ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಆರಾಧ್ಯದೈವ ಜಗದ್ಗುರು ರೇವಣಸಿದ್ದೇಶ್ವರ ದೇವರ ಬೆಳ್ಳಿಯ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅಕ್ಕನಾಗಮ್ಮನ ಗುಹೆಯಲ್ಲಿ ಅಕ್ಕನಾಗಮ್ಮ, ಬಸವಣ್ಣನವರ ಮತ್ತು ಚನ್ನಬಸವಣ್ಣನವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಂಗವಾಗಿ ಜುಲೈ ೫ ಮತ್ತು ೭ ರಂದು ಎರಡು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗ್ರಾಮದ ಹಾಲಭಾವಿಯಿಂದ ಜುಲೈ ೫ ರಂದು ಬೆಳಗ್ಗೆ ೯ ಗಂಟೆಗೆ ಮೂರ್ತಿಗಳ ಮೆರವಣಿಗೆಯು ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯವೈಭವದೊಂದಿಗೆ ಮುತ್ತೈದೆಯರ ಕಳಸ-ಕನ್ನಡಿ, ಆರತಿ, ಭಜನಾ ಹಾಗೂ ಕಲಾತಂಡಗಳೊಂದಿಗೆ ರೇವಣಸಿದ್ದೇಶ್ವರ ಗುಡ್ಡವನ್ನು ತಲುಪುವುದು.
ರೇವಣಸಿದ್ದೇಶ್ವರ ಗುಡ್ಡದ ಅಂಚಿನಲ್ಲಿರುವ ಅಕ್ಕನಾಗಮ್ಮ ಗುಹೆಯಲ್ಲಿ ಜು.೭ ರಂದು ಪ್ರಾತಃಕಾಲದಲ್ಲಿ ವಿವಿಧ ಶ್ರೀಗಳಿಂದ ಸಾನಿಧ್ಯದಲ್ಲಿ ಬರಡೋಲದ ವೇದಮೂರ್ತಿ ವಿಶ್ವನಾಥ ಶಾಸೀಜಿಯವರಿಂದ ಅಕ್ಕನಾಗಮ್ಮ ,ಬಸವಣ್ಣನವರ ಮತ್ತು ಚನ್ನಬಸವಣ್ಣನವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೆರವೇರುವುದು. ನಂತರ ಬೆಳಗ್ಗೆ ೧೧ ಗಂಟೆಗೆ ರೇವಣಸಿದ್ದೇಶ್ವರ ಸಮುದಾಯ ಭವನದಲ್ಲಿ ಜಗದ್ಗುರು ರೇವಣಸಿದ್ದೇಶ್ವರ ದೇವರ ಬೆಳ್ಳಿಯ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅಕ್ಕನಾಗಮ್ಮನ ಗುಹೆಯಲ್ಲಿ ಅಕ್ಕನಾಗಮ್ಮ, ಬಸವಣ್ಣನವರ ಮತ್ತು ಚನ್ನಬಸವಣ್ಣನವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನಿಧ್ಯವನ್ನು ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಬೃಂಗೀಶ್ವರಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಕಾರ್ಯಕ್ರಮವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬನ್ನೆಪ್ಪ ಡೋಣೂರ ವಹಿಸುವರು. ಅತಿಥಿಗಳಾಗಿ ರೇವಣಸಿದ್ದೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಬೋಜನಗೌಡ ಪಾಟೀಲ, ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ, ಉಪವಲಯ ಅರಣಾಧಿಕಾರಿ ಮಹೇಶ ಕೊಟ್ಲಗಿ, ವಲಯ ಅರಣ್ಯಾಧಿಕಾರಿ ಇರ್ಷಾದಅಹಮ್ಮದ ಮೇವಾರ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಧರ್ಮಸ್ಥಳ ಸಂಸ್ಥೆಯ ಸಂತೋಷಕುಮಾರ, ಪ್ರವೀಣ ಆಚಾರ್ಯ, ವಿಂಡ್ ಪವರ್ ಸಂಸ್ಥೆಯ ವಿಶ್ವನಾಥ ಪಾಪಶೆಟ್ಟಿ, ಯುವಮುಖಂಡ ಸಂಗಮೇಶ ಓಲೇಕಾರ, ಗ್ರಾಮಾಡಳಿತಾಧಿಕಾರಿ ಸಂತೋಷ ಕುಂಟೋಜಿ, ಪಿಡಿಓ ಜೆ.ಎಸ್.ದೇವರನಾವದಗಿ ಇತರರು ಆಗಮಿಸುವರು. ಅಪ್ಪಾಸಾಹೇಬ ಪೂಜಾರಿ, ರಾಜಶೇಖರ ಸಿಂಪಿ, ಅಶೋಕ ಹಂಚಲಿ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
ಇಂಗಳೇಶ್ವರದಲ್ಲಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ;ಕಳಸಾರೋಹಣ
Related Posts
Add A Comment
