ದೇವರಹಿಪ್ಪರಗಿ: ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಈ ನಿಟ್ಟಿನಲ್ಲಿ ನಾನು ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.
ದೇವರಹಿಪ್ಪರಗಿ ತಾಲ್ಲೂಕಿನ ರಾಜ್ಯ ಸರ್ಕಾರಿ ನೌಕರರ ಹಾಗೂ ನಿವೃತ್ತ ನೌಕರರ ಸಂಘದಿಂದ ಶುಕ್ರವಾರ ಏಳನೇ ವೇತನ ಆಯೋಗದ ಜಾರಿ, ಎನ್‌ಪಿಎಸ್ ರದ್ದತಿ ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯ ಜಾರಿ ಕುರಿತು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದರು.
ಸಿಂದಗಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ಮಾತನಾಡಿ, ಎರಡು ವರ್ಷಗಳ ಹಿಂದೆಯೇ ಜಾರಿಯಾಗಬೇಕಾಗಿದ್ದ ವೇತನ ಆಯೋಗ ಇನ್ನೂ ಕೂಡಾ ಜಾರಿಯಾಗದಿರುವುದು ನೋವಿನ ಸಂಗತಿ. ಎಪ್ರೀಲ್ ೧, ೨೦೦೬ರ ನಂತರ ಸೇವೆಗೆ ಸೇರಿರುವ ಸರ್ಕಾರಿ ನೌಕರರಿಗೆ ಇರುವ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಿ ನೌಕರಸ್ಥರ ಸಂಕಟದ ಯಾತನೆಯನ್ನು ಪರಿಹರಿಸಬೇಕು ಎಂದರು.
ದೇವರಹಿಪ್ಪರಗಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎಮ್.ಜಿ.ಯಂಕಂಚಿ, ಪ್ರಧಾನ ಕಾರ್ಯದರ್ಶಿ ಜಿ.ಪಿ.ಬಿರಾದಾರ, ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರ ಕುದರಿ ಮಾತನಾಡಿದರು.
ನಂತರ ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮೂರು ಬೇಡಿಕೆಗಳ ಕುರಿತು ವರದಿಯನ್ನು ಸಲ್ಲಿಸಲಾಯಿತು.
ಶಿರಸ್ತೇದಾರರಾದ ಸುರೇಶ ಮ್ಯಾಗೇರಿ, ಡಿ.ಬಿ.ಭೋವಿ, ಡಿ.ಟಿ.ಜೋಷಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ನೌಕರರ ಸಂಘದ ಉಪಾಧ್ಯಕ್ಷ ಡಿ.ಎ.ಇನಾಮದಾರ, ಶಿಕ್ಷಕರ ಸಂಘದ ಖಜಾಂಚಿ ಪಿ.ಸಿ.ತಳಕೇರಿ, ಸಂಘಟನಾ ಕಾರ್ಯದರ್ಶಿ ಎನ್.ಎಸ್.ನಾಗೂರ, ಉಪಾಧ್ಯಕ್ಷ ಶಿವಾನಂದ ಕೋಟಿನ್, ಆಹಾರ ಇಲಾಖಾಧಿಕಾರಿ ಅಮೋಘಸಿದ್ಧ ದಳವಾಯಿ, ನಿವೃತ್ತ ನೌಕರರ ಸಂಘದ ಪಿ.ಜಿ.ಹಿರೇಮಠ, ಎಸ್.ಜಿ.ತಾವರಖೇಡ, ಕೆ.ಎಮ್.ನಂದಿ, ವೈ.ಜಿ.ತಾವರಖೇಡ, ಎ.ಸಿ.ಲೋಗಾಂವಿ, ಕುಮಾರ ಅವರಾದಿ, ಶಿವಶಂಕರ ಜಾಧವ, ಸದಾಶಿವ ಗುಡಿಮನಿ, ರವಿ ಕೋಟಿನ್, ಗೊಲ್ಲಾಳ ಬಿರಾದಾರ, ವಿಶ್ವರಾಜ ಬಿರಾದಾರ, ಕೆ.ಆಯ್.ಕಿಲಾರಿ ಸೇರಿದಂತೆ ಕಂದಾಯ, ಶಿಕ್ಷಣ, ಆರೋಗ್ಯ ಇಲಾಖೆಗಳ ನೌಕರರು ಇದ್ದರು.
Subscribe to Updates
Get the latest creative news from FooBar about art, design and business.
ಸರ್ಕಾರಿ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿ :ಶಾಸಕ ರಾಜುಗೌಡ
Related Posts
Add A Comment

