ವಿಜಯಪುರ: ಎನ್‌ಎಂಎಎಸ್ ಪರೀಕ್ಷೆಯಲ್ಲಿ ಪಾಸಾಗಿ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ಬಬಲೇಶ್ವರ ತಾಲೂಕಿನ ಅರ್ಜುಣಗಿ ಕರ್ನಾಟಕ ಪಬ್ಲಿಕ್ ಶಾಲೆಯ ೪ ವಿದ್ಯಾರ್ಥಿಗಳನ್ನು ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರ ಹಾಗೂ ಕೆಪಿಎಸ್ ಅರ್ಜುಣಗಿ ಶಾಲೆ ವತಿಯಿಂದ ಸನ್ಮಾನಿಸಲಾಯಿತು.
ಕೆಪಿಎಸ್ ಅರ್ಜುಣಗಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪರೀಕ್ಷೆಯಲ್ಲಿ ಪಾಸಾದ ರಕ್ಷಾ ನಾವಿ, ಪ್ರೀತಿ ಬಡಿಗೇರ, ಪೂಜಾ ಪಡಸಲಗಿ ಹಾಗೂ ಶಿಲ್ಪಾ ಒಡೆಯರ ಸೇರಿದಂತೆ ೪ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರ ಅಧ್ಯಕ್ಷೆ ನಿರ್ಮಲಾ ದೊಡಮನಿ, ಶಾಲೆಯ ಉಪ ಪ್ರಾಚಾರ್ಯ ಎ.ಎಸ್.ಬಿರಾದಾರ, ಶ್ರೀಮತಿ ವನಿತಾ ಭೈರವಾಡಗಿ, ಶ್ರೀಮತಿ ಸಾವಿತ್ರಿ ನಾಟಿಕಾರ, ಶ್ರೀಮತಿ ವನಜಾಕ್ಷಿ ಬಡಿಗೇರ, ರಮೇಶ ಕುಂಬಾರ, ಈರಣ್ಣ ಚಿಪಾಟಿ, ಜಿ.ಕೆ.ಸಾಸಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು ಎಂದು ಉಪ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನ
Related Posts
Add A Comment

