Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ೧೧೦ ಕೆವಿ ಝಳಕಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಂಟ್ರೋಲ್ ಕೇಬಲ್ ಸ್ಥಳಾಂತರಿಸುವ ಕಾಮಗಾರಿ ಕೈಗೊಂಡಿದ್ದು,ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ ೧೧ ಕೆವಿ ಮಾರ್ಗಗಳಲ್ಲಿ ಜುಲೈ ೨೧ರ ಮದ್ಯಾಹ್ನ ೧೨ ಗಂಟೆಯಿಂದ ಸಂಜೆ ೬ ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಇಂಡಿ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಎಂಡಿ ಡಾ.ಸತೀಶ ಅಧಿಕಾರಿಗಳಿಗೆ ಸೂಚನೆ ವಿಜಯಪುರ: ನಗರದ ವಿಮಾನ ನಿಲ್ದಾಣದಲ್ಲಿ ೨೪/೭ ಕುಡಿಯುವ ನೀರು, ೨ಸಾವಿರ ಕಿ.ವ್ಯಾ. ನಿರಂತರ ವಿದ್ಯುತ್ ಪೂರೈಕೆ, ಅಗ್ನಿಶಾಮಕ ಸಿಬ್ಬಂದಿ ನಿಯೋಜನೆಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸತೀಶ್ ಬಿ.ಸಿ ಸೂಚಿಸಿದರು.ಶನಿವಾರ ಅವರು ಬುರಣಾಪುರ ಹತ್ತಿರ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿಎಫ್‌ಆರ್ ಕಟ್ಟಡ, ಕಂಪೌಂಡ್ ಗೋಡೆ ಹಾಗೂ ಇತರೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದ ಅವರು, ನಂತರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ನಿಯಮಿತವಾಗಿ ಹಾಗೂ ನಿರಂತರವಾಗಿ ವಿಮಾನ ನಿಲ್ದಾಣಕ್ಕೆ ವಿದ್ಯುತ್ ಪೂರೈಕೆ ಮಾಡುವ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ಹಾಗೂ ಹೆಸ್ಕಾಂನ ಅಧಿಕಾರಿಗಳಿಗೆ ಕಾಲಮಿತಿಯೊಳಗೆ ಬಾಕಿ ಉಳಿದ…
ಕಲುಷಿತ ನೀರು ಸೇವನೆಯಿಂದ ಹೆಚ್ಚಿದ ವಾಂತಿ ಬೇದಿ | ಮುದನೂರ ಗ್ರಾಪಂನಲ್ಲಿ ಘಟನೆ | ಪಿಡಿಓ ನಿರ್ಲಕ್ಷ್ಯ – ಇಲ್ಯಾಸ್ ಪಟೇಲ್ಯಾದಗಿರಿ: ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.ಇಬ್ಬರು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 52 ಮಂದಿ ಸದ್ಯ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ಮುದನೂರು ಗ್ರಾಮದ ಜನತಾ ಕಾಲೋನಿಯ ನಿವಾಸಿಗಳು ಕಾಲುವೆ ಪಕ್ಕದ ಕೊಳವೆಬಾವಿಯ ನೀರು ಸೇವನೆ ಮಾಡಿದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇದಕ್ಕೆ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.ಆದರೆ, ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಜನರಿಗೆ ವಾಂತಿ ಭೇದಿ ಉಂಟಾಗುತ್ತಿದ್ದಂತೆ ಕೆಲವರು ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಇನ್ನೂ ಕೆಲವು ಜನ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಲುಷಿತ ನೀರು ಸೇವನೆಯೇ…
ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿ ಕೃಷ್ಣೆಗೆ ಇಂದು ವಿಶೇಷ ಪೂಜೆ & ಬಾಗಿನ ಅರ್ಪಣೆ ವಿಜಯಪುರ: ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿ ಎಂದೇ ಕರೆಯಲ್ಪಡುವ ಕೃಷ್ಣಾನದಿಯ ಉಗಮಸ್ಥಾನವಾದ ಮಹಾರಾಷ್ಟ್ರದ ಪಂಚಗಂಗಾ ಕ್ಷೇತ್ರದಲ್ಲಿ ತಮ್ಮ ನೇತೃತ್ವದಲ್ಲಿ ವಿಜಯಪುರ- ಬಾಗಲಕೋಟ ಅವಳಿ ಜಿಲ್ಲೆಯ ನೂರಾರು ರೈತರು ಜುಲೈ 21ರಂದು ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಿದ್ದಾರೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ತಿಳಿಸಿದರು.ಅವರು ಶನಿವಾರ ನಗರದ ಹೊಸ ಪ್ರವಾಸಿ ಮಂದಿರದಿಂದ ನೂರಾರು ರೈತರು ಹಾಗೂ ಬಿಜೆಪಿ ಕಾರ್ಯಕರ್ತರ ಜೊತೆಯಲ್ಲಿ ಮಹಾಬಲೇಶ್ವರಕ್ಕೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮಾತನಾಡಿದರು.ಪ್ರತಿ ವರ್ಷದ ಕಡ್ಲಿಗರ ಹುಣ್ಣಿಮೆಯಂದು ತಾವು ದಂಪತಿ ಸಮೇತ ಈ ಭಾಗದ ಕೃಷಿಕರೊಂದಿಗೆ ಮಹಾಬಲೇಶ್ವರಕ್ಕೆ ತೆರಳಿ ಕೃಷ್ಣೆಯ ಉಗಮಸ್ಥಾನದಲ್ಲಿ ಉಡಿ ತುಂಬಿ, ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವುದು ಕಳೆದ 15 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ಬೆಳ್ಳುಬ್ಬಿ ತಿಳಿಸಿದರು.ಜುಲೈ 21 ರಂದು ಬೆಳಿಗ್ಗೆ 6ಕ್ಕೆ ಗುರುಪೂರ್ಣಿಮೆಯಂದು ಸಾತಾರಾದಿಂದ ಮಹಾಬಲೇಶ್ವರದ ಪಂಚಗಂಗಾ ಸನ್ನಿಧಿಗೆ ತೆರಳಿ ಬೆಳಿಗ್ಗೆ…
ಚಡಚಣ: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಇದರ 117ನೇ ಸಂಸ್ಥಾಪನಾ ದಿನವನ್ನು ಜು.20ರಂದು ನಿವರಗಿ ಶಾಖೆಯಲ್ಲಿ ಆಚರಿಸಲಾಯಿತು.ಬ್ಯಾಂಕಿನ ವ್ಯವಸ್ಥಾಪಕ ಸಂತೋಷ ಹಿಟ್ನಳ್ಳಿ ಅವರು ಬರೋಡಾದ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ ಅವರ ಭಾವ ಚಿತ್ರದ ಮುಂದೆ ದೀಪ ಪ್ರಜ್ವಲಿಸಿ ಪುಷ್ಪಾರ್ಚಣೆ ಮಾಡುವ ಪ್ರಾಸ್ತಾವಿಕವಾಗಿ ಬ್ಯಾಂಕ್ ಬೆಳೆದು ಬಂದ ಮತ್ತು ಸೇವೆಗಳ ಕುರಿತ ಮಾಹಿತಿಯನ್ನು ಗ್ರಾಹಕರ ಮುಂದಿಟ್ಟರು.ಬ್ಯಾಂಕಿನ 117 ವರ್ಷದ ಧ್ಯೇಯ ‘ವಿಶ್ವಾಸಾರ್ಹ ಇಂದು, ನಾಳೆಯನ್ನು ಪರಿವರ್ತಿಸುವುದು’ ಇದೇ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಿವರಗಿ ಬ್ಯಾಂಕ್ ಆಫ್ ಬರೋಡಾ ಶಾಖೆಯು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಇಂಗಳೆ ಸರ್ಕಾರಿ ವಸತಿ ಶಾಲೆಗೆ ವಾಟರ್ ಫಿಲ್ಟರ್ ಕೊಡಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಎಲ್.ತುಪ್ಪದ, ಅತಿಥಿಗಳಾಗಿ ಎಲ್.ಡಿ.ಹತ್ತಳ್ಳಿ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದನಗೌಡ ಪಾಟೀಲ, ಬಿ.ಸಿ.ಪ್ರತಿನಿಧಿ ಆಗಮಿಸಿದ್ದ ಬಿಜ್ಜರಗಿ, ಬ್ಯಾಂಕಿನ ಅಧಿಕಾರಿಗಳಾದ ವಿಜಯಕುಮಾರ, ಜಗನಾಥ ಮಂಗಳೂರ, ಪಟ್ನಾದ, ನಿಂಗಪ್ಪಾ ಇಂಗಳೆ , ಶ್ರೀನಾಥ ಇಂಗಳೆ,…
ವಿಜಯಪುರ: ಜು.2೦, ಅಂತಾರಾಷ್ಟ್ರೀಯ ಚೆಸ್ ದಿನ. ಈ ನಿಮಿತ್ತ ತಾಲೂಕಿನ ಗ್ರಾಮದ ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಚದುರಂಗ ಆಟ ಆಡಿ ಈ ದಿನವನ್ನು ಆಚರಿಸಿದರು.ಚೆಸ್ ಎನ್ನುವುದು ಬಹಳ ಪ್ರಾಚೀನ ಆಟಗಳಲ್ಲಿ ಒಂದು.ಇದು ಬುದ್ಧಿವಂತಿಕೆ ಹಾಗೂ ಜಾಣ್ಮೆಯ ಆಟ. ನಮ್ಮ ಬುದ್ದಿಮತ್ತೆಗೆ ಸವಾಲಾದ ಆಟವಿದಾಗಿದ್ದು, ದೈಹಿಕ ಚಟುವಟಿಕೆಗಳಿಲ್ಲದೇ ಹೋದರೂ ಮಾನಸಿಕವಾಗಿ ಗಟ್ಟಿಯಾಗಿರಬೇಕು. ಮಕ್ಕಳಿಗೆ ಏಕಾಗ್ರತೆಯ ಶಕ್ತಿಯನ್ನು ಬೆಳೆಸಲು ಈ ಆಟ ಉತ್ತಮ. ಇದು ಯೋಚಿಸುವ ಸಾಮರ್ಥ್ಯವನ್ನು ಹೆಚ್ಚಿಸಿ ಸರಿಯಾದ ಸಮಯಕ್ಕೆ ಹೇಗೆ ನಿರ್ಧಾರ ಕೈಗೊಳ್ಳಬೇಕೆನ್ನುವುದನ್ನು ತಿಳಿಸುತ್ತದೆ. ಈ ಚೆಸ್ ಆಟವು ಮಕ್ಕಳಲ್ಲಿ ಅವರ ಐಕ್ಯೂ ಮಟ್ಟದೊಂದಿಗೆ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಈ ಆಟದ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಿ, ಆಸಕ್ತಿ ಮೂಡುವಂತೆ ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.
ಕೆಂಭಾವಿ: ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಅನಧಿಕೃತವಾಗಿ ಉಸುಕು ದಾಸ್ತಾನು ಮಾಡಿ ಒಂದು ಲೋಡ್ ಉಸುಕಿಗೆ 25 ರಿಂದ 35 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿರುವ ದಲ್ಲಾಳಿಗಳ ಅವ್ಯವಹಾರ ಹಗಲಲ್ಲಿಯೇ ರಾಜಾರೋಷವಾಗಿ ನಡೆಯುತ್ತಿದ್ದು, ಲೋಕೋಪಯೋಗಿ ಬಂದರು ಮತ್ತು ಗಣಿಗಾರಿಕೆ ಇಲಾಖೆ, ತಾಲ್ಲೂಕಾಡಳಿತ, ಪೋಲೀಸ್ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆಂದು ದಲಿತ ಮುಖಂಡರಾದ ಮರೆಪ್ಪ ಎಂ ಕಟ್ಟಿಮನಿ ಹಾಗೂ ಬಸವರಾಜ ಮಾಳಳ್ಳಿಕರ್ ಶಂಕೆ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸುರಪುರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಚುನಾವಣಾ ಪೂರ್ವದಲ್ಲಿ ಬಂದಾಗಿದ್ದ ಮರಳು ಮಾರಾಟ ರಾಯಲ್ಟಿ ಇತ್ತೀಚೆಗೆ ಆರಂಭಗೊಂಡು ಕೆಲವು ದಲ್ಲಾಳಿಗಳು ಸರ್ಕಾರಕ್ಕೆ ಒಂದೇ ರಾಯಲ್ಟಿ ಮೊತ್ತ ಸಂದಾಯ ಮಾಡಿ ಹತ್ತು ಲಾರಿ ಉಸುಕು ತುಂಬಿಕೊಂಡು ಬರುತ್ತಿದ್ದಾರೆ. ನೂರಾರು ಲಾರಿ ಉಸುಕು ಎಪಿಎಂಸಿ ಜಾಗದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡು, ರಾಯಲ್ಟಿ ಬಂದಾದ ಮೇಲೆ ಅತ್ಯಧಿಕ ಬೆಲೆಗೆ ವಿಜಯಪುರ ಹಾಗೂ ಕಲಬುರ್ಗಿ ಜಿಲ್ಲೆಗಳಿಗೆ ಮಾರಾಟ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.ಎಗ್ಗಿಲ್ಲದೇ ನಡೆಯುತ್ತಿರುವ ಮರುಳು ಮಾಫಿಯಾ ಮಟ್ಟಹಾಕಿ, ಜನಸಾಮಾನ್ಯರು…
ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ | ವಿಧಾನಮಂಡಲ ವಿಧೇಯಕ | ಕರ್ನಾಟಕ ಸಿನಿ & ಸಾಂಸ್ಕೃತಿಕ ಕಾರ್ಯಕರ್ತರ ವಿಧೇಯಕ ಮಂಡನೆ ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿಯ ಗದ್ದಲ ನಡುವೆಯೂ ರಾಜ್ಯ ಸರ್ಕಾರ 2024ನೇ ಸಾಲಿನ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2024ನೇ ಸಾಲಿನ ವಿಧಾನಮಂಡಲ (ಅನರ್ಹತಾ ನಿವಾರಣಾ) ವಿಧೇಯಕ, ಕರ್ನಾಟಕ ಸಿನಿ & ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ ಮಂಡಿಸಿದೆ.ಅನರ್ಹತೆ ತಡೆ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕಚೇರಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಕಚೇರಿ, ಸಿಎಂ ಮತ್ತು ಉಪಸಭಾಪತಿಗಳ ಸಲಹೆಗಾರರ ಕಚೇರಿಗೆ (ನೀತಿ ಮತ್ತು ಯೋಜನೆ) ವಿನಾಯತಿ ನೀಡಲಾಗಿದೆ. ಸದ್ಯದ ವ್ಯವಸ್ಥೆಯಲ್ಲಿ ಶಾಸಕ, ಪರಿಷತ್ ಸದಸ್ಯರು, ದೆಹಲಿ ವಿಶೇಷ ಪ್ರತಿನಿಧಿ, ಕಾನೂನು ಸಲಹೆಗಾರ ಸ್ಥಾನ ಲಾಭದಾಯಕ ಹುದ್ದೆಯಡಿ ಅನರ್ಹತೆ ಭೀತಿ ಇದೆ. ಹಾಗಾಗಿ ಸಿಎಂ ಕಾನೂನು ಸಲಹೆ, ದೆಹಲಿ ವಿಶೇಷ ಪ್ರತಿನಿಧಿ ಹುದ್ದೆಯನ್ನು ಅನರ್ಹತೆ ವ್ಯಾಪ್ತಿಯಿಂದ ಹೊರಗಿಡುವ ತಿದ್ದುಪಡಿ ಮಾಡಲಾಗಿದೆ.ಸರಕು ಮತ್ತು ಸೇವೆಗಳ ತೆರಿಗೆ…
ಟಕ್ಕಳಕಿ & ಸಿದ್ಧಾಪುರ (ಕೆ) ಗ್ರಾಪಂಗೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಭೇಟಿ, ಪರಿಶೀಲನೆ ತಿಕೋಟಾ: ತಾಲೂಕಿನ ಟಕ್ಕಳಕಿ & ಸಿದ್ಧಾಪುರ (ಕೆ) ಗ್ರಾಮ ಪಂಚಾಯತಿಗೆ ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ರವರು ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.ಆರಂಭದಲ್ಲಿ ಟಕ್ಕಳಕಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತಿ ಅನುಷ್ಠಾನ ಮಾಡುವ ಮಹಾತ್ಮ ಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ ಯೋಜನೆ, ಎನ್.ಆರ್.ಎಲ್.ಎಮ್ ಸೇರಿ ಎಲ್ಲ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.ಈ ವೇಳೆ ಮಾತನಾಡಿದ ಅವರು ಗ್ರಾಮ ಪಂಚಾಯತಿ ವತಿಯಿಂದ ಅನುಷ್ಠಾನ ಮಾಡುವ ಎಲ್ಲ ಯೋಜನೆಗಳನ್ನು ಪರಿಣಾಣಮಕಾರಿಯಾಗಿ ಅನುಷ್ಠಾನ ಮಾಡುವದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಅವಕಾಶ ನೀಡಲು ತಿಳಿಸಿದರು. ಗ್ರಾಮದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡುವಂತೆ ಜೊತೆಗೆ ಯಾವದೇ ಸ್ಥಳದಲ್ಲಿ ತ್ಯಾಜ್ಯ ನೀರು ಸಂಗ್ರಹವಾಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲು ತಿಳಿಸಿದರು. ನಂತರ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟವನ್ನು ಪರಿಶೀಲನೆ…
