Author: editor.udayarashmi@gmail.com

ವಿಕಲಚೇತನ-ಹಿರಿಯ ನಾಗರಿಕರ ಇಲಾಖೆ: ೧೩ ಫಲಾನುಭವಿ ಆಧಾರಿತ ಯೋಜನೆ ವಿಜಯಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ೧೩ ಫಲಾನುಭವಿ ಆಧಾರಿತ ಯೋಜನೆಗಳಡಿ ಸಹಾಯ ಸೌಲಭ್ಯ ಪಡೆಯಲು ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ೧೩ ಫಲಾನುಭವಿ ಅಧಾರಿತ ಯೋಜನೆಗಳನ್ನು ಸೇವಾಸಿಂಧು, ಗ್ರಾಮ ಓನ್, ಕರ್ನಾಟಕ ಓನ್, ಬೆಂಗಳೂರು ಓನ್, ಸಿಟಿಜೆನ್ಸ್ ಪೋರ್ಟಲ್ ಆನ್ ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿದ್ದು, ಫ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಶಿಶುಪಾಲನಾ ಭತ್ಯೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, ನಿರುದ್ಯೋಗ ಭತ್ಯೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಆಧಾರ ಯೋಜನೆ, ಸಾಧನ ಸಲಕರಣೆಗಳ ಯೋಜನೆ, ಮರಣ ಪರಿಹಾರ ನಿಧಿ, ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ಸಾಧನೆ ಯೋಜನೆ, ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್‌ಕಿಟ್ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಲು ೨೦೨೪-೨೫ನೇ ಸಾಲಿನ ವಿಕಲಚೇತನ ಫಲಾನುಭವಿಗಳು ಆನ್ ಲೈನ್…

Read More

ಎಫ್‌ಟಿಕೆ ಕಿಟ್ ಮೂಲಕ ನೀರಿನ ಮಾದರಿ ಪರೀಕ್ಷಿಸುವ ವಿಧಾನ ಕುರಿತು ಅಧಿಕಾರಿಗಳಿಗೆ ತರಬೇತಿ ವಿಜಯಪುರ: ಜಿಲ್ಲಾ ಪಂಚಾಯತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇವರ ಸಹಯೋಗದಲ್ಲಿ ಶನಿವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಒಂಭತ್ತು ನಿಯತಾಂಕಗಳ ಮೂಲಕ ನೀರಿನ ಮಾದರಿ ಎಫ್‌ಟಿಕೆ ಕಿಟ್ ಮೂಲಕ ಪರೀಕ್ಷಿಸುವ ವಿಧಾನದ ಕುರಿತ ತರಬೇತಿ ಜರುಗಿತು.ಶುದ್ಧ ಕುಡಿಯುವ ನೀರಿನ ಮಾದರಿಯನ್ನು ಪ್ರಾಥಮಿಕ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ನೀಡಲಾದ ಎಫ್‌ಟಿಕೆ ಕಿಟ್ ಮೂಲಕ ಪರೀಕ್ಷೆ ಮಾಡುವ ವಿಧಾನದ ಕುರಿತು ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಎರಡು ಹಂತದಲ್ಲಿ ಆಯೋಜಿಸಲಾಗಿತ್ತು.ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ವಿಜಯ ಅಜೂರ ಅವರು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಡಿಯುವ ನೀರನ್ನು ವ್ಯರ್ಥ ಮಾಡಬಾರದು. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ನೀರು ಪೂರೈಕೆ ಪೈಪ್ ಲೈನ್ ಮಾರ್ಗ ಸರಿಯಾಗಿರುವ ಬಗ್ಗೆ ನಿರಂತರ ಖಾತರಿಪಡಿಸಿಕೊಳ್ಳಬೇಕು. ದುರಸ್ತಿ ಕಾರ್ಯಗಳಿದ್ದರೆ ಆದ್ಯತೆಯ ಮೇರೆಗೆ…

Read More

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ 2024ನೇ ವರ್ಷದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 90% ಕ್ಕಿಂತ ಹೆಚ್ಚಿಗೆ ಫಲಿತಾಂಶವನ್ನು ಗಳಿಸಿದ ಅಖಂಡ ಸಿಂದಗಿ ತಾಲೂಕಿನ ರಹವಾಸಿಯಾಗಿರುವ ಹಾಲುಮತ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲು ಉದ್ದೇಶಿಸಿದ್ದು, ಕಾರಣ ನಿಗದಿತ ಫಲಿತಾಂಶ ಪಡೆದ ಹಾಲುಮತ ಸಮುದಾಯದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕಾಗಿ ಇದೇ ತಿಂಗಳ ಜು.25 ರೊಳಗಾಗಿ ಮಾಹಿತಿಯನ್ನು ನೀಡಲು ಸಿಂದಗಿ ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷ ರಾಯಪ್ಪ ಇವಣಗಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರತಿಭಾ ಪುರಸ್ಕಾರಕ್ಕಾಗಿ ಹೆಚ್ಚಿನ ಮಾಹಿತಿಯನ್ನು ನೀಡಲು ಕೆಳಕಾಣಿಸಿದವರನ್ನು ಸಂಪರ್ಕಿಸಲು ಕೋರಿದೆ. ಆರ್ ಕೆ ಪಾಟೀಲ – 9611914047ಎಸ್ ಎಸ್ ಸಾತಿಹಾಳ – 9972782509 ರಾಯಪ್ಪ ಇವಣಗಿ – 9731895525 ಎಂ ಬಿ ಪೂಜಾರಿ – 9980690993 ರಮೇಶ ಚಟ್ಟರಕಿ – 9880985806 -ಜಿ ಎಸ್ ತಾವರಖೇಡ – 9901310380ಜಿ ಎನ್…

Read More

ಝಳಕಿ ಗ್ರಾಮದಲ್ಲಿ ಸರಕಾರಿ ಪಾಲಿಟೆಕ್ನಿಕ್ ಬಾಲಕರ ವಸತಿ ನಿಲಯ ಕಟ್ಟಡ ಉದ್ಘಾಟನೆ ಇಂಡಿ: ಪ್ರಾಮಾಣಿಕತೆ ಜೀವನದ ಭಾಗವಾಗಿರಲಿ, ನಿಮ್ಮ ಪುಸ್ತಕಗಳ ಜೊತೆಯಲ್ಲಿ ಸ್ವಾಮಿ ವಿವೇಕಾನಂದ ಜೀವನ ಚರಿತ್ರೆಯ ಪುಸ್ತಕ ಓದಿ, ನಿಮ್ಮ ಬದುಕು ಬದಲಾವಣೆಯಾಗುತ್ತದೆ. ಅವರ ಮಾನವೀಯ ಮೌಲ್ಯಗಳನ್ನು ಹಾಗೂ ಸಂಸ್ಕಾರವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ವಿಧ್ಯಾರ್ಥಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲ್ಲೂಕಿನ ಝಳಕಿ ಗ್ರಾಮದಲ್ಲಿ‌ ಸರಕಾರಿ ಪಾಲಿಟೆಕ್ನಿಕಲ್ ಬಾಲಕರ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಗಡಿಭಾಗದಲ್ಲಿ ಶೈಕ್ಷಣಿಕ‌ ಕ್ರಾಂತಿಗಾಗಿಶಿಕ್ಷಣ ಕಾಶಿಯಾಗಿ ಝಳಕಿ ಗ್ರಾಮವನ್ನು ರೂಪಿಸಲಾಗಿದೆ.‌ ಕಳೆದ ೧೦ ವರ‍್ಷಗಳಿಂದ ಈ ಮಹಾ ಗಡಿ ಭಾಗದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣವರೆಗೆ ಶಿಕ್ಷಣ ಕೇಂದ್ರ ಸ್ಥಾಪಿಸಲಾಗಿದೆ.ಈ ಗಡಿ ಭಾಗದ ಮಕ್ಕಳು ಪ್ರಾಥಮಿಕ ಶಿಕ್ಷಣ ಹಿಡಿದು ಉನ್ನತ ಶಿಕ್ಷಣವರಿಗೆ ಕಲಿಯಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಇಲ್ಲಿ ಸರಕಾರಿ ವಸತಿ ನಿಲಯ ಮಾಡುವ ಮೂಲಕ ಇನ್ನೊಂದು ಹೊಸ ಹೆಜ್ಜೆ ಇಟ್ಟಂತಾಗಿದೆ. ಈ ಹಿಂದೆ ಝಳಕಿ ಅಂದರೆ ಆರ್ ಟಿ ಓ…

Read More

ದೇವರಹಿಪ್ಪರಗಿ ತಾಲ್ಲೂಕು ರೈತ ಜಾಗೃತಿ ಸಮಾವೇಶ | ನೂತನ ಪದಾಧಿಕಾರಿಗಳ ನೇಮಕ | ಸದಸ್ಯತ್ವ ಅಭಿಯಾನ | ರೈತರ ವಿವಿಧ ಬೇಡಿಕೆಗಳ ಚಿಂತನಾ ಸಭೆ ದೇವರಹಿಪ್ಪರಗಿ: ರೈತ ಸಮುದಾಯ ಕೇವಲ ಕೃಷಿಯ ಮೇಲೆ ಅವಲಂಬಿತವಾಗದೇ ಹೈನುಗಾರಿಕೆ, ಮೀನು ಸಾಕಾಣಿಕೆಯಂತಹ ಕಾರ್ಯಗಳನ್ನು ಮೈಗೂಡಿಸಿಕೊಂಡು ಸಾಲಮುಕ್ತ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವಂತಾಗಬೇಕು ಎಂದು ರೈತಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಡಿಯಲ್ಲಿ ಜರುಗಿದ ದೇವರಹಿಪ್ಪರಗಿ ತಾಲ್ಲೂಕು ರೈತ ಜಾಗೃತಿ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ನೇಮಕ, ಸದಸ್ಯತ್ವ ಅಭಿಯಾನ, ರೈತರ ವಿವಿಧ ಬೇಡಿಕೆಗಳ ಚಿಂತನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರೈತರಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ರೈತ ಸಮುದಾಯ ಈ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಅದಕ್ಕಾಗಿ ಒಗ್ಗಟ್ಟಿನ ಪ್ರದರ್ಶನ ಹಾಗೂ ಸಂಘಟನೆ ಮುಖ್ಯವಾಗಿದೆ ಎಂದರು.ರೈತಸಂಘದ ರಾಜ್ಯ ಗೌರವಾಧ್ಯಕ್ಷ…

Read More

ಚಿಕ್ಕಬಳ್ಳಾಪುರ ಸಂಸದ ಡಾ. ಕೆ.ಸುಧಾಕರ್ ಅಭಿನಂದನಾ ಸಮಾರಂಭ | ಮದ್ಯ-ಬಾಡೂಟಕ್ಕೆ ಮುಗಿಬಿದ್ದ ಜನ | ಎಲ್ಲೆಡೆ ಭಾರೀ ಟೀಕೆ ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಕೆ ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ, ಬಾಡೂಟಕ್ಕೆ ಜನರು ಮುಗಿಬಿದ್ದಿದ್ದು, ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.ನೆಲಮಂಗಲದ ಹೊರವಲಯದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಜನರಿಗಾಗಿ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.ಬಗೆಬಗೆಯ ಬಾಡೂಟ ಖಾದ್ಯಕ್ಕಾಗಿ ಜನರ ನೂಕುನುಗ್ಗಲು ಏರ್ಪಟ್ಟಿತ್ತು. ಸಮಾರಂಭಕ್ಕೆ ಬಂದಿದ್ದ ಕಾರ್ಯಕರ್ತರಿಗೆ ಬಾಡೂಟದ ಜೊತೆಗೆ ಮದ್ಯವನ್ನೂ ಕೂಡ ನೀಡಲಾಗಿತ್ತು. ಎಣ್ಣೆ ಪಡೆದುಕೊಳ್ಳಲು ಜನರ ನೂಕುನುಗ್ಗಲು ಏರ್ಪಟ್ಟಿತ್ತು. ಈ ವೇಳೆ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಂಸಾಹಾರ, ಬಿಯರ್, ಗಟ್ಟಿ ಮದ್ಯದ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು ಎಂದು ವರದಿಗಳು ತಿಳಿಸಿವೆ.ಸಮಾರಂಭದ ಸಂಘಟಕರು 10,000-15,000 ಜನರನ್ನು ನಿರೀಕ್ಷಿಸಿದ್ದರು. ಆದರೆ, 60,000 ಕ್ಕೂ ಹೆಚ್ಚು ಜನರು ಸೇರಿದ್ದರು.…

Read More

ಮುದ್ದೇಬಿಹಾಳ: ತಮ್ಮ ಜಮೀನನ್ನು ಸ್ವಚ್ಛಗೊಳಿಸಲು ಮುಂದಾದ ಕುಟುಂಬವೊಂದು ಖಬರಸ್ಥಾನದಲ್ಲಿದ್ದ ಮೃತರ ಗೋರಿಗಳ ಪೈಕಿ ಕೆಲವನ್ನು ಒಡೆದು ಹಾಕಿ ಮುಸ್ಲಿಂ ಸಮಾಜಬಾಂಧವರ ಕೆಂಗಣ್ಣಿಗೆ ಗುರಿಯಾದ ಘಟನೆ ಪಟ್ಟಣದ ಕುಂಟೋಜಿ ರಸ್ತೆಯಲ್ಲಿರುವ ಈದಗಾ ಮೈದಾನದ ಹಿಂದಿರುವ ಖಬರಸ್ಥಾನದಲ್ಲಿ ರವಿವಾರ ನಡೆದಿದೆ.ಪಟ್ಟಣದ ನಿವಾಸಿಗಳಾದ ಬಾರಿಕಾಯಿ ಕುಟುಂಬಸ್ಥರು ಇಂಥದ್ದೊಂದು ಎಡವಟ್ಟು ಮಾಡಿಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ತಮ್ಮ ಜಮೀನಿನ ಹಾಗೂ ಖಬರಸ್ಥಾನದ ಜಮೀನಿಗೆ ಸಂಬಂಧಿಸಿದಂತೆ ಭೂವಿವಾದ ನಡೆದಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾಗಲೇ ಈ ದುಸ್ಸಾಹಸಕ್ಕೆ ಕೈಹಾಕಿದ್ದು ಇಡೀ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ಮಾಧ್ಯದವರೊಂದಿಗೆ ಮಾತನಾಡಿದ ಅಂಜುಮನ್ ಎ ಇಸ್ಲಾಂ ಕಮೀಟಿಯ ಮಾಜಿ ಸದಸ್ಯ ಅಯೂಬ ಮನಿಯಾರ ಘಟನೆಯನ್ನು ಖಂಡಿಸಿ ಮಾತನಾಡಿ, ಅಂದಾಜು ೪೫ ಗೋರಿಗಳನ್ನು ನೆಲಸಮ ಮಾಡಿದ್ದು ನಮ್ಮ ಸಮುದಾಯದವರಿಗೆ ಸಾಕಷ್ಟು ನೋವು ತಂದಿದೆ. ಗೋರಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ವಿವಾದ ಬಾಕಿ ಇರುವಾಗಲೇ ಈ ನಿರ್ಧಾರಕ್ಕೆ ಮುಂದಾಗಿದ್ದು ನಮ್ಮ ಸಮಾಜಬಾಂಧವರು ಎಂದಿಗೂ…

Read More

ಮುದ್ದೇಬಿಹಾಳ: ತಾಲೂಕಿನಲ್ಲಿ ಕನ್ನಡದ ತೇರನ್ನು ಎಳೆಯಲು ಹಿರಿಯ ಸಾಹಿತಿಗಳು, ಕನ್ನಡಾಭಿಮಾನಿಗಳು ಸೇರಿದಂತೆ ಪತ್ರಕರ್ತರ ಸಹಕಾರ ಕೋರುವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮದವರೊಂದಿಗೆ ಸಮಾಲೋಚನೆ ಮತ್ತು ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.ನನ್ನ ಕಿರು ಸೇವೆಯನ್ನು ಗುರುತಿಸಿ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಈ ಹುದ್ದೆ ಅಲಂಕರಿಸಿದ ನಾನು ಈ ಸ್ಥಾನಕ್ಕೆ ಎಂದಿಗೂ ಚ್ಯುತಿ ಬರದ ರೀತಿಯಲ್ಲಿ ಸಾಗುವೆ. ಯುವ ಬರಹಗಾರರು, ಕಣ್ಮರೆಯಲ್ಲಿರುವ ಸಾಹಿತಿಗಳು ಸೇರಿದಂತೆ ತೆರೆ ಮರೆಯಲ್ಲಿರುವ ಕನ್ನಡಾಭಿಮಾನಿಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗುವೆ. ಎಲ್ಲರೂ ಸೇರಿ ತಾಲೂಕಿನಲ್ಲಿ ಕನ್ನಡದ ವೈಭವವನ್ನು ಮೆರೆಯೋಣ. ನನಗೆ ಎಲ್ಲರ ಸಹಕಾರ ಅವಶ್ಯ. ಸಾಹಿತಿಗಳನ್ನು ವೇದಿಕೆಯ ಮೇಲೆ ಕೂರಿಸಿ ನಾನು ಕೆಳಗೆ ಕೂರಬೇಕು ಅನ್ನೋ ಮನೋಭಾವದವನು ನಾನು. ಜಾತಿ ಮತ ಪಂಥ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಾಣುವೆ. ತಿಳಿಯದೇ ಸಣ್ಣ ಪುಟ್ಟ ತಪ್ಪುಗಳು ನನ್ನಿಂದಾಗುತ್ತಿದ್ದರೆ ತಿಳಿ ಹೇಳಿದರೆ ಸಾಕು ತಿದ್ದಿಕೊಳ್ಳುವೆ. ತಾಲೂಕಿನಲ್ಲಿ ಕನ್ನಡದ…

Read More

ಸಿಂದಗಿ: ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಮತ್ತು ಸರಕಾರಿ ಶಾಲೆಗಳ ಪಾತ್ರ ಮುಖ್ಯವಾಗಿದೆ ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.ತಾಲೂಕಿನ ಯಂಕಂಚಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಶನಿವಾರ ಬೆಳಗಿನ ಶಾಲೆಯ ಪ್ರಾರ್ಥನಾ ಸಮಯಕ್ಕೆ ತಾಲೂಕು ಪಂಚಾಯತ್ ಇಒ ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಸರಕಾರಿ ಪ್ರೌಢಶಾಲೆಯಲ್ಲಿ ೧೮ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಕೇವಲ ೧೩ಜನ ಶಿಕ್ಷಕರು ಮಾತ್ರ ಪ್ರಾರ್ಥನಾ ವೇಳೆ ಹಾಜರಿದ್ದರು. ಉಳಿದ ೫ಜನ ಶಿಕ್ಷಕರು ಪ್ರಾರ್ಥನೆ ಪ್ರಾರಂಭವಾಗಿ ಪೂರ್ಣಗೊಂಡರೂ ಕರ್ತವ್ಯಕ್ಕೆ ಹಾಜರಾಗದವರಿಗೆ ತರಾಟೆಗೆ ತೆಗೆದುಕೊಂಡು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಶಿಕ್ಷಕರಿಗೆ ಸೂಚಿಸಿದರು.ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ ಮಕ್ಕಳ ಜೀವನ ರೂಪಿಸುವಂತೆ ಎಚ್ಚರಿಕೆ ನೀಡಿದರು. ಕರ್ತವ್ಯದ ವೇಳೆಯಲ್ಲಿ ಗೈರು ಹಾಜರಾದ ಶಿಕ್ಷಕರಾದ ವಿಜಯಕುಮಾರ ಸಜ್ಜನ, ಅಶೋಕ ಕಂಚಗಾರ, ಎಸ್.ಆರ್.ಪೊದ್ದಾರ, ಕೆ.ಎ.ಮುಲ್ಲಾ, ಭೀಮಸಿಂಗ್ ರಾಠೋಡ ಹಾಗೂ ಸಿಬ್ಬಂದಿಗಳಾದ ಪಿ.ಎ.ಗುಡಿಮನಿ, ಶ್ರೀಶೈಲ ಕಂಬಾರ ಅವರು ಹಾಜರಾಗದೇ ಇರುವುದಕ್ಕೆ ಕಾರಣ ಕೇಳಿ ನೋಟಿಸ್ ನೀಡಿ ಪತ್ರ ತಲುಪಿದ ೨೪ಗಂಟೆಯೊಳಗೆ ಉತ್ತರಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಮತ್ತು…

Read More

ಆಲಮಟ್ಟಿ ಮಂಜಪ್ಪ ಹರ್ಡೇಕರ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ | ಅಣಕು ಮತದಾನ | ಚುನಾವಣೆ ನಿಯಮಗಳ ಪಾಲನೆ ಆಲಮಟ್ಟಿ: ಇಂದಿನ ಯುವಜನತೆಯಲ್ಲಿ ಮಾನವೀಯ ಮೌಲ್ಯತೆಗಳುಳ್ಳ ಭಾವ ಮೊಳಕೆಯೊಡೆಯಬೇಕು ಜೊತೆಗೆ ಶ್ರೇಷ್ಠತೆಯ ನಾಯಕತ್ವದ ಗುಣಗಳು ಆಳವಡಿಸಿಕೊಳ್ಳಬೇಕು ಅಂದಾಗ ಭವಿಷ್ಯತ್ತಿನ ಆದರ್ಶತೆಗೊಂದು ನೈತಿಕತೆಯ ಮೌಲ್ಯಾಧಾರಿತದ ಮೆರುಗು ಬಂದಿತೆಂದು ಎಂದು ಮುಖ್ಯೋಪಾಧ್ಯಾಯ ಎಸ್.ಆಯ್.ಗಿಡ್ಡಪ್ಪಗೋಳ ಹೇಳಿದರು. ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಜರುಗಿದ ಪ್ರಸಕ್ತ ೨೦೨೪-೨೫ ನೇ ಸಾಲಿನ ಶಾಲಾ ಸಂಸತ್ತು ಚುನಾವಣಾ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿನ ಅತ್ಯಂತ ಶಿಸ್ತುಬದ್ಧ ನಿಯಮಗಳನ್ನು ಇಲ್ಲಿ ಅನುಸರಿಸಿ ಚುನಾವಣಾ ಪ್ರಕ್ರಿಯೆ ಕೈಗೊಂಡು ಪಾರದರ್ಶಕತೆ ಅರಿವು ಮಕ್ಕಳಲ್ಲಿ ಮೂಡಿಸಲಾಗುತ್ತಿದೆ. ಅಣಕು ಮತದಾನ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಿ ದೇಶದ ಸಾರ್ವತ್ರಿಕ ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬ ಸ್ಪಷ್ಟತೆಯ ಪರಿಕಲ್ಪನೆಯ ಅರಿವು ಮಕ್ಕಳಲ್ಲಿ ಮನದಟ್ಟು ಮಾಡಿಕೊಡಲಾಗುತ್ತಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ…

Read More