ದೇವರಹಿಪ್ಪರಗಿ: ಪೂರ್ವ ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಅತ್ಯಂತ ಮಹತ್ವದ ಹಾಗೂ ಪರಿಣಾಮಕಾರಿ ಕಲಿಕೆಯಾಗಿದೆ. ಈ ರೀತಿಯಾದ ಕಲಿಕೆ ನಮ್ಮ ಗ್ರಾಮೀಣ ಅಂಗನವಾಡಿಗಳಲ್ಲಿ ದೊರೆಯುತ್ತಿರುವುದು ಸಂತಸದ ವಿಷಯ ಎಂದು ಶಿಕ್ಷಕಿ ವೀಣಾ ಕಾರದ ಹೇಳಿದರು.
ತಾಲ್ಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ೩ರಲ್ಲಿ ಶುಕ್ರವಾರ ಜರುಗಿದ ಮಕ್ಕಳ ಪೋಷಕರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ನಲಿ ಕಲಿಯ ಮೂಲಕ ಕಲಿತ ಮಕ್ಕಳಿಗೆ ಮುಂದಿನ ತರಗತಿಯ ಕಲಿಕೆಗಳು ಸುಲಭವಾಗುತ್ತದೆ. ಇಂತಹ ಕಲಿಕೆಗೆ ತರಬೇತಿಯ ಮೂಲಕ ಅವಕಾಶ ಕಲ್ಪಿಸಿದ ಉಜ್ಚಲ ಸಂಸ್ಥೆಗೆ ಧನ್ಯವಾದ ಎಂದರು.
ಉಜ್ವಲ-ಐಎಲ್‌ಪಿಯ ಸಂಯೋಜಕ ಸಾಗರ ಘಾಟಗೆ ಮಾತನಾಡಿ, ನಮ್ಮ ತಾಲ್ಲೂಕಿನ ೧೬೨ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಪೂರ್ವಪ್ರಾಥಮಿಕ ಶಾಲೆಗಳಿಗೆ ಕಳುಹಿಸುವುದರಿಂದ ಮಕ್ಕಳ ವಿಕಸಿತ ಮನಸ್ಸು ಕುಗ್ಗುತ್ತಿದೆ.
ಮೂರರಿಂದ ಆರು ವರ್ಷದ ಮಕ್ಕಳನ್ನು ಕಡ್ಡಾಯವಾಗಿ ಅಂಗನವಾಡಿಗೆ ಕಳಿಸಬೇಕು ಮತ್ತು ಸಮುದಾಯದ ಎಲ್ಲಾ ದಾನಿಗಳಲ್ಲಿ ಅಂಗನವಾಡಿ ನಮ್ಮದು, ಅಂಗನವಾಡಿ ಮಕ್ಕಳು ನಮ್ಮ ಮಕ್ಕಳು ಎಂಬ ಮನೋಭಾವ ಬರಬೇಕು. ಅಂಗನವಾಡಿ ಮಕ್ಕಳಿಗೆ ಅಗತ್ಯವಾದ ಕಲಿಕಾಪೂರ್ವ ಸಾಮಗ್ರಿಗಳನ್ನು ಕೊಡಿಸಬೇಕು. ಈ ಮೂಲಕ ಅಂಗನವಾಡಿಯನ್ನು ಮಾದರಿ ಅಂಗನವಾಡಿಗಳನ್ನಾಗಿ ಮಾಡಲು ಕೈಜೋಡಿಸಬೇಕು ಎಂದರು.
ಆರೋಗ್ಯ ಇಲಾಖೆಯ ಎಎನ್‌ಎಮ್ ಎಸ್.ಎಸ್.ಚೌದರಿ, ಅಂಗನವಾಡಿ ಕಾರ್ಯಕರ್ತೆ ಕಸ್ತೂರಿ ಹಿಪ್ಪರಗಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೋರಮ್ಮ ಭಜಂತ್ರಿ, ಸದಸ್ಯೆ ನೂರಜಾನ ಬೀಳಗಿ, ಸುರೇಖಾ ಹಿರೇಮಠ, ಭೀಮಬಾಯಿ ಹರೂರು, ಬೇಬಿ ಪಾಟೀಲ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಾಲಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

