ವಿಜಯಪುರ: ಸೇವಾ ಮನೋಭಾವದ ಯುವಕರು ಸಂಘಟಿತರಾದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಡಾ. ಸುರೇಶ್ ಕಾಗಲ್ಕರ್ ರೆಡ್ಡಿ ಹೇಳಿದರು.
ನಗರದ ಶಿವಶರಣ ಹರಳಯ್ಯ ಅಂಧರ ಸಂಸ್ಥೆಯಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಪಿಎಸ್ಐ ಸುರೇಶ ಮಂಟೂರ್ ಕೊಡ ಮಾಡಿದ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರು ತಮ್ಮ ಬದುಕಿನಲ್ಲಿ ಸಾಕಷ್ಟು ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು ಅದರಂತೆ ಭಾರತ ಯುವ ವೇದಿಕೆಯು ಕೂಡ ಯುವ ಮನಸುಗಳಿಂದ ಸಮಾಜಕ ಕಳಕಳಿಯ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಉತ್ತಮ ಆದರ್ಶ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿರುವ ಫೌಂಡೇಶನ್ ಅಧ್ಯಕ್ಷರಾದ ಸುನಿಲ್ ಜೈನಾಪುರ್ ಮಾತನಾಡಿ ಸಮಸ್ತ್ರವನ್ನು ಅಂದ ಮಕ್ಕಳಿಗೆ ಉಚಿತವಾಗಿ ವಿತರಿಸುವ ಮೂಲಕ ಪಿಎಸ್ಐ ಸುರೇಶ್ ಮಂಟೂರ ಸಾಮಾಜಿಕ ಕಳಕಳಿ ಮತ್ತು ಮಾನ್ವಿಯ ಮೌಲ್ಯಗಳ ಮೆರೆದಿದ್ದಾರೆ ‘ ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ‘ ಎನ್ನುವ ಮಾತನ್ನು ಎಲ್ಲರೂ ಪಾಲಿಸಿದರೆ ಸಂಕಷ್ಟದಲ್ಲಿರುವವರಿಗೆ ನೆರವಾಗಿರುತ್ತದೆ ಎಂದು ಹೇಳಿದರು.
ಕರ್ನಾಟಕ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಂಗಮೇಶ್ ಜಾದವ್ ಮಾತನಾಡಿ ಅಂಧ ಮಕ್ಕಳನ್ನು ಸಾಕಿ ಸಲಹುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಸಮಾಜದ ಕಣ್ಣು ತೆರೆಸುವ ಕಾರ್ಯ ಈ ಬಾರತಯೋ ವೇದಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಸಮಾಜ ಮುಖಿಯಾಗಿ ಕೈಜೋಡಿಸಬೇಕು ಎಂದರು.
ವಿಜಯ್ ಟಾಯರ್ಸ್ ಮಾಲಿಕ ಪ್ರಕಾಶ್ ತುನ್ಸಿವಾಲ್ ಅಂದ ಮಕ್ಕಳ ವಸತಿ ಶಾಲೆಯ ಮುಖ್ಯ ಶಿಕ್ಷಕ ಶಿವಾಜಿ ಹರಣಶಿಕಾರಿ ಮಂಜುನಾಥ್ ಹೋನಕೇರಿ ಅನಿಲ್ ತಳವಾರ ಶಂಕರ್ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಂತೋಷ್ ಹೆಗಡೆ ನಿರೋಪಿಸಿದರು ಸತೀಶ್ ನಾಗಠಾಣ ಸ್ವಾಗತಿಸಿದರು ಬೀರು ಗಾಡಿವೆ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

