Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಆರೋಗ್ಯ ಇಲಾಖೆಯಿಂದ ಪಟ್ಟಣದಲ್ಲಿ ಶುಕ್ರವಾರ ಢೆಂಘೀ ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಇಲಾಖೆಯ ಅಧಿಕಾರಿಗಳು ಬಸ್ ಡಿಪೋ, ಬಸ್ ನಿಲ್ದಾಣ, ಚಿತ್ರಮಂದಿರ ಹಾಗೂ ಟೈರ್ ಅಂಗಡಿಗಳಿಗೆ ಭೇಟಿ ನೀಡಿ ಈಡಿಸ್ ಲಾರ್ವ ಸಮೀಕ್ಷೆ ಮತ್ತು ಲಾರ್ವ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಬಗ್ಗೆ ತಿಳಿ ಹೇಳಿದರು.ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಎ.ಎಚ್.ಮಧಬಾವಿ ಹಾಗೂ ಸಿಬ್ಬಂದಿಗಳಿಗೆ ಮತ್ತು ಚಿತ್ರಮಂದಿರ ಹಾಗೂ ಟೈರ್ ಅಂಗಡಿ ಮಾಲಕರು ಹಾಗೂ ಅಲ್ಲಿಯ ಕೆಲಸಗಾರರಿಗೆ ಪ್ರಾತ್ಯಕ್ಷಿಕೆಯೊಂದಿಗೆ ಲಾರ್ವ ಕಂಡು ಬಂದ ತಾಣಗಳನ್ನು ತೋರಿಸಿ ಅವುಗಳನ್ನು ಟೆಮಿಪಾಸ್ (ಲಾರ್ವ ನಾಶಕ ರಾಸಾಯನಿಕ ದ್ರಾವನ) ಹಾಕಿ ನಾಶಪಡಿಸಿ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಸ್ವಚ್ಛತೆ ಕಾಪಾಡಿಕೊಳ್ಳಲು ತಿಳಿಸಿ ಹೇಳಿದರು. ಲಾರ್ವ ಸಮೀಕ್ಷೆ ಹಾಗೂ ನಿರ್ಮೂಲನಾ ಕಾರ್ಯಾಚರಣೆಯನ್ನು ಮಾಡಿದಾಗ ಸುಮಾರು ಕಡೆ ಲಾರ್ವ ಕಂಡು ಬಂದವು. ಬಸ್ ಡಿಪೋದಲ್ಲಿ ಹಾಗೂ ಚಿತ್ರಮಂದಿರದಲ್ಲಿ, ಟೈಯರ್ ಅಂಗಡಿ, ಹೋಟೆಲಗಳಲ್ಲಿ ಅವುಗಳನ್ನು ತಕ್ಷಣ ಖಾಲಿ ಮಾಡಿಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಕೆ ನೀಡಿದರು.ಸೊಳ್ಳೆ ನಿಯಂತ್ರಣದ ಜೈವಿಕ ವಿಧಾನವಾದ ಲಾರ್ವಹಾರಿ ಮೀನುಗಳನ್ನು…
ಇಂಡಿ: ಇಂದಿನ ಯುವ ಪೀಳಿಗೆಯಲ್ಲಿ ಸಮಾಜದ ಕಳಕಳಿ ಹುಟ್ಟಿಸಲು ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ತಾಲೂಕಿನ ಹಿರೇರೂಗಿ ಬೊಳೆಗಾಂವದ ಶ್ರೀ ಬಸವಲಿಂಗ ಗಿರಿಜಾಮಾತಾಜಿ ಮಠದಲ್ಲಿ ನಡೆದ ಜಿ.ಆರ್.ಕಲಾ, ವಾಯ್.ಎ.ಪಾಟೀಲ ವಾಣಿಜ್ಯ, ಎಂ.ಎಫ್ ದೋಶಿ ವಿಜ್ಞಾನ ಮಹಾವಿದ್ಯಾಲದಿಂದ ಆಯೋಜಿಸಿದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಎನ್ನೆಸ್ಸೆಸ್ ಶಿಬಿರ ಮಹಾತ್ಮಾ ಗಾಂಧಿಯವರ ಪರಿಕಲ್ಪನೆಯಾಗಿದ್ದು ನಿಸ್ವಾರ್ಥ ಸೇವೆ ಮತ್ತು ನಾಯಕತ್ವದ ಕೌಶಲವನ್ನು ಕಲಿಸುತ್ತದೆ.ಶಿಬಿರದಲ್ಲಿ ಉತ್ತಮ ಮಾರ್ಗದರ್ಶನ ಪಡೆದುಕೊಂಡು ಸಮಾಜದ ಜತೆ ಸಂಪರ್ಕ ಸಾಧಿಸಿ ಶಿಕ್ಷಣ ಆರೋಗ್ಯ ಪರಿಸರ ನೈರ್ಮಲೀಕರಣ ವೈಜ್ಞಾನಿಕ ಮನೋಭಾವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದರು.ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ.ಜಾಧವ, ಜಾವೇದ ತಾಂಬೋಳಿ, ಸುಸ್ಮಿತಾ ಎಸ್ ಮಾತನಾಡಿದರು.ವೇದಿಕೆಯ ಮೇಲೆ ಗ್ರಾ.ಪಂ ಅಧ್ಯಕ್ಷ ಪರಶುರಾಮ ಹೊಸಮನಿ, ಸದಸ್ಯ ಉಮೇಶ ಹಲಸಂಗಿ, ಎನ್ನೆಸ್ಸೆಸ್ ಅಧಿಕಾರಿ ಡಾ. ಪಿ.ಕೆ.ರಾಠೋಡ ಮತ್ತಿತರಿದ್ದರು.ಸಮಾರಂಭದಲ್ಲಿ ಆನಂದ ನಡುವಿನಮನಿ, ಡಾ. ಜಯಪ್ರಸಾದ, ಮಲ್ಲಿಕಾರ್ಜುನ ಕೋಣದೆ, ಡಾ. ಸಿ.ಎಸ್.ಬಿರಾದಾರ, ಡಾ. ಸುರೇಂದ್ರ ಕೆ,ಶ್ರೀಶೈಲ, ಶ್ರೀಕಾಂತ…
ದೇವರಹಿಪ್ಪರಗಿ: ಪೂರ್ವ ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಅತ್ಯಂತ ಮಹತ್ವದ ಹಾಗೂ ಪರಿಣಾಮಕಾರಿ ಕಲಿಕೆಯಾಗಿದೆ. ಈ ರೀತಿಯಾದ ಕಲಿಕೆ ನಮ್ಮ ಗ್ರಾಮೀಣ ಅಂಗನವಾಡಿಗಳಲ್ಲಿ ದೊರೆಯುತ್ತಿರುವುದು ಸಂತಸದ ವಿಷಯ ಎಂದು ಶಿಕ್ಷಕಿ ವೀಣಾ ಕಾರದ ಹೇಳಿದರು.ತಾಲ್ಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ೩ರಲ್ಲಿ ಶುಕ್ರವಾರ ಜರುಗಿದ ಮಕ್ಕಳ ಪೋಷಕರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ನಲಿ ಕಲಿಯ ಮೂಲಕ ಕಲಿತ ಮಕ್ಕಳಿಗೆ ಮುಂದಿನ ತರಗತಿಯ ಕಲಿಕೆಗಳು ಸುಲಭವಾಗುತ್ತದೆ. ಇಂತಹ ಕಲಿಕೆಗೆ ತರಬೇತಿಯ ಮೂಲಕ ಅವಕಾಶ ಕಲ್ಪಿಸಿದ ಉಜ್ಚಲ ಸಂಸ್ಥೆಗೆ ಧನ್ಯವಾದ ಎಂದರು.ಉಜ್ವಲ-ಐಎಲ್‌ಪಿಯ ಸಂಯೋಜಕ ಸಾಗರ ಘಾಟಗೆ ಮಾತನಾಡಿ, ನಮ್ಮ ತಾಲ್ಲೂಕಿನ ೧೬೨ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಪೂರ್ವಪ್ರಾಥಮಿಕ ಶಾಲೆಗಳಿಗೆ ಕಳುಹಿಸುವುದರಿಂದ ಮಕ್ಕಳ ವಿಕಸಿತ ಮನಸ್ಸು ಕುಗ್ಗುತ್ತಿದೆ.ಮೂರರಿಂದ ಆರು ವರ್ಷದ ಮಕ್ಕಳನ್ನು ಕಡ್ಡಾಯವಾಗಿ ಅಂಗನವಾಡಿಗೆ ಕಳಿಸಬೇಕು ಮತ್ತು ಸಮುದಾಯದ ಎಲ್ಲಾ ದಾನಿಗಳಲ್ಲಿ ಅಂಗನವಾಡಿ ನಮ್ಮದು, ಅಂಗನವಾಡಿ ಮಕ್ಕಳು ನಮ್ಮ ಮಕ್ಕಳು ಎಂಬ ಮನೋಭಾವ ಬರಬೇಕು. ಅಂಗನವಾಡಿ ಮಕ್ಕಳಿಗೆ…
ದೇವರಹಿಪ್ಪರಗಿ: ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಈ ನಿಟ್ಟಿನಲ್ಲಿ ನಾನು ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ದೇವರಹಿಪ್ಪರಗಿ ತಾಲ್ಲೂಕಿನ ರಾಜ್ಯ ಸರ್ಕಾರಿ ನೌಕರರ ಹಾಗೂ ನಿವೃತ್ತ ನೌಕರರ ಸಂಘದಿಂದ ಶುಕ್ರವಾರ ಏಳನೇ ವೇತನ ಆಯೋಗದ ಜಾರಿ, ಎನ್‌ಪಿಎಸ್ ರದ್ದತಿ ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯ ಜಾರಿ ಕುರಿತು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದರು.ಸಿಂದಗಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ಮಾತನಾಡಿ, ಎರಡು ವರ್ಷಗಳ ಹಿಂದೆಯೇ ಜಾರಿಯಾಗಬೇಕಾಗಿದ್ದ ವೇತನ ಆಯೋಗ ಇನ್ನೂ ಕೂಡಾ ಜಾರಿಯಾಗದಿರುವುದು ನೋವಿನ ಸಂಗತಿ. ಎಪ್ರೀಲ್ ೧, ೨೦೦೬ರ ನಂತರ ಸೇವೆಗೆ ಸೇರಿರುವ ಸರ್ಕಾರಿ ನೌಕರರಿಗೆ ಇರುವ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಿ ನೌಕರಸ್ಥರ ಸಂಕಟದ ಯಾತನೆಯನ್ನು ಪರಿಹರಿಸಬೇಕು ಎಂದರು.ದೇವರಹಿಪ್ಪರಗಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎಮ್.ಜಿ.ಯಂಕಂಚಿ, ಪ್ರಧಾನ ಕಾರ್ಯದರ್ಶಿ ಜಿ.ಪಿ.ಬಿರಾದಾರ, ಹಾಗೂ ನಿವೃತ್ತ…
ಮುದ್ದೇಬಿಹಾಳ: ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಎಂಜಿವ್ಹಿಸಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಆರ್.ಎಸ್.ಸಜ್ಜನ ಹೇಳಿದರು.ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಆಯೋಜಿಸಲಾದ್ದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ, ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮ ಮತ್ತು ಲಿಂಗ ಸಮಾನತೆ, ಕುಟುಂಬ ಯೋಜನೆಯ ಪ್ರಾಮುಖ್ಯತೆ, ಬಡತನ, ತಾಯಿಯ ಆರೋಗ್ಯ, ಮಾನವ ಹಕ್ಕುಗಳು ಇತ್ಯಾದಿ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿ.ಎಸ್.ಓದ್ಸುಮಠ ಮಾತನಾಡಿ, ನಮ್ಮ ಕರ್ನಾಟಕವು ಸುಮಾರು ೮ ಕೋಟಿ ಜನಸಂಖ್ಯೆಯನ್ನು ಹೊಂದಿದೆ ಮತ್ತು ಭಾರತದ ಜನಸಂಖ್ಯೆಯು ೧೪೨ ಕೋಟಿಗಿಂತ ಹೆಚ್ಚು ಎಂಬುದು ಸತ್ಯ. ಅತಿ ದೊಡ್ಡ ವಿಪರ್ಯಾಸವೆಂದರೆ ಜನಸಂಖ್ಯೆ ಹೆಚ್ಚಾದಂತೆ ಮೂಲಭೂತ ಅವಶ್ಯಕತೆಗಳು ಮತ್ತು ಸೌಲಭ್ಯಗಳು ದೊರೆಯುತ್ತಿಲ್ಲ ಜೊತಗೆ ಬಡತನ,…
ಮುದ್ದೇಬಿಹಾಳ: ಮನೆಯು ಆದರ್ಶಮಯವಾಗಿದ್ದಲ್ಲಿ ಮಾತ್ರವೇ ಮಗುವಿನ ಕಲಿಕೆ ಉತ್ತಮವಾಗಲು ಸಾಧ್ಯ ಎಂದು ವಿದ್ಯಾ ಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಶಿಶುವಾಟಿಕಾ ಸಹ ಪ್ರಮುಖರಾದ ತಾರಾ ಕಾಳಿಚರಣ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃ ಭಾರತಿ ಪರಿಷತ್ ವತಿಯಿಂದ ಆಯೋಜಿಸಿರುವ ಜನನಿ ಸಮಾಗಮ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಹಿರಿದಾಗಿದೆ. ಮಗುವಿನ ಕಲಿಕೆಯಲ್ಲಿ ತಾಯಿಯು ಅರ್ಧದಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತಾಳೆ. ಆಚಾರ ಸಂಸ್ಕೃತಿ, ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವಲ್ಲಿ ಹೆಣ್ಣಿನಿಂದ ಮಾತ್ರ ಸಾಧ್ಯ. ಸರ್ವ ಶಕ್ತಿ ಸಾಮರ್ಥ್ಯ ಹೆಣ್ಣಿನಲ್ಲಿ ಇರುವುದರಿಂದ ಮಾತ್ರವೇ ಭೂಮಿ, ನೀರು, ವಿದ್ಯೆ, ಶಕ್ತಿ ಇತ್ಯಾದಿಯಲ್ಲಿ ಮಾತೃ ಶಕ್ತಿ ಅಡಗಿದೆಯೆಂದು ಗುರುತಿಸಿಯೇ ಮಾತೆಯೆಂದು ಸಂಬೋಧಿಸಿ ಗೌರವಿಸಿರುವುದು ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯಾಗಿದೆ ಎಂದರು.ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ ಮಾತೃ ಭಾರತಿ ಸಂಯೋಜನೆಯ ಕುರಿತಾಗಿ ಶಾಲೆಯಲ್ಲಿ ಅನುಕೂಲಕರವಾದ ವಾತಾವರಣ ಮೂಡಿಸಲು ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದರು.ಮಾತೃ ಭಾರತಿ ಪರಿಷತ್ತಿನ ಅಧ್ಯಕರಾದ ಶ್ರೀದೇವಿ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಮಾತೃ ಭಾರತಿ ಪರಿಷತ್ತಿನ…
ಜಲಸಂಪನ್ಮೂಲ ಸಚಿವ & ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಸಚಿವ ಶಿವಾನಂದ ಪಾಟೀಲ ಪತ್ರ ಆಲಮಟ್ಟಿ: ಇಲ್ಲಿಯ ಆಲಮಟ್ಟಿ ಜಲಾಶಯದ ಹೊರಹರಿವು ವ್ಯರ್ಥವಾಗುವುದನ್ನು ತಪ್ಪಿಸಿ ಸದ್ಬಳಕೆ ಮಾಡಿಕೊಳ್ಳಲು ವಿವಿಧ ನೀರಾವರಿ ಯೋಜನೆಗಳ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಶಿವಾನಂದ ಪಾಟೀಲ ಅವರು ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಮನವಿ ಮಾಡಿದ್ದಾರೆ.ಆಲಮಟ್ಟಿ ಜಲಾಶಯದಲ್ಲಿ ೬೭ ಟಿಎಂಸಿ ಬಳಕೆಗೆ ಲಭ್ಯ ಇರುವಷ್ಟು ನೀರು ಸಂಗ್ರಹಣೆಯಾಗಿದ್ದು, ಜಲಾಶಯ ಪ್ರತಿಶತ ೬೩ರಷ್ಟು ಭರ್ತಿಯಾಗಿದೆ. ಜಲಾಶಯದ ಮೇಲ್ಭಾಗದಲ್ಲಿ ಪ್ರತಿನಿತ್ಯ ಮಳೆಯಾಗುತ್ತಿದ್ದು, ಒಳಹರಿವಿನ ಪ್ರಮಾಣ ಎಪ್ಪತ್ತು ಸಾವಿರ ಕ್ಯೂಸೆಕ್ಸ್ ಇದೆ. ಬರುವ ದಿನಗಳಲ್ಲಿ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಳಹರಿವಿನ ಪ್ರಮಾಣ ಹೆಚ್ಚಾಗಿ ಹೆಚ್ಚುವರಿ ನೀರು ಜಲಾಶಯದ ಹೊರ ಹರಿವಿನಿಂದ ನೆರೆಯ ಆಂಧ್ರಪ್ರದೇಶಕ್ಕೆ ಹೋಗಿ ಮುಂದೆ ಸಮುದ್ರ ಸೇರಿ ವ್ಯರ್ಥವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ವಿಜಯಪುರ ಜಿಲ್ಲೆಯಲ್ಲಿ…
ವಿಜಯಪುರ: ರಾಜಕೀಯ ಪ್ರೇರಿತವಾಗಿ ದುರುದ್ದೇಶದಿಂದ ವಿಜಯಪುರ ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ವಿರುದ್ಧ ದಾಖಲಿಸಿದ್ದ ಚುನಾವಣಾ ಅರ್ಜಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ. ಹಾಗೂ ಅರ್ಜಿದಾರರಿಗೆ ರೂ.೧ ಲಕ್ಷ ದಂಡ ಹಾಕಿದೆ.೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಖಾಜಾಸಾಬ್ ಮುಶ್ರೀಪ್, ಹತಾಶರಾಗಿ ೨೦೨೩ ರ ಜೂನ್ ೨೩ ರಂದು ದೂರು ನೀಡಿದ್ದರು. ಇದೀಗ ನ್ಯಾಯಾಲಯವು ಅರ್ಜಿ ವಜಾಗೊಳಿಸಿದಲ್ಲದೆ, ಅರ್ಜಿದಾರರಿಗೆ ರೂ.೧ ಲಕ್ಷ ದಂಡ ಹಾಕಿದೆ.
ಸಿಂದಗಿ: ಭಗವಂತ ನೀಡಿದ ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡಿಕೊಳ್ಳುವುದು ಆದ್ಯ ಕರ್ತವ್ಯ ಎಂದು ಮಹಿಳಾ ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಹೈಯಾಳಕರ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂದತ್ವ ನಿವಾರಣಾ ಘಟಕ, ಅನುಗ್ರಹ ವಿಜನ್ ಪೌಂಡೇಶನ್ ಟ್ರಸ್ಟ್ ಹಾಗೂ ಶ್ರೀಪದ್ಮರಾಜ ಮಹಿಳಾ ಪದವಿ ಮತ್ತ ಪದವಿಪೂರ್ವ ಮಹಾವಿದ್ಯಾಲಯದ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನ, ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲಾ ಒಂದು ವೈಪರೀತ್ಯ ಕಾಣುತ್ತಿದ್ದೇವೆ. ಪ್ರತಿಯೊಬ್ಬರು ತಿಂಗಳಿಗೆ ಒಂದು ಬಾರಿಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದ ಆರೋಗ್ಯ ರಕ್ಷಣೆಯ ಜತೆಗೆ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದರು.ಈ ವೇಳೆ ೪೦೦ಕ್ಕೂ ಅಧಿಕ ವಿದ್ಯಾರ್ಥಿಗಳು ನೇತ್ರ ತಪಾಸಣೆ ಮಾಡಿಸಿಕೊಂಡರು.ನೇತ್ರ ತಪಾಸಣೆಯಲ್ಲಿ ಡಾ.ಪ್ರಿಯಾಂಕ, ನೇತ್ರಾಧಿಕಾರಿಗಳಾದ ಸಂಗಮೇಶ ಪಾಟೀಲ, ವಿನಾಯಕ ಪವಾರ, ಬಾಪುರಾಯ, ಶಿವರಾಜ ಹೂಗಾರ, ನಜೀಬ್ ನಾಲಬಂದ ಹಾಗೂ ಸಹಾಯಕ ಸಿಬ್ಬಂದಿಗಳಾದ ಕೌಶಲ್ಯ…
ಸಿಂದಗಿ: ಕರ್ನಾಟಕ ನಗರ ಮತ್ತ ಗ್ರಾಮಾಂತರ ಯೋಜನಾ ಕಾಯ್ದೆ ೧೯೬೧ರ ಕಲಂ ೪-ಸಿ ಅಡಿಯಲ್ಲಿ ಸಿಂದಗಿ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ಬಸವಂತ್ ಕಾಂಬಳೆ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.ಅವರೊಂದಿಗೆ ನಗರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರನ್ನಾಗಿ ದಯಾನಂದ ಪತ್ತಾರ, ರವಿ ನಾವಿ, ಅಮರೇಶ ಚೌಗಲೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ೩ವರ್ಷಗಳ ಅವಧಿ ಅಥವಾ ಸರಕಾರದ ಮುಂದಿನ ಆದೇಶದವರೆಗೆ ರಾಜ್ಯ ಸರಕಾರ ನೇಮಕ ಮಾಡಲಾಗಿದೆ.ಇವರನ್ನು ಆಯ್ಕೆ ಮಾಡಿದ ರಾಜ್ಯ ಸರಕಾರಕ್ಕೂ ಮತ್ತು ಆಯ್ಕೆಯಾದ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಶಾಸಕ ಅಶೋಕ ಮನಗೂಳಿ ಅಭಿನಂದನೆ ಸಲ್ಲಿಸಿದ್ದಾರೆ.
