ಮುದ್ದೇಬಿಹಾಳ: ಪಟ್ಟಣದ ಮುಖ್ಯ ಬಜಾರನಲ್ಲಿರುವ ಕೆ.ಬಿ.ಎಂ.ಪಿ.ಎಸ್ ಶಾಲೆಯಲ್ಲಿ ಭಾರತ ಸೇವಾದಳ ಶಿಕ್ಷಕ- ಶಿಕ್ಷಕಿಯರ ಪುನಶ್ಚೇತನ ಮಿಲಾಪ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಜಂಟಿ ನಿರ್ದೇಶಕ ಜಗದೀಶ್ವರ.ಟಿ ಮಾತನಾಡಿ, ಭಾರತ ಸೇವಾದಳವು ೧೯೨೩ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಪಂಡಿತ್ ಜವಾಹರಲಾಲ್ ನೆಹರು ಮತ್ತು ಡಾ.ನಾ.ಸು.ಹರ್ಡಿಕರ್ ಅವರ ಮುಂದಾಳತ್ವದಲ್ಲಿ ಸ್ಥಾಪನೆ ಮಾಡಲಾಯಿತು. ಆ ಸಂದರ್ಭ ಸ್ವಾತಂತ್ರ‍್ಯದ ಕಿಚ್ಚನ್ನು ಎಲ್ಲರಲ್ಲಿ ಹೆಚ್ಚಿಸಲು, ಶಿಸ್ತು, ದೇಶಾಭಿಮಾನ, ಬೆಳೆಸಲು ಹರ್ಡಿಕರ್ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದರು. ಅವರಲ್ಲಿರುವ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರು ಬಿ.ವೈ.ಕವಡಿ ಮಾತನಾಡಿ, ಶಿಕ್ಷಕ ವೃತ್ತಿ ನಿಸ್ವಾರ್ಥ ಸೇವೆಯ ಒಂದು ಭಾಗವಾಗಿದೆ. ಶಿಕ್ಷಕರು ನೀಡುವ ಗುಣಾತ್ಮಕ ಶಿಕ್ಷಣ ಮಾರ್ಗದರ್ಶನ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ನೆರವಾಗುತ್ತದೆ ಎಂದರು.
ಬೆಳಗಾವಿ ವಿಭಾಗದ ಸಂಚಾಲಕ ನಾಗೇಶ್ ಡೋಣೂರ ಸೇವಾದಳದ ತರಬೇತಿಯನ್ನು ಪಡೆದುಕೊಂಡು ತಮ್ಮ ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ದೇಶಾಭಿಮಾನ ಭಾವೈಕತೆ ನಾಯಕತ್ವ ಗುಣ, ಸೇವಾದಳದ ಬಗ್ಗೆ ಹೇಳಿಕೊಡುವುದರಿಂದ ಒಳ್ಳೆಯ ಪ್ರಜೆಯನ್ನಾಗಿ ರೂಪಿಸಬಹುದು ಎಂದರು.
ಪ್ರಭು ಕಡಿ, ಸಿದ್ದಯ್ಯ ಕಲ್ಯಾಣ ಮಠ, ಎಸ್.ಬಿ.ಹೊಲ್ದೂರ, ಎಂ.ಬಿ. ಪಾಟೀಲ್, ಗುಂಡು ಚೌವ್ಹಾಣ, ವಿ.ಎಸ್.ತೆಗ್ಗಿ, ಎ.ಸಿ.ಕೆರೂರ, ವಿಜಯಲಕ್ಷ್ಮಿ ಮಾಲಿಪಾಟೀಲ, ಎಂ.ವಿ.ಕೊರವಾರ, ಎಲ್.ಎಂ.ಜೋಗಿ, ಎ.ಸಿ.ಕೆರೂರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

