ವಿಜಯಪುರ: ನಾನು ಜಾಸ್ತಿ ದುಡ್ಡು ಮಾಡಬೇಕಾಗಿದ್ರೆ ತೆಲುಗು ತಮಿಳು ಚಿತ್ರರಂಗಕ್ಕೆ ಹೋಗಬೇಕಾಗಿತ್ತು. ಆದ್ರೆ ಕನ್ನಡದ ಪ್ರೇಕ್ಷಕರು, ಅಭಿಮಾನಿಗಳು ಕೊಟ್ಟಿರೋ ಪ್ರೀತಿನೆ ಸಾಕು ಎಂದು ಕನ್ನಡದ ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ಪಾತ್ರ ಮಾಡುತ್ತಾ ಬಂದಿದ್ದೇನೆ, ಉತ್ತರ ಕರ್ನಾಟಕ ಭಾಗದ ಹಳ್ಳಿಗಳು ನನಗೆ ಚಿರಪರಿಚಿತ ಎಂದು ಕನ್ನಡದ ಖ್ಯಾತ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಹೇಳಿದರು.
ನಗರದ ಸೊಲ್ಲಾಪುರ ರಸ್ತೆಯಲ್ಲಿ ಕೆಫೆ ಇನ್ ಉದ್ಘಾಟಿಸಿ ಅವರು ಮಾತನಾಡಿದರು, ಡಾ,ರಾಜ್ ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ನಟರೊಂದಿಗೆ ಪಾತ್ರ ಮಾಡಿರೋದು ಪ್ರೇಕ್ಷಕರು ಅಭಿಮಾನಿಗಳ ಆಶೀರ್ವಾದದಿಂದ, ನಾನು ಹುಟ್ಟಿದ್ದು ಬೆಂಗಳೂರು,ಈಗ ಸಿಂಗಾಪುರ ಆಗಿದೆ. ನಮ್ಮ ತಂದೆ ಟೆನ್ನಿಸ್ ಕೋಚ್ ಆಗಿದ್ದರು. ನಾನು ಟೆನ್ನಿಸ್ ಕೋಚ್ ಆಗಿದ್ದೆ, ಚಿತ್ರರಂಗಕ್ಕೆ ಬಂದ್ಮೇಲೆ ಟೆನ್ನಿಸ್ ಕೃಷ್ಣ ಅಂತ ಹೆಸರು ಇಟ್ಟುಕೊಂಡೆ, ಚಿತ್ರರಂಗದಲ್ಲಿ ಹೊನ್ನಾಳಿ ಕೃಷ್ಣ, ಬೆಕ್ಕಿನ ಕಣ್ಣು ಕೃಷ್ಣ ಇದ್ದಾರೆ. ಹೀಗಾಗಿ ಟೆನ್ನಿಸ್ ಕೃಷ್ಣ ಎಂದು ಹೆಸರು ಬದಲಾಯಿಸಿಕೊಂಡೆ, ನಾನು ಒಂದೇ ಒಂದು ಡ್ರಾಪ್ ಸಹಿತ ಮದ್ಯ ಸೇವನೆ ಮಾಡೋಲ್ಲ, ಆದ್ರು ಕುಡುಕನ ಪಾತ್ರ ಅಭಿನಯಿಸಿದ್ದೇನೆ ಎಂದು ಕಿಚ್ಚ ಸುದೀಪ್ ಅಭಿನಯದ ವೀರಮದಕರಿ ಸಿನೇಮಾದ ಕುಡುಕನ ಸನ್ನಿವೇಶದ ಡೈಲಾಗ್ ಹೇಳಿದ್ರು. ವಿಜಯಪುರದಲ್ಲಿ ಕೆಫೆ ಇನ್ ಉದ್ಘಾಟಿಸಿದ್ದು ನನಗೆ ಸಂತಸ ತಂದಿದೆ ಎಂದರು.
ಯುವ ಮುಖಂಡ ರಾಮನಗೌಡ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ವಿಜಯಪುರ ನಗರ ಬೆಳೆಯುತ್ತಿದೆ, ಜೊತೆಗೆ ಹೊಟೇಲ್ ಉದ್ಯಮವೂ ಸಹ ಪೂರಕವಾಗಿ ಬೆಳೆಯುತ್ತಿದ್ದು, ಕೆಫೆ ಇನ್ ಸುತ್ತಲೂ ಕಾಲೇಜಿಗಳಿದ್ದು, ವ್ಯಾಪಾರಕ್ಕೆ ಪೂರಕವಾಗಿದೆ ಎಂದರು. ವೇದಿಕೆ ಮೇಲೆ ಕಲ್ಪನಾ ಚಿತ್ರದ ನಿರ್ಮಾಪಕ ಚಿದಂಬರಂ, ಟೌನ್ ಪ್ಯಾಲೇಸ್ ಮಾಲೀಕ ಹನುಮಂತರಾಯಗೌಡ ಬಿರಾದಾರ, ಕೆಫೆ ಇನ್ ಮಾಲೀಕ ಉಮೇಶ್ ತೊಂಡಿಕಟ್ಟಿ , ಸಂತೋಷ್ ಗಣಿ, ರಾಜು ಬಿಜ್ಜರಗಿ, ಯಶ್ವಂತ್ ಗುಗ್ಗರಿ, ಅಭಿಲಾಷ್ ಹಳಕಟ್ಟಿ , ಮುನಾಫ್ ಇನಾಂದಾರ್, ಶಿವಾನಂದ ತೊಂಡಿಕಟ್ಟಿ , ಈರಣ್ಣ ತೊಂಡಿಕಟ್ಟಿ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

