ವಿಜಯಪುರ: ವಿಜಯಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಸುಮಾರು ೨೦ ರಿಂದ ೨೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಯಾದ ವ್ಯಕ್ತಿಯ ವಾರಸುದಾರರ ಪತ್ತೆಗೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪತ್ತೆಯಾದ ವ್ಯಕ್ತಿಯ ಎತ್ತರ ಸುಮಾರು ೦೫ ಅಡಿ ೦೬ ಇಂಚು ಇದ್ದು, ಸಾಧಗಪ್ಪು ಮೈಬಣ್ಣ, ತೆಳ್ಳನೆಯ ಸಣಕಲು ಮೈಕಟ್ಟು, ಕೋಲು ಮುಖ, ನೇರವಾದ ಮೂಗು, ಕಪ್ಪು ತಲೆಕೂದಲು, ಚಿಗುರು ಮೀಸೆವುಳ್ಳವನಾಗಿದ್ದು, ಕಪ್ಪು ಬಣ್ಣದ ತುಂಬು ತೋಳಿನ ರೆಡಿಮೆಡ್ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಆರಕ್ಷಕ ಉಪ ನಿರೀಕ್ಷಕರು, ರೈಲ್ವೆ ಪೊಲೀಸ್ ಠಾಣೆ, ವಿಜಯಪುರ ದೂ: ೦೮೩೫೨-೨೫೦೮೮೩,ಇಮೇಲ್ bijapurrly@ksp.gov.in ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: ೦೮೦-೨೨೮೭೧೨೯೧, ಇ-ಮೇಲ್: dcrly@ksp.gov.inಮಾಹಿತಿ ನೀಡಲು ಪ್ರಕಟಣೆಯಲ್ಲಿ ರೈಲ್ವೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

