಗಾರ ಜರುಗಿತು.ಸದರಿ ಕಾರ್ಯಕ್ರಮ ಉದ್ಘಾಟಿಸಿ ಭಾಗವಹಿಸಿದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳು ಹಾಗೂ ಸಮಾಜ-ವಿಜ್ಞಾನಗಳ ಡೀನ್ ಡಾ ಶಾಂತಾದೇವಿ ಮಾತನಾಡಿ, ಮಾನವೀಯ ಮೌಲ್ಯಗಳು ಇಂದಿನ ದಿನಗಳಲ್ಲಿ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿವೆ ಅವು ಕಾರ್ಯ ರೂಪದಲ್ಲಿ ಬರಬೇಕು. ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಅಪರಿಗ್ರಹ ಎಂಬ ಮೂರು ಮೌಲ್ಯಗಳು ಶ್ರೇಷ್ಠವಾಗಿವೆ ನಾವೆಲ್ಲರೂ ಗಾಂಧೀಜಿಯವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಕಾರ್ಯಕ್ರಮದ ಮೊದಲನೆಯ ಗೋಷ್ಠಿಯಲ್ಲಿ ‘ ಮಹಾತ್ಮ ಗಾಂಧೀಜಿ ಮತ್ತು ಸತ್ಯಾಗ್ರಹ ‘ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ನೇತಾಜಿ ಗಾಂಧೀಯವರು ಮಹಾತ್ಮ ಗಾಂಧೀಜಿ ಅವರು ಜಗತ್ತಿಗೆ ಶ್ರೇಷ್ಠ ತತ್ವಜ್ಞಾನಿ…

Read More

ಕಲಕೇರಿ: ಸಮೀಪದ ಕೆರುಟಗಿ ತಾಂಡಾ ಮೂಲಕ ತಿಳಗೂಳ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶಾಲೆಯ ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸಿಂದಗಿ ಘಟಕದ ವ್ಯವಸ್ಥಾಪಕರಿಗೆ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು.ಕೆರುಟಗಿ ತಾಂಡಾದಿಂದ ತಿಳಗೂಳ ಶಾಲೆಗೆ ಪ್ರತಿನಿತ್ಯ ಸುಮಾರು ೪೦ ರಿಂದ ೪೫ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೋಗುತ್ತಿದ್ದು, ಸುಮಾರು ೫ ಕಿಲೋಮೀಟರ್ ವರೆಗೆ ನಡೆದುಕೊಂಡು ಹೋಗುತ್ತಿರುವುದರಿಂದ ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಿಕೊಡಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಆಗ್ರಹ ಮಾಡಿದರುಈ ಸಂಧರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಹರ್ಷವರ್ಧನ್ ಪೂಜಾರಿ, ವಿದ್ಯಾರ್ಥಿ ಪರಿಷತ್ ತಾಲೂಕ ಅಧ್ಯಕ್ಷ ಕಾಶಿನಾಥ್, ಮುತ್ತು ಕಲಕೇರಿ ಭಾಗಪ್ಪ ಮತ್ತು ಸಂಘಟನೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4ನೇ ವಾರ್ಡಿನಲ್ಲಿ ಚರಂಡಿ ತುಂಬಿ ಮನೆಗಳಿಗೆ ನುಗ್ಗುತ್ತಿದ್ದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಗ್ರಾಮದ ಗೌರಿಶಂಕರ ಲೋಣಿಕರ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.ಲಚ್ಯಾಣ ಗ್ರಾಮದ ವಾರ್ಡ 4 ರಲ್ಲಿ ಚರಂಡಿ ಹಾಗೂ ಬಟ್ಟೆ ತೊಳೆದ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ನೀರು ಹೆಚ್ಚಾದಂತೆ ಮನೆಯ ಗೋಡೆಗೆ ಅಂಟಿಕೊಂಡು ನಿಲ್ಲುತ್ತಿರುವುದರಿಂದ ಮನೆಯ ಗೊಡೆ ತೇವಾಂಶ ಹಿಡಿದು ಬಿಳುವ ಪರಿಸ್ಥಿತಿ ಇದೆ. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಕೊಟ್ಟು ವರ್ಷವಾಗಿದೆ. ಪ್ರತಿನಿತ್ಯ ಭೇಟಿಯಾಗಿ ಮೌಖಿಕವಾಗಿ ಸಮಸ್ಯೆ ಬಗೆ ಹರಿಸಲು ಮನವಿ ಮಾಡಿಕೊಂಡರು ಸಮಸ್ಯೆ ಬಗೆಹರಿಸುತ್ತಿಲ್ಲ. ಹೀಗಾಗಿ ರಾತ್ರಿಯಾದರೆ ಸೊಳ್ಳೆಗಳು ಹೆಚ್ಚಾಗಿ ತೊಂದರೆ ಉಂಟಾಗಿದೆ. ಚರಂಡಿ ನೀರಿನ ರಭಸದಿಂದ ಮನೆವೊಳಗೆ ನುಗ್ಗುತ್ತಿದೆ.ಕೂಡಲೆ ಸಂಬಂಧಿಸಿದ ಇಲಾಖೆ ಮೇಲಾಧಿಕಾರಿಗಳು ಚರಂಡಿ ನಿರ್ಮಿಸಿ ಚರಂಡಿ ನೀರು ಹೋಗುವಂತೆ ಮಾಡಬೇಕು.ಇಲ್ಲವಾದರೆ ಕುಟುಂಬ ಸಮೇತ ಗ್ರಾಮ ಪಂಚಾಯಿತಿ ಮುಂದೆ ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಇಂಡಿ: ತಾಲೂಕಿನ ನಂದರಗಿ ಗ್ರಾಮದ ರೈತ ಕನ್ನಪ್ಪ ಕುಪಿಂದ್ರಾಯ ಪೂಜಾರಿ ಇವರು 4.00 ಎಕರೆ ಕೃಷಿ ಭೂಮಿಯನ್ನು ಹೊಂದಿರುತ್ತಾರೆ. ಒಣಬೇಸಾಯದಲ್ಲಿ ತೊಗರಿ, ಸಜ್ಜೆ, ಹೆಸರು ಇತ್ಯಾದಿ ಬೆಳೆಗಳನ್ನು ಬೆಳೆದು ತೇವಾಂಶದ ಕೊರತೆಯಿಂದಾಗಿ ಬೆಳೆಗಳು ಒಣಗಿ ಕಡಿಮೆ ಇಳುವರಿ ಬರುತ್ತಿತ್ತು. ಇದರಿಂದ ಕೃಷಿಯಲ್ಲಿ ಎಷ್ಟೆ ಕಷ್ಟಪಟ್ಟರೂ ನಿಗದಿತ ಲಾಭ ಆಗುತ್ತಿರಲಿಲ್ಲ. ಆದ್ದರಿಂದ ಸದರಿ ರೈತರು ಬೇಸತ್ತು ಕೃಷಿ ಇಲಾಖೆಗೆ ಭೇಟಿ ನೀಡಿ ತಮ್ಮ ನೋವನ್ನು ಹೇಳಿಕೊಂಡರು. ಈ ಸಮಯದಲ್ಲಿ ಕೃಷಿ ಇಲಾಖೆಗೆ ಕರ್ನಾಟಕ ಸರ್ಕಾರದಿಂದ ಕೃಷಿ ಭಾಗ್ಯ ಯೋಜನೆ ಬಂದಿತ್ತು. ಇದರ ಸವಲತ್ತನ್ನು ಪಡೆದು ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿಕೊಂಡರು. ಕಳೆದ ವರ್ಷ ಬರಗಾಲದಿಂದಾಗಿ ಬಸವಳಿದಿದ್ದ ರೈತರಿಗೆ ಈ ವರ್ಷ ಮುಂಗಾರು ಮಳೆ ಉತಮ್ಮವಾಗಿ ಆಗಿದ್ದರಿಂದ ಕೃಷಿ ಹೊಂಡದಲ್ಲಿ ನೀರು ತುಂಬಿಕೊಳ್ಳಲು ಅನುಕೂಲವಾಯಿತು. ಇದರಿಂದ ರೈತರು ಹರ್ಷಗೊಂಡು ಬೆಳೆಗಳ ಬದಲಾವಣೆ ಮಾಡಿಕೊಂಡು ಹತ್ತಿ, ಮೆಕ್ಕೆಜೋಳ ಬಿತ್ತನೆ ಮಾಡಿರುತ್ತಾನೆ. ಕೃಷಿ ಹೊಂಡದಲ್ಲಿ ಸಂಗ್ರಹವಾದ ಮಳೆ ನೀರನ್ನು ಹತ್ತಿ ಬೆಳೆಗೆ…

Read More

ಬಸವನಬಾಗೇವಾಡಿ: ಇಂದು ಜನರ ಜೀವನ ಪದ್ಧತಿ, ಆಹಾರ ಪದ್ಧತಿ ಬದಲಾವಣೆಯಾಗಿರುವದರಿಂದಾಗಿ ಬಹುತೇಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರೂ ಆರೋಗ್ಯಕರವಾಗಿರಲು ತಮ್ಮ ಜೀವನ ಪದ್ಧತಿ, ಆಹಾರ ಪದ್ಧತಿಯನ್ನು ಉತ್ತಮವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಜೀವನ ಸಾಗಿಸಬಹುದು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಹೃದಯ ತಜ್ಞ ಡಾ.ಅರುಣಕುಮಾರ ಉಳ್ಳಾಗಡ್ಡಿ ಹೇಳಿದರು.ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಸ್ಥಳೀಯ ಅಮರೇಶ್ವರ ಕ್ಲಿನಿಕ್ ವೈದ್ಯರ ದಿನಾಚರಣೆಯಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಬಹುತೇಕರು ಹೊರಗಿನ ಆಹಾರ ಪದಾರ್ಥಗಳಿಗೆ ಮಾರುಹೋಗುತ್ತಿದ್ದಾರೆ. ಜನರು ಆಹಾರದಲ್ಲಿ ತರಕಾರಿ, ಹಣ್ಣು-ಹಂಪಲು ಕಡಿಮೆ ಬಳಸುತ್ತಿರುವದರಿಂದಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೈಹಿಕ ಪರಿಶ್ರಮವೂ ಕಡಿಮೆಯಾಗುತ್ತಿದೆ. ಉತ್ತಮ ಆಹಾರ ಪದ್ಧತಿ, ನಿರಂತರ ವ್ಯಾಯಾಮ, ದುಶ್ಚಟಗಳಿಂದ ದೂರ ಈ ಮೂರನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಧೂಮಪಾನ, ಮಧ್ಯಪಾನದಿಂದ ದೂರವಿದ್ದರೆ ಹೃದಯವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು ಎಂದರು.ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಜನರ ಆರೋಗ್ಯಕರ ಜೀವನಕ್ಕೆ ಪೌರಕಾರ್ಮಿಕರ ಸೇವೆ…

Read More

ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಇಂಡಿ ತಾಲೂಕಿನ ಝಳಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಶನಿವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ: ವಲ್ಲಭ ಕಬಾಡೆ ಅಧ್ಯಕ್ಷತೆ ವಹಿಸಿದ್ದರು. ಸಿಕ್ಯಾಬ್ ಮಹಿಳಾ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ ಮೇತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಉಪನ್ಯಾಸಕರಾದ ಡಾ.ರಮೇಶ ತೇಲಿ ಅವರು ಉಪನ್ಯಾಸ ನೀಡಿ, ಹಲಸಂಗಿ ಗೆಳೆಯರು ೮೦೦ ತ್ರಿಪದಿ ಗರತಿಹಾಡು ಸಂಗ್ರಹಿಸಿ ಅಚ್ಚರಿ ಮೂಡಿಸಿದ್ದು, ತಂದೆ ತಾಯಿಯ ಪ್ರೀತಿ ಹಾಗೂ ದಾಂಪತ್ಯ ಜೀವನದ ಮೌಲ್ಯ ಕುರಿತು ಹಾಗೂ ಹಲಸಂಗಿ ಗೆಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಸಾಹಿತ್ಯದ ಮೂಲಕ ನೀಡಿದ ಕೊಡುಗೆಗಳು, ಮಧುರ ಚೆನ್ನರ ಜೀವನ ಹಾಗೂ ಮಾತಾ ಅರವಿಂದರ ದಾರಿಯ ಬಗ್ಗೆ ಪ್ರೊ: ಡಿ.ಭಿ.ಭಜಂತ್ರಿ ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಹಲಸಂಗಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಸಂತೋಷ ಭೋವಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಆರ್.ಎನ್.ಶಿಂಪಿ, ಜೆ.ಎಸ್.ಗಲಗಲಿ, ಚಿದಾನಂದ ಗಲಗಲಿ ಇತರರು ಉಪಸ್ಥಿತರಿದ್ದರು. ವಿರೇಶ ವಾಲಿ…

Read More