Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ ಹಾಗೂ ಭಾರತ ಸೇವಾದಳ ಮಾಹಿತಿ ಕಾರ್ಯಗಾರ ವಿಜಯಪುರ: ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮನೋಭಾವ ಬೆಳೆಸಿ ಅವರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಭಾರತ ಸೇವಾದಳ ಶ್ರಮಿಸುತ್ತಿದೆ ಎಂದು ಡಾ,ಅಶೋಕ್ ಜಾದವ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಮಂಗಳವಾರದಂದು ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ, ಪದವಿ ಪೂರ್ವ ಶಿಕ್ಷಣ ಇಲಾಖೆ ವಿಜಯಪುರ ಇವರುಗಳ ಸಹಯೋಗದಲ್ಲಿ ನಗರದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ನಂಬರ್- ೨೪ ರಲ್ಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗಾಗಿ ಆಯೋಜಿಸಲಾದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ ಹಾಗೂ ಭಾರತ ಸೇವಾದಳ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಶಿಸ್ತು, ಪ್ರಾಮಾಣಿಕತೆಯೊಂದಿಗೆ ಇಂದಿನ ಯುವ ಜನಾಂಗವನ್ನು ದೇಶದ ಸಂಪತ್ತಿಗಾಗಿ ಬೆಳೆಸುವಲ್ಲಿ ಭಾರತ ಸೇವಾದಳ ಸಹಕಾರಿಯಾಗಿದೆ. ಗಾಂಧೀಜಿಯವರ ತತ್ವ ಆದರ್ಶಗಳನ್ನು ಮುಂದಿಟ್ಟುಕೊಂಡು ಧೈರ್ಯ, ಸಂಯಮ, ತ್ಯಾಗಮನೋಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕೆಲಸವನ್ನು ಭಾರತ್ ಸೇವಾದಳ ಮಾಡುತ್ತಿದೆ. ಯುವ ಜನಾಂಗವನ್ನು ಈ ದೇಶದ ಸಂಪತ್ತಾಗಿ ಮಾಡುವಲ್ಲಿ ಸೇವಾದಳದ ಕಾರ್ಯ ಶ್ಲಾಘನೀಯ ಎಂದರು.ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ನಮ್ಮಲ್ಲಿ ಪರಿಶ್ರಮ…
ಸೇತುವೆಯ ಕಂಬಗಳಲ್ಲಿ ಇಳಿಯುತ್ತಿರುವ ನೀರು | ಸೇತುವೆ ಮೇಲೆ ಗುಂಡಿಗಳು | ಕಂಬಗಳು ಶಿಥಿಲಗೊಳ್ಳುವ ಸಂಭವ – ಗುರು ಆರ್.ಹಿರೇಮಠ (ದೇವಣಗಾಂವ)ಆಲಮೇಲ: ವಿಜಯಪುರ, ಕಲ್ಬುರ್ಗಿ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ ದೇವಣಗಾಂವ ಸೇತುವೆ ಇದೀಗ ಕುಸಿದು ಬೀಳುವ ಭೀತಿ ಎದುರಾಗಿದೆ.ಕಳೆದ ಹಲವು ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರುವ ಈ ಸೇತುವೆ ರಿಪೇರಿಯಾಗದೆ ಮೇಲ್ಬಾಗದಲ್ಲಿ ಮಳೆಯ ನೀರು ನಿಂತು ಸೇತುವೆಯ ಕಂಬಗಳಲ್ಲಿ ನೀರು ಇಳಿಯುತ್ತಿದೆ. ಆದ್ದರಿಂದ ಕಂಬಗಳು ಶಿಥಿಲವಾಗುವ ಹಂತ ತಲುಪಿದೆ ಇದು ಹೀಗೆ ಮುಂದುವರೆದರೆ ಕಲ್ಲಿನ ಕಂಬಗಳಲ್ಲಿ ಒಂದೇ ಕಲ್ಲು ಸರಿದು ಹೋದರೆ ಸಾಕು ಶಿಥಿಲವಾಗುವ ಹಂತ ಹೆಚ್ಚಾಗುತ್ತದೆ.ಸದ್ಯ ಸೇತುವೆ ತುಂಬ ಹೊಂಡಗಳು ನಿರ್ಮಾಣವಾಗಿ ಸೇತುವೆ ಮೇಲ್ಭಾಗದ ತುಂಬಾ ನೀರು ನಿಂತು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಮೊಳಕಾಲು ಉದ್ಧದ ಗುಂಡಿಗಳು ತುಂಬಿಕೊಂಡಿವೆ.ಸೇತುವೆಯ 2 ಭಾಗದ ತಡೆಗೋಡೆಗಳು ಶಿಥಿಲಾವಸ್ತೆಯಲ್ಲಿದ್ದು ಅವುಗಳು ಕೂಡ ಅಪಾಯಕ್ಕೆ ಆಹ್ವಾನ ನೀಡುತ್ತಿವೆ1960 ರಲ್ಲಿ ಪ್ರಾರಂಭಗೊಂಡು 1963 ರಲ್ಲಿ ಉದ್ಘಾಟನೆಗೊಂಡಿರುವ ಈ ಸೇತುವೆ ಜಿಲ್ಲೆಯ ಅತಿ ಹಳೆಯ ಸೇತುವೆ…
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅಭಿಮತ ವಿಜಯಪುರ: ಚುನಾವಣೆ ಮುಗಿದ ನಂತರ ಜನರು ಹಾಗೂ ಕಾರ್ಯಕರ್ತರನ್ನು ಮರೆಯುತ್ತೇನೆಂಬ ಭಾವನೆ ಬೇಡ, ಸಾಯುವವರೆಗೂ ನಿಮ್ಮ ಜೊತೆಗೆ ಇರುತ್ತೇನೆಂದು ಸಂಸದ ರಮೇಶ ಜಿಗಜಿಣಗಿ ಭಾವುಕರಾಗಿ ನುಡಿದರು.ಮಂಗಳವಾರ ನಗರದ ಸಾಯಿ ವಿಹಾರ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ, ನೂತನ ಸಂಸದರಿಗೆ ಸನ್ಮಾನ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಳೆದ ೪೫ ವರ್ಷಗಳಿಂದ ಜಿಲ್ಲೆಯಲ್ಲಿ ರಾಜಕೀಯದಲ್ಲಿ ಯಾರೊಂದಿಗೂ ಕೆಟ್ಟದಾಗಿ ವ್ಯವಹರಿಸದೇ ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದರು.ಚುನಾವಣೆ ಸಂದರ್ಭ ಯಾರಿಗೂ ಒಂದು ನಯಾಪೈಸೆ ಕೊಡದೆ ಪುಕ್ಸಟ್ಟೆಯಾಗಿ ನಿಮ್ಮ ಬಳಿ ಕೆಲಸ ಮಾಡಿಸಿಕೊಂಡಿದ್ದೇನೆಯಾದರೂ ಮುಂದಿನ ೫ ವರ್ಷಗಳ ಕಾಲ ನಿಮ್ಮ ಕೆಲಸವನ್ನು ಯಾರಿಂದಲೂ ಏನು ಅಪೇಕ್ಷೆ ಪಡದೇ ನಿಮ್ಮ ಕೆಲಸವನ್ನು ಪುಕ್ಸಟ್ಟೆಯಾಗಿ ಮಾಡಿ ಕೊಡುವುದಾಗಿ ಹೇಳಿದರು.೨೦೦೪ ರಲ್ಲಿ ಬಿಜೆಪಿ ಸೇರಿದ ದಿನದಿಂದ ಇಂದಿನವರೆಗೂ ಪಕ್ಷಕ್ಕೆ ಪ್ರಾಮಾಣಿವಾಗಿದ್ದೇನೆ. ಆದರೆ ನನ್ನ ಅನುಭವ ಹಂಚಿಕೊಳ್ಳಲು ಪಕ್ಷದ ಮುಖಂಡರು ಮಾಡುತ್ತಿಲ್ಲ. ಅಧಿಕಾರದ ಬೇಕೆಂದು…
ಚಡಚಣ: ಹೂಗಾರ ಅಭಿವೃದ್ದಿ ನಿಗಮಕ್ಕೆ ೧೦೦ ಕೋಟಿ ಅನುದಾನ ನೀಡುವುದರೊಂದಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಜೊತೆಗೆ ಹೂಗಾರ ಸಮಾಜಕ್ಕೆ ಸೇರಿದವರಿಗೆ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಬೇಕು, ಹೂಗಾರ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಸರಕಾರ ಇವರಿಗೆ ಸಾಮಾಜಿಕವಾಗಿ ನ್ಯಾಯ ನೀಡಬೇಕೇಂದು ಒತ್ತಾಯಿಸಿ ಚಡಚಣ ತಾಲೂಕಾ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘದಿಂದ ಸೋಮವಾರ ಚಡಚಣ ತಾಲೂಕಾ ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ನಮವಿ ಸಲ್ಲಿಸಲಾಯಿತು.ತಾಲೂಕಾ ಅಧ್ಯಕ್ಷ ಅಂಬಣ್ಣ ಮ ಪೂಜಾರಿ ಮಾತನಾಡಿ, ಪ್ರತಿ ತಾಲೂಕಿನ ಬಸ್ ನೀಲ್ದಾಣಗಳಲ್ಲಿ ಹೂಗಾರ ಮಳಿಗೆಗೆ ಅವಕಾಶ ಮಾಡಿಕೊಡಬೇಕು, ತಾಲೂಕಿಗೆ ಒಂದರಂತೆ ಹೂಗಾರ ಸಮುದಾಯ ಭವನ ನಿರ್ಮಾಣ ಮಾಡಬೇಕು, ಸರಕಾರದ ವತಿಯಿಂದ ಹೂಗಾರ ಮಾದಯನ್ನವರ ಜಯಂತಿಯನ್ನ ಆಚರಣೆ ಮಾಡಬೇಕು, ಸಮಾಜದ ಅರ್ಚಕರಿಗೆ ತಸ್ತಿಕ ಭತ್ಯ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಪತ್ರಕರ್ತ ಸಂಗಮೇಶ ಹ. ಹೂಗಾರ ಮಾತನಾಡಿ, ಇತರೆ ಸಮುದಾಯದ ಅಭಿವೃದ್ದಿ ನಿಗಮಗಳಿಗೆ ನೀಡುವ ಎಲ್ಲಾ ಸೌಲಭ್ಯವನ್ನು ಹೂಗಾರ ಅಭೀವೃದ್ದಿ ನಿಗಮಕ್ಕೆ ನೀಡಬೇಕು, ಇತರೆ ಸಮುದಾಯದವರಿಗೆ ನೀಡುವಂತ ಸರಕಾರಿ ಸೌಲಭ್ಯವನ್ನು ಹೂಗಾರ ಸಮುದಾಯದ…
ದೇವರಹಿಪ್ಪರಗಿ: ಜನಪರ ಸೇವೆಗೆ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಸಮಾಜದ ಋಣ ತೀರಿಸುವ ಕಾಯಕ ಮಾಡುತ್ತೇನೆ. ನನ್ನ ಮೇಲೆ ಭರವಸೆಯಿಟ್ಟು ನನ್ನನ್ನು ನೇಮಕಕ್ಕೆ ಕಾರಣರಾದವರ ಹೆಸರು ತರುವ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಕೆಡಿಪಿ ಸದಸ್ಯ ನೂರಅಹಮ್ಮದ ಅತ್ತಾರ ಹೇಳಿದರು.ಪಟ್ಟಣದ ಖ್ಯಾತ ನ್ಯಾಯವಾದಿ ಎ.ಎಂ.ತಾಂಬೋಳಿ ಗೆಳೆಯರ ಬಳಗದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸರಕಾರ ಹಾಗೂ ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಗುರುತರ ಜವಾಬ್ದಾರಿ ನೀಡಿದೆ. ನನ್ನ ನೇಮಕ ಮಾಡಲು ಶಾಸಕ ಅಶೋಕ ಮನಗೂಳಿ ಸಹಕಾರ ನೀಡಿ ಶಿಫಾರಸ್ಸು ಮಾಡಿದ್ದರಿಂದ ನನ್ನ ನೇಮಕವಾಗಿದೆ. ಮೊದಲಿನಿಂದಲೂ ನನ್ನ ಮೇಲೆ ಮನಗೂಳಿ ಮನೆತನದ ಭರವಸೆಯಿದೆ. ಶಾಸಕ ಅಶೋಕ ಮನಗೂಳಿ ಯಾವುದೇ ಬೇದಭಾವ ಮಾಡದೆ ನನ್ನನ್ನು ಜಿಲ್ಲಾ ಕೆಡಿಪಿ ಸದಸ್ಯನ್ನನಾಗಿಸಿ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ಸಮಾಜ ಸೇವೆ ಮಾಡುತ್ತೇನೆ, ತಮ್ಮೆಲ್ಲರ ಸಹಕಾರ ಇರಲಿ ಎಂದರು.ಖ್ಯಾತ ನ್ಯಾಯವಾದಿ ಎ.ಎಂ.ತಾಂಬೋಳಿ ಮಾತನಾಡಿ, ನೂರಅಹಮ್ಮದ ಅತ್ತಾರ ಅವರು ಶ್ರಮಜೀವಿಗಳಾಗಿದ್ದು, ಉತ್ತಮ ಸಂಘಟಕರಾಗಿದ್ದಾರೆ. ಇವರ ಶ್ರಮಕ್ಕೆ ತಕ್ಕ ಹುದ್ದೆ ದೊರೆತಿದ್ದು, ಇನ್ನಷ್ಟು…
ಇಂಡಿ: ಮಣ್ಣುಗಳಲ್ಲಿಯ ಮುಖ್ಯ ಹಾಗೂ ಲಘು ಪೋಷಕಾಂಶಗಳ ಕೊರತೆ ಮತ್ತು ನೀರಿನಲ್ಲಿ ಲವಣಗಳು ಮತ್ತು ಕ್ಷಾರಗಳ ಕೊರತೆ ನೀಗಿಸಲು ರೈತರು ತಮ್ಮ ಹೊಲದಲ್ಲಿಯ ಮಣ್ಣು ಪರೀಕ್ಷೆಯ ಅಗತ್ಯತೆ ಇದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಶಂಕರಮೂರ್ತಿ ಹೇಳಿದರು.ಅವರು ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಣ್ಣು ಮತ್ತು ನೀರು ಪರೀಕ್ಷೆಯ ಮಹತ್ವ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಮಣ್ಣು ನೈಸರ್ಗಿಕವಾಗಿ ದೊರೆತಂತಹ ಅತ್ಯಮೂಲ್ಯ ವಸ್ತು. ಭೂಮಿಯು ಸಸ್ಯಗಳಿಗೆ ಆಧಾರವನ್ನು ಕೊಡುವದರ ಜೊತೆಗೆ ಅದರ ಬೆಳವಣೆಗೆಗೆ ಅವಶ್ಯವಿರುವ ನೀರು ಮತ್ತು ಎಲ್ಲಾ ಪೋಷಕಾಂಶಗಳನ್ನು ನೀಡುತ್ತದೆ. ಆದ್ದರಿಂದ ಬೆಳೆಗಳ ಉತ್ತಮವಾದ ಬೆಳೆವಣೆಗಾಗಿ ಹಾಗೂ ಪೋಷಕಾಂಶ ಕೊರತೆ ನಿವಾರಿಸಲು ಪೋಷಕಾಂಶಗಳ ಪ್ರಮಾಣ ಮತ್ತು ರೂಪವನ್ನು ಮಣ್ಣು ಪರೀಕ್ಷೆಯು ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದರು.ವಿಜ್ಞಾನಿ ಡಾ. ಹೀನಾ ಮಾತನಾಡಿ, ಒಂದೇ ವ್ಯವಸಾಯ ಜಮೀನಿನಲ್ಲಿ ನಿರಂತರವಾಗಿ ಬೆಳೆ ಬೆಳೆಯುವರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳೆಲ್ಲ ಬೆಳೆಗಳ ಬೆಳವಣೆಗೆಗಾಗಿ ಉಪಯೋಗವಾಗಿ ಮಣ್ಣಿನಲ್ಲಿ ಪೋಷಕಾಂಶಗಳ…
ವಿಜಯಪುರ: ಆಷಾಢ ಏಕಾದಶಿಯ ಮುನ್ನಾ ದಿನವಾದ ಮಂಗಳವಾರದಂದು ಮಹಾರಾಷ್ಟ್ರದ ಜತ್ತ ತಾಲೂಕಿನ ಗಡಿ ಗ್ರಾಮ ಅಂಕಲಗಿಯ ಜಿಲ್ಲಾ ಪರಿಷತ್ ಪ್ರಾಥಮಿಕ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಷಾಢ ಏಕಾದಶಿಯನ್ನು ಸಡಗರ ಮತ್ತು ಸಂಭ್ರದಿಂದ ಆಚರಿಸಲಾಯಿತು.ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಮೂಹಿಕ ನೃತ್ಯ ಪ್ರದರ್ಶನ ಮನಸರ‍್ಯಗೊಂಡಿತು. ವಿಠ್ಠಲ ವಿಠ್ಠಲ ಹಾಡಿಗೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ಹುಡುಗರು ಮತ್ತು ಹುಡುಗಿಯರು ಸುಂದರವಾದ ವೇಷಭೂಷಣಗಳೊಂದಿಗೆ ವಾರಕರಿಗಳಂತೆ ಧರಿಸಿದ್ದರು. ಪೋಗಡಿ, ಪುಗಡಿ ನೃತ್ಯಗಳನ್ನು ಪ್ರದರ್ಶಿಸಿದರು.ಹುಡುಗಿಯರು ತುಳಸಿ ಗಿಡಗಳನ್ನು ಹೊತ್ತೊಯ್ದರು ಮತ್ತು ಹುಡುಗರು ‘ಲಾರ್ಡ್ ವಿಠ್ಠಲ’ ನಾಮವನ್ನು ಮೋಡಿಮಾಡುವ ತಾಳಗಳನ್ನು ಹಿಡಿದಿದ್ದರು. ಈ ಕೃತ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಆಷಾಢ ಏಕಾದಶಿಯ ಮಹತ್ವ ಮತ್ತು ಭಕ್ತಾಧಿಗಳಿಗೆ ‘ಪಂಢರಪುರ ಯಾತ್ರೆ’ಯ ಪ್ರಸ್ತುತತೆಯ ಕುರಿತು ವಿದ್ಯಾರ್ಥಿಗಳು ಅಮೂಲ್ಯವಾದ ಮಾಹಿತಿಯನ್ನು ಹಂಚಿಕೊಂಡರು. ಈ ಆಚರಣೆಯು ವಿದ್ಯಾರ್ಥಿಗಳಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕತೆಯ ಭಾವನೆಯನ್ನು ತಂದಿತು.ಶಾಲೆಯ ಮುಖ್ಯ ಗುರುಗಳಾದ ಡಿ.ಎಸ್.ಬಿರಾದಾರರವರು ಮಾತನಾಡುತ್ತ. ಆಷಾಢ ಏಕಾದಶಿಯು ಶ್ರೀ ವಿಠ್ಠಲ ದೇವರ ಪವಿತ್ರ ದಿನವಾಗಿದೆ. ಮಕ್ಕಳಿಗೆ ನಮ್ಮ ಸಂಪ್ರದಾಯ ಮತ್ತು…
ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯವು ೨೦೨೪ನೇ ಸಾಲಿನ ಸ್ನಾತಕ ಕೋರ್ಸ್ಗಳು, ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶಾತಿ ಪಡೆಯಲು ಜುಲೈ ೩೧ರವರೆಗೆ ದಿನಾಂಕವನ್ನು ವಿಸ್ತರಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಇಗ್ನೋ ವೆಬ್‌ಸೈಟ್ www.ignou.ac.in/ಅಥವಾ ದೂರವಾಣಿ ಸಂಖ್ಯೆ ೦೮೩೫೨-೨೫೨೦೦೬ ಹಾಗೂ ಮೊ:೯೪೮೨೩೧೧೦೦೬ನ್ನು ಸಂಪರ್ಕಿಸಬಹುದೆಂದು ಸಹಾಯಕ ಕ್ಷೇತ್ರಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವಿಜಯಪುರ: ೨೦೨೩-೨೪ನೇ ಸಾಲಿಗೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿಯಲ್ಲಿ ಸಾಲತ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ www.kacdc.karnataka.gov.inಅಥವಾ ನಿಗಮದ ಸಹಾಯವಾಣಿ ಸಂಖ್ಯೆ:೯೪೪೮೪೫೧೧೧೧ ಸಂಪರ್ಕಿಸಬಹುದು ಎಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ತಿಪ್ಪನಗೌಡ ಕುಮಸಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ವಿಜಯಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಸುಮಾರು ೨೦ ರಿಂದ ೨೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಯಾದ ವ್ಯಕ್ತಿಯ ವಾರಸುದಾರರ ಪತ್ತೆಗೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಪತ್ತೆಯಾದ ವ್ಯಕ್ತಿಯ ಎತ್ತರ ಸುಮಾರು ೦೫ ಅಡಿ ೦೬ ಇಂಚು ಇದ್ದು, ಸಾಧಗಪ್ಪು ಮೈಬಣ್ಣ, ತೆಳ್ಳನೆಯ ಸಣಕಲು ಮೈಕಟ್ಟು, ಕೋಲು ಮುಖ, ನೇರವಾದ ಮೂಗು, ಕಪ್ಪು ತಲೆಕೂದಲು, ಚಿಗುರು ಮೀಸೆವುಳ್ಳವನಾಗಿದ್ದು, ಕಪ್ಪು ಬಣ್ಣದ ತುಂಬು ತೋಳಿನ ರೆಡಿಮೆಡ್ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಆರಕ್ಷಕ ಉಪ ನಿರೀಕ್ಷಕರು, ರೈಲ್ವೆ ಪೊಲೀಸ್ ಠಾಣೆ, ವಿಜಯಪುರ ದೂ: ೦೮೩೫೨-೨೫೦೮೮೩,ಇಮೇಲ್ bijapurrly@ksp.gov.in ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: ೦೮೦-೨೨೮೭೧೨೯೧, ಇ-ಮೇಲ್: dcrly@ksp.gov.inಮಾಹಿತಿ ನೀಡಲು ಪ್ರಕಟಣೆಯಲ್ಲಿ ರೈಲ್ವೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
