ಅಫಜಲಪುರ: ತಾಲೂಕಿನ ಸುಕೇತ್ರ ಮಲ್ಲಾಬಾದ ಗ್ರಾಮದ ವಿಜಯಲಕ್ಷ್ಮೀ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಿಸುವಂತೆ ದೇವಸ್ಥಾನ ಕಮೀಟಿಯವರು ಹಾಗೂ ಗ್ರಾಮಸ್ಥರು ಶಾಸಕ ಎಂ.ವೈ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿಜಯಲಕ್ಷ್ಮೀ ದೇವಸ್ಥಾನಕ್ಕೆ ನಿತ್ಯ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಸಮುದಾಯ ಭವನದ ಅವಶ್ಯಕತೆ ತುಂಬಾ ಇದೆ. ಹೀಗಾಗಿ ತಾವು ದೇವಸ್ಥಾನದ ಅಡಿಯಲ್ಲಿ ಲಭ್ಯವಿರುವ ೨ ಎಕರೆ ಜಮೀನಿನಲ್ಲಿ ೧ ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಅಪ್ಪಾಶಾ ಪಾಟೀಲ್, ಗುರಣ್ಣ ಪಾಟೀಲ, ಸಂತೋಷ ರಂಡಾಳೆ, ರೇವಣಸಿದ್ದ ಮ್ಯಾಕೇರಿ, ಶಿವಪುತ್ರ ಅರ್ಜುಣಗಿ, ಕಲ್ಲಪ್ಪ ನಿರೋಣಿ, ಚಂದ್ರಶಾ ಪೂಜಾರಿ, ಬಸಣ್ಣ ಜಮಾದಾರ, ಸಾಯಬಣ್ಣ ಪೂಜಾರಿ, ಶ್ರೀಕಾಂತ ನೀರೋಣಿ, ಮಹಾಂತೇಶ ಗಾಡಿ, ಸಿದ್ದು ಜಮಾದಾರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

