ಚಡಚಣ: ಹೂಗಾರ ಅಭಿವೃದ್ದಿ ನಿಗಮಕ್ಕೆ ೧೦೦ ಕೋಟಿ ಅನುದಾನ ನೀಡುವುದರೊಂದಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಜೊತೆಗೆ ಹೂಗಾರ ಸಮಾಜಕ್ಕೆ ಸೇರಿದವರಿಗೆ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಬೇಕು, ಹೂಗಾರ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಸರಕಾರ ಇವರಿಗೆ ಸಾಮಾಜಿಕವಾಗಿ ನ್ಯಾಯ ನೀಡಬೇಕೇಂದು ಒತ್ತಾಯಿಸಿ ಚಡಚಣ ತಾಲೂಕಾ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘದಿಂದ ಸೋಮವಾರ ಚಡಚಣ ತಾಲೂಕಾ ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ನಮವಿ ಸಲ್ಲಿಸಲಾಯಿತು.
ತಾಲೂಕಾ ಅಧ್ಯಕ್ಷ ಅಂಬಣ್ಣ ಮ ಪೂಜಾರಿ ಮಾತನಾಡಿ, ಪ್ರತಿ ತಾಲೂಕಿನ ಬಸ್ ನೀಲ್ದಾಣಗಳಲ್ಲಿ ಹೂಗಾರ ಮಳಿಗೆಗೆ ಅವಕಾಶ ಮಾಡಿಕೊಡಬೇಕು, ತಾಲೂಕಿಗೆ ಒಂದರಂತೆ ಹೂಗಾರ ಸಮುದಾಯ ಭವನ ನಿರ್ಮಾಣ ಮಾಡಬೇಕು, ಸರಕಾರದ ವತಿಯಿಂದ ಹೂಗಾರ ಮಾದಯನ್ನವರ ಜಯಂತಿಯನ್ನ ಆಚರಣೆ ಮಾಡಬೇಕು, ಸಮಾಜದ ಅರ್ಚಕರಿಗೆ ತಸ್ತಿಕ ಭತ್ಯ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಪತ್ರಕರ್ತ ಸಂಗಮೇಶ ಹ. ಹೂಗಾರ ಮಾತನಾಡಿ, ಇತರೆ ಸಮುದಾಯದ ಅಭಿವೃದ್ದಿ ನಿಗಮಗಳಿಗೆ ನೀಡುವ ಎಲ್ಲಾ ಸೌಲಭ್ಯವನ್ನು ಹೂಗಾರ ಅಭೀವೃದ್ದಿ ನಿಗಮಕ್ಕೆ ನೀಡಬೇಕು, ಇತರೆ ಸಮುದಾಯದವರಿಗೆ ನೀಡುವಂತ ಸರಕಾರಿ ಸೌಲಭ್ಯವನ್ನು ಹೂಗಾರ ಸಮುದಾಯದ ಜನರಿಗೆ ನೀಡಬೇಕೆಂದು ಎಂದು ಹೇಳಿದರು.
ಇದೇ ವೇಳೆ ಸಮಾಜದ ಮುಖಂಡರಾದ ಸೀತಾರಾಮ ಶಂ. ಪೂಜಾರಿ, ಮಹಾದೇವ ಗೋ. ಪೂಜಾರಿ, ಶಂಕರ ಭೀ ಪೂಜಾರಿ, ಸಚೀನ ಶ. ಪೂಜಾರಿ, ಸಂಗಮೇಶ ಹೂಗಾರ, ರಮೇಶ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಹೂಗಾರ ಅಭಿವೃದ್ದಿ ನಿಗಮಕ್ಕೆ ರೂ.೧೦೦ ಕೋಟಿ ಅನುದಾನ ನೀಡಲು ಆಗ್ರಹ
Related Posts
Add A Comment

