ಅಫಜಲಪುರ: ಹೆಚ್‌ಕೆಇ ನಿರ್ದೇಶಕರು ಹಾಗೂ ಕೆಪಿಸಿಸಿ ಸದಸ್ಯರಾಗಿರುವ ಅರುಣಕುಮಾರ ಎಂ.ವೈ ಪಾಟೀಲ್ ಅವರಿಗೆ ರಾಜ್ಯದ ಯಾವುದಾದರು ನಿಗಮ ಮಂಡಳಿಗೆ ನೇಮಕ ಮಾಡುವಂತೆ ಸಂಸದ ರಾಧಾಕೃಷ್ಣ ದೊಡ್ಮನಿ ಅವರಿಗೆ ಪುರಸಭೆ ಸದಸ್ಯರು ಮನವಿ ಮಾಡಿದರು.
ಪಟ್ಟಣದ ಸರಸಂಭಾ ಕಲ್ಯಾಣ ಮಂಟಪದಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ್ದ ಸಂಸದರನ್ನು ಪುರಸಭೆ ಸದಸ್ಯರು ಭೇಟಿಯಾಗಿ ಸನ್ಮಾನಿಸಿ ಮನವಿ ಮಾಡಿದರು.
ಅರುಣಕುಮಾರ ಪಾಟೀಲ್ ಅವರು ತಾಲೂಕಿನಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದ್ದಾರೆ. ಪಕ್ಷದ ಯಾವುದೇ ಜವಾಬ್ದಾರಿಗಳನ್ನು ಕೊಟ್ಟರೂ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಎಲ್ಲಾ ಜಾತಿ ಜನಾಂಗದವರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಹೀಗಾಗಿ ಅವರನ್ನು ಯಾವುದಾದರೊಂದು ನಿಗಮಕ್ಕೆ ನೇಮಕ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಸಂಸದರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕಾಂತಪ್ಪ ಮ್ಯಾಳೇಶಿ, ಚಂದು ದೇಸಾಯಿ, ಸಾರಾಬೀ ಪೀರವಾಲೆ, ಸಹದಾ ಬೇಗಂ, ಬಾಬು ಹಳ್ಯಾಳ, ಶಿವಕುಮಾರ ಪದಕಿ, ಸುನಂದಾ ಜಮಾದಾರ, ಹಾಜಿ ಮುಜಾವರ, ಪ್ರಿಯಾಂಕಾ ಮಲಘಾಣ, ರೇಣುಕಾ ರಾಜು ಪಾಟೀಲ, ಕಮಲಾ ತಿಪ್ಪಣ್ಣ, ರವಿ ನಂದಶೆಟ್ಟಿ, ಶಂಕ್ರೆಮ್ಮ ಹರಳಯ್ಯ, ಕಾವೇರಿ ರಾಠೋಡ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

