ಚಡಚಣ: ಮಹಿಳೆಯರು ಜೀವನದಲ್ಲಿ ಧೈರ್ಯದಿಂದ ಸಾಗಬೇಕು.ಎಂತಹ ಸಂಕಷ್ಟಗಳು ಸರಾಗವಾಗಿ ಎದುರಿಸುವ ಮನೋಭಾವನೆ ಹೊಂದಬೇಕು. ಅಂದಾಗ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಕನಕನಾಳ ಭಾಗ್ಯವಂತಿದೇವಿಯ ಧೂಳಿ ರುದ್ರಪ್ಪ ಪೂಜಾರಿ ಹೇಳಿದರು. .
ಪಟ್ಟಣದ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಜರುಗಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಇಂಡಿಯವರ ಆಶ್ರಯದಲ್ಲಿ ಚಡಚಣ ಕೇಂದ್ರದ ವಾರ್ಷಿಕೋತ್ಸವದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಿಳೆಯರ ಆರ್ಥಿಕತೆಗೆ ಇಂತಹ ಸಂಘಗಳು ಪೂರಕ. ಈ ಸಂಘವ ಮಹಿಳೆಯರಿಗಾಗಿ ನಾನಾ ಯೋಜನೆಗಳನ್ನು ಕೈಗೊಂಡು ಮಹಿಳೆ ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತು ಮಾಡಿದೆ ಎಂದರು.
ಮೇಲ್ವಿಚಾರಕ ಜಗದೀಶ ಕುಂಬಾರ ಮಾತನಾಡಿ, ಸಂಘವು ಅಭಿವೃದ್ಧಿಯಾಗಬೇಕಾದರೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.
ಅಖಿಲ ಕರ್ನಾಟಕ ಜ್ಞಾನ ಜಾಗೃತಿ ಜಿಲ್ಲಾ ಸದಸ್ಯ ಶಿವಣ್ಣ ಪಾಂಡ್ರೆ ಮಾತನಾಡಿ, ಧರ್ಮಸ್ಥಳ ಸಂಘ ಸಂಘದಿಂದ ಅನಾಥರಿಗೆ ಬಡವರಿಗೆ ವಸತಿಯೋಜನೆ, ವೃದ್ಧರಿಗೆ
ಮಾಸಾಶನ ಯೋಜನೆ ಮಾಡಿದೆ ಎಂದರು.
ಬಣಗಾರ ಸಮಾಜದ ಮುಖಂಡ ಬಸವರಾಜ ಕರಜಗಿ ಮಾತನಾಡಿ, ಸಂಘವು ಉತ್ತರೋತ್ತರ ಅಭಿವೃದ್ಧಿ ಹೊಂದಿ ಮಹಿಳೆಯರ ಬಾಳೆಗೆ ಬೆಳಕಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯ ಮೇಲೆ ಹಿರಿಯ ಪರ್ತಕರ್ತ ಗಂಗಾಧರ ಗಿಡವೀರ, ಚೈತ್ರಾ ಮಠಪತಿ, ಕಮಲಾಬಾಯಿ ಕಠಾರೆ, ಜಯಶ್ರೀ ಮೇಡಂ ಇದ್ದರು. ಪ್ರಾರಂಭದಲ್ಲಿ ಮಂಜುನಾಥನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಸದಸ್ಯೆಯರ ಕುಂಭಮೇಳವು ಶೋಭೆ ತಂದಿತು.
ಸೇವಾ ಪ್ರತಿನಿಧಿ ಗುರುದೇವಿ ನಿರಾಳೆ ನಿರೂಪಿಸಿದರು. ಬಿಸಿಲ್ಲಾ ನದಾಫ ವಂದಿಸಿದರು. ಕಮಲಾ ಜಂಗಲಗಿ, ಜಗದೇವಿ ವಾಳಿಖಿOಡಿ, ಸುಜಾತಾ ಜಂಗಲಗಿ, ರಂಜಿತಾ ಗಿಡವೀರ, ಸಂಗೀತಾ, ಸುಪ್ರಿಯಾ, ಜ್ಯೋತಿ ಕಠಾರೆ, ಅಶ್ವಿನಿ ಪೂಜಾರಿ, ವ್ಯೆಶಾಲಿ ಮುತ್ತಿನ, ಕಮಲಾ ಕುಂಬಾರ, ಲಕ್ಷ್ಮೀ ಕರಜಗಿ , ಕಾಂತವ್ವ , ವಾಳಿಖಿಂಡಿ, ದಾನಮ್ಮ ಅಕ್ಷತಾ, ಕವಿತಾ, ವಿಶಾಲಾಕ್ಷಿ ಸೇರಿದಂತೆ ಎಲ್ಲ ಸದಸ್ಯೆಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

