Author: editor.udayarashmi@gmail.com

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ ಬಸವನಬಾಗೇವಾಡಿ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರಶೇಖರ ಸೋಮನಗೌಡ ಪಾಟೀಲ, ಉಪಾಧ್ಯಕ್ಷರಾಗಿ ಶಿವಪ್ಪ ಬಸಪ್ಪ ಬಂಚೋಡಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.ಈ ಸಂಘದ ೧೪ ನಿರ್ದೇಶಕರ ಸ್ಥಾನಕ್ಕೆ ಜೂನ್ ೨೯ ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿ ಜುಲೈ ೬ ನಾಮಪತ್ರ ಸಲ್ಲಿಕೆ ಕೊನೆ ದಿನ ನಿಗದಿಯಾಗಿತ್ತು. ಜುಲೈ ೭ ರಂದು ನಾಮಪತ್ರ ಪರಿಶೀಲನೆ,ಜುಲೈ ೮ ನಾಮಪತ್ರ ಹಿಂಪಡೆಯಲು ಅವಕಾಶವಿತ್ತು. ಚುನಾವಣೆ ಜುಲೈ ೧೪ ರಂದು ನಿಗದಿಯಾಗಿತ್ತು. ೧೩ ಸ್ಥಾನಗಳಿಗೆ ೧೪ ನಾಮಪತ್ರ ಸಲ್ಲಿಕೆಯಾಗಿದ್ದವು. ಪ್ರೇಮಕುಮಾರ ಮ್ಯಾಗೇರಿ ಅವರು ತಮ್ಮ ನಾಮಪತ್ರ ಹಿಂದೆ ಪಡೆದುಕೊಂಡಿದ್ದರಿಂದ ೧೩ ಸ್ಥಾನಗಳಿಗೆ ಅವಿರೋಧವಾಗಿ ನಿರ್ದೇಶಕರು ಆಯ್ಕೆಯಾಗಿದ್ದರು. ಬ ತರಗತಿ ಸದಸ್ಯರ(ರೈತರು-ಕೃಷಿಕ ಸದಸ್ಯರಿಂದ) ಪರಿಶಿಷ್ಟ ಪಂಗಡ ಕ್ಷೇತ್ರಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಇರುವದರಿಂದಾಗಿ ಈ ಸ್ಥಾನ ಖಾಲಿ ಇದೆ. ಇಂದು…

Read More

ವಿಜಯಪುರ: ಸಾಮಾಜಿಕ ನೆರವು ಯೋಜನೆಗಳಿಗೆ ಸಂಬಂಧಿಸಿದಂತೆ ಪಿಂಚಣಿದಾರರು ತಮ್ಮಕುಂದು ಕೊರತೆ ನೋಂದಾಯಿಸಲು,ಪಿಂಚಣಿ ಕುರಿತ ಮಾಹಿತಿ ಪಡೆಯಲು ಹಾಗೂ ಮಾಹಿತಿ ಹಂಚಿಕೊಳ್ಳಲುಜಿಲ್ಲೆಯ ೧೩ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಒಂದು ಬಾರಿ ಪಿಂಚಣಿ ದಿನವನ್ನು ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಯಶಸ್ವಿಯಾಗಿ ಜುಲೈ ೨೦ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ೧೩ ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ದಿನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.ಅಂದು ಬೆಳಗ್ಗೆ ೧೧ ಗಂಟೆಗೆ ವಿಜಯಪುರದ ಗ್ರೇಡ್-೨ ತಹಶೀಲ್ದಾರ ಅವರು ಕನ್ನೂರಿನ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ, ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ್ ಅವರು ಕಂಬಗಿ ಗ್ರಾಮ ಪಂಚಾಯತಿಯಲ್ಲಿ, ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ಟಕ್ಕಳಕಿಯ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ,ಬಸವನ ಬಾಗೇವಾಡಿ ತಹಸೀಲ್ದಾರ್ ಅವರು ಯರನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿಂಚಣಿ ದಿನ ನಡೆಸಲಿದ್ದಾರೆ.ನಿಡಗುಂದಿ ಗ್ರೇಡ್-೨ ತಹಶೀಲ್ದಾರ ಅವರು ಆಲಮಟ್ಟಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ, ಕೊಲ್ಹಾರ ತಹಶೀಲ್ದಾರ್ ಅವರು,ಕೂಡಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಮುದ್ದೇಬಿಹಾಳ ಗ್ರೇಡ್…

Read More

ವಿಜಯಪುರ: ಎನ್‌ಎಂಎಎಸ್ ಪರೀಕ್ಷೆಯಲ್ಲಿ ಪಾಸಾಗಿ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ಬಬಲೇಶ್ವರ ತಾಲೂಕಿನ ಅರ್ಜುಣಗಿ ಕರ್ನಾಟಕ ಪಬ್ಲಿಕ್ ಶಾಲೆಯ ೪ ವಿದ್ಯಾರ್ಥಿಗಳನ್ನು ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರ ಹಾಗೂ ಕೆಪಿಎಸ್ ಅರ್ಜುಣಗಿ ಶಾಲೆ ವತಿಯಿಂದ ಸನ್ಮಾನಿಸಲಾಯಿತು.ಕೆಪಿಎಸ್ ಅರ್ಜುಣಗಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪರೀಕ್ಷೆಯಲ್ಲಿ ಪಾಸಾದ ರಕ್ಷಾ ನಾವಿ, ಪ್ರೀತಿ ಬಡಿಗೇರ, ಪೂಜಾ ಪಡಸಲಗಿ ಹಾಗೂ ಶಿಲ್ಪಾ ಒಡೆಯರ ಸೇರಿದಂತೆ ೪ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು.ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರ ಅಧ್ಯಕ್ಷೆ ನಿರ್ಮಲಾ ದೊಡಮನಿ, ಶಾಲೆಯ ಉಪ ಪ್ರಾಚಾರ್ಯ ಎ.ಎಸ್.ಬಿರಾದಾರ, ಶ್ರೀಮತಿ ವನಿತಾ ಭೈರವಾಡಗಿ, ಶ್ರೀಮತಿ ಸಾವಿತ್ರಿ ನಾಟಿಕಾರ, ಶ್ರೀಮತಿ ವನಜಾಕ್ಷಿ ಬಡಿಗೇರ, ರಮೇಶ ಕುಂಬಾರ, ಈರಣ್ಣ ಚಿಪಾಟಿ, ಜಿ.ಕೆ.ಸಾಸಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು ಎಂದು ಉಪ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಸೊಳೆಯಿಂದ ಹರಡುವ ಡೆಂಗ್ಯೂ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ವಿವಿಧ ವಾರ್ಡಗಳಲ್ಲಿ ಧೂಮೀಕರಣ ಮತ್ತು ಬೈ ಲಾರ್ವಾ ಸಿಂಪಡಣೆಗೆ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರುಗಳಿಗೆ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೂಚನೆ ನೀಡಿದ್ದಾರೆ.ಡೆಂಗ್ಯೂ ನಿಯಂತ್ರಣ ಹಾಗೂ ನಗರದ ಸ್ವಚ್ಛತೆ ಕುರಿತು ಬುಧವಾರ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ನೈರ್ಮಲ್ಯ ಮೇಲ್ವಿಚಾರಕರುಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನಗರದಾದ್ಯಂತ ಸಾರ್ವಜನಿಕರು ಮತ್ತು ವರ್ತಕರು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಕಸವನ್ನು ಕಡ್ಡಾಯವಾಗಿ ಕಸದ ವಾಹನಕ್ಕೆ ನೀಡುವುದು, ಸಾರ್ವಜನಿಕರು ತಮ್ಮ ಮನೆ ಮತ್ತು ಸುತ್ತಲಿನ ಪರಿಸರದಲ್ಲಿ ಹೂವಿನ ಕುಂಡಳ, ನೀರು ಶೇಖರಿಸಿಟ್ಟ ಬಕೆಟ್‌ಗಳಲ್ಲಿ, ಹಳೆಯದಾದ ಟೈರ್ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ಗಮನಹರಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ನಗರ ಸ್ವಚ್ಛತೆ ಕಾಪಾಡಿಕೊಂಡು ಪಾಲಿಕೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಯಿತು.ಅದರಂತೆ ಸ್ವಚ್ಛತೆ ಕುರಿತು ಯಾವುದೇ…

Read More

ವಿಜಯಪುರ: ಆಲಮಟ್ಟಿ ಆಣೆಕಟ್ಟು ಅಡಿ ಬರುವ ಆಲಮಟ್ಟಿ ಎಡದಂಡೆ ಕಾಲುವೆ, ಚಿಮ್ಮಲಗಿ ಪಶ್ಚಿಮ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ತಿಮ್ಮಾಪೂರ ಏತ ನಿರಾವರಿ ಯೋಜನೆ ಮತ್ತು ಮರೋಳ ಏತ ನೀರಾವರಿಗೆ ಯೋಜನೆಗಳಿಗೆ ಮುಂಗಾರು ಹಂಗಾಮಿಗೆ ೧೨೦ ದಿನಗಳ ಕಾಲ ನೀರು ಬಿಡುಗಡೆಗೊಳಿಸಲು ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಆಣೆಕಟ್ಟು ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.ಅಬಕಾರಿ ಸಚಿವರೂ ಆದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಆರ್.ಬಿ.ತಿಮ್ಮಾಪುರ ಅವರ ಅಧ್ಯಕ್ಷತೆಯಲ್ಲಿ ಜುಲೈ ೧೬ ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಮುಂಗಾರು ಹಂಗಾಮಿ ಜುಲೈ ೧೭ ರಿಂದ ನವೆಂಬರ್ ೧೩ರವರೆಗೆ ೧೨೦ ದಿನಗಳ ಕಾಲ ನೀರು ಹರಿಸಲಾಗುತ್ತಿದ್ದು, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಇರುವಾಗ, ನಿರಂತರ ನೀರು ಹರಿಸುವುದು, ಜಲಾಶಯದಲ್ಲಿ ಒಳಹರಿವು ಕ್ಷೀಣಿಸುತ್ತಿರುವ ಪೂರ್ವದಲ್ಲಿ, ಚರ್ಚಿಸಿ ವಾರಾಬಂದಿ ಅನುಷ್ಠಾನ ಕುರಿತು ಕ್ರಮ ವಹಿಸಲು ನಿರ್ಧರಿಸಲಾಗಿದೆ.ನೀರು ಬಿಡುವ ಸಂದರ್ಭದಲ್ಲಿ ಕಾಲುವೆ…

Read More

ವಿಜಯಪುರ: ಗ್ರಾಮ ಆಡಳಿತ ಅಧಿಕಾರಿಗಳು ತೋಟಗಾರಿಕೆ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಮತ್ತು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗುರುವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳೆ ಅಂದಾಜು ಸಮೀಕ್ಷೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕಕ ಅಲ್ತಾಫ ಅಹ್ಮದ. ಮಣಿಯಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿ ಶಿದ್ದನಗೌಡ ಬಿರಾದಾರ ತರಬೇತಿ ನೀಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್, ಎನ್.ಎಸ್.ಎಸ್.ಓ ಬೆಳಗಾವಿ ಕಚೇರಿಯ ಎನ್.ಎನ್.ಕಾಂಬಳೆ, ಇಂಡಿ ಉಪ ವಿಭಾಗಾಧಿಕಾರಿ ಆಬಿದ್ ಗದ್ಯಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More

ವಿಜಯಪುರ: ನಗರದ ಜಿಲ್ಲಾ ಪಂಚಾಯತ್ ಪ್ರವೇಶ ದ್ವಾರದಿಂದ (ಕಮಾನ) ಜಿಲ್ಲಾ ಪಂಚಾಯತ್ ಕಚೇರಿಯವರೆಗೆ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ರಸ್ತೆ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗುರುವಾರ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದವರಿಗೆ ಸೂಚಿಸಿದರು. ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಾಲಮಂದಿರ, ಗಾಂಧಿಭವನದ ಪಕ್ಕದಲ್ಲಿ ಜಿಲ್ಲಾಡಳಿತ ಕಚೇರಿಗಳ ನಿರ್ಮಾಣಕ್ಕಾಗಿ ನಿಗದಿಪಡಿಸಲಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ | ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ವಿಜಯಪುರ: ಕಂದಾಯ ಗ್ರಾಮಗಳ ರಚನೆಗೆ ಸರ್ಕಾರ ವಿಶೇಷ ಆಸಕ್ತಿ ವಹಿಸಿದ್ದು, ಈ ನಿಟ್ಟಿನಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.ಮುಖ್ಯಮಂತ್ರಿಗಳ ನಿರ್ದೇಶನ ಹಿನ್ನಲೆಯಲ್ಲಿ ಕಂದಾಯ ಇಲಾಖೆಯ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕಂದಾಯ ಗ್ರಾಮಗಳಲ್ಲಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಲ್ಲಿ ವ್ಯತ್ಯಯ ಮಾಡದೇ ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕ್ರಮ ವಹಿಸಬೇಕು. ಪಹಣಿ ತಿದ್ದುಪಡಿ, ವಿಶೇಷ ಒತ್ತು ನೀಡಿ ಪೈಕಿ ಪಹಣಿ, ಮೋಜಣಿ, ಸರ್ವೇ ಕಾರ್ಯವನ್ನು ಸರಳಿಕರಣಗೊಳಿಸಲು ಆದ್ಯತೆ ನೀಡುವಂತೆ ಸೂಚಿಸಿದ ಅವರು ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಆಧಾರನೊಂದಿಗೆ ಆರ್‌ಟಿಸಿ ಲಿಂಕ್ ಮಾಡಲು…

Read More

ಚಡಚಣ: ಪಟ್ಟಣದ ಯುವ ಕವಿಯತ್ರಿ ಹಾಗೂ ಪತ್ರಕರ್ತೆಯಾದ ವಿದ್ಯಾ ಕಲ್ಯಾಣಶೆಟ್ಟಿ ರಚಿಸಿದ ಕಾವ್ಯಕನ್ನಿಕೆ ಕವನ ಸಂಕಲನಕ್ಕೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2024 ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಗಡಿಭಾಗದ ಚಡಚಣ ಪಟ್ಟಣದಲ್ಲಿರುವ ಕವಯತ್ರಿಗೆ ದೊರೆತಿರುವದರಿಂದ ತಾಲೂಕಿನ ಸಾಹಿತಿಗಳಿಗೆ ಹರ್ಷ ತಂದಿದೆ. ಇದಕ್ಕೆ ಹಿರಿಯ ಸಾಹಿತಿ ಡಾ ಸಂಗಮೇಶ ಮೇತ್ರಿ ಗಡಿಭಾಗದ ಮಹಿಳಾ ಕವನ ಸಂಕಲನಕ್ಕೆ ದೊರೆತಿರುವದು ಸಂತಸವಾಗಿದೆ. ಇದು ಬೆಳೆಯುತ್ತಿರುವ ಯುವ ಕವಿಗಳಿಗೆ ಸ್ಫೂರ್ತಿ ತಂದಿದೆ. ಈ ಭಾಗದ ಸಾಹಿತ್ಯ ನಾಡಿನ ತುಂಬ ಹಬ್ಬಲೆಂದು ಶುಭಾಶಯಗಳು ಹೇಳಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳು ತಿಳಿಸಿದ್ದಾರೆ.

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಗೃಹಿಣಿ ಎಂದೊಡನೆ ನಮ್ಮ ಕಣ್ಣ ಮುಂದೆ ಬರುವುದು ಅಂದವಾದ ಸೀರೆ, ಚಂದದ ಕುಪ್ಪಸ ತೊಟ್ಟ, ಜಡೆ ಹೆಣೆದು ತಲೆಯಲ್ಲಿ ಹೂ ಮುಡಿದು, ಹಿತ ಮಿತವಾದ ಅಲಂಕಾರ, ಹಣೆಯಲ್ಲಿ ಕುಂಕುಮದ ಬೊಟ್ಟಿಟ್ಟ ಹೆಣ್ಣು ಮಗಳ ಚಿತ್ರ ಕಣ್ಣ ಮುಂದೆ ಬರುತ್ತದೆ. ಕೊರಳಲ್ಲಿ ಗಂಡ ಕಟ್ಟಿದ ತಾಳಿ, ಕೈಗಳಲ್ಲಿ ಹಸಿರು ಕೆಂಪು ಬಳೆಗಳು, ಕಿವಿಯೋಲೆ ಮತ್ತು ಕಾಲಲ್ಲಿ ಬೆಳ್ಳಿಯ ಕಾಲ್ಗೆಜ್ಜೆ ಮತ್ತು ಕಾಲುಂಗುರಗಳು ಆಕೆಯ ಬಾಹ್ಯಆಭೂಷಣಗಳಾದರೆ ಹಿರಿಯರಿಗೆ ಕೊಡುವ ಗೌರವ, ಗಂಡನಲ್ಲಿ ಪ್ರೀತಿ, ಮಕ್ಕಳ ಮೇಲೆ ಮಮತೆ ಮತ್ತು ಮನೆಗೆ ಬಂದು ಹೋಗುವ ಅತಿಥಿಗಳಲ್ಲಿ ಪ್ರೀತ್ಯಾದರ ತೋರುವ ಹೆಣ್ಣು ಮಗಳು ಮನೆಯ ಕಳೆಯನ್ನು ಹೆಚ್ಚಿಸುತ್ತಾಳೆ. ಅದೆಷ್ಟೇ ಕಾಲ ಬದಲಾಗಿದ್ದರು ಕೂಡ ಹೆಣ್ಣುಮಕ್ಕಳು ಸ್ತ್ರೀತ್ವದ ಪ್ರತೀಕವಾಗಿ, ಮಮತೆ ವಾತ್ಸಲ್ಯಗಳ ಪ್ರತಿರೂಪವಾಗಿ ಹುಟ್ಟಿದ ತವರುಮನೆ ಮತ್ತು ಮೆಟ್ಟಿದ ಗಂಡನ ಮನೆ ಎರಡನ್ನೂ ಸಂಭಾಳಿಸಿಕೊಂಡು ಹೋಗುವಲ್ಲಿ ನಿಷ್ಣಾತೆ. ನೂರಾರು ವರ್ಷಗಳು ಸಂದು ಹೋದರೂ ಅಮ್ಮ ಎಂದರೆ ಆಡಿ ಬಂದ ತನ್ನ…

Read More