ಸಿಂದಗಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸರ್ವಾಂಗೀಣ ಪ್ರಗತಿಗೆ ನೂತನವಾಗಿ ರಚಿಸಲ್ಪಟ್ಟ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಶ್ರಮವಹಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಕಾಲೇಜು ಅಭಿವೃದ್ಧಿ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕಾಲೇಜಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಸರಕಾರದಿಂದ ಒದಗಿಸಲು ಪ್ರಯತ್ನಿಸುವೆ. ಕಾಲೇಜಿನ ಕಂಪೌಂಡ ನಿರ್ಮಿಸಲು ಹಣವು ಈಗಾಗಲೇ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದರು. ನಿರ್ಮಾಣಗೊಂಡ ಕಾಲೇಜು ಕಟ್ಟಡವನ್ನು ಹಸ್ತಾಂತರಿಸಲು ಕ್ರಮಕೈಗೊಳ್ಳವುದಾಗಿ ಸಭೆಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಿತಿ ಸದಸ್ಯ ಎಸ್.ಎಸ್.ಪಾಟೀಲ ಮಾತನಾಡಿ, ಕಾಲೇಜಿನ ಪ್ರಗತಿಗೆ ನಾವೆಲ್ಲರೂ ಸಹಕಾರ ನೀಡುತ್ತೇವೆ. ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಾದರಿ ಮಹಾವಿದ್ಯಾಲಯವನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಪ್ರಾಚಾರ್ಯ ಶಿವಲಿಂಗ ಹಳೇಮನಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಳಿಕ ನೂತನವಾಗಿ ಆಯ್ಕೆಯಾದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಿಗೆ ಶಾಸಕರು ಸನ್ಮಾನಿಸಿ ಗೌರವಿಸಿದರು.
ಪ್ರಾಧ್ಯಾಪಕ ಡಾ.ಮಿರಾಜ ಪಾಶ ನಿರೂಪಿಸಿದರು. ಎಸ್.ಎಸ್.ಖಾದ್ರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾನಂದ ಬಮ್ಮಣ್ಣಿ, ರಿಯಾಜಅಹ್ಮದ ಜಹಾಗೀರದಾರ, ಕೃಷ್ಣಾರೆಡ್ಡಿ, ಡಾ.ಮುಜೀಬಅಹ್ಮದ, ತೇಜಸ್ವೀನಿ ಜಿ.ಎಂ, ಆಯಿಶಾ, ಶಿವರಾಜ ಜೋಶಿ, ಆರ್.ಎಸ್.ಗಾಯಕವಾಡ, ಪ್ರಕಾಶ ನಿಗಡಿ, ಅಶೋಕ ಕುಲಕರ್ಣಿ, ಎಸ್.ಎಸ್ ಪಾಟೀಲ್, ಬಸವರಾಜ ಈಳಗೇರ, ಮಲ್ಲಪ್ಪ ಸುಲ್ಫಿ, ಶಿವಾನಂದ ಗಣಿಹಾರ, ಪ್ರತಿಭಾ ಚಳಗಿ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇದ್ದರು.
Subscribe to Updates
Get the latest creative news from FooBar about art, design and business.
ಕಾಲೇಜ್ ಪ್ರಗತಿಗೆ ಅಭಿವೃದ್ಧಿ ಸಮಿತಿ ಸದಸ್ಯರು ಶ್ರಮವಹಿಸಿ :ಮನಗೂಳಿ
Related Posts
Add A Comment

