Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೈ ಸಚಿವ, ಶಾಸಕರ ಒಗ್ಗಟ್ಟು ಪ್ರದರ್ಶನ | ಬಸವ ಭೂಮಿಯಿಂದ ಮೊಳಗಿತು ಕಾಂಗ್ರೆಸ್‌ನ ‘ಲೋಕ ಕಹಳೆ’! ಬಸವನ ಬಾಗೇವಾಡಿ: ಭೂಮಿ ಕೂಡ ಮೂರು ವರ್ಷಕ್ಕೊಮ್ಮೆ ಹೊಸ ಬೆಳೆ ಕೊಡುತ್ತೆ. ಆದರೆ, ಸದ್ಯದ ಸಂಸದ ಹದಿನೈದು ವರ್ಷದಿಂದ ಕೆಲಸವಿಲ್ಲದೇ ಕಾಲೂರಿ ಕುಳಿತಿದ್ದಾರೆ ಎಂದು ಸಕ್ಕರೆ ಹಾಗೂ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕಿಡಿ ಕಾರಿದರು.ಸೋಮವಾರ ಇಲ್ಲಿ ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ್ ಅವರ ಪರವಾಗಿ ನಡೆದ ಬೃಹತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಭೂಮಿಯ ಬುದ್ಧಿವಂತಿಕೆಯನ್ನು ಮತದಾರರೂ ಉಪಯೋಗಿಸಿಕೊಂಡು ಬಿಜೆಪಿಯ ಸಂಸದನನ್ನು ಮನೆಗೆ ಕಳಿಸಿ ಎಂದು ಹೇಳಿದರು.ಕೇಂದ್ರ ಸರಕಾರ ನಮ್ಮಿಂದ ನಾಲ್ಕು ಲಕ್ಷ ಕೋಟಿಯಷ್ಟು ಜಿಎಸ್‌ಟಿ ಪಡೆಯುತ್ತದೆ. ಅದರಲ್ಲಿ ಪಾಲು ಕೊಡಲ್ಲ. ಒಬ್ಬ ಹೆಣ್ಣಮಗಳಾಗಿರುವ ಹಣಕಾಸು ಸಚಿವೆಗೆ ಕರುಣೆಯೇ ಇಲ್ಲ. ಅತಿ ಹೆಚ್ಚು ತೆರಿಗೆ ನೀಡುವ ನಮಗೆ ಅನ್ಯಾಯ ಮಾಡಲಾಗಿದೆ. ಇವತ್ತು ಸುಪ್ರೀಂ ಕೋರ್ಟ್ ಬರ ಪರಿಹಾರ ನೀಡಲು ತಾಕೀತು ಮಾಡಿರುವುದು ಇವರ ಬೇಜಾವ್ದಾರಿತನಕ್ಕೆ ಸಾಕ್ಷಿ ಎಂದರು.ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ…
ಬಬಲೇಶ್ವರ: ಭಾವನೆ ಕೆರಳಿಸುವ ಹಾಗೂ ಬದುಕು ರೂಪಿಸುವ ನಡುವಿನ ಸಂಘರ್ಷದ ಲೋಕಸಭೆ ಚುನಾವಣೆ ಇದಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.ತಾಲೂಕಿನ ಗಲಗಲಿ ಬಳಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಮೋದಿಯವರು ಹೇಳಿದಂತೆ ಯಾವುದೂ ಈಡೇರಿಸಲಿಲ್ಲ. ಆದರೆ ನಾವು ನುಡಿದಂತೆ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಶೇ.೯೦ ಭಾಗದಷ್ಟು ಹೆಣ್ಣುಮಕ್ಕಳಿಗೆ ಹಣ ನೇರವಾಗಿ ತಲುಪಿದೆ. ಮಧ್ಯವರ್ತಿಗಳಿಲ್ಲ, ಶೋಷಣೆ ಇಲ್ಲದೆ ಯೋಜನೆ ಮುಟ್ಟಿಸಿದ್ದೇವೆ. ಆದರೆ ಕೇಂದ್ರ ಸರಕಾರ ವಚನ ಭ್ರಷ್ಟತೆ ಮೆರೆದಿದೆ. ರಾಜ್ಯಕ್ಕೆ ಪರಿಹಾರ ನೀಡಲು, ಜಿಎಸ್‌ಟಿ ಪಾಲು ನೀಡುವಲ್ಲಿ ತಾರತಮ್ಯವನ್ನು ಮಾಡಲಾಗಿದೆ. ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ. ನಾವು ಬಡವರ ಪರ ದುಡ್ಡು ಹಾಕಿದರೆ ದಿವಾಳಿಯಾಗುತ್ತದೆ ಎನ್ನುತ್ತಾರೆ. ಆದರೆ ಅಚ್ಚುಕಟ್ಟಾಗಿ ಯೋಜನೆ ತಲುಪಿಸಿದ್ದು ನಮ್ಮ ಸಾಧನೆ ಎಂದು ಹೇಳಿದರು.ರೈತರಿಗೆ ವಿಮೆ ಕೊಡುವುದರಲ್ಲೂ ಹಗರಣ ಮಾಡಲಾಗಿದೆ. ಎಕರೆಗೆ ಎಪ್ಪತ್ತು ರೂ. ಪರಿಹಾರವನ್ನು ರೈತರಿಗೆ ನೀಡಿ ಮೋದಿ ಸರಕಾರ ನಾಚಿಕೆ ಮೆರೆದಿದೆ. ಮತದಾರರು ಪ್ರಜಾಪ್ರಭುತ್ವ ಹಕ್ಕನ್ನು ಉಳಿಸಲು…
ವಿಜಯಪುರದಲ್ಲಿ ಬಿಜೆಪಿಯಿಂದ ಭಗವಾನ್ ಮಹಾವೀರ ಜಯಂತಿ ಆಚರಣೆ ವಿಜಯಪುರ: ಬಿಜೆಪಿಗೂ ಜೈನ ಸಮುದಾಯಕ್ಕೂ ಜನಸಂಘ ಕಾಲದಿಂದ ಅವಿನಾಭಾವ ಸಂಬಂಧವಿದ್ದು, ಇಂದಿಗೂ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಾ ನಮಗೆ ಬೆನ್ನೆಲುಬಾಗಿ ನಿಂತಿದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಅವರು ಅಭಿಮತ ವ್ಯಕ್ತಪಡಿಸಿದರು.ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ದೇಶದಲ್ಲೇ ಅತಿ ಹೆಚ್ಚು ಶ್ರೀಮಂತಿಕೆ ಸಮಾಜವಾಗಿದ್ದರೂ ಜೈನರು ತಮ್ಮ ಶೇ. 70 ರಷ್ಟು ಆದಾಯವನ್ನು ಸಮಾಜಕ್ಕೆ ಅರ್ಪಿಸುವ ಹೃದಯಶ್ರೀಮಂತಿಕೆ ಹೊಂದಿದವರು. ದೇಶದಲ್ಲೇ ಅತಿ ಹೆಚ್ಚು ಗೋಶಾಲೆ ಹೊಂದಿರುವ ಜೈನ್ ಸಮಾಜದೊಂದಿಗೆ ನಾವೆಲ್ಲಾ ಸಹೋದರತ್ವದಂತೆ ಬದುಕು ನಡೆಸುತ್ತಾ ಆ ಸಮುದಾಯಕ್ಕೂ ಬಿಜೆಪಿ ರಾಜಕೀಯ ಪ್ರಾತಿನಿಧ್ಯ ನೀಡಲಿದೆ ಎಂದರು.ಬಿಜೆಪಿ ಅಲ್ಪಸಂಖ್ಯಾತ ಮೊರ್ಚಾದ ಜಿಲ್ಲಾಧ್ಯಕ್ಷಶೀತಲ್‌ಕುಮಾರ ಓಗಿ ಪ್ರಸ್ತಾವಿಕವಾಗಿ ಮಾತನಾಡಿ, ಬಸವಣ್ಣನರು ಸಮಾಜದಲ್ಲಿ ಸಮಾನತೆ ಸಾರಲು ಕಲ್ಯಾಣ ಕರ್ನಾಟಕ ನಿರ್ಮಿಸಿದಂತೆ, ಭಗವಾನ್ ಮಹಾವೀರರು ಬಿಹಾರವನ್ನು ಕಲ್ಯಾಣ ಬಿಹಾರ ಮಾಡಿದರು. ಅವರು ರಾಜರ ಮಗನಾದರೂ ಎಲ್ಲವನ್ನು…
ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಮುಖಂಡ ವಿವೇಕಾನಂದ ಡಬ್ಬಿ ಸವಾಲು ವಿಜಯಪುರ: ನಮ್ಮ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಅಭಿವೃದ್ಧಿ ಕಾರ್ಯಗಳು, ಕೊಡುಗೆಗಳನ್ನು ಪದೇಪದೇ ಪ್ರಶ್ನಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಯವರು ಹಾಗೂ ಕಾಂಗ್ರೆಸ್ ನಾಯಕರು ಕೇಳಲು ಸಿದ್ದರಿದ್ದರೆ ನಾವು ಹಾಗೂ ನಮ್ಮ ಅಭ್ಯರ್ಥಿ ಗಾಂಧಿ ಚೌಕಿನಲ್ಲಿ ಬಂದು ನಮ್ಮ ಬಿಜೆಪಿ ಸರ್ಕಾರದ ಹಾಗೂ ಸಂಸದರ ಅಭಿವೃದ್ಧಿ ಕಾರ್ಯಸಾಧನೆಗಳ ಬಗ್ಗೆ ಹೇಳಲು ಸಿದ್ದರಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕಾಂಗ್ರೆಸ್ಸಿನ ನಾಯಕರು ಬರುವುದಿದ್ದರೆ ಅಲ್ಲಿಗೆ ಬಂದು ಉತ್ತರ ಕೊಡಲಿ ಎಂದು ಬಿಜೆಪಿ ಓಬಿಸಿ ಮೊರ್ಚಾ ರಾಜ್ಯ ಉಪಾಧ್ಯಕ್ಷರಾದ ವಿವೇಕಾನಂದ ಡಬ್ಬಿ ಅವರು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಏನು ಮಾಡಿದ್ದಾರೆಂದು ಕಾಂಗ್ರೆಸ್ಸಿಗರು ಪ್ರಶ್ನಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿ 12 ನೇ ಚುನಾವಣೆ ಎದುರಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 2, 51,107 ರೈತರಿಗೆ ಕೇಂದ್ರದಿಂದ ವರ್ಷಕ್ಕೆ 6…
ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆ ಪ್ರಕರಣ | ಬೃಹತ್ ರ್‍ಯಾಲಿ | ಜಿಲ್ಲಾಡಳಿಕ್ಕೆ ಮನವಿ ವಿಜಯಪುರ: ಹುಬ್ಬಳ್ಳಿಯಹಿಂದೂ ಯುವತಿ ಕು.ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊಂಡ ರ್‍ಯಾಲಿ, ಮಹಾತ್ಮ ಗಾಂಧಿ ಚೌಕ್, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿ, ತಕ್ಷಣ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ, ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಲಾಯಿತು. ನಂತರ ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸಲಾಯಿತು.ಮೆರವಣಿಯುದ್ದಕ್ಕೂ ಬೋಲೋ ಭಾರತ್ ಮಾತಾ ಕೀ ಜೈ, ಮತಾಂದ್ ಶಕ್ತಿಗಳಿಗೆ ಧಿಕ್ಕಾರ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಬೇಜವಾಬ್ದಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರುಗಳಿಗೆ ಧಿಕ್ಕಾರ್ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಲಾಯಿತು.ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಅಮಾಯಕ ಹಿಂದೂ ಯುವತಿಯನ್ನು ಕೊಂದಿರುವ ಹೀನ…
Udayarashmi kannada daily newspaper
ವಿಜಯಪುರ: ಲೋಕಸಭಾ ಚುನಾವಣೆ-೨೦೨೪ಕ್ಕೆ ಸಂಬಂಧಿಸಿದಂತೆ ೦೪ – ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏ.೧೯ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು , ಕೊನೆಯ ದಿನವಾದ ಶುಕ್ರವಾರದ ವರೆಗೆ ಒಟ್ಟು ೨೧ ಅಭ್ಯರ್ಥಿಗಳಿಂದ ೩೫ ನಾಮಪತ್ರಗಳು ಸಲ್ಲಿಕೆಯಾಗಿವೆ.ಶನಿವಾರ ಏ.೨೦ ರಂದು ಈ ಎಲ್ಲ ನಾಮಪತ್ರಗಳ ಪರೀಶೀಲನೆ ನಡೆದಿದ್ದು, ಪರಿಶೀಲನೆಯ ನಂತರ ಒಟ್ಟು ೨೧ ಅಭ್ಯರ್ಥಿಗಳಲ್ಲಿ ೧೨ ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತಗೊಂಡು ೯ ತಿರಸ್ಕೃತಗೊಂಡಿರುತ್ತವೆ ಹಾಗೂ ಕ್ರಮಬದ್ಧವಾಗಿ ಸ್ವೀಕೃತಗೊಂಡ ೧೨ ನಾಮಪತ್ರಗಳ ಪೈಕಿ ೨ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.ಸ್ವೀಕಾರವಾಗಿರುವ ನಾಮಪತ್ರ ಕ್ರಮಬದ್ಧವಾಗಿರುವ ಇರುವ ಅಭ್ಯರ್ಥಿಗಳ ವಿವರ:ಮಲ್ಲು ಹಾದಿಮನಿ (ಬಹುಜನ ಸಮಾಜ ಪಕ್ಷ), ರಮೇಶ ಜಿಗಜಿಣಗಿ (ಭಾರತೀಯ ಜನತಾ ಪಕ್ಷದ) ಹಣಮಂತರಾವ ಆಲಗೂರ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ), ಕುಲಪ್ಪ ಭೀ ಚವ್ಹಾಣ(ಭಾರತೀಯ ಜವಾನ್ ಕಿಸಾನ ಪಕ್ಷ), ಗಣಪತಿ ಲಾ ರಾಠೋಡ(ಕರ್ನಾಟಕ ರಾಷ್ಟ್ರ ಸಮಿತಿ), ಜೀತೆಂದ್ರ ಅಶೋಕ ಕಾಂಬಳೆ(ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, (ಎ)), ನಾಗಜ್ಯೋತಿ ಬಿ.ಎನ್ (ಸೋಶಿಯಲಿಸ್ಟ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್),…
ಮುದ್ದೇಬಿಹಾಳ: ನೇಹಾಳಿಗೆ ಒಂಬತ್ತು ಬಾರಿ ಚುಚ್ಚಿ ಕೊಲೆ ಮಾಡಲಾಗುತ್ತೆ ಅಂದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ಮುಖ್ಯಮಂತ್ರಿ, ಗೃಹಮಂತ್ರಿ ಈ ರಾಜ್ಯದಲ್ಲಿ ಇದಾರಾ? ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಕ್ರೋಶ ಹೊರಹಾಕಿದರು.ಪಟ್ಟಣದಲ್ಲಿ ಎ.ಬಿ.ವಿ.ಪಿ ಮತ್ತು ಬಿಜೆಪಿ ವತಿಯಿಂದ ನೇಹಾ ಹತ್ಯೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ, ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಾಲ್ಕೂ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸುವ ವೇಳೆ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ನೇಹಾಳ ತಂದೆ ಕಾಂಗ್ರೇಸ್ ಪಕ್ಷದ ಕಾರ‍್ಪೋರೇಟರ್ ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ರೆ ಅವರನ್ನು ಸಮಾಧಾನ ಮಾಡೋದು ಬಿಟ್ಟು ಗೃಹಮಂತ್ರಿ ಪರಮೇಶ್ವರ ಅವರು, ಕೊಲೆಗಡುಕ ಮತ್ತು ನೇಹಾ ಅವರಿಬ್ಬರು ಪರಸ್ಪರ ಪ್ರೀತಿಸ್ತಿದ್ರು ಅಂತ ಹೇಳಿಕೆ ಕೋಟ್ಟಿದ್ದಾರೆ. ಅವರಿಬ್ಬರು ಲವ್ ಮಾಡೋದನ್ನ ಯಾವತ್ತಾದ್ರು ಇವರು ನೋಡಿದ್ರಾ? ಬೆಂಗಳೂರಿನಲ್ಲಿ ಕುಳಿತು ಇಂಥ ಹೇಳಿಕೆ ಕೊಡೋ ಇವರಿಗೆ ನಾಚಿಕೆಯಾಗ್ಬೇಕು. ಇವರಿಗೆ ಮಾನ ಮರ್ಯಾದೆ ಇದೆಯಾ? ಇಂತಹ ಗೃಹಮಂತ್ರಿ ಈ ರಾಜ್ಯಕ್ಕೆ ಬೇಕಾ ಎಂದೆಲ್ಲ ಹರಿಹಾಯ್ದರು.ಇಷ್ಟೊಂದು ಕ್ರೂರವಾಗಿ ಕೊಲೆ ಮಾಡಬೇಕಾದ್ರೆ ಈ…
ಟೆಕ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿಯಾಗಿಸಿದ ಕಾಂಗ್ರೆಸ್ | ನೀರಿನ ಸಮಸ್ಯೆ ಕುರಿತು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ಬೆಂಗಳೂರು: ಟೆಕ್ ಸಿಟಿ ಆಗಿದ್ದ ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಈಗ ಟ್ಯಾಂಕರ್ ಸಿಟಿ ಮಾಡಿದೆ. ಇಡೀ ನಗರ ಈಗ ಟ್ಯಾಂಕರ್ ಮಾಫಿಯಾದ ಕೈಯಲ್ಲಿ ಸಿಲುಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಶನಿವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿ ಅಪಾಯಕಾರಿಯಾಗಿದೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾಗುತ್ತಿದೆ. ನಮ್ಮ ಮಕ್ಕಳ ಮೇಲೆ ಹಲ್ಲೆ ನಡೆಯುತ್ತಿದೆ. ಇದು ಸಾಮಾನ್ಯ ವಿಚಾರವಲ್ಲ. ಕಾಂಗ್ರೆಸ್ ಬಗ್ಗೆ ಆದಷ್ಟು ಅಲರ್ಟ್ ಆಗಿರಿ ಎಂದು ಹೇಳಿದರು.ಬೆಂಗಳೂರನ್ನು ಅದ್ಭುತ ನಗರವಾಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಎನ್ಡಿಎ ಅವಧಿಯಲ್ಲಿ ತೆರಿಗೆ ಪದ್ಧತಿ ಬದಲಾವಣೆಯಾಗಿದೆ. ಜಿಎಸ್‌ಟಿ ಜಾರಿ ನಂತರ ಪರೋಕ್ಷ ತೆರಿಗೆ ಹೊರೆ ತಪ್ಪಿದೆ. 2014, 2019ರ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಗೆಲ್ಲಿಸಿದ್ರಿ.…
ಬಸವನಬಾಗೇವಾಡಿ: ಹುಬ್ಬಳ್ಳಿಯಲ್ಲಿ ನಡೆದಿರುವ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ತಾಲೂಕು ಜಂಗಮಾಭಿವೃದ್ಧಿ ಸಂಘದಿಂದ ಏ. ೨೨ ರಂದು ಬೆಳಗ್ಗೆ ೧೦.೩೦ ಗಂಟೆಗೆ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು ಜಂಗಮ ಸಮಾಜದ ಮುಖಂಡ ಶಿವರುದ್ರಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
