ವಿಕಲಚೇತನ-ಹಿರಿಯ ನಾಗರಿಕರ ಇಲಾಖೆ: ೧೩ ಫಲಾನುಭವಿ ಆಧಾರಿತ ಯೋಜನೆ
ವಿಜಯಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ೧೩ ಫಲಾನುಭವಿ ಆಧಾರಿತ ಯೋಜನೆಗಳಡಿ ಸಹಾಯ ಸೌಲಭ್ಯ ಪಡೆಯಲು ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ೧೩ ಫಲಾನುಭವಿ ಅಧಾರಿತ ಯೋಜನೆಗಳನ್ನು ಸೇವಾಸಿಂಧು, ಗ್ರಾಮ ಓನ್, ಕರ್ನಾಟಕ ಓನ್, ಬೆಂಗಳೂರು ಓನ್, ಸಿಟಿಜೆನ್ಸ್ ಪೋರ್ಟಲ್ ಆನ್ ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿದ್ದು, ಫ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಶಿಶುಪಾಲನಾ ಭತ್ಯೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, ನಿರುದ್ಯೋಗ ಭತ್ಯೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಆಧಾರ ಯೋಜನೆ, ಸಾಧನ ಸಲಕರಣೆಗಳ ಯೋಜನೆ, ಮರಣ ಪರಿಹಾರ ನಿಧಿ, ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ಸಾಧನೆ ಯೋಜನೆ, ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್‌ಕಿಟ್ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಲು ೨೦೨೪-೨೫ನೇ ಸಾಲಿನ ವಿಕಲಚೇತನ ಫಲಾನುಭವಿಗಳು ಆನ್ ಲೈನ್ ಮೂಲಕ hhps://sevasindhu.karnataka.gov.in/sevasindhu/Department Services kannadaಫೋರ್ಟಲ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ವಿವಿಧೋದ್ಧೇಶ ಪುನರ್‌ವಸತಿ ಕಾರ್ಯಕರ್ತರಾದ ವಿಜಯಪುರ ತಾಲೂಕಿನ ರವಿ ರಾಠೋಡ (ಮೊ:೯೦೩೫೫೫೩೩೩೭), ಸಿಂದಗಿಯ ಮುತ್ತುರಾಜ ಸಾತಿಹಾಳ (ಮೊ:೯೯೮೦೦೧೯೬೩೫), ಬಸವನ ಬಾಗೇವಾಡಿಯ ಎಸ್.ಡಿ.ಬಿರಾದಾರ (ಮೊ:೮೭೨೨೧೩೫೬೬೦), ಇಂಡಿಯ ಪರಶುರಾಮ ಬೋಸಲೆ (ಮೊ:೯೯೭೨೪೪೧೪೬೪) ಹಾಗೂ ಮುದ್ದೇಬಿಹಾಳ ತಾಲೂಕಿನ ಎಸ್.ಕೆ. ಘಾಟಿ (ಮೊ:೯೭೪೦೬೮೨೯೭೯) ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
