ವಿಜಯಪುರ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ ಸಬಲೀಕರಣ ಹಾಗೂ ಕ್ರೀಡೆ ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರ ಸಂಯುಕ್ತ ಆಶ್ರಯದಲ್ಲಿ” ಮಹಾತ್ಮ ಗಾಂಧೀಜಿಯವರ ವಿಚಾರಗಳಲ್ಲಿ ಮಾನ್ವೀಯ ಮೌಲ್ಯಗಳು ” ವಿಷಯ ಕುರಿತು ರಾಜ್ಯ ಮಟ್ಟದ ಒಂದು ದಿನದ ಕಾರ್ಯಗಾರ ಜರುಗಿತು.
ಸದರಿ ಕಾರ್ಯಕ್ರಮ ಉದ್ಘಾಟಿಸಿ ಭಾಗವಹಿಸಿದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳು ಹಾಗೂ ಸಮಾಜ-ವಿಜ್ಞಾನಗಳ ಡೀನ್ ಡಾ ಶಾಂತಾದೇವಿ ಮಾತನಾಡಿ, ಮಾನವೀಯ ಮೌಲ್ಯಗಳು ಇಂದಿನ ದಿನಗಳಲ್ಲಿ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿವೆ ಅವು ಕಾರ್ಯ ರೂಪದಲ್ಲಿ ಬರಬೇಕು. ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಅಪರಿಗ್ರಹ ಎಂಬ ಮೂರು ಮೌಲ್ಯಗಳು ಶ್ರೇಷ್ಠವಾಗಿವೆ ನಾವೆಲ್ಲರೂ ಗಾಂಧೀಜಿಯವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಮೊದಲನೆಯ ಗೋಷ್ಠಿಯಲ್ಲಿ ‘ ಮಹಾತ್ಮ ಗಾಂಧೀಜಿ ಮತ್ತು ಸತ್ಯಾಗ್ರಹ ‘ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ನೇತಾಜಿ ಗಾಂಧೀಯವರು ಮಹಾತ್ಮ ಗಾಂಧೀಜಿ ಅವರು ಜಗತ್ತಿಗೆ ಶ್ರೇಷ್ಠ ತತ್ವಜ್ಞಾನಿ ಯಾಗಿದ್ದರು ಅವರು ಹುಟ್ಟು ಹಾಕಿದ ಸತ್ಯಾಗ್ರ ಎಂಬ ಪರಿಕಲ್ಪನೆಯು ವಿಶ್ವದ ಅನೇಕ ರಾಷ್ಟ್ರಗಳ ಸತ್ಯಾಗ್ರಹಕ್ಕೆ ಪ್ರೇರಣೆ ನೀಡಿತು ಎಂದು ಹೇಳಿದರು
ಎರಡನೆಯ ಗೋಷ್ಠಿಯಲ್ಲಿ’ ಕಸ್ತೂರಿ ಬಾ ಗಾಂಧಿ ಮತ್ತು ಮಹಿಳೆ ‘ ವಿಷಯದ ಕುರಿತು ಮಾತನಾಡಿದ ನಿವೃತ್ತಿ ಇತಿಹಾಸ ಪ್ರಾಧ್ಯಾಪಕರಾದ ಪ್ರೊ ಬಿ ಜಿ ಪತ್ತಾರ ಭಾರತದ ಸ್ವತಂತ್ರ ಇತಿಹಾಸದ ಕುರಿತು ಮಾತನಾಡಿದರು.
ಮೂರನೆಯ ಗೋಷ್ಠಿಯಲ್ಲಿ ‘ ಮಹಾತ್ಮ ಗಾಂಧೀಜಿಯವರ ಜೀವನ ಮೌಲ್ಯಗಳು ‘ ಕುರಿತು ಮಾತನಾಡಿದ ಡಾ ಅಬಿದ ಬೇಗಂ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆ ಇರುವಂತೆ ಇವರ ಜೀವನದಲ್ಲಿಯೂ ಕಸ್ತೂರಿ ಬಾ ಉತ್ತಮವಾದ ಜೀವನ ಮೌಲಿಕವಾದಂತ ಸಂದೇಶವನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯಕವಾದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ ಆರ್ ಎಸ್ ಕಲ್ಲೂರುಮಠ ಆಧುನಿಕ ಯುಗಾದಲ್ಲಿ ಸಮಾಜವು ಅನೇಕ ಸಮಸ್ಯೆಗಳು ಎದುರಿಸುತ್ತಿದ್ದು ಎಂದೆಂದಿಗಿಂತಲೂ ಇಂದಿನ ಯುವ ಜನಾಂಗದಲ್ಲಿ ಮಾನವೀಯ ಮೌಲ್ಯಗಳು ಬಿತ್ತರಿಸುವುದು ಅತಿ ಅವಶ್ಯ ಹಾಗೂ ಅನಿವಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ ಪಿ. ಬಿ.ಬಿರಾದಾರ್, ಡಾ ರಾಜಶೇಖರ್ ಬೆನಕನಹಳ್ಳಿ, ಡಾ ಚಿದಾನಂದ ಆನೂರ್,ಪ್ರೊ ಜೋಶಿ, ಪ್ರೊ ರಮೇಶ್ ಬಳ್ಳೊಳ್ಳಿ, ಡಾ ಭಾರತಿ ಹೊಸಟ್ಟಿ, ಪ್ರೊ ಲಕ್ಷ್ಮಿ ಮೋರೆ, ಡಾ ದವಲ ಸಾಬ್ ಪಿಂಜಾರ್, ಡಾ ಆನಂದ್ ಕುಲಕರ್ಣಿ, ಡಾ ನೀಲಕಂಠ ಹಳ್ಳಿ, ಪ್ರೊ ಮಂಜುನಾಥ್ ಗಾಣಗೇಯರ, ಪ್ರೊ ಆಸಿಫ್, ಜಾಧವ್, ಪ್ರೊ ಕುಮಟಗಿ, ಡಾ ರಾಮಣ್ಣ ಕಳ್ಳಿ, ಪ್ರೊ ತನ್ವೀರ್, ಡಾ ಶಕಿರಾ ಬಾನು, ಪ್ರೊ ಮಠ, ಸುಜಾತಾ ಬಿರಾದಾರ್, ನವೀನ್ ಗೌಡ ಬಿರಾದಾರ್, ಹಾಗೂ ಇತರ ಉಪನ್ಯಾಸಕರು ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಡಾ ಭಾರತಿ ಹೊಸಟ್ಟಿ ಸ್ವಾಗತಿಸಿದರು ಪ್ರೊ ಪಿ. ಬಿ.ಬಿರಾದರ್ ಪ್ರಾಸ್ತಾವಿಕ ಮಾತನಾಡಿದರು ಡಾ ರಾಜಶೇಖರ್ ಬೆನಕನಹಳ್ಳಿ ವಂದಿಸಿದರು ಪ್ರೊ ಆರ್ ಸಿ ಜೋಶಿ ನಿರೋಪಿಸಿದರು.
Subscribe to Updates
Get the latest creative news from FooBar about art, design and business.
ಗಾಂಧೀಜಿ ಸಾಮಾಜಿಕ ಮೌಲ್ಯಗಳು ಇಂದಿಗೂ ಪ್ರಸ್ತುತ :ಡಾ.ಶಾಂತಾದೇವಿ
Related Posts
Add A Comment

