ವಿಜಯಪುರ: ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಒಂದು ಹುದ್ದೆಗೆ ತಾತ್ಕಾಲಿಕ ನೇಮಕ ಮಾಡಿಕೊಳ್ಳಲು ಜುಲೈ ೧೮ರಂದು ಬೆಳಗ್ಗೆ ೧೧ಕ್ಕೆ ಸಂದರ್ಶನ ನಡೆಯಲಿದೆ ಎಂದು ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.
ಶೈಕ್ಷಣಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಮೂಲ ದಾಖಲೆಗಳ ಎರಡು ಝರಾಕ್ಸ್ ಪ್ರತಿ ತಮ್ಮ ಭಾವಚಿತ್ರದೊಂದಿಗೆ ಅರ್ಜಿ ನಮೂನೆಗೆ ಲಗತ್ತಿಸಿ, ಸಂದರ್ಶನಕ್ಕೆ ಆಗಮಿಸುವಾಗ ತೆಗೆದುಕೊಂಡು ಬರುವುದು. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೫೨-೨೯೫೪೧೧ ಮೊ:೯೮೮೦೬೪೦೨೮೭ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
