ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಇಂಡಿ ತಾಲೂಕಿನ ಝಳಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಶನಿವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ: ವಲ್ಲಭ ಕಬಾಡೆ ಅಧ್ಯಕ್ಷತೆ ವಹಿಸಿದ್ದರು. ಸಿಕ್ಯಾಬ್ ಮಹಿಳಾ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ ಮೇತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಉಪನ್ಯಾಸಕರಾದ ಡಾ.ರಮೇಶ ತೇಲಿ ಅವರು ಉಪನ್ಯಾಸ ನೀಡಿ, ಹಲಸಂಗಿ ಗೆಳೆಯರು ೮೦೦ ತ್ರಿಪದಿ ಗರತಿಹಾಡು ಸಂಗ್ರಹಿಸಿ ಅಚ್ಚರಿ ಮೂಡಿಸಿದ್ದು, ತಂದೆ ತಾಯಿಯ ಪ್ರೀತಿ ಹಾಗೂ ದಾಂಪತ್ಯ ಜೀವನದ ಮೌಲ್ಯ ಕುರಿತು ಹಾಗೂ ಹಲಸಂಗಿ ಗೆಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಸಾಹಿತ್ಯದ ಮೂಲಕ ನೀಡಿದ ಕೊಡುಗೆಗಳು, ಮಧುರ ಚೆನ್ನರ ಜೀವನ ಹಾಗೂ ಮಾತಾ ಅರವಿಂದರ ದಾರಿಯ ಬಗ್ಗೆ ಪ್ರೊ: ಡಿ.ಭಿ.ಭಜಂತ್ರಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಹಲಸಂಗಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಸಂತೋಷ ಭೋವಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಆರ್.ಎನ್.ಶಿಂಪಿ, ಜೆ.ಎಸ್.ಗಲಗಲಿ, ಚಿದಾನಂದ ಗಲಗಲಿ ಇತರರು ಉಪಸ್ಥಿತರಿದ್ದರು. ವಿರೇಶ ವಾಲಿ ಹಾಗೂ ತಂಡದವರು ಜಾನಪದ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ರವಿಕುಮಾರ ಅರಳಿ ನಿರೂಪಿಸಿದರು. ಪ್ರೊ: ಸಂಗಮೇಶ ಹಿರೇಮಠ ವಂದಿಸಿದರು.
Subscribe to Updates
Get the latest creative news from FooBar about art, design and business.
ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ
Related Posts
Add A Comment
