ಸಿಂದಗಿ: ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಮತ್ತು ಸರಕಾರಿ ಶಾಲೆಗಳ ಪಾತ್ರ ಮುಖ್ಯವಾಗಿದೆ ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.
ತಾಲೂಕಿನ ಯಂಕಂಚಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಶನಿವಾರ ಬೆಳಗಿನ ಶಾಲೆಯ ಪ್ರಾರ್ಥನಾ ಸಮಯಕ್ಕೆ ತಾಲೂಕು ಪಂಚಾಯತ್ ಇಒ ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಸರಕಾರಿ ಪ್ರೌಢಶಾಲೆಯಲ್ಲಿ ೧೮ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಕೇವಲ ೧೩ಜನ ಶಿಕ್ಷಕರು ಮಾತ್ರ ಪ್ರಾರ್ಥನಾ ವೇಳೆ ಹಾಜರಿದ್ದರು. ಉಳಿದ ೫ಜನ ಶಿಕ್ಷಕರು ಪ್ರಾರ್ಥನೆ ಪ್ರಾರಂಭವಾಗಿ ಪೂರ್ಣಗೊಂಡರೂ ಕರ್ತವ್ಯಕ್ಕೆ ಹಾಜರಾಗದವರಿಗೆ ತರಾಟೆಗೆ ತೆಗೆದುಕೊಂಡು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಶಿಕ್ಷಕರಿಗೆ ಸೂಚಿಸಿದರು.
ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ ಮಕ್ಕಳ ಜೀವನ ರೂಪಿಸುವಂತೆ ಎಚ್ಚರಿಕೆ ನೀಡಿದರು. ಕರ್ತವ್ಯದ ವೇಳೆಯಲ್ಲಿ ಗೈರು ಹಾಜರಾದ ಶಿಕ್ಷಕರಾದ ವಿಜಯಕುಮಾರ ಸಜ್ಜನ, ಅಶೋಕ ಕಂಚಗಾರ, ಎಸ್.ಆರ್.ಪೊದ್ದಾರ, ಕೆ.ಎ.ಮುಲ್ಲಾ, ಭೀಮಸಿಂಗ್ ರಾಠೋಡ ಹಾಗೂ ಸಿಬ್ಬಂದಿಗಳಾದ ಪಿ.ಎ.ಗುಡಿಮನಿ, ಶ್ರೀಶೈಲ ಕಂಬಾರ ಅವರು ಹಾಜರಾಗದೇ ಇರುವುದಕ್ಕೆ ಕಾರಣ ಕೇಳಿ ನೋಟಿಸ್ ನೀಡಿ ಪತ್ರ ತಲುಪಿದ ೨೪ಗಂಟೆಯೊಳಗೆ ಉತ್ತರಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಮತ್ತು ಶಾಲೆಯ ಮುಖ್ಯಗುರುಗಳಿಗೆ ಸೂಚಿಸಲಾಗಿದೆ.
ಇದೇ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪಿಡಿಒ ಸಂಜು ದೊಡಮನಿ ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು.
Subscribe to Updates
Get the latest creative news from FooBar about art, design and business.
ಯಂಕಂಚಿ ಸರಕಾರಿ ಪ್ರೌಢಶಾಲೆಗೆ ತಾಪಂ ಇಒ ಅಗ್ನಿ ದಿಡೀರ್ ಭೇಟಿ!
Related Posts
Add A Comment

