Author: editor.udayarashmi@gmail.com

ಗೋಲಗೇರಿ: ಸಿಂದಗಿ ತಾಲ್ಲೂಕಿನ ಸುಕ್ಷೇತ್ರ ಗೋಲಗೇರಿ ಶ್ರೀ ಗೋಲ್ಲಾಳೇಶ್ವರ ಜಾತ್ರಾ ಹಾಗೂ ಭವ್ಯ ರಥೋತ್ಸವದ ಅಂಗವಾಗಿ ಶುಕ್ರವಾರ ಪೂರ್ವಭಾವಿ ಸಭೆ ಜರುಗಿತು.ಈ ಸಭೆಯಲ್ಲಿ ಗೋಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಹೊಳೆಪ್ಪ ಶರಣರು ದೇವರಮನಿ, ರವಿರಾಜ ದೇವರಮನಿ, ಕಲಕೇರಿ ಪೋಲಿಸ್ ಠಾಣೆ ಪೋಲಿಸ್ ಸಬ್ ಇನ್ಸಪೆಕ್ಟರ್ ರೋಹಿಣಿ ಪಾಟೀಲ, ಕೆಡಿಪಿ ಸದಸ್ಯ ಶಿವಯೋಗೆಪ್ಪ ಹತ್ತರಕಿ, ಎ.ಡಿ.ಕೋರವಾರ, ಗೌಡಣ್ಣ ಆಲಮೇಲ, ದಯಾನಂದ ಮಠ, ಗೌತಮ ಮೇಟಿ ಮಾತನಾಡಿ, ಜಾತ್ರೆ ಸುಗಮವಾಗಿ ನಡೆಯಲು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಈ ಸಭೆಯಲ್ಲಿ ಗೋಲಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷರ ಪ್ರತಿನಿಧಿ ಸೈಪನ್ ಕೋರವಾರ, ಬಸವರಾಜ ಮಾರಲಭಾವಿ, ಮಡಿವಾಳ ನಾಯ್ಕೋಡಿ, ಶಿವಪುತ್ರ ಕರ್ನಾಳ, ವಿಶ್ವರಾಧ್ಯ ಮಠ, ಸಲೀಮ್ ಭಾಗವಾನ, ನಿಂಗನಗೌಡ ಬಿರಾದಾರ, ಮಹಾಂತೇಶ ಸಾತಿಹಾಳ, ದವಲಸಾಬ ಮನಿಯಾರ, ಗೌಡಣ್ಣಬಜಂತ್ರಿ, ಶರಣಗೌಡ ಬಿರಾದಾರ,ಮಂಜುನಾಥ ನಾಯ್ಕೋಡಿ, ರಮೇಶ ತಳವಾರ, ಶಿವರಾಜ ತಳವಾರ, ಭಾಗಣ್ಣ ಕೋಟೆಗೋಳ ಸೇರಿದಂತೆ ಗೋಲಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಕಲಕೇರಿ ಪೋಲಿಸ್ ಪೇದೆ ದೇವೆಂದ್ರ ಹುಲಂಕಿ ನಿರೂಪಿಸಿದರು.

Read More

ಚಡಚಣ: ಪಟ್ಟಣದ ಕೆ.ಇ.ಬಿ ಕಚೇರಿಯಲ್ಲಿ ಏ.20 ರ ಶನಿವಾರದಂದು ಮಧ್ಯಾಹ್ನ 3 ಗಂಟೆಗೆ ಚಡಚಣ ಉಪವಿಭಾಗದ ಹೆಸ್ಕಾಂ ವಿದ್ಯುತ್ ಗ್ರಾಹಕರ ಕುಂದು-ಕೊರತೆಗಳ ಬಗ್ಗೆ ಚರ್ಚಿಸಲು ಸಭೆಯನ್ನು ಆಯೋಜಿಸಿದ್ದು,ಇದರ ಸದುಪಯೋಗವನ್ನು ತಾಲೂಕಿನ ಗ್ರಾಹಕರು, ರೈತರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ್ ಕುಮಸಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಪರ ಬೂತ್ ಮಟ್ಟದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ಏ.19 ಮತ್ತು 20 ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ವಿಜಯಪುರ ಜಿಲ್ಲೆಯ ಎಲ್ಲಾ ಎಂಟು ಮತಕ್ಷೇತ್ರಗಳ ಒಟ್ಟು 428 ಶಕ್ತಿಕೇಂದ್ರಗಳಿಗೆ ನಾಯಕರುಗಳನ್ನು ಪಕ್ಷದಿಂದ ನಿಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಆರ್.ಎಸ್.ಪಾಟೀಲ್ ಕುಚಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮುದ್ದೇಬಿಹಾಳ ಮತಕ್ಷೇತ್ರದ 52 ಶಕ್ತಿಕೇಂದ್ರಗಳಿಗೆ ಮಾಜಿ‌ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ ಅವರನ್ನು , ದೇವರ ಹಿಪ್ಪರಗಿ ಮತಕ್ಷೇತ್ರದ 48 ಶಕ್ತಿಕೇಂದ್ರಗಳಿಗೆ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು, ಬಸನವ ಬಾಗೇವಾಡಿ ಮತಕ್ಷೇತ್ರದ 58 ಶಕ್ತಿಕೇಂದ್ರಗಳಿಗೆ ಮಾಜಿ‌ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಅವರನ್ನು, ಬಬಲೇಶ್ವರ ಮತಕ್ಷೇತ್ರದ 48 ಶಕ್ತಿಕೇಂದ್ರಗಳಿಗೆ ಮುಖಂಡ ಸಂಜೀವ ಐಹೊಳೆ ಅವರನ್ನು, ವಿಜಯಪುರ ನಗರ ಮತಕ್ಷೇತ್ರದ 54 ಶಕ್ತಿಕೇಂದ್ರಗಳಿಗೆ ಮುಖಂಡ ಕಾಸೂಗೌಡ ಬಿರಾದಾರ ಅವರನ್ನು, ನಾಗಠಾಣ ಮತಕ್ಷೇತ್ರದ 47 ಶಕ್ತಿಕೇಂದ್ರಗಳಿಗೆ ಮಾಜಿ‌ ಶಾಸಕ ರಮೇಶ ಭೂಸನೂರ…

Read More

ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಸವನಬಾಗೇವಾಡಿಯಲ್ಲಿ ಬಿಜೆಪಿ ಪ್ರತಿಭಟನೆ ಬಸವನಬಾಗೇವಾಡಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಪಾರಸ್ಸು ಮಾಡಬೇಕೆಂದು ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಆಗ್ರಹಿಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಮಂಡಳವು ವಿದ್ಯಾರ್ಥಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ವಿಸರ್ಜನೆ ಮಾಡಬೇಕು. ರಾಜ್ಯದಲ್ಲಿ ತಮ್ಮ ಅಧಿಕಾರ ಹಾಗೂ ಮತದ ಆಸೆಗಾಗಿ ಸರ್ಕಾರ ಸುಮ್ಮನೆ ಕುಳಿತುಕೊಂಡಿದೆ. ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಹಿಂದುಗಳು ಜೀವನ ಸಾಗಿಸುವದು ಕಷ್ಟವಾಗಬಹುದು. ಹಾಡುಹಗಲೇ ಇಂತಹ ಘಟನೆ ನಡೆದಿರುವುದು ಖಂಡನೀಯ. ಈ ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗೆ ಮೇಲೆ ಸರ್ಕಾರ ಗಂಭೀರ ಕಾನೂನು ಕ್ರಮ ತೆಗೆದುಕೊಂಡು ಕಠಿಣ ಶಿಕ್ಷೆ ವಿಧಿಸಬೇಕು.ಮುಖಂಡ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಪಾಕಿಸ್ತಾನ ಆಡಳಿತ ಹುಟ್ಟುಕೊಂಡಿದೆ ಅನ್ನುವ ರೀತಿಯಲ್ಲಿ…

Read More

102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಮುಕ್ತಾಯ | ಪ.ಬಂಗಾಳದಲ್ಲಿ ಅತಿ ಹೆಚ್ಚು (ಶೇ.77.57) ಮತದಾನ ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಸಂಜೆ 6 ಗಂಟೆಗೆ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ವಿವಿಧ ರಾಜ್ಯಗಳ 102 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.60 ರಷ್ಟು ಮತದಾನವಾಗಿದೆ.21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಮತದಾನ ಮುಕ್ತಾಯಗೊಂಡಾಗ ಸುಮಾರು ಶೇ.60 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಶೇ. 77.57 ರಷ್ಟು ವೋಟಿಂಗ್ ಆಗಿದೆ. ತಮಿಳುನಾಡಿನಲ್ಲಿ ಶೇ.63.2, ರಾಜಸ್ಥಾನದಲ್ಲಿ ಶೇ.50.3, ಉತ್ತರ ಪ್ರದೇಶದಲ್ಲಿ ಶೇ.57.5 ಮತ್ತು ಮಧ್ಯಪ್ರದೇಶದಲ್ಲಿ ಶೇ.63.3ರಷ್ಟು ಮತದಾನವಾಗಿದೆ.ಮೊದಲ ಹಂತದಲ್ಲಿ ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆದಿದೆ. ರಾಜಸ್ಥಾನ (12), ಉತ್ತರ ಪ್ರದೇಶ (8), ಮಧ್ಯಪ್ರದೇಶ (6), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್…

Read More

ವಿಜಯಪುರ: ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಪುತ್ರಿ ನೇಹಾ ಹಿರೇಮಠ ಎಂಬ ಮುಗ್ಧ ಬಾಲಕಿಯನ್ನು ಯುವಕನೊಬ್ಬ ಕಾಲೇಜು ಆವರಣದಲ್ಲಿ ಹಾಡು ಹಗಲಲ್ಲೇ ಅಮಾನವೀಯವಾಗಿ‌ ಹತ್ಯೆ ಮಾಡಿರುವುದು ತೀವ್ರ ಖಂಡನೀಯ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದಕ್ಕೆ ಈ‌ ಕೃತ್ಯ ಜ್ವಲಂತ ಸಾಕ್ಷಿಯಾಗಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ನೇಹಾ ಹತ್ಯೆ ಪ್ರಕರಣನ್ನು ತೀವ್ರವಾಗಿ ಖಂಡಿಸಿದ್ದಾರೆ.ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ವಿಶೇಷವಾಗಿ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಇತ್ತಿಚೆಗೆ ಹತ್ಯೆ, ಸ್ಪೋಟದಂತಹ ಅಪರಾಧಿಕ ಕೃತ್ಯಗಳು ಹೆಚ್ಚಾಗಿದ್ದು, ದುಷ್ಕರ್ಮಿಗಳು, ಕೊಲೆಗಡುಕರಿಗೆ ಕಾನೂನಿನ ಮೇಲೆ ಯಾವುದೇ ಭಯವಿಲ್ಲದಂತಾಗಿದೆ. ನೇಹಾ ಬಾಲಕಿಯ ಕೊಲೆಗಾರನ ವಿರುದ್ಧ ಪೊಲೀಸ್ ಇಲಾಖೆ ನಿರ್ಧಾಕ್ಷಿಣ್ಯವಾಗಿ ಕಠಿಣ ಶಿಕ್ಷೆ ವಿಧಿಸಿ, ಇಂತಹ ದುಷ್ಠರಿಗೆ ಎಚ್ಚರಿಕೆಯ ಗಂಟೆಯಾಗುವಂತೆ ಕ್ರಮಕ್ಕೆ ಮುಂದಾಗಬೇಕು. ಇಂತಹ ದುಷ್ಕೃತ್ಯಗಳಿಗೆ ದುಷ್ಠರಿಗೆ ಕಡಿವಾಣ ಹಾಕುವ ಕಾರಣಕ್ಕಾಗಿಯೇ ನಮ್ಮ ರಕ್ಷಣೆಗೆ, ವಿಕಸಿತ ಭಾರತಕ್ಕಾಗಿ ಮತ್ತೊಮ್ಮೆ ಮೋದಿ‌ ಬರಬೇಕೆಂಬುದು ಇಡಿ ದೇಶದ ಒಕ್ಕೊರಳಿನ ಧ್ವನಿಯಾಗಿದೆ.

Read More

ಚಿಮ್ಮಡ: ಗ್ರಾಮದ ಕಂಬಿ ಐದೇಶಿ ನಿಮಿತ್ಯವಾಗಿ ಮಲ್ಲಿಕಾರ್ಜುನ ಯುವಕ ಸಂಘದ ಆಶ್ರಯದಲ್ಲಿ ತೆರೆಬಂಡಿ ಸ್ಪರ್ದೆ ಶನಿವಾರ ಮುಂಜಾನೆ ೧೦ ಗಂಟೆಗೆ ಗುಡ್ಡದ ಪ್ರಭುದೇವರ ದೇವಸ್ತಾನ ಹತ್ತಿರ ನಡೆಯಲಿದೆ.ಸ್ಪರ್ದೆಯ ಉದ್ಘಾಟನೆಯನ್ನು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ನೆರವೆರಿಸುವರು. ಸ್ಥಳಿಯ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಯರಗಟ್ಟಿಕರ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ರಾಮಣ್ಣ ಮುಗಳಕೋಡ, ಬಾಳಪ್ಪ ಹಳಂಗಳಿ, ಪುಂಡಲಿಕಪ್ಪ ಪೂಜಾರಿ, ರಾಮಣ್ಣ ಬಗನಾಳ, ಅಣ್ಣಪ್ಪ ಪಾಟೀಲ. ರಾಚಯ್ಯ ಮಠಪತಿ, ಬಿ. ಎಸ್. ಪಾಟೀಲ, ಶಂಕರ ಬಟಕುರ್ಕಿ, ಗುರುಲಿಂಗಪ್ಪ ಪುಜಾರಿ, ಉಮೇಶ ಪುಜಾರಿ, ಮಹಾಲಿಂಗ ಬಳಗಾರ, ರಾಮಪ್ಪ ಬೆಳಗಲಿ, ಚನ್ನಪ್ಪ ತೇಲಿ, ಶಂಕರ ಮಮದಾಪೂರ ಸೇರಿದಂತೆ ಹಲವಾರು ಪ್ರಮುಖರು ಆಗಮಿಸಿಲಿದ್ದಾರೆ.ಸ್ಥಳಿಯ ಹನುಮಾನ ಗರಡಿಶಾಲೆಯಲ್ಲಿ ಶುಕ್ರವಾರ ಲಾಟ ಎತ್ತಲಾಗಿದ್ದು ಪ್ರಥಮ ಬಹುಮಾನ ಮೂವತೋಂದು ಸಾವಿರ ರೂ. ಇದ್ದು ಇತರೇ ಹತ್ತು ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ.ಹೆಚ್ಚಿನ ಮಾಹಿತಿಗಾಗಿ ೯೫೩೫೫೬೭೬೮೦ ೯೯೪೫೫೭೩೯೮೦ ೯೧೬೪೧೮೪೭೭೪ ೯೭೩೧೯೭೫೭೩೦ ಸಂಪರ್ಕಿಸಲು ಕೋರಲಾಗಿದೆ.

Read More

ಚಿಮ್ಮಡ: ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಐದೇಶಿ ಮಹೋತ್ಸವ ಗುರುವಾರ ಸಂಜೆಯಿಂದ ವಿಜ್ರಂಬಣೆಯಿಂದ ಜರುಗಿತು.ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಆರಂಭಗೊಂಡ ಈ ಐದೇಶಿ ಉತ್ಸವದಲ್ಲಿ ಗ್ರಾಮದ ರೈತರು ತಾವು ಬೆಳೆದ ಬೆಳೆ, ಹಾಗೂ ಬೆಲ್ಲವನ್ನು ಮಲ್ಲಯ್ಯ ದೇವರಿಗೆ ನೈವೆದ್ಯೆ ಅರ್ಪಿಸಿ ಬಡವರಿಗೆ ದಾನವಾಗಿ ನೀಡುವ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಜನ ರೈತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ಹರಕೆಗಳನ್ನು ತೀರಿಸಿದರು.ಮಳೆ ಅಡ್ಡಿ; ರಾತ್ರಿ ನಡೆಯ ಬೇಕಾಗಿದ್ದ ಮಹಾ ಮಂಗಳದ ವೇಳೆಗೆ ಕುಂಭದ್ರೋಣ ಮಳೆ ಪ್ರಾರಂಭವಾಗಿದ್ದರಿಂದ ಮಂಗಳಾರತಿಗೆ ತೊಂದರೆಯಾಯಿತು.ನಾಟಕ ರದ್ದು; ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶೀ ನಿಮತ್ತ ಗ್ರಾಮದ ಗರತಿ ಹೆಣ್ಣಿಗೆ ಗರ್ವದ ಗಂಡ ಎಂಬ ನಾಟಕ ಹಮ್ಮಿಕೊಂಡು ಸಂಪೂರ್ಣ ತಯಾರಿ ಮಾಡಲಾಗಿತ್ತು. ನಾಟಕ ಪ್ರಾರಂಭಕ್ಕೂ ಮುನ್ನ ಜೋರು ಮಳೆ ಗಾಳಿ ಪ್ರಾರಂಭವಾದ ಹಿನ್ನೆಲೆಯಲ್ಲಿ ನಾಟಕ ರದ್ದುಗೊಳಿಸಲಾಯಿತು.

Read More

ವಿಜಯಪುರ: ಸನ್ ೨೦೨೪ರ ಎಪ್ರೀಲ್ ೧೭ ರಿಂದ ೧೯ ರವರೆಗೆ ನಾಸಿಕಿನಲ್ಲಿ ನಡೆದ ೧೨ ನೇಯ (ಫೆಡರೇಷನ್ ಕಫ್ ) ರಾಷ್ಟ್ರೀಯ ಅಂಡರ ಆರ್ಮ ಕ್ರೀಕೇಟ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.ಈ ಸಂದರ್ಭದಲ್ಲಿ ಅಂಡರ್ ಅರ್ಮ ಕ್ರಿಕೆಟ್ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಉತ್ತಮ ಉಘಾಡೆ ರವರು ದ್ವಿತೀಯ ಟ್ರೋಫಿ ನೀಡಿ ಸನ್ಮಾನಸಿ ಗೌರವಿಸಿದರು.ಈ ಕ್ರೀಡಾಕೂಟದಲ್ಲಿ ಬೆಸ್ಟ್ ಬ್ಯಾಟ್ಸಮನ್ ಎಂದು ಕುಮಾರ ಸತೀಶ ದೊಡಮನಿ ಹಾಗೂ ಬೆಸ್ಟ್ ಪ್ಲೇಯರ್ ಎಂದು ರಾಜಾಶೇಖರ್ ವಾಲಿಕಾರ ಇವರನ್ನು ಗೌರವಿಸಲಾಯಿತು.ತಂಡದಲ್ಲಿ ನಾಯಕ ಸಂಗಮೇಶ ದೆ ಸಾತಿಹಾಳ, ಸತೀಶ ಈ ದೊಡಮನಿ, ರಾಜಶೇಖರ ಸಿ ವಾಲಿಕಾರ ಧನುಷ ಚಂದಕುಮಾರ, ವಿಠೋಬಾ ಆರ್. ಬಿರಾದಾರ, ಸಚಿನ ಸಂ,ಬಿರಾದಾರ, ಪ್ರೇಮ ಬ ಹೂಗಾರ, ಷರೀಫ್ ಜ ಮುಲ್ಲಾ, ಬಾಳಪ್ಪ ಅ ಬಂಡಿ, ಬಾಳಕಪ್ಪ ಸೋ, ಸಾಲುಟಗಿ , ಶಾಸ್ತ್ರಿ ಸ ಬಗಲಿ, ಬಸವರಾಜ ನಂ ಬಾಗೇವಾಡಿ, ಮುಂಬರುವ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ…

Read More

ಬಸವನಬಾಗೇವಾಡಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಗುರುವಾರ ಹಾಡುಹಗಲೇ ಒರ್ವ ವಿದ್ಯಾರ್ಥಿನಿ ಕೊಲೆ ನಡೆದಿರುವದು ಖಂಡನೀಯ. ಮಹಾತ್ಮ ಗಾಂಧೀಜಿಯವರು ಹೆಣ್ಣು ಮಕ್ಕಳು ಸ್ವತಂತ್ರವಾಗಿ ತಿರುಗಾಡಬೇಕು ಅನ್ನುವ ಕಂಡ ಕನಸು ಕಂಡಿದ್ದರು. ವಿದ್ಯಾರ್ಥಿ ನೇಹಾ ಹಿರೇಮಠ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆಯಾಗಬೇಕು. ಇಂತಹವರನ್ನು ಗುಂಡಿಕ್ಕಿ ಕೊಲ್ಲಬೇಕು. ಇಸ್ಲಾಂ ಧರ್ಮದ ಯುವಕ ಈ ರೀತಿ ಮಾಡಿದ್ದು ಸರಿಯಲ್ಲ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗೀಜಿ ಅವರ ಆಡಳಿತ ಹೇಗಿದೆ ಹಾಗೇನೂ ಕರ್ನಾಟಕದಲ್ಲಿ ಒಮ್ಮೆ ಮಾಡಿ ನೋಡಿ ಎಲ್ಲರಿಗೆ ಭಯ ಹುಟ್ಟುತ್ತದೆ. ಈ ಹೆಣ್ಣು ಮಗಳಿಗೆ ಆಗಿರುವಂತೆ ಯಾವ ಹೆಣ್ಣು ಮಕ್ಕಳಿಗೆ ಈ ರೀತಿ ಆಗಬಾರದು ಎಂದು ತಾಲೂಕಿನ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More