ಚಡಚಣ: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಇದರ 117ನೇ ಸಂಸ್ಥಾಪನಾ ದಿನವನ್ನು ಜು.20ರಂದು ನಿವರಗಿ ಶಾಖೆಯಲ್ಲಿ ಆಚರಿಸಲಾಯಿತು.
ಬ್ಯಾಂಕಿನ ವ್ಯವಸ್ಥಾಪಕ ಸಂತೋಷ ಹಿಟ್ನಳ್ಳಿ ಅವರು ಬರೋಡಾದ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ ಅವರ ಭಾವ ಚಿತ್ರದ ಮುಂದೆ ದೀಪ ಪ್ರಜ್ವಲಿಸಿ ಪುಷ್ಪಾರ್ಚಣೆ ಮಾಡುವ ಪ್ರಾಸ್ತಾವಿಕವಾಗಿ ಬ್ಯಾಂಕ್ ಬೆಳೆದು ಬಂದ ಮತ್ತು ಸೇವೆಗಳ ಕುರಿತ ಮಾಹಿತಿಯನ್ನು ಗ್ರಾಹಕರ ಮುಂದಿಟ್ಟರು.
ಬ್ಯಾಂಕಿನ 117 ವರ್ಷದ ಧ್ಯೇಯ ‘ವಿಶ್ವಾಸಾರ್ಹ ಇಂದು, ನಾಳೆಯನ್ನು ಪರಿವರ್ತಿಸುವುದು’ ಇದೇ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಿವರಗಿ ಬ್ಯಾಂಕ್ ಆಫ್ ಬರೋಡಾ ಶಾಖೆಯು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಇಂಗಳೆ ಸರ್ಕಾರಿ ವಸತಿ ಶಾಲೆಗೆ ವಾಟರ್ ಫಿಲ್ಟರ್ ಕೊಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಎಲ್.ತುಪ್ಪದ, ಅತಿಥಿಗಳಾಗಿ ಎಲ್.ಡಿ.ಹತ್ತಳ್ಳಿ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದನಗೌಡ ಪಾಟೀಲ, ಬಿ.ಸಿ.ಪ್ರತಿನಿಧಿ ಆಗಮಿಸಿದ್ದ ಬಿಜ್ಜರಗಿ, ಬ್ಯಾಂಕಿನ ಅಧಿಕಾರಿಗಳಾದ ವಿಜಯಕುಮಾರ, ಜಗನಾಥ ಮಂಗಳೂರ, ಪಟ್ನಾದ, ನಿಂಗಪ್ಪಾ ಇಂಗಳೆ , ಶ್ರೀನಾಥ ಇಂಗಳೆ, ನಿವರಗಿಯ ಸಿಆರ್ ಪಿ ಪ್ರಕಾಶ ತಳವಾರ, ಇಂಗಳೆ ಸರ್ಕಾರಿ ವಸತಿ ಶಾಲೆಯ ಮುಖ್ಯ ಗುರು ಕೆ.ಜಿ. ಸಾವಳೆ, ಬಿ.ಎಮ್. ಬರಗುಡಿ ಬ್ಯಾಂಕಿನ ಗ್ರಾಹಕರು ಮತ್ತು ನಿವರಗಿ ಗ್ರಾಮಸ್ಥರು ಇದ್ದರು.
Related Posts
Add A Comment