ಇಟಗಿ ಗ್ರಾಮದಲ್ಲಿ ಗಿಡ್ಡಯ್ಯ ಅಜ್ಜನ ಜಾತ್ರೆ ಪ್ರಯುಕ್ತ ಬಸವೇಶ್ವರ ಪ್ರವಚನಕ್ಕೆ ಚಾಲನೆ
ನಿಡಗುಂದಿ: ಇಟಗಿ ಗ್ರಾಮದ ಗಿಡ್ಡಯ್ಯ ಅಜ್ಜನ ಜಾತ್ರೆ 44ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಭಕ್ತಗಣ ಸಂತಸದಿಂದ ಅಜ್ಜನ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆಯುತ್ತಿದ್ದಾರೆ. ಇಲ್ಲಿ ಅಜ್ಜನ ಆರಾಧನೆ ಶ್ರದ್ಧೆಯಿಂದ ಆಚರಿಸಲ್ಪಡುತ್ತಿದೆ. ಆಧ್ಯಾತ್ಮ ಎಂಬ ಪದದಲ್ಲಿ ಸಾಗಬೇಕಾದರೆ ಧ್ಯಾನ, ಸತ್ಸಂಗ ಪುರಾಣ, ಪುಣ್ಯ ಕಥೆಗಳು, ಭಜನೆಗಳು ಮಾನವನಿಗೆ ಊರುಗೋಲು ಇದ್ದ ಹಾಗೆ ಆದರಿಂದ ಪುರಾಣ ಪ್ರವಚನದಲ್ಲಿ ಭಾಗಿಯಾಗುವುದರಿಂದ ನಮ್ಮ ಜನ್ಮ ಪವಿತ್ರ ಪಾವನ ಆಗುತ್ತದೆ ಎಂದು ಪ್ರಾಣೇಶ ಜೋಶಿ ಹೇಳಿದರು..
ನಿಡಗುಂದಿ ತಾಲೂಕಿನ ಇಟಗಿ ಗ್ರಾಮದ ಶ್ರೀ ಗುರು ನಿರುಪಾದೇಶ್ವರ ( ಗಿಡ್ಡಯ್ಯ ಅಜ್ಜಾ ) ನಾಗಲಿಂಗೇಶ್ವರ 44ನೇ ಜಾತ್ರೆಯ ಅಂಗವಾಗಿ ಇಟಗಿ ಗ್ರಾಮದಲ್ಲಿ ಮಂಗಳವಾರ ಆರಂಭವಾದ ಶ್ರೀ ಕಲಬುರ್ಗಿ ಶರಣಬಸವೆಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಗದಗ ವಿರೇಶ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜಯ್ಯನವರ ತುಲಾಭಾರ ಕಾರ್ಯಕ್ರಮ ಜರುಗಿತು.
ಇದೇ ದಿ,2 ರಿಂದ ಆರಂಭಗೊಂಡು ಜುಲೈ 26 ವರೆಗೆ ಪುರಾಣ ನಡೆಯಲಿದೆ. ರಾತ್ರಿ 7:30.ರಿಂದ 8:30 ವರೆಗೆ ಪ್ರವಚನಕಾರ ಶಿವಲಿಂಗಯ್ಯ ಶಾಸ್ತ್ರಿ ಹೀರೆಮಠ ಅವರು ಪುರಾಣ ಪ್ರವಚನ ನಡೆಸಿಕೊಡುತ್ತಿದ್ದು ಸಿದ್ದಾಪುರ ಸಂಗಿತ ಸೇವೆ,ಇಟಗಿಯ ಚಾಂದಬಾಷಾ ವಾಲಿಕಾರ, ನರಸಲಗಿಯ ಚನ್ನಬಸ್ಸು ಹೂಗಾರ ತಬಲಾ ವಾದಕ ಸೇವೆಯನ್ನು ಮೊದಲ ದಿನ ಸಲ್ಲಿಸಿದರು.
ಮಹಾಬಳೆಶ್ವರಯ್ಯ ಹೀರೆಮಠ, ಡಾ.ವಿಶ್ವನಾಥ ಮಠ, ಮೃತುಂಜಯ್ಯ ನಾ, ಗುರುವಿನ ಸರೂರ ದಿವ್ಯ ಸಾನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಿ,ಎನ್. ಮಠಪತಿ, ಆರ್,ಬಿ.ಗೌಡರ್, ವಿ.ಕೆ. ಮಸೂತಿ, ಜಿ,ಎಚ್.ಪಾಟೀಲ್, ಪಿ.ಎಸ್. ಬಳಬಟ್ಟಿ ,ಲಕ್ಷ್ಮಣ ಮಾಗಿ ಗ್ರಾಂ ಪಂ ಅಧ್ಯಕ್ಷರು, ಶಿವಯ್ಮ ಅರಳದಿನ್ನಿ, ಆರ್. ಎಸ್. ಪಾಟೀಲ್, ಹಣಮಗೌಡ್ ಕೀರಸೂರ, ಎಸ್. ಎಸ್.ಹೆಬ್ಬಾಳ, ಎನ್ ಆರ್. ಪಾಟೀಲ್, ವೀರಭದ್ರಯ್ಯ ಗಣಾಚಾರಿ, ಬಸಣ್ಣ ಕೇಸಾಪುರ, ಬಸಪ್ಪ ನಾ,ಕೇಸಾಪುರ, ಬಾಪುಗೌಡ್ ಬೆನ್ನೂರ, ಕಾಂತಪ್ಪ ನಾಗೋಡ್, ಬೂಸಣ್ಣ ಮಾಗಿ, ಶ್ರೀಶೃಲ್ ಹೆಬ್ಬಾಳ, ರವಿ ದೊಡ್ಡಮನಿ, ಶರಣು ಹಂಗರಗಿ, ಈರಯ್ಯ ಸಾಲಿಮಠ, ಉಪಸ್ಥಿತರಿದ್ದರು.
ನಂದನ ಮಾಗಿ ನಿರೂಪಿಸಿದರು. ವಿ. ಕೆ. ಮಸೂತಿ ವಂದಿಸಿದರು. .

