ಮುದ್ದೇಬಿಹಾಳ: ತಂದೆ-ತಾಯಿಗಳ ಪಾದಕಮಲಗಳಲ್ಲಿ ಸ್ವರ್ಗವಿದೆ. ಹೆತ್ತವರ ಸೇವೆಯನ್ನು ಮಕ್ಕಳು ಸದಾಕಾಲ ಮಾಡುತ್ತಿರಬೇಕು ಎಂದು ತಾಳಿಕೋಟೆ ಬಾಲ ಭಾರತಿ ಶಾಲೆಯ ಅಧ್ಯಕ್ಷ ಚಿದಂಬರ ಕರಮರಕರ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರ ಶಾಲೆಯಲ್ಲಿ ಜನನಿ ಜನಕನ ಪಾದಪೂಜೆ ವಿಶೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಸಂಸ್ಕೃತಿಯಲ್ಲಿ ಮಾತಾಪಿತೃರಿಗೆ ಅಗ್ರಗಣ್ಯ ಸ್ಥಾನವಿದೆ. ತಲೆಮಾರಿನಿಂದ ತಲೆಮಾರಿಗೆ ಸಂಸ್ಕೃತಿ ವಾಹಕವಾಗಬೇಕಾಗಿದೆ ಎಂದರು.
ಪ್ರೌಢ ಶಾಲೆ ಮುಖ್ಯಗುರು ರಾಮಚಂದ್ರ ಹೆಗಡೆ ಮಾತನಾಡಿ, ತಾಯಿಗೆ ಸಮಾನವಾದ ದೇವರು ಲೋಕದಲ್ಲಿ ಬೇರೊಂದಿಲ್ಲ. ಆದುದರಿಂದ ಯಾವುದೆ ಧಾರ್ಮಿಕ ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತೃ ದೇವೋ ಭವ ಎನ್ನುವ ಮಂತ್ರದಿಂದಲೇ ಪ್ರಾರಂಭಗೊಳ್ಳುತ್ತದೆ. ಪಾದ ಶ್ರೇಷ್ಠವಾಗಿದೆ. ವ್ಯಕ್ತಿಯ ತಲೆಯಲ್ಲಿ ವಿದ್ಯೆ, ಹೃದಯದಲ್ಲಿ ಧೈರ್ಯ, ಗಟ್ಟಿಯಾದ ಬೆನ್ನು ಹಾಗೂ ಕಾಲು ಶ್ರಮಪಟ್ಟು ದುಡಿಯಲು ಗಟ್ಟಿಯಾಗಿರಬೇಕಾಗಿರುತ್ತದೆ. ಒಬ್ಬ ವ್ಯಕ್ತಿಯಲ್ಲಿಯೆ ಇದೆಲ್ಲ ಗುಣವನ್ನುಹೊಂದಿರಬೇಕು. ಆದುದರಿಂದಲೇ ಪಾದ ಶ್ರೇಷ್ಠವೆಂದು ಪಾದಕ್ಕೆ ವಂದಿಸಲಾಗುತ್ತದೆ ಎಂದರು.
ಸಂಸ್ಥೆಯ ನಿರ್ದೇಶಕ ಡಾ. ಪರಶುರಾಮ ಪವಾರ, ಶಿಕ್ಷಕ ಶಿವಶಂಕರಯ್ಯ ಹಿರೇಮಠ, ಶಿಕ್ಷಕಿ ಅನ್ನಪೂರ್ಣ ನಾಗರಾಳ, ಲೀಲಾ ಭಟ್ಟ, ಶಾಂತಾ ಭಟ್ಟ. ಜಿ.ಜೆ.ಪಾದಗಟ್ಟಿ, ಪಿ.ಎಸ್.ನಾಗಠಾಣ, ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಬಿ.ಆರ್.ಓಸ್ವಾಲ್, ಡಾ. ಎಸ್.ಬಿ.ವಡವಡಗಿ, ಜಿ.ಎಸ್.ಓಸ್ವಾಲ್, ಮಾಣಿಕಚಂದ ದಂಡಾವತಿ, ಸುಭಾಸ ಬಿದಿರಕುಂದಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ, ಸಾಹಿತಿ ಅಶೋಕ ಮಣಿ, ಬಿ.ಎಸ್.ಮೇಟಿ, ಎಮ್.ಎನ.ಯರಝರಿ, ಅರವಿಂದ ಕೊಪ್ಪ, ಎಮ್.ಬಿ.ನಾವದಗಿ ರಾಜಶೇಖರ ಪಾಟೀಲ್, ಎಸ್.ಎಲ್.ಗುರವ, ಬಸವರಾಜ ನಂದಿಕೇಶ್ವರಮಠ, ಮೀನಾಕ್ಷಿ ಕುಲಕರ್ಣಿ, ಶಶಿಕಲಾ ಕಡಿ, ಸುರೇಖಾ ನಾಗಠಾಣ, ಆರತಿ ಪಾದಗಟ್ಟಿ, ಬಸನಗೌಡ ಪಾಟೀಲ್ ಸೇರಿದಂತೆ ಪಾಲಕ ಮತ್ತು ಮಾತೃ ಹಾಗೂ ಗಣ್ಯರು ಹಾಜರಿದ್ದರು
ಗುರುಮಾತೆ ರಂಜಿತಾ ಹೆಗಡೆ ಮತ್ತು ಗೀತಾ ಆಭಿಯಾನ ತಂಡ ವಿದ್ಯಾರ್ಥಿನಿಯರು ಸೇರಿ ಭಗವದ್ಗೀತೆ ಪಠಣ ಮಾಡಿದರು. ಕಾರ್ಯದರ್ಶಿ ಪ್ರಭು ಕಡಿಯವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು.
Subscribe to Updates
Get the latest creative news from FooBar about art, design and business.
ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಸೇವಾ ನಿವೃತ್ತರಿಗೆ ಗೌರವಾರ್ಪಣೆ
Related Posts
Add A Comment

