ಮುದ್ದೇಬಿಹಾಳ: ಆರೋಗ್ಯ ಇಲಾಖೆಯಿಂದ ಪಟ್ಟಣದಲ್ಲಿ ಶುಕ್ರವಾರ ಢೆಂಘೀ ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಇಲಾಖೆಯ ಅಧಿಕಾರಿಗಳು ಬಸ್ ಡಿಪೋ, ಬಸ್ ನಿಲ್ದಾಣ, ಚಿತ್ರಮಂದಿರ ಹಾಗೂ ಟೈರ್ ಅಂಗಡಿಗಳಿಗೆ ಭೇಟಿ ನೀಡಿ ಈಡಿಸ್ ಲಾರ್ವ ಸಮೀಕ್ಷೆ ಮತ್ತು ಲಾರ್ವ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಬಗ್ಗೆ ತಿಳಿ ಹೇಳಿದರು.
ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಎ.ಎಚ್.ಮಧಬಾವಿ ಹಾಗೂ ಸಿಬ್ಬಂದಿಗಳಿಗೆ ಮತ್ತು ಚಿತ್ರಮಂದಿರ ಹಾಗೂ ಟೈರ್ ಅಂಗಡಿ ಮಾಲಕರು ಹಾಗೂ ಅಲ್ಲಿಯ ಕೆಲಸಗಾರರಿಗೆ ಪ್ರಾತ್ಯಕ್ಷಿಕೆಯೊಂದಿಗೆ ಲಾರ್ವ ಕಂಡು ಬಂದ ತಾಣಗಳನ್ನು ತೋರಿಸಿ ಅವುಗಳನ್ನು ಟೆಮಿಪಾಸ್ (ಲಾರ್ವ ನಾಶಕ ರಾಸಾಯನಿಕ ದ್ರಾವನ) ಹಾಕಿ ನಾಶಪಡಿಸಿ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಸ್ವಚ್ಛತೆ ಕಾಪಾಡಿಕೊಳ್ಳಲು ತಿಳಿಸಿ ಹೇಳಿದರು. ಲಾರ್ವ ಸಮೀಕ್ಷೆ ಹಾಗೂ ನಿರ್ಮೂಲನಾ ಕಾರ್ಯಾಚರಣೆಯನ್ನು ಮಾಡಿದಾಗ ಸುಮಾರು ಕಡೆ ಲಾರ್ವ ಕಂಡು ಬಂದವು. ಬಸ್ ಡಿಪೋದಲ್ಲಿ ಹಾಗೂ ಚಿತ್ರಮಂದಿರದಲ್ಲಿ, ಟೈಯರ್ ಅಂಗಡಿ, ಹೋಟೆಲಗಳಲ್ಲಿ ಅವುಗಳನ್ನು ತಕ್ಷಣ ಖಾಲಿ ಮಾಡಿಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಕೆ ನೀಡಿದರು.
ಸೊಳ್ಳೆ ನಿಯಂತ್ರಣದ ಜೈವಿಕ ವಿಧಾನವಾದ ಲಾರ್ವಹಾರಿ ಮೀನುಗಳನ್ನು (ಗಪ್ಪಿ ಮತ್ತು ಗಾಂಭೂಜಿಯ) ಬಸ್ ಡಿಪೋ ಗಳಲ್ಲಿಯೇ ಬೆಳೆಸಿ, ಅಗತ್ಯವಿದ್ದ ಕಡೆ ಆ ಮೀನುಗಳನ್ನು ಬಿಡಲು ಸೂಚಿಸಲಾಯಿತು.
ಲಾರ್ವ ಸಮೀಕ್ಷೆ ಹಾಗೂ ನಿರ್ಮೂಲನಾ ಕಾರ್ಯಾಚರಣೆಯಲ್ಲಿ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯ ತೆರದಾಳ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ, ವ್ಹಿ.ಬಿ.ಡಿ ಮೇಲ್ವಿಚಾರಕ ಎಸ್.ಸಿ.ರುದ್ರವಾಡಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಎಸ್.ಗೌಡರ, ಎಸ್.ಐ.ಕಮಲಪ್ಪನವರ್, ಇಸ್ಮಾಯಿಲ್ ವಾಲಿಕಾರ, ಎಸ್.ಆರ್.ಸಜ್ಜನ್, ಸಿ.ಜಿ.ಬಿದರಕುಂದಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

