Author: editor.udayarashmi@gmail.com

ಮುದ್ದೇಬಿಹಾಳ: ತಾಲೂಕಿನ ಗಂಗೂರ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಸೋಮವಾರ ರಾತ್ರಿ ೮:೩೦ ರಿಂದ ಮಧ್ಯರಾತ್ರಿ ೧೨ ರವರೆಗೆ ಆನೆಕಾಲು ರೋಗ ಪರೀಕ್ಷೆ ನಡೆಸಿ ಸುಮಾರು ೧೧೦ ಜನರ ರಕ್ತ ಲೇಪನಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಯಿತು.ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಮಮ್ಮದ್ ರಫೀಕ್ ನಾಗರಾಳ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಎಸ್.ಗೌಡರ, ಎಸ್.ಐ.ಕಮಲಪ್ಪನವರ, ಐ.ಬಿ.ಹೂಗಾರ, ರೇಷ್ಮಾ ರೂಡಗಿ ಹಾಗೂ ಆಶಾ ಕಾರ್ಯಕರ್ತೆ ದೇವಮ್ಮ ಬೋಳಿ ಪಾಲ್ಗೊಂಡಿದ್ದರು.

Read More

ದೇವರಹಿಪ್ಪರಗಿ: ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನಿ ಮೋದಿ ಅವರ ಕೈಬಲಪಡಿಸಲು ಬಂಜಾರ ಸಮುದಾಯ ಸಿದ್ಧವಾಗಿದೆ. ಆದ್ದರಿಂದ ನಮ್ಮೇಲ್ಲಾ ಬಾಂಧವರು ರಮೇಶ ಜಿಗಜಿಣಗೆ ಅವರಿಗೆ ಮತ ನೀಡುವುದರ ಮೂಲಕ ಮೋದಿಯವರನ್ನು ಮತ್ತೇ ಪ್ರಧಾನಿ ಮಾಡೋಣ ಎಂದು ಬಿಜೆಪಿ ಜಿಲ್ಲಾ ಪ್ರಕೋಷ್ಟಕಗಳ ಸಹ ಸಂಯೋಜಕ ಭೀಮಸಿಂಗ್ ರಾಠೋಡ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ಜರುಗಿದ ಬಂಜಾರ ಸಮುದಾಯದ ಪ್ರಮುಖರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.ಬಿಜೆಪಿ ಆಡಳಿತದಲ್ಲಿ ತಾಂಡಾ ಅಭಿವೃದ್ಧಿ ನಿಗಮ, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ, ಸೇವಾಲಾಲರ ಜನ್ಮಸ್ಥಳ ಸೋರೆಗೊಂಡನಕೊಪ್ಪ ಅಭಿವೃದ್ಧಿಗೆ ೫ ಕೋಟಿ, ಮಹಾರಾಷ್ಟçದ ಸೇವಾಲಾಲರ ಐಕ್ಯಸ್ಥಳ ಶ್ರೀ ಪೌರಾಗಢ ಅಭಿವೃದ್ಧಿಗೆ ೧೦೦೦ ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ಸಮುದಾಯ ಅಭಿವೃದ್ಧಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಗಮನಾರ್ಹ ಕೊಡುಗೆ ನೀಡಿದೆ. ಆದರೆ ಕಾಂಗ್ರೆಸ್ ನಾಯಕರು ಬಂಜಾರಾ ಸಮುದಾಯಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ.ರಾಜ್ಯದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಸಮುದಾಯದ ವ್ಯಕ್ತಿಗೆ…

Read More

-ದೇವೇಂದ್ರ ಹೆಳವರವಿಜಯಪುರ: ಚೈತ್ರಮಾಸದ ದವನದ ಹುಣ್ಣಿಮೆಯಂದು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಹನುಮ ಜಯಂತಿಯ ಹಿನ್ನೆಲೆಯಲ್ಲಿ ನಗರದ ಆಯಾ ಬಡಾವಣೆಯಲ್ಲಿರುವ ಎಲ್ಲ ಹನುಮಾನ ದೇವಸ್ಥಾನಗಳಲ್ಲಿ ಬೆಳಿಗ್ಗೆ ಬಾಲ ಹನುಮನ ತೊಟ್ಟಿಲು ಕಾರ್ಯಕ್ರಮ ಹಾಗೂ ನಾಮಕರಣ ಪೂಜಾ ವಿಧಿ ವಿಧಾನದೊಂದಿಗೆ ನಡೆಯಿತು.ಮುತ್ತೈದೆಯರು ಹನುಮ ದೇವರ ಭಾವಚಿತ್ರವನ್ನು ಹೂಹಾರಗಳಿಂದ ಅಲಂಕರಿಸಿದ್ದ ತೊಟ್ಟಿಲಲ್ಲಿಟ್ಟು ಹಾಡುಗಳನ್ನು ಹಾಡಿ ನಾಮಕರಣ ಮಾಡಿದರು.ಎಲ್ಲ ಹನುಮಾನ ದೇವಸ್ಥಾನಗಳ ಮುಂದೆ ಆಕರ್ಷಕ ಮಂಟಪ ನಿರ್ಮಿಸಿ ರಂಗೋಲಿ ಬಿಡಿಸಿ ಕಂಬಗಳಿಗೆ ತೆಂಗಿನ ಗರಿ, ಬಾಳೆ ಗಿಡ, ಹೂಮಾಲೆ, ತಳಿರು ತೋರಣ ಕಟ್ಟಿ ವಿಶೇಷ ಅಲಂಕಾರ ಮಾಡಿದ್ದು ಭಕ್ತರ ಮನ ಸೆಳೆಯಿತು.ಹನುಮ ಜಯಂತಿಯ ವಿಜೃಂಭಣೆಯ ಆಚರಣೆ ಜಾತ್ರೆಯ ವೈಭವದಂತಿತ್ತು.ಪ್ರತಿ ದೇವಸ್ಥಾನಗಳಲ್ಲಿ ಹನುಮಾನ ದೇವರ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ, ವಿಶೇ‌ಷ ಪೂಜೆ ನೆರವೇರಿಸಲಾಯಿತು. ಬೆಳ್ಳಿಯ ಕವಚ, ಎಲೆ ಪೂಜೆ, ವಿವಿಧ ಬಗೆಯ ಹೂವು- ಹಾರಗಳಿಂದ ಹನುಮಾನ ದೇವರ ಮೂರ್ತಿಗೆ ಅಲಂಕಾರ ಮಾಡಿದ್ದು ಭಕ್ತರನ್ನು ಬಹುವಾಗಿ ಆಕರ್ಷಿಸಿತು. ಎಲ್ಲ ದೇವಸ್ಥಾನಗಳಲ್ಲಿ ಹನುಮ ದೇವರ ಭಕ್ತಿಗೀತೆಗಳ ನಿನಾದ…

Read More

ಆಲಮಟ್ಟಿ: ಸಮೀಪದ ವಂದಾಲ ಗ್ರಾಮ ಪಂಚಾಯ್ತಿಯಲ್ಲಿ ನಡೆದಿರುವ ಬಾಂದಾರ್ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಭೇಟಿ ನೀಡಿ, ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿದರು.ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವ್ಯವಸ್ಥೆ ಕಲ್ಪಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಮನರೇಗಾ ಯೋಜನೆಯಡಿ ದೊರೆಯುವ ಕೂಲಿ ಮೊತ್ತ ಹಾಗೂ ವೈಯಕ್ತಿಕ ಕಾಮಗಾರಿಗಳ ಕುರಿತು ಕೂಲಿಕಾರರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದುಕೊಂಡರು.ರಿಶಿ ಆನಂದ ಮಾತನಾಡಿ, ಜಿಲ್ಲೆಯಲ್ಲಿ ಬರ ಆವರಿಸಿರುವುದರಿಂದ ಇಲ್ಲಿನ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ನರೇಗಾದಡಿ ಹೆಚ್ಚಿನ ಸಂಖ್ಯೆಯ ಜನರಿಗೆ ಕೆಲಸ ನೀಡಲಾಗುತ್ತಿದೆ.ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ನರೇಗಾ ಯೋಜನೆಯಲ್ಲಿ ಶೇ. 50ರಷ್ಟು ಕೆಲಸ ಕೊಟ್ಟು, ಪೂರ್ಣ ಪ್ರಮಾಣದಲ್ಲಿ ಕೂಲಿ ಕೊಡಲಾಗುತ್ತಿದೆ ಎಂದು ಹೇಳಿದರು.ಮತದಾನ ಪ್ರತಿಜ್ಞಾ ವಿಧಿ ಬೋಧನೆ: ಈ ವೇಳೆ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 7ರಂದು ನಡೆಯುವ ಮತದಾನದ ಹಿನ್ನೆಲೆ ಮತದಾರರಿಗೆ ಮತದಾನದ ಕುರಿತು ಜಾಗೃತಿ…

Read More

ವಿಜಯಪುರ: ಸಂಸದ ಮತ್ತು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಏ. 26 ರಂದು ವಿಜಯಪುರ ನಗರಕ್ಕೆ ಆಗಮಿಸಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರ ನಡೆಸಲಿದ್ದಾರೆ.ಈ ಹಿನ್ನೆಲೆಯಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು, ಕಾರ್ಯಕ್ರಮ ನಡೆಯಲಿರುವ ಬಿ.ಎಲ್.ಡಿ.ಇ. ಹೊಸ ಕ್ಯಾಂಪಸ್‌ಗೆ ತೆರಳಿ ಮಂಗಳವಾರ ಸಂಜೆ ತಯಾರಿ ಪರಿಶೀಲನೆ ನಡೆಸಿದರು.ಏ. 26 ರಂದು ಬೆಳಿಗ್ಗೆ 11 ಗಂಟೆಗೆ ರಾಹುಲ್ ಗಾಂಧಿ ವಿಜಯಪುರಕ್ಕೆ ಆಗಮಿಸಲಿದ್ದಾರೆ. ಅವರೊಂದಿಗೆ ಸಿಎಂ ಎಸ್. ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿರಲಿದ್ದಾರೆ.ತಯಾರಿ ವೀಕ್ಷಣೆ ಸಂದರ್ಭ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಎಸ್ಪಿ ರಿಷಿಕೇಷ ಸೋನಾವಣೆ, ನಗರ ಡಿವೈಎಸ್ಪಿ ಬಸವರಾಜ ಯಲಿಗಾರ, ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ…

Read More

ಕಾಂಗ್ರೆಸ್ ಅಭ್ಯರ್ಥಿ ಆಲಗೂರ ಪರ ಸಚಿವರು-ಶಾಸಕರಿಂದ ಸಾಮೂಹಿಕ ಪ್ರಚಾರ ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರೊ ರಾಜು ಆಲಗೂರ ಪರ ಸಾಮೂಹಿಕ ಪ್ರಚಾರ ಮಾಡುತ್ತಿರುವ ಜಿಲ್ಲೆಯ ಸಚಿವರು, ಶಾಸಕರು ಮತ್ತು ಮುಖಂಡರು ಇಂದು ಮಂಗಳವಾರ ದ್ರಾಕ್ಷಿನಾಡು ತಿಕೋಟಾದಲ್ಲಿ ಭರ್ಜರಿ ಪ್ರಚಾರ ನಡೆಸಿದರು.ಜತ್ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ, ಜವಳಿ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ, ಮತ್ತು ಶಾಸಕರು ಸಾಮೂಹಿಕವಾಗಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜನ ಎಸ್. ಲೋಣಿ, ಜಿಲ್ಲೆಯಲ್ಲಿ ಸಚಿವರು, ಶಾಸಕರು ಮತ್ತು ಮುಖಂಡರು ಒಗ್ಗಟ್ಟಾಗಿ ಸಾಮೂಹಿಕವಾಗಿ ಪ್ರಚಾರ ಕೈಗೊಂಡಿದ್ದೇವೆ. ದಿನೇ ದಿನೇ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರ ಪರ ಅಲೆ ಹೆಚ್ಚುತ್ತಿದ್ದು, ಮತದಾರರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್ಸಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮತದಾರರಿಗೆ ಈಗ ಕೇಂದ್ರ ಸರಕಾರದ ಸುಳ್ಳು ಭರವಸೆಗಳ ಅರಿವಾಗಿದ್ದು, ಅವರೆಲ್ಲರೂ ಈಗ ಜಾಗೃತರಾಗಿದ್ದಾರೆ. ಅಷ್ಟೇ ಅಲ್ಲ, ಪ್ರೊ.…

Read More

ಆಲಮಟ್ಟಿ: ಸಮೀಪದ ಸುಕ್ಷೇತ್ರ ಯಲಗೂರು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಹನುಮ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಬೆಳಗ್ಗೆ 4ಕ್ಕೆ ಉತ್ಸವ ಮೂರ್ತಿಯನ್ನು ಕೃಷ್ಣಾ ನದಿಗೆ ಒಯ್ದು ಅಲ್ಲಿ ಅಭಿವೃತ್ತ ಸ್ನಾನ ಮಾಡಿಸಲಾಯಿತು. ನದಿ ತೀರದಿಂದ ದೇವಸ್ಥಾನದವರೆಗೆ ನಾನಾ ವಾದ್ಯ ವೈಭವಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ದೇವಸ್ಥಾನ ಆವರಣದಲ್ಲಿ ಸೂರ್ಯೋದಯ ಸಮಯದಲ್ಲಿ ಹನುಮನ ತೊಟ್ಟಿಲು ಹಾಕುವ ಕಾರ್ಯಕ್ರಮ ಜರುಗಿತು. ನಂತರ ಪಾನಕ ಕೋಸಂಬರಿ ವಿತರಿಸಲಾಯಿತು.ವೇದ ಮಂತ್ರಗಳೊಂದಿಗೆ ಪೂಜೆ ನೆರವೇರಿದ ಮೇಲೆ ಅನೇಕ ಮಹಿಳೆಯರು ಹನುಮನ ಭಕ್ತಿಗೀತೆಗಳನ್ನು ಹಾಡಿದರು. ಯಲಗೂರೇಶನಿಗೆ ಸಾಮೂಹಿಕ ಪಂಚಾಮೃತ ಅಭಿಷೇಕ, ಮಹಾಪೂಜೆ, ಅಲಂಕಾರ, ಮಹಾನೈವೇದ್ಯ, ಅನ್ನ ಸಂತರ್ಪಣೆ ಜರುಗಿತು. ಹನುಮನಿಗೆ ಮಾವಿನ ಹಣ್ಣಿನ ಅಲಂಕಾರ ಭಕ್ತರ ಗಮನ ಸೆಳೆಯಿತು.

Read More

ವಿಜಯಪುರ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿದ ಜಾಗೃತಿ ನಾಗರಿಕ ವೇದಿಕೆ ಹಾಗೂವಿಶ್ವ ಹಿಂದು ಪರಿಷತ್ ಜಿಲ್ಲಾ ಘಟಕದ ಕಾರ್ಯಕರ್ತರು ಹತ್ಯೆ ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ವಿಹಿಂಪ ವಿಭಾಗ ಪ್ರಮುಖ ಶ್ರೀಮಂತ ದುದ್ದಗಿ, ಜಿಲ್ಲಾ ಕಾರ್ಯದರ್ಶಿ ಸಿದ್ದು ಹೂಗಾರ್, ಪ್ರಾಂತ ಪ್ರಮುಖ ಶ್ರೀಮತಿ ಮಾಯಕ್ಕ ಚೌದರಿ, ಮಂಚಾಲೇಶ್ವರಿ ಹಾಗೂ ಮುಖಂಡ ರಾಜು ಗಚ್ಚಿನಮಠ ಮಾತನಾಡಿ, ಗೃಹ ಸಚಿವರು ತನಿಖೆಗೂ ಮೊದಲೇ ಇದು ವೈಯಕ್ತಿಕ ಪ್ರೀತಿಗಾಗಿ ನಡೆದ ಕೊಲೆ ಎಂದು ಹಗುರವಾಗಿ ಹೇಳಿಕೆ ನೀಡಿ ತನಿಖೆ ದಾರಿಯನ್ನು ತಪ್ಪಿಸುವ ಹುನ್ನಾರ ಮತ್ತು ಮುಸ್ಲಿಂ ಓಟ್ ಬ್ಯಾಂಕ್ ಒಲೈಕೆಗೆ ನಾಂದಿ ಹಾಡಿದ್ದಾರೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ತಕ್ಷಣ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಹತ್ಯೆಗೆದ ಹಂತಕ ಫಯಾಜ್ನನ್ನು ಗಲ್ಲಿಗೇರಿಸಬೇಕು. ವಿದ್ಯಾರ್ಥಿನಿಯರಲ್ಲಿ ಅಡಗಿದ ಭಯವನ್ನು ದೂರಗೊಳಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಹಾಗೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಪ್ರಾಂತ ಪ್ರಮುಖ ಸುನಿಲ್ ಭೈರವಾಡಗಿ, ಚಂದ್ರಶೇಖರ್…

Read More

ಇಂಡಿ: ತಾಲೂಕಿನ ಪ್ರಸಿದ್ಧ ಹಳಗುಣಕಿ ಸೇರಿದಂತೆ ಬೊಳೆಗಾಂವ, ಸಾಲೋಟಗಿ,ತಾಂಬಾ ಸೇರಿದಂತೆ ತಾಲೂಕಿನ್ಯಾದಂತ ಶ್ರೀ ಹನುಮಾನ ದೇವರ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಹನುಮಾನ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು.ಅದಲ್ಲದೆ ಪಟ್ಟಣದ ಹಿರೇಇಂಡಿ, ಕೆಈಬಿ, ಅಗಸಿ ಮಹಾವೀರ ವೃತ್ತ, ಜಿ.ಪಂ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಕಡೆ ಹನುಮಾನ ಜಯಂತಿ ಆಚರಿಸಲಾಯುತು.ಹಳಗುಣಕಿ ಗ್ರಾಮದಲ್ಲಿ ಬೆಳಗ್ಗೆ ೬ ಗಂಟೆಯಿಂದ ಸಾಯಂಕಾಲ ೪ ಗಂಟೆಯ ವರೆಗೆ ಸಕಲ ಸದ್ಭಕ್ತರಿಂದ ದೀರ್ಘ ದಂಡ ನಮಸ್ಕಾರ ಕಾರ್ಯಕ್ರಮ ನಡೆಯಿತು.ನಂತರ ಗೌಡರ ವಾಡೆಯಿಂದ ವಿವಿಧ ವಾಧ್ಯ ಮೇಳದೊಂದಿಗೆ ಮೊಸರು ಗಡಿಗೆ ಮೆರವಣೆಗೆ, ಶ್ರೀ ಹನುಮಾನ ದೇವಸ್ಥಾನದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ, ಪ್ರಸಾದ ವಿತರಣೆ, ಚಿತ್ರ ವಿಚಿತ್ರ ಮದ್ದು ಸುಡುವದು, ಜಂಗಿ ನಿಕಾಲಿ ಕುಸ್ತಿಗಳು ನಂತರ ನೀನು ಸಾಹುಕಾರ ನಾಗು ನಾಟಕ ಪ್ರದರ್ಶನ ನಡೆಯಿತು.ಪಟ್ಟಣದ ಹಿರೇ ಇಂಡಿ ದೇವಸ್ಥಾನದಲ್ಲಿ ಬೆಳಗ್ಗೆ ಅಭಿಷೇಕ,ಪೂಜೆ ಪ್ರಸಾದ ವಿತರಣೆ ನಡೆಯಿತು.ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮತ್ತು ಸಮಿತಿಯ ಎಲ್ಲ ಸದಸ್ಯರು, ಅಗಸಿ ದೇವಸ್ಥಾನದಲ್ಲಿ ಸೋಮು…

Read More

ಇಂಡಿ: ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನವು ವಿವಿಧ ದೇಶಗಳು ಮತ್ತು ಪ್ರದೇಶಗಳ ಪುಸ್ತಕಗಳನ್ನು ಪ್ರಚಾರ ಮಾಡುವ ಮೂಲಕ, ಕೃತಿಗಳ ಅನುವಾದಗಳನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ವೈವಿಧ್ಯಮಯ ಸಾಹಿತ್ಯ ಸಂಪ್ರದಾಯಗಳನ್ನು ಉತ್ತೇಜಿಸುವ ಮೂಲಕ ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುತ್ತದೆ. ಇದು ವಿಶ್ವ ಸಾಹಿತ್ಯದ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಆಚರಿಸುತ್ತದೆ ಎಂದು ಗ್ರಂಥಪಾಲಕ ರಾಘವೇಂದ್ರ ಇಂಗನಾಳ ಹೇಳಿದರು.ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಅಡಿಯಲ್ಲಿ “ವಿಶ್ವ ಪುಸ್ತಕ ಹಾಗೂ ಕೃತಿ ಸ್ವಾಮ್ಯ” ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ ಮಾತನಾಡಿ ಓದುವದು ಜೊತೆಗೆ ಬರೆಯುವುದು ಪ್ರತಿಯೊಬ್ಬ ಕಲಿಕಾರ್ಥಿಯ ಆದ್ಯ ಕರ್ತವ್ಯವಾಗಿದೆ ನಾವೆಲ್ಲ ಓದುಗ ಉಪನ್ಯಾಸಕರು ಮಹತ್ವದ ಪುಸ್ತಕಗಳ ಓದಿನಿಂದ ವಿದ್ಯಾರ್ಥಿಗಳ ಆಳಕ್ಕೀಳಿದು ಪಾಠಮಾಡಬಹುದು. ಎಂದು ಹೇಳಿದರು.ಪ್ರಾಧ್ಯಾಪಕರಾದ ಡಾ.ಶ್ರೀಕಾಂತ ರಾಠೋಡ, ಡಾ.ಜಯಪ್ರಸಾದ ಡಿ, ಮಲ್ಲಿಕಾರ್ಜುನ ಕೋಣದೆ ಮಾತನಾಡಿದರು.ಡಾ.ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ, ಶೃತಿ ಪಾಟೀಲ, ಬಲರಾಮ ವಡ್ಡರ, ಶ್ವೇತಾ ಕಾಂತ, ಪಂಕಜ ಕುಲಕರ್ಣಿ, ಶೃತಿ ಬಿರಾದಾರ,…

Read More