Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರಕೃತಿ ಕಾಲನಿಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆ- ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ವಿಕಲಚೇತನ ಮಕ್ಕಳಿಗಾಗಿ ಸಮನ್ವಯ ಶಿಕ್ಷಣ ಒದಗಿಸಲು ಪ್ರಾರಂಭಿಸಲಾದ ಬಿ.ಎಲ್.ಡಿ.ಇ ರಘುಕುಲ ಸಮನ್ವಯ ಶಾಲೆ ಶೈಕ್ಷಣಿಕ ಒಡಂಬಡಿಕೆಗೆ ಸಹಿ ಹಾಕಲಾಯಿತು.ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮತ್ತು ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಅಭಿನವ ರುಣವಾಲ ಸಹಿ ಹಾಕಿದರು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ರಜಿಸ್ಟ್ರಾರ ಡಾ. ಆರ್. ವಿ. ಕುಲಕರ್ಣಿ, ಜಿಲ್ಲಾ ಜಿಲ್ಲಾ ವಿಕಲಚೇನತರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಡಾ. ಈಶ್ವರ ಬಾಗೋಜಿ, ಡಾ.ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಮುಖಂಡರಾದ ನರೇಂದ್ರ ಓಸ್ವಾಲ, ನಿರ್ಮಲ ರುಣವಾಲ, ಅಕ್ಷತ ರುಣವಾಲ, ಶ್ರೇಯಾ ರುಣವಾಲ, ಲತಾ ರುಣವಾಲ, ಅನುಷಾ ರುಣವಾಲ, ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್. ಎನ್. ಬೆಂತೂರ, ವೈದ್ಯರಾದ…
ಸಾರ್ಥಕ ಗೆಳೆಯರ ಬಳಗದಿಂದ ೧ ದಿನದ ಪ್ರಸಾದ ವ್ಯವಸ್ಥೆಗೆ ಸಜ್ಜು ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾದ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವವು ಜುಲೈ ೧೯ ರಿಂದ ೨೯ ರವರೆಗೆ ವಿಜೃಂಭಣೆಯಿಂದ ಜರುಗಲಿದೆ.ಈ ಜಾತ್ರೋತ್ಸವದಲ್ಲಿ ಒಂದು ದಿನದ ಪ್ರಸಾದ ವ್ಯವಸ್ಥೆ ಭಕ್ತಾದಿಗಳ ಕುರಿತು ಮಾಡಲು ಮುಂದಾಗಿದ್ದ ೧೯೮೬ ನೇ ಸಾಲಿನಲ್ಲಿ ಶ್ರೀ ಖಾಸ್ಗತೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದ ಈ ಸಾರ್ಥಕ ಗೆಳೆಯರ ಬಳಗ ರವಿವಾರರಂದು ಶ್ರೀಗಳಿಗೆ ಭೆಟ್ಟಿ ನೀಡಿ ತಾವು ಮಾಡಲಿರುವ ಎರಡನೇ ಸಲದ ಪ್ರಸಾದದ ವ್ಯವಸ್ಥೆ ಕುರಿತು ಶ್ರೀಗಳಿಗೆ ತಿಳಿಸಿದರು.ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಕುರಿತು ಸಪ್ತಭಜನೆಯು ಜುಲೈ ೧೯ ರಂದು ಪ್ರಾರಂಭಗೊಳ್ಳಲಿದ್ದು ೨೬ ರಂದು ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಜರುಗಲಿದೆ ಅಂದೇ ಶ್ರೀ ಮಠದ ವತಿಯಿಂದ ಮಹಾಪ್ರಸಾದ ಜರುಗುವದೆಂದು ಶ್ರೀಗಳು ತಿಳಿಸಿದರು.ಜುಲೈ ೨೭ ರಂದು ಆನೆ ಅಂಬಾರಿ ಮೇಲೆ ಶ್ರೀ ಖಾಸ್ಗತೇಶ್ವರರ ಹಾಗೂ ಶ್ರೀ ವಿರಕ್ತಶ್ರೀಗಳ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಜಿಲ್ಲೆಯಲ್ಲಿಯೇ ಆಲಮೇಲ ಪಟ್ಟಣ ದಲ್ಲಿ ಸಾಂಸ್ಕೃತಿಕ ಜಾನಪದ ಕಲೆ ಜಾತ್ರೆ ಹಬ್ಬ ಹರಿದಿನಗಳನ್ನು ವಿಶಿಷ್ಟವಾಗಿ ಆಚರಿಸಲಾ ಗುತ್ತಿದ್ದು, ಕಾರಹುಣ್ಣಿಮೆಯನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಕಾರಹುಣ್ಣಿಮೆಯಂದು ಪಟ್ಟಣದ ಪ್ರಮುಖ ಮನೆತನಗಳಾದ ದೇಶಮುಖ ಮತ್ತು ದೇಶಪಾಂಡೆ ಮನೆಗಳಿಂದ ಎತ್ತುಗಳ ಬಂಡಿ ಓಡಸಿ ಕರಿ ಹರಿಯಲಾಯಿತು. ಈ ಪದ್ಧತಿ ಹಿಂದಿನಿಂದಲು ನಡೆಸಿಕೊಂಡು ಬಂದಿರುವುದು ವಿಶೇಷವಾಗಿದೆ.ಮೀಸಲು ಕರಿ: ಕಾರಹುಣ್ಣಿಮೆಯಂದು ಬೆಳ್ಳಗೆ ಹಳ್ಳಕ್ಕೆ ತೆರಳಿ ಎತ್ತು ಮತ್ತು ಬಂಡಿಯನ್ನು ತೊಳೆದು ಕೊಂಡು ಬೇವಿನ ತಪ್ಪಲಗಳಿಂದ ಶೃಂಗರಿಸಲಾಯಿತು. ನಂತರ ದೇಶಮುಖರ ಸಮ್ಮುಖದಲ್ಲಿ ಸಂಜೆ ಎತ್ತಿನ ಬಂಡಿಯ ಓಟ ಕರಿಹರೆಯುವ ಸಂಪ್ರದಾಯ ನಡೆಯಿತು. ಇಲ್ಲಿ ದೇಶಪಾಂಡೆ ಮತ್ತು ದೇಶಮುಖರ ಮನೆತನದ ಲಕ್ಷ್ಮೀ ಬಂಡೆಗಳ ಕರಿ ಹರಿಯುತ್ತವೆ. ಇದಕ್ಕೂ ಪೂರ್ವದಲ್ಲಿ ಕರಿ ಹರಿಯುವ ಓಟದಲ್ಲಿ ಪಾಲ್ಗೊಳ್ಳುವ ಚಿಟ್ಟ ಬಂಡಿ ಮತ್ತು ಎತ್ತುಗಳನ್ನು ಬಣ್ಣ ತೋರಣಗಳಿಂದ ಅಲಂಕಾರಿಸಲಾಗಿತ್ತು. ಎರಡು ಬಂಡಿಗಳನ್ನು ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ದೇವರಾದ ಶ್ರೀಗಾಲಿಸಾಬ ದರ್ಗಾದ ಎದುರು ತರಲಾಯಿತು. ಬಳಿಕ ಎರಡೂ ಬಂಡಿಗಳು ದರ್ಗಾದ ಮುಂದೆ…
ಇಟಗಿಯಲ್ಲಿ ಪಿಕೆಪಿಎಸ್ ಸುವರ್ಣ ಮಹೋತ್ಸವ | ನೂತನ ಕಟ್ಟಡ ಲೋಕಾರ್ಪಣೆ ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ಸಮೀಪದ ಇಟಗಿ ಗ್ರಾಮದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (ಪಿಕೆಪಿಎಸ್) ಸುವರ್ಣ ಮಹೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆ ಭಾನುವಾರ ವಿಜೃಂಭಣೆಯಿಂದ ನೆರವೇರಿತು.ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವಾನಂದ ಪಾಟೀಲ ಮಾತನಾಡಿ, “ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿರಲು ಮಹಿಳೆಯರ ಶ್ರಮವೇ ಕಾರಣ. ದೇಶದಲ್ಲಿ ದಿನಕ್ಕೆ ೧.೦೫ ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ವಾರಕ್ಕೆ ಐದು ದಿನ ಹಾಲು ವಿತರಿಸಲಾಗುತ್ತಿದೆ” ಎಂದರು.”ಒಂದು ಕಾಲದಲ್ಲಿ ಆಹಾರ ಧಾನ್ಯಗಳಿಗೆ ವಿದೇಶ ಅವಲಂಬಿಸಿದ್ದ ಭಾರತ ಇಂದು ರೈತರ ಪರಿಶ್ರಮದಿಂದ ಸ್ವಾವಲಂಬಿಯಾಗಿದೆ. ಇಟಗಿ ಪಿಕೆಪಿಎಸ್ ವತಿಯಿಂದ ಶೀತಲೀಕರಣ ಕೇಂದ್ರ ಹಾಗೂ ಉಗ್ರಾಣ ನಿರ್ಮಾಣಕ್ಕೆ ಎಲ್ಲ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು. ಸಂಘದ ಕಟ್ಟಡಕ್ಕೆ ೧೫ ಗುಂಟೆ ನೀರಾವರಿ ಜಮೀನನ್ನು ಉಚಿತವಾಗಿ ದಾನ ಮಾಡಿದ ಹಾಲಪ್ಪ ಕಂಬಾರ ಅವರನ್ನು…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದರೂ ನಮ್ಮ ದೇಶದ ಸಂಸ್ಕ್ಕತಿ, ಸಂಸ್ಕಾರ ಮರೆತುಹೋಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಕವಿ-ಕಲಾವಿದರು ನಮ್ಮ ದೇಶದ ಸಂಸ್ಕ್ರತಿ-ಸಂಸ್ಕಾರವನ್ನು ಉಳಿಸಿ ಬೆಳೆಸಬೇಕೆಂದು ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಹೇಳಿದರು.ಪಟ್ಟಣದ ಗಣೇಶ ನಗರದ ಯಲ್ಲಾಲಿಂಗೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘವು ಭಾನುವಾರ ಹಮ್ಮಿಕೊಂಡಿದ್ದ ಗಾನಯೋಗಿ ಡಾ.ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮೊಬೈಲ್, ದೂರದರ್ಶನ (ಟಿವ್ಹಿ) ಯುಗದಲ್ಲಿ ನಾಟಕ ವೀಕ್ಷಣೆ ಕಡಿಮೆಯಾಗುತ್ತಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕಗಳು ಅಗತ್ಯವಿದೆ. ಪ್ರತಿ ಗ್ರಾಮದ ಜಾತ್ರೆಗಳಲ್ಲಿ ನಾಟಕ ಪ್ರದರ್ಶನವಾಗುವದನ್ನು ಕಾಣುತ್ತೇವೆ. ನಮ್ಮ ದೇಶದ ಸಂಸ್ಕ್ರತಿ ಉಳಿಯಬೇಕಾದರೆ ಕಲಾವಿದರು, ಕವಿಗಳು, ಬರಹಗಾರರು ಉಳಿಯಬೇಕು. ಇವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಅಗತ್ಯವಿದೆ. ಇವರದು ದೊಡ್ಡ ಶಕ್ತಿ. ಇವರ ಶಕ್ತಿ ಸಮಾಜವನ್ನು ಪರಿವರ್ತನೆ ಮಾಡಬಲ್ಲದು. ಮಹಾತ್ಮಗಾಂಧೀಜಿ ಬಾಲ್ಯದಲ್ಲಿ ಸತ್ಯಹರಿಶ್ಚಂದ್ರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಲ್ಲ ಸಾರ್ವಜನಿಕರು ತಮ್ಮ ೫ ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆಯನ್ನು ತಪ್ಪದೆ ಹಾಕಿಸಬೇಕೆಂದು ವಿಜಯಪುರ್ ತಾಲೂಕ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ರಾಜಶೇಖರ ಅವಜಿ ತಿಳಿಸಿದರು.ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹಡಗಲಿ ತಾಂಡಾ ನಂಬರ್ ಮೂರರ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು, ಮಗುವಿಗೆ ಎರಡು ಹನಿ ಪೊಲಿಯೋ ಲಸಿಕೆಯನ್ನು ಹಾಕುವ ಮುಖಾಂತರ ಉದ್ಘಾಟಿಸಿ ಮಾತನಾಡಿದವರು, ನಮ್ಮ ಭಾರತ ದೇಶ ಪೋಲಿಯೋ ಮುಕ್ತ ದೇಶವಾಗಿದೆ, ಕೆಲವು ದೇಶಗಳಲ್ಲಿ ಪೋಲಿಯೊ ಇನ್ನು ಬೀತಿಯನ್ನುಂಟು ಮಾಡುತ್ತಿದ್ದು, ಮುನ್ನೆಚ್ಚರಿಕೆಯಾಗಿ ಈ ಲಸಿಕಾ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ,ಪೋಲಿಯೋ ಒಂದು ಶಾಶ್ವತ ಅಂಗವೈಕಲ್ಯವನ್ನು ಉಂಟುಮಾಡಬಲ್ಲ ಅಪಾಯಕಾರಿ ರೋಗ. ಕೇವಲ ಎರಡು ಹನಿ ಲಸಿಕೆ ನಿಮ್ಮ ಮಗುವಿನ ಆರೋಗ್ಯಕರ ಭವಿಷ್ಯಕ್ಕೆ ಭದ್ರತೆ ನೀಡುತ್ತದೆ. ಈ ಮೊದಲು ಮಗುವಿಗೆ ನೀವು ಎಷ್ಟೇ ಬಾರಿ ಪೋಲಿಯೋ ಲಸಿಕೆಯನ್ನು ಹಾಕಿಸಿದ್ದರು ಕೂಡ,ಈಗ ಮತ್ತೆ ೫ ವರ್ಷದ ಒಳಗಿನ ಎಲ್ಲ ಮಕ್ಕಳಿಗು…
ಲೇಖನ- ಮ.ನಾ.ಉಡುಪಮಂಡ್ಯ ಉದಯರಶ್ಮಿ ದಿನಪತ್ರಿಕೆ ಬಿಡದಿ. ಬೆಂಗಳೂರು-ಮೈಸೂರು ಹೆದ್ದಾರಿಯ ಆ ಬದಿ, ರಾಮನಗರದ ಹೊಸ್ತಿಲಲ್ಲಿ ಹಸಿರಾಗಿ ಉಸಿರಾಡುತ್ತಿರುವ ಭೂಮಿ.ಈಗ ಅದೇ ಭೂಮಿಗೆ ಮತ್ತೆ ನೋಟಿಸ್ ಬಂದಿದೆ. ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ – GBIT. AI-ಪವರ್ಡ್ ಸ್ಮಾರ್ಟ್ ಸಿಟಿ ಎಂದು ಹೇಳುತ್ತಾರೆ. ಬೈರಮಂಗಲ, ಕಂಚುಗಾರನಹಳ್ಳಿ ಸೇರಿ 26 ಹಳ್ಳಿಗಳ ರೈತರು 474 ದಿನಗಳಿಂದ ಧರಣಿಯಲ್ಲಿದ್ದಾರೆ. ಜೂನ್ 10, 2026 ರಂದು ಸರ್ಕಾರ 518.45 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆ.ರೈತರು ಹೇಳುತ್ತಾರೆ: “ಸಾಯುತ್ತೇವೆ, ಭೂಮಿ ಕೊಡುವುದಿಲ್ಲ”.ಸರ್ಕಾರ ಹೇಳುತ್ತದೆ: “80% ರೈತರು ಒಪ್ಪಿದ್ದಾರೆ”.ರೈತರು ಮತ್ತೆ ಹೇಳುತ್ತಾರೆ: “ಇಲ್ಲ, ನಮ್ಮನ್ನು ತಪ್ಪಾಗಿ ತೋರಿಸಲಾಗುತ್ತಿದೆ, ನಾವು ವಿರೋಧಿಸುತ್ತಿದ್ದೇವೆ”.ಯಾರ ಮಾತು ನಿಜ? ಹಳ್ಳಿಗೆ ಹೋಗಿ ನೋಡಿ. ಆ ತೋಟದಲ್ಲಿ ಇನ್ನೂ ರೇಷ್ಮೆ ಹುಳು ಸಾಕುತ್ತಿದ್ದಾರೆ. ವರ್ಷಕ್ಕೆ 35 ಕೋಟಿ ರೇಷ್ಮೆ ಆದಾಯ, 25 ಕೋಟಿ ಹಾಲಿನ ಆದಾಯ ಈ ಹಳ್ಳಿಗಳಿಂದಲೇ ಬರುತ್ತದೆ ಅಂತ ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಇದು ಬಂಜರು ಭೂಮಿಯಲ್ಲ, ಬೆಂಗಳೂರಿಗೆ ತರಕಾರಿ, ಹಾಲು ಕೊಡುವ…
ಲೇಖನ- ಡಾ.ರಾಜಶೇಖರ ನಾಗೂರಸಂಚಾಲಕರುನಮ್ಮ ಕಥಾ ಅರಮನೆ ಉದಯರಶ್ಮಿ ದಿನಪತ್ರಿಕೆ ಮನುಷ್ಯ ಭೂಮಿಯ ಮೇಲೆ ಹುಟ್ಟಿ ಬಂದಮೇಲೆ ಬೇಟೆಯಾಡುತ್ತಾ ಬದುಕಿದ. ಕಾಲಕ್ರಮೇಣ ತನ್ನದೇ ಗುಂಪು ಮಾಡಿಕೊಂಡು ಬದುಕಲು ಪ್ರಾರಂಭ ಮಾಡಿದ. ತದನಂತರ ತನ್ನದೇ ಕುಟುಂಬ, ತನ್ನದೇ ಜೀವನ ಸಂಗಾತಿ ಮತ್ತು ತನ್ನದೇ ಸಂತತಿ ಎಂದು ಪ್ರತ್ಯೇಕ ಗೊಳಿಸಿಕೊಂಡು ಬದುಕಲು ಪ್ರಾರಂಭ ಮಾಡಿದ. ಆಗ ನಾಗರಿಕತೆ ಶುರುವಾಯ್ತು.ಆಗ ಗುಂಪುಗಳು ಊರುಗಳಾದವು. ಊರುಗಳು ನಗರಗಳಾದವು, ನಗರಗಳು ಸಮಾಜವಾಯ್ತು. ಈಗ ಸಾಮಾಜಿಕ ನಿಯಂತ್ರಣ ಸವಾಲಾಯ್ತು. ಆಗ ನೀತಿ ನಿಯಮಗಳನ್ನು ಸೃಷ್ಟಿ ಮಾಡಿಕೊಂಡ. ಮನುಷ್ಯ ಯಾವ ನಿಯಮಗಳನ್ನೂ ಕೂಡಾ ದಿಕ್ಕರಿಸಿ ದೌರ್ಜನ್ಯ ಎಸಗುತ್ತಾನೆ. ಹೀಗಾಗಿ ಅದೃಶ್ಯ ದೇವರು, ದೆವ್ವ, ಆತ್ಮ, ಕರ್ಮ ಅಂತೆಲ್ಲಾ ಪರಿಕಲ್ಪನೆಗಳನ್ನು ಹುಟ್ಟುಹಾಕಿ ನೈತಿಕತೆಯ ಭಯ ಸೃಷ್ಟಿ ಮಾಡಿದ. ಆಗ ಈ ನಂಬಿಕೆಗಳ ಮೇಲೆ ಒಟ್ಟಾಗಿ ಬದುಕಲು ಸಾಧ್ಯವಾಯ್ತು. ಈ ನಂಬಿಕೆ ಎಲ್ಲರನ್ನೂ ಹಿಡಿದಿಡುವ ಶಕ್ತಿಯಾಯಿತು.ಈಗ ನಂಬಿಕೆಯ ನಂತರವೇ ಮೂಢನಂಬಿಕೆ ಸೃಷ್ಟಿ ಪ್ರಾರಂಭವಾಯ್ತು. ಏಕೆಂದರೆ ಇತಿಹಾಸ ಅವಲೋಕಿಸಿದಾಗ ಮನುಷ್ಯ ಇನ್ನೊಬ್ಬರನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಹುನ್ನಾರ…
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಮೊಹರಂ ಹಬ್ಬ ಒಂದಾಗಿದ್ದು ರಂಜಾನ್ ನಂತರ ಎರಡನೇ ಪವಿತ್ರ ತಿಂಗಳೆಂದು ನಂಬಲಾಗಿದೆ ಯುದ್ದ ಮಾಡುವದನ್ನು ಅಲ್ಲಾನು ನಿಷೇದಿಸಿದ ಸಮಯವೇ ಮೊಹರಂ ಎಂದು ನಂಬಲಾಗಿದೆ.ಶುಕ್ರವಾರರಂದು ಪಟ್ಟಣದಲ್ಲಿ ಮೊಹರಂ ಹಬ್ಬ ಕುರಿತು ವಿವಿದ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ದೇವರ ದಫನ್ ಕಾರ್ಯಕ್ರಮವು ಅಸಂಖ್ಯಾತ ಭಕ್ತರ ಜನದಟ್ಟಣೆಯಲ್ಲಿ ಜರುಗಿತಲ್ಲದೇ ಬಾವೈಕ್ಯತೆಯೊಂದಿಗೆ ಜರುಗಿದ ಈ ಹಬ್ಬ ಕುರಿತು ಪ್ರತಿಷ್ಠಾಪಿಸಲಾದ ದೇವರಿಗೆ ಎಡೆ, ಕಾಯಿ, ಕರ್ಪೂರ, ಲೋಬಾನ, ಸಕ್ಕರೆಯನ್ನು ಸಹ ಈ ಹಿಂದಿನಿಂದಲೂ ಸಾಗಿಬಂದ ಪದ್ದತಿಯಂತೆ ಹಿಂದೂ ಜನಾಂಗದವರೂ ದೇವರಿಗೆ ನೀಡಿ ಭಕ್ತಿಭಾವ ಮೆರೆದರು.ಪಟ್ಟಣದ ಮಕಾಂದಾರ ಗಲ್ಲಿ, ಬೇಪಾರಿ ಗಲ್ಲಿ, ಮಾಲಗಲ್ಲಿ, ಬಿಸ್ತಿ ಗಲ್ಲಿ, ಪಂಚೆಸೈಯದ್ ದರ್ಗಾ, ದವಲ್ ಮಲೀಕ್ ದರ್ಗಾ, ಮಿಲತ್ ನಗರ, ಆಶ್ರಯ ಕಾಲನಿ ಒಳಗೊಂಡು ಸುಮಾರು ೬ ಬಡಾವಣೆಗಳಲ್ಲಿ ಮೊಹರಂ ದೇವರ ಪ್ರತಿಷ್ಠಾಪನೆ ಮಾಡಲಾಗಿತ್ತು.ತಾಳಿಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ೬೪ ಗ್ರಾಮಗಳನ್ನೊಳಗೊಂಡು ೨೭೧ ಪಂಜಗಳು, ೫೬ ಡೋಲಿಗಳು, ಅಲ್ಲದೇ ತಾಳಿಕೋಟೆಯಲ್ಲಿ ೬ ಬಡಾವಣೆಗಳಲ್ಲಿ ದೇವರು ಪ್ರತಿಷ್ಠಾಪಿಸಲಾಗಿತ್ತು.ಒಟ್ಟಿನಲ್ಲಿ…
