Author: editor.udayarashmi@gmail.com

ಅಫಜಲಪುರ: ನೂತನ ಎಂಎಲ್‌ಸಿ ಜಗದೇವ ಗುತ್ತೇದಾರ ಅವರಿಗೆ ಹಿರಿಯ ಕಾಂಗ್ರೆಸ್ ಮುಖಂಡ ರಾಜೇಂದ್ರಕುಮಾರ ಪಾಟೀಲ ಅವರು ಕಲಬುರಗಿಯಲ್ಲಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.

Read More

ಸರಕಾರದ ಗಮನ ಸೆಳೆಯಲು ಶಾಸಕ‌ ಯಶವಂತರಾಯಗೌಡ ಪಾಟೀಲರಿಗೆ ಮನವಿ ಇಂಡಿ: 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಹಾಗೂ ಒಪಿಎಸ್ ಜಾರಿಗೆ ಗೊಳಿಸುವುದು ಸೇರಿದಂತೆ ಕೆಲವು ಪ್ರಮುಖ ಬೇಡಿಕೆ ಈಡೇರಿಕೆಯ ಬಗ್ಗೆ ಸರಕಾರದ ಗಮನ ಸೆಳೆಯಲು ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ಮನವಿ ಸಲ್ಲಿಸಿದರು.ಶನಿವಾರ ಪಟ್ಟಣದ ಪ್ರವಾಸಿ ಮಂದಿರಕ್ಕೆ ತೆರಳಿದ ನೌಕರಸ್ಥ ಸದಸ್ಯರು, ರಾಜ್ಯದ 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಸಂಘದ ಬೇಡಿಕೆ ಈಡೇರಿಕೆಗೆ, ವರದಿ ಜಾರಿಗೆ ಬಗ್ಗೆ ಮನವಿ ಮಾಡಿದರು.ಈ ಸಂಘಟನೆ ರಾಜ್ಯದ 31 ಕಂದಾಯ ಜಿಲ್ಲೆ, 3 ಶೈಕ್ಷಣಿಕ ಜಿಲ್ಲೆ, 183 ತಾಲೂಕುಗಳಲ್ಲಿ ಸಂಘವು ಶಾಖೆಗಳನ್ನು ಹೊಂದಿದೆ. 6 ಲಕ್ಷ ನೌಕರರನ್ನು ಪ್ರತಿನಿಧಿಸುವ ರಾಜ್ಯದ ಏಕೈಕ ಬೃಹತ್ ಸಂಘಟನೆ ಇದಾಗಿದೆ. ರಾಷ್ಟ್ರ, ರಾಜ್ಯದಲ್ಲಿ ಘಟಿಸುವ ಪ್ರಕೃತಿ ವಿಕೋಪ, ಉತ್ತರ ಕರ್ನಾಟಕದ ಪ್ರವಾಹ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿ ಸೇವಾ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿಯೇ…

Read More

ಹೊಂಡ ಬಿದ್ದು ಕಂಟಕವಾಗಿ ಕಾಡುತ್ತಿದೆ ದೇವಣಗಾಂವ-ಸೊನ್ನ ಸೇತುವೆ | ಮಣೂರ ಭುಂಯಾರ ಸೇತುವೆಗೆ ತಡೆಗೋಡೆ ಇಲ್ಲದ್ದಕ್ಕೆ ಆತಂಕ – ಮಲ್ಲಿಕಾರ್ಜುನ ಹಿರೇಮಠಅಫಜಲಪುರ: ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಸುಗಮವಾದ ರಸ್ತೆ ಸಂಪರ್ಕವಿರಬೇಕು ಅದೇ ರೀತಿಯಲ್ಲಿ ಒಂದು ಹಳ್ಳ, ಹೊಳೆ, ನದಿಗಳನ್ನು ದಾಟಿ ಇನ್ನೊಂದು ಊರಿಗೆ ಹೋಗಲು ಸೇತುವೆಗಳು ಬೇಕಾಗುತ್ತದೆ. ಆದರೆ ಮೂರು ತಾಲೂಕುಗಳಿಗೆ ಸಂಬಂಧ ಪಟ್ಟ ಎರಡು ಸೇತುವೆಗಳು ಸಮಸ್ಯೆಯಾಗಿ ಕಾಡುತ್ತಿದ್ದು ತ್ರಿವಳಿ ಶಾಸಕರು ಸೇತುವೆಗಳ ಸಮಸ್ಯೆಗಳನ್ನು ಸರಿಪಡಿಸುವರೇ ಎನ್ನುವುದು ವಾಹನ ಸವಾರರು, ಸಾರ್ವಜನಿಕರ ಪ್ರಶ್ನೆಯಾಗಿದೆ.ಹೊಂಡ ಬಿದ್ದು ಕಂಟಕವಾಗಿ ಕಾಡುತ್ತಿದೆ ದೇವಣಗಾಂವ ಸೊನ್ನ ಸೇತುವೆ: ಅಫಜಲಪುರ ತಾಲೂಕಿನ ಸೊನ್ನ ಹಾಗೂ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮಗಳ ಮಧ್ಯ ಭೀಮಾ ನದಿಗೆ ಅಡ್ಡಲಾಗಿ ದೊಡ್ಡ ಪ್ರಮಾಣದ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ಮೇಲಿನ ರಸ್ತೆ ಹದಗೆಟ್ಟಿದ್ದು ಎಲ್ಲೆಂದರಲ್ಲಿ ದೊಡ್ಡ ಹೊಂಡಗಳು ಬಿದ್ದಿವೆ. ಈ ಹೊಂಡ ಬಿದ್ದ ರಸ್ತೆಯಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಅಲ್ಲದೆ ಯಾವ ಸಂದರ್ಭದಲ್ಲಿ ಏನು ಅವಗಢ…

Read More

ಅಫಜಲಪುರ: ತಾಲೂಕಿನ ಸುಕೇತ್ರ ಮಲ್ಲಾಬಾದ ಗ್ರಾಮದ ವಿಜಯಲಕ್ಷ್ಮೀ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಿಸುವಂತೆ ದೇವಸ್ಥಾನ ಕಮೀಟಿಯವರು ಹಾಗೂ ಗ್ರಾಮಸ್ಥರು ಶಾಸಕ ಎಂ.ವೈ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.ವಿಜಯಲಕ್ಷ್ಮೀ ದೇವಸ್ಥಾನಕ್ಕೆ ನಿತ್ಯ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಸಮುದಾಯ ಭವನದ ಅವಶ್ಯಕತೆ ತುಂಬಾ ಇದೆ. ಹೀಗಾಗಿ ತಾವು ದೇವಸ್ಥಾನದ ಅಡಿಯಲ್ಲಿ ಲಭ್ಯವಿರುವ ೨ ಎಕರೆ ಜಮೀನಿನಲ್ಲಿ ೧ ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆಈ ಸಂದರ್ಭದಲ್ಲಿ ಅಪ್ಪಾಶಾ ಪಾಟೀಲ್, ಗುರಣ್ಣ ಪಾಟೀಲ, ಸಂತೋಷ ರಂಡಾಳೆ, ರೇವಣಸಿದ್ದ ಮ್ಯಾಕೇರಿ, ಶಿವಪುತ್ರ ಅರ್ಜುಣಗಿ, ಕಲ್ಲಪ್ಪ ನಿರೋಣಿ, ಚಂದ್ರಶಾ ಪೂಜಾರಿ, ಬಸಣ್ಣ ಜಮಾದಾರ, ಸಾಯಬಣ್ಣ ಪೂಜಾರಿ, ಶ್ರೀಕಾಂತ ನೀರೋಣಿ, ಮಹಾಂತೇಶ ಗಾಡಿ, ಸಿದ್ದು ಜಮಾದಾರ ಸೇರಿದಂತೆ ಅನೇಕರು ಇದ್ದರು.

Read More

ಅಫಜಲಪುರ: ಢೆಂಗಿ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆ ತಾಲೂಕಿನಾದ್ಯಂತ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು ಜನ ಇದರ ಲಾಭ ಪಡೆದುಕೊಳ್ಳಿ ಎಂದು ತಾ.ಪಂ ಇಒ ವೀರಣ್ಣ ಕವಲಗಿ ಸಲಹೆ ನೀಡಿದರು.ಅವರು ತಾಲೂಕಿನ ಆನೂರ ಗ್ರಾಮದಲ್ಲಿ ಗ್ರಾ.ಪಂ ಆನೂರ, ತಾಪಂ ಅಫಜಲಪುರ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡುತ್ತಾ ತಾಲೂಕಿನಲ್ಲಿ ಢೆಂಗಿ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ನೈರ್ಮಲ್ಯ ಸಮಸ್ಯೆ ಬಾರದಂತೆ ತಡೆಯಲು ಗ್ರಾಮ ಪಂಚಾಯಿತಿಯವರಿಗೆ ಕಟ್ಟುನಿಟ್ಟಿನ ತಾಕೀತು ಮಾಡಲಾಗಿದೆ. ಜೊತಗೆ ಸಾರ್ವಜನಿಕರು ಕೂಡ ತಮ್ಮ ಮನೆಗಳ ಸುತ್ತಲು ಸ್ವಚ್ಚತೆ ಕಾಪಾಡಬೇಕು. ಯಾರಲ್ಲಾದರೂ ಅನಾರೋಗ್ಯದ ಲಕ್ಷಣಗಳು ಕಂಡಾಗ ವೈದ್ಯರನ್ನು ಸಂಪರ್ಕ ಮಾಡಿ ಸಲಹೆ ಪಡೆದುಕೊಳ್ಳಿ ಎಂದ ಅವರು ಇತ್ತಿಚಿನ ದಿನಗಳಲ್ಲಿ ಜನರಿಗೆ ಬಿಪಿ, ಶುಗರ್, ಹೃದ್ರೋಗ, ಕಿಡ್ನಿ ಖಾಯಿಲೆಗಳು ಹೆಚ್ಚು ಬಾಧಿಸುತ್ತಿವೆ. ಈ ಎಲ್ಲಾ ರೋಗಗಳು ಹೆಚ್ಚು ಹಣ ವ್ಯಯಿಸಿ ಚಿಕಿತ್ಸೆ ಪಡೆದುಕೊಳ್ಳುವಂತ ರೋಗಗಳಾಗಿವೆ. ಆದರೂ ಸರ್ಕಾರ ಬಡವರ ಅನುಕೂಲಕ್ಕಾಗಿ ಅನೇಕ ಖಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುತ್ತಿದೆ.…

Read More

ಅಫಜಲಪುರ: ಕಲಬುರಗಿ ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅಫಜಲಪುರ ಪಟ್ಟಣಕ್ಕೆ ಆಗಮಿಸಿದ್ದ ಸಂಸದ ರಾಧಾಕೃಷ್ಣ ದೊಡ್ಮನಿ ಅವರು ಇಲ್ಲಿನ ಐತಿಹಾಸಿಕ ಮಳೇಂದ್ರ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಆಶಿರ್ವಾದ ಪಡೆದುಕೊಂಡರು.ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್ ಪಾಟೀಲ, ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಮಾಜಿ ಸಚಿವ ಸಿದ್ದರಾಮ ಮೇತ್ರೆ, ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕೆಪಿಸಿಸಿ ಸದಸ್ಯರಾದ ಪಪ್ಪು ಪಟೇಲ, ಅರುಣಕುಮಾರ ಎಂ.ವೈ ಪಾಟೀಲ, ಚಂದು ಕರ್ಜಗಿ, ಮತೀನ ಪಟೇಲ ಸೇರಿದಂತೆ ಅನೇಕರು ಇದ್ದರು.

Read More

ಅಫಜಲಪುರ: ಹೆಚ್‌ಕೆಇ ನಿರ್ದೇಶಕರು ಹಾಗೂ ಕೆಪಿಸಿಸಿ ಸದಸ್ಯರಾಗಿರುವ ಅರುಣಕುಮಾರ ಎಂ.ವೈ ಪಾಟೀಲ್ ಅವರಿಗೆ ರಾಜ್ಯದ ಯಾವುದಾದರು ನಿಗಮ ಮಂಡಳಿಗೆ ನೇಮಕ ಮಾಡುವಂತೆ ಸಂಸದ ರಾಧಾಕೃಷ್ಣ ದೊಡ್ಮನಿ ಅವರಿಗೆ ಪುರಸಭೆ ಸದಸ್ಯರು ಮನವಿ ಮಾಡಿದರು.ಪಟ್ಟಣದ ಸರಸಂಭಾ ಕಲ್ಯಾಣ ಮಂಟಪದಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ್ದ ಸಂಸದರನ್ನು ಪುರಸಭೆ ಸದಸ್ಯರು ಭೇಟಿಯಾಗಿ ಸನ್ಮಾನಿಸಿ ಮನವಿ ಮಾಡಿದರು.ಅರುಣಕುಮಾರ ಪಾಟೀಲ್ ಅವರು ತಾಲೂಕಿನಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದ್ದಾರೆ. ಪಕ್ಷದ ಯಾವುದೇ ಜವಾಬ್ದಾರಿಗಳನ್ನು ಕೊಟ್ಟರೂ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಎಲ್ಲಾ ಜಾತಿ ಜನಾಂಗದವರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಹೀಗಾಗಿ ಅವರನ್ನು ಯಾವುದಾದರೊಂದು ನಿಗಮಕ್ಕೆ ನೇಮಕ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಸಂಸದರಿಗೆ ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕಾಂತಪ್ಪ ಮ್ಯಾಳೇಶಿ, ಚಂದು ದೇಸಾಯಿ, ಸಾರಾಬೀ ಪೀರವಾಲೆ, ಸಹದಾ ಬೇಗಂ, ಬಾಬು ಹಳ್ಯಾಳ, ಶಿವಕುಮಾರ ಪದಕಿ, ಸುನಂದಾ ಜಮಾದಾರ, ಹಾಜಿ ಮುಜಾವರ, ಪ್ರಿಯಾಂಕಾ ಮಲಘಾಣ, ರೇಣುಕಾ ರಾಜು ಪಾಟೀಲ, ಕಮಲಾ ತಿಪ್ಪಣ್ಣ, ರವಿ ನಂದಶೆಟ್ಟಿ, ಶಂಕ್ರೆಮ್ಮ ಹರಳಯ್ಯ,…

Read More

ಅಫಜಲಪುರ: ಕೃಷಿ ಇಲಾಖೆಯ ಕೃಷಿ ಸಂಜೀವಿನಿ ವಾಹನಕ್ಕೆ ಸಂಸದ ರಾದಾಕೃಷ್ಣ ದೊಡ್ಮನಿ ಅವರು ಶುಕ್ರವಾರ ಚಾಲನೆ ನೀಡಿದರು.ಪಟ್ಟಣದಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ್ದಾಗ ಕೃಷಿ ಇಲಾಖೆಯ ರೈತ ಸಂಜೀವಿನಿ ವಾಹನಕ್ಕೆ ಚಾಲನೆ ನೀಡಿದರು.ಕೃಷಿ ಸಂಜೀವಿನಿ ವಾಹನವು ೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನ ರೈತ ಬೆಳೆ ಸಮೀಕ್ಷೆ ಮಾಡಲಿದ್ದು ಫಸಲ ಬೀಮಾ ಯೋಜನೆ ಬೆಳೆ ವಿಮೆ ಕುರಿತು ಮಾಹಿತಯನ್ನೂ ಈ ವಾಹನದ ಮೂಲಕ ನೀಡಲಿದೆ.ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್ ಪಾಟೀಲ್, ಶಾಸಕ ಎಂ.ವೈ ಪಾಟೀಲ್, ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಕೆಪಿಸಿಸಿ ಸದಸ್ಯರಾದ ಪಪ್ಪು ಪಟೇಲ, ಅರುಣಕುಮಾರ ಪಾಟೀಲ, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್ ಗಡಗಿಮನಿ, ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಯೋಗಿ, ಸಹಾಯಕ ಕೃಷಿ ಅಧಿಕಾರಿ ಆನಂದ ಅವರಾದ ಇದ್ದರು.

Read More

ಸಿಂದಗಿ: ಪ್ರಜಾಪ್ರಭುತ್ವದ ಗಟ್ಟಿ ನೆಲೆಯಾಗಿರುವ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ಸಂಸತ್ತಿನ ಚುನಾವಣೆಯನ್ನು ಚುನಾವಣೆಯ ಪ್ರಕ್ರಿಯೆಗಳ ಎಲ್ಲಾ ಹಂತಗಳ ಆಧಾರದ ಮೇಲೆ ಮೂಡಿಸಲಾಗುತ್ತಿದೆ ಎಂದು ಪ್ರಾಚಾರ್ಯ ವಿ.ಬಿ.ಲಮಾಣಿ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಶ್ರೀಪದ್ಮರಾಜ ಪಬ್ಲಿಕ್ ಶಾಲೆಯಲ್ಲಿ ೨೦೨೪-೨೫ ನೇ ಸಾಲಿನ ಶಾಲಾ ಸಂಸತ್ತು ರಚನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯ ಪ್ರಕ್ರಿಯೆಗಳ ಜ್ಞಾನವನ್ನು ಮಕ್ಕಳಲ್ಲಿ ಮೂಡಿಸುವುದು ಅಗತ್ಯವಾಗಿದೆ. ಇಂದಿನ ಮಕ್ಕಳೇ ನಾಳಿನ ನಾಗರಿಕರು ಎಂಬ ಮಾತಿನಂತೆ ನಾಗರಿಕತ್ವದ ಪ್ರಜ್ಞೆಯನ್ನು ಹಾಗೂ ಚುನಾವಣಾ ಆಯೋಗದ ಅನೇಕ ನೀತಿ ನಿಯಮಗಳನ್ನು ಶಾಲಾ ಸಂಸತ್ತಿನ ಚುನಾವಣೆಯ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.ಶಾಲಾ ಸಂಸತ್ತು ರಚನಾ ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿಗಳಾದ ರಾಣಿ ಜೋಗೂರ, ಕೆ.ಎಸ್.ಲಾತೂರ, ಎಸ್.ಎಸ್.ಪೋದ್ದಾರ, ಸಾವಿತ್ರಿ ಹಾಲಕೇರಿ, ಶ್ರೀಧರ ಮಲ್ಲೇದ, ಅರುಣಾ ಕವಲಗಿ, ಅಕ್ಷತಾ ಕಿಣಗಿ, ವಿಜಯಲಕ್ಷ್ಮೀ ಚೌಧರಿ, ಭಾರತಿ ಹಿರೇಮಠ,…

Read More

ಸಿಂದಗಿ: ಜಮಖಂಡಿಯ ಹಿರಿಯ ಜಾನಪದ ವಿದ್ವಾಂಸ ಡಾ.ಸಂಗಮೇಶ ಬಿರಾದಾರ ಅವರಿಗೆ ೨೦೨೪ ನೆಯ ಸಾಲಿನ ‘ದೇಸಿ ಸನ್ಮಾನ’ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಯ ಅಂಗ ಸಂಸ್ಥೆಯಾದ ‘ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ಪ್ರಶಸ್ತಿ ಇದಾಗಿದ್ದು ಪ್ರತಿ ವರ್ಷ ನವೆಂಬರ ತಿಂಗಳ ಮೊದಲ ರವಿವಾರದಂದು ಸಿಂದಗಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುತ್ತದೆ. ಪ್ರಶಸ್ತಿ ಪುರಸ್ಕೃತರಿಗೆ ರೂ.೧೧೦೦೦ ನಗದು ನೀಡುವುದರ ಜೊತೆಗೆ ಪುರಸ್ಕೃತರ ಜೀವನ ಸಾಧನೆಯನ್ನು ತಿಳಿಸುವ ಒಂದು ಗ್ರಂಥವನ್ನು ಬರೆಯಿಸಿ ಅರ್ಪಿಸಲಾಗುವುದು ಎಂದು ಸಂಚಾಲಕ ಡಾ.ಚನ್ನಪ್ಪ ಕಟ್ಟಿ ಹೇಳಿದ್ದಾರೆ. ನಾಡಿನ ಹಿರಿಯ ಜಾನಪದ ವಿದ್ವಾಂಸ ಡಾ.ಶ್ರೀರಾಮ ಇಟ್ಟಣ್ಣವರ ಹಾಗೂ ಬಿ.ಎಲ್.ಡಿ.ಇ.ಸಂಸ್ಥೆಯ ಡಾ.ಎಂ.ಎಸ್.ಮದಭಾವಿ ಅವರು ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.ಹಿನ್ನೆಲೆ: ಡಾ.ಸಂಗಮೇಶ ಬಿರಾದಾರ ಅವರು ಮೂಲತಃ ಜಮಖಂಡಿ ತಾಲೂಕಿನ ತುಂಗಳ ಗ್ರಾಮದವರು. ಪ್ರಚಾರ ಮತ್ತು ಪ್ರಸಿದ್ಧಿಗಳಿಂದ ದೂರವಿದ್ದು, ಜಾನಪದ ಸೇರಿದಂತೆ ಕವಿತೆ, ವಿಮರ್ಶೆ, ಜೀವನ ಚರಿತ್ರೆ, ಸಂಪಾದನೆ ಮುಂತಾದ ಕ್ಷೇತ್ರಗಳಲ್ಲಿ ಅವರು ಸಾಧನೆಗೈದಿದ್ದಾರೆ. ಗ್ರಾಮ ಪರಿಸರದಲ್ಲಿ ಜನಿಸಿ ಬೆಳೆದ ಅವರಿಗೆ ಜಾನಪದ ಅಧ್ಯಯನ…

Read More