Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ವಿವಿಧ ಸ್ಥಾನಗಳಿಗೆ ಹಿರಿಯ ಪತ್ರಕರ್ತರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಕೆಳಕಂಡ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಹಿರಿಯ ಪತ್ರಕರ್ತ ಶರಣಬಸಪ್ಪ ಮಸಳಿಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಹಿರಿಯ ಪತ್ರಕರ್ತರಾದ ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ ಮತ್ತು ದೇವೇಂದ್ರ ಹೆಳವರಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಿರಿಯ ಪತ್ರಕರ್ತರಾದ ಮಹೇಶ ವಿ. ಶಟಗಾರ, ಆನಂದ ಔದಿ, ಮಲ್ಲಿಕಾರ್ಜುನ ಅಲ್ಲಾಪೂರ, ಖಾಜಾಮೈನುದ್ದೀನ ಪಟೇಲ, ಸಂಜಯ ಕುಲಕರ್ಣಿ ಹಾಗೂ ಪರಶುರಾಮ ಪವಾರಸಲಹಾ ಸಮಿತಿ ಸದಸ್ಯರಾಗಿ ಹಿರಿಯ ಪತ್ರಕರ್ತರಾದ ಗೋಪಾಲ ನಾಯಕ, ರಫೀ ಭಂಡಾರಿ, ರುದ್ರಪ್ಪ ಆಸಂಗಿ, ವಾಸುದೇವ ಹೆರಕಲ್, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಕೆ.ಎನ್.ರಮೇಶ, ಜಿ.ಎಸ್.ಕಮತರ, ಸೀತಾರಾಮ ಕುಲಕರ್ಣಿ, ರಾಜು ಕೊಂಡಗೂಳಿ, ಟಿ.ಕೆ.ಮಲಗೊಂಡ, ಫಿರೋಜ ರೋಜಿನದಾರ, ಮಂಜುನಾಥ ಕೋಣಸೂರ, ಅಶೋಕ (ರಾಜು) ಕುಲಕರ್ಣಿ, ಬಸವರಾಜ ಸಂಪಳ್ಳಿ, ಬಾಬು ತಡಲಗಿ…
ಜೂ.30 ರಿಂದ ಜುಲೈ 30 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಉದಯರಶ್ಮಿ ದಿನಪತ್ರಿಕೆ ಅಥಣಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಜೂನ್ 30 ರಿಂದ ಆರಂಭವಾಗಿದ್ದು, ಜುಲೈ 29 ರವರೆಗೆ ಅಂದರೆ ಒಂದು ತಿಂಗಳ ಕಾಲ ಪ್ರಗತಿಯಲ್ಲಿರುತ್ತದೆ, ತಾಲೂಕಿನ ಮತದಾರರು ನಿಮ್ಮ ಮನೆಗೆ ಬರುವ ಮತಗಟ್ಟೆಯ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ದೋಷರಹಿತ ಮತಪಟ್ಟಿ ಶುದ್ಧತೆಗೆ ಸಹಕರಿಸಬೇಕು ಎಂದು ಅಥಣಿ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಿ ಅಧಿಕಾರಿ ಹಾಗೂ ತಹಸಿಲ್ದಾರ್ ಸಿದರಾಯ ಬೋಸಗಿ ಹೇಳಿದರು.ಅವರು ಮಂಗಳವಾರ ಇಲ್ಲಿನ ಮಿನಿ ವಿಧಾನಸೌಧ, ತಹಸೀಲ್ದಾರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಒಂದು ತಿಂಗಳ ಕಾಲ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಜರುಗುತ್ತಿದ್ದು, ಜೂನ್ 30 ರಿಂದ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ, ಹೊಸ ಹೆಸರು…
ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ರೂ.3.25 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪ್ರೌಢಶಾಲೆ ಕಟ್ಟಡ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ (KIAF) ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಅವರ ಸಿ.ಎಸ್.ಆರ್ ಅನುದಾನದಡಿ ನಿರ್ಮಿಸಲಾದ ಸುಸಜ್ಜಿತ ನೂತನ ಸರಕಾರಿ ಪ್ರೌಢ ಶಾಲಾ ಕಟ್ಟಡದ ಉದ್ಘಾಟನೆ ದಿ.3 ಶುಕ್ರವಾರರಂದು ಬೆ.11ಗಂ. ನಡೆಯಲಿದೆ.ನೂತನ ಶಾಲಾ ಕಟ್ಟಡವನ್ನು ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.ಸಮಾರಂಭದ ಅತಿಥಿಗಳಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಹರಿ ಮರಾರ, ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ ಆನಂದರಾವ್, ಅನೀಲಕುಮಾರ ಪಾಟೀಲ ಹಾಗೂ ತಂಡದವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ಈ ನೂತನ ಕಟ್ಟಡ ಒಟ್ಟು 3.25 ಕೋಟಿ ವೆಚ್ಚದಲ್ಲಿ 7,000 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮತ್ತು 800 ಚದರ…
ಕೊಲ್ಹಾರ – ಬೀಳಗಿ ನಡುವಿನ ಸೇತುವೆ ಮೇಲೆ ನಡೆದ ಅಪಘಾತ | ಚಾಲಕ ನಾಪತ್ತೆ, ಸಾವಿನ ಶಂಕೆ! | ಚಾಲಕ ಸಹಾಯಕನ ರಕ್ಷಣೆ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ವಿಜಯಪುರ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟಿಪ್ಪರ್ ಒಂದು ಕೊಲ್ಹಾರ ಸೇತುವೆಯಿಂದ ಕೃಷ್ಣಾ ನದಿಗೆ ಉರುಳಿ ಅಪಘಾತ ಸಂಭವಿಸಿದ ಘಟನೆ ನಡೆದಿದೆ.ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್‌ನಿಂದ ಕೊಲ್ಹಾರದತ್ತ ಬರುತ್ತಿದ್ದ ಟಿಪ್ಪರ್, ಕಾರನ್ನು ಓವರ್‌ಟೇಕ್ ಮಾಡುವ ವೇಳೆ ಕಾರಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯ ಮೇಲಿಂದ ನದಿಗೆ ಬಿದ್ದಿದೆ ಎಂದು ತಿಳಿದುಬಂದಿದೆ.ಟಿಪ್ಪರ್ ಚಾಲಕ ಬಾಗಲಕೋಟೆ ಜಿಲ್ಲೆ ಬೆಣ್ಣೂರ ಗ್ರಾಮದ ಸಂತೋಷ ಕೋಟಿ ವಾಹನದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಚಾಲಕ ಸಾವನ್ನಪ್ಪಿದ ಶಂಕೆ ಬಲವಾಗಿದೆ.ರಾತ್ರಿಯಾದ ಹಿನ್ನೆಲೆಯಲ್ಲಿ ಚಾಲಕನ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಗುರುವಾರ ಕ್ರೇನ್ ಯಂತ್ರದ ಸಹಾಯದಿಂದ ಟಿಪ್ಪರ್ ಅನ್ನು ಹೊರತೆಗೆದು ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇನ್ನೊಂದೆಡೆ, ಟಿಪ್ಪರ್‌ನಲ್ಲಿದ್ದ ಬೀದರ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪತ್ನಿಯನ್ನು ಕೊಲೆಗೈದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ವಿಜಯಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ಪ್ರಕರಣದ ವಿವರದಂತೆ, ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಶಕ್ತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಫೀಕ ತಂದೆ ಅಸ್ತಗೀರಸಾಬ ಬಳಗಾನೂರ ತನ್ನ ಪತ್ನಿ ಪರ್ವಿನ್ ಅವರ ಶೀಲದ ಬಗ್ಗೆ ಅನುಮಾನ ಪಟ್ಟು ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಈ ಕುರಿತು ಹಿರಿಯರು ಪಂಚಾಯಿತಿ ನಡೆಸಿ ಬುದ್ಧಿವಾದ ಹೇಳಿದ್ದರೂ, ಆತ ತನ್ನ ಪತ್ನಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ.2016ರ ಅಕ್ಟೋಬರ್ 17ರ ರಾತ್ರಿ 8 ಗಂಟೆಯಿಂದ ಅಕ್ಟೋಬರ್ 20ರ ಮಧ್ಯಾಹ್ನ 3 ಗಂಟೆಯ ನಡುವಿನ ಅವಧಿಯಲ್ಲಿ, ರಫೀಕ ತನ್ನ ಪತ್ನಿ ಪರ್ವಿನ್ ಅವರ ಕುತ್ತಿಗೆ, ಎದೆ, ಬೆನ್ನು ಹಾಗೂ ಭುಜದ ಭಾಗಗಳಿಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮನೆಯ ಬಾಗಿಲಿಗೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಉಪನ್ಯಾಸಕರು ಪ್ರೌಢಶಾಲೆಯ ೯ಮತ್ತು೧೦ನೇ ತರಗತಿ ಮಕ್ಕಳಿಗೆ ಬೋಧಿಸುವುದು ಕಡ್ಡಾಯ ಎಂಬ ಹೊರಡಿಸಿದ ಆದೇಶದ ಹಿನ್ನಲೆಯಲ್ಲಿ ಅದನ್ನು ವಿರೋಧಿಸಿ ಸಿಂದಗಿ ತಾಲೂಕಾ ಉಪನ್ಯಾಸಕರ ಸಂಘದಿಂದ ಪಟ್ಟಣದಲ್ಲಿ ಸಿಂದಗಿ ಮತ್ತು ಆಲಮೇಲ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಆ ಆದೇಶವನ್ನು ಕೈಬಿಡಬೇಕು ಎಂಬ ಒತ್ತಾಯಿಸಿ ತಹಶೀಲ್ದಾರ ಕರೆಪ್ಪ ಬೆಳ್ಳಿ ಅವರಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ತಾಲೂಕಾಧ್ಯಕ್ಷ ಸಿದ್ದಲಿಂಗ ಕಿಣಗಿ ಮಾತನಾಡಿ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ೯ಮತ್ತು೧೦ನೇ ತರಗತಿಗಳಿಗೆ ಕಡ್ಡಾಯವಾಗಿ ಬೋಧನೆ ಮಾಡುವ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲು ಮುಂದಾಗಿರುವುದು ಉಪನ್ಯಾಸಕರಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನಿವಾರಿಸುವ ಉದ್ದೇಶ ಸ್ವಾಗತಾರ್ಹವಾದರೂ, ಅದರ ಪರಿಹಾರಕ್ಕಾಗಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಮೇಲೆ ಹೆಚ್ಚುವರಿ ಹೊಣೆಗಾರಿಕೆ ಹೊರಿಸುವುದು ವೈಜ್ಞಾನಿಕವೂ ಅಲ್ಲ, ನ್ಯಾಯಸಮ್ಮತವೂ ಅಲ್ಲ. ಇದರಿಂದ ಪದವಿಪೂರ್ವ ಶಿಕ್ಷಣದ ಗುಣಮಟ್ಟ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರ ಪತ್ರಿಕಾ ಭವನದಲ್ಲಿ ಜೂ.೩೦ರಂದು ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಸಿಂದಗಿಯ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಅಲ್ಲಾಪುರ ಅವರನ್ನು ನಾಮ ನಿರ್ದೇಶಿತ ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಹಿರಿಯ ಪತ್ರಕರ್ತರಾಗಿರುವ ಮಲ್ಲಿಕಾರ್ಜುನ ಅಲ್ಲಾಪುರ ಅವರು ಹಲವು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ಅನುಭವ ಮತ್ತು ಸೇವೆಯನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ. ಜಿಲ್ಲೆಯ ಪತ್ರಕರ್ತರ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಚುನಾವಣೆಗಳೇ ಪ್ರಜಾಪ್ರಭುತ್ವದ ಜೀವಾಳವಾಗಿದ್ದು ಮಕ್ಕಳು ಶಾಲಾ ಹಂತದಲ್ಲಿಯೇ ಮತದಾನದ ಮಹತ್ವದ ಕುರಿತು ಅರಿಯಬೇಕು. ಚುನಾವಣೆಯ ಪ್ರಕ್ರಿಯೆಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಸಂವಿಧಾನದ ಆಶಯವನ್ನು ಅಳವಡಿಸಿಕೊಳ್ಳಬೇಕು ಎಂದು ಮತದಾರ ಸಾಕ್ಷರತಾ ಸಂಘದ ಸಂಚಾಲಕರಾದ ಶಿಕ್ಷಕಿ ಸವಿತಾ ಬೆನಕಟ್ಟಿ ಹೇಳಿದರು.ಅವರು ಕುಂಬಾರಹಳ್ಳ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಸಂಸತ್ತ ಚುನಾವಣೆಯ ಸಂಚಾಲತ್ವವಹಿಸಿ ಮಾತನಾಡಿ, ಭಾರತ ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಇಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಮತಗಳೇ ಪ್ರಭುತ್ವವನ್ನು ನಿರ್ಧರಿಸುತ್ತವೆ. ಮುಂದಿನ ಪ್ರಜೆಗಳಾದ ಮಕ್ಕಳು ವಿದ್ಯಾರ್ಥಿದೆಸೆಯಿಂದಲೆ ಪವಿತ್ರ ಮತದಾನದ ಮಹತ್ವ ಅರಿಯುವಂತಾಗಲು ಶಾಲಾ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ಸಾರ್ವತ್ರಿಕ ಚುನಾವಣೆಗಳು ನಡೆಯುವ ಮಾದರಿಯಲ್ಲಿಯೇ ಮತಪೆಟ್ಟಿಗೆಗಳನ್ನು ಬಳಸಿ ಮಕ್ಕಳಿಂದ ಮತದಾನ ಮಾಡಿಸಲಾಯಿತು. ಮತದಾನದ ಪ್ರಾತ್ಯಕ್ಷಿಕೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ನಿಂಗಪ್ಪ ತೇರದಾಳ, ಸದಸ್ಯರಾದ ಪದ್ಮಾ ಹುದಲಿ, ಶೈಲಾ ಮಾಳಿ, ಅಪ್ಪಸಾಬ್ ನದಾಫ್ ಉಪಸ್ಥಿತರಿದ್ದು ಚುನಾವಣೆಗೆ ಚಾಲನೆ ನೀಡಿದರು.ಮಕ್ಕಳು ಅತ್ಯಂತ ಸಂತಸದಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣೆಯ ನಂತರ ಮತಗಳನ್ನು ಎಣಿಕೆ ಮಾಡಿ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳು, ಸವಾಲುಗಳು, ಕಷ್ಟಗಳು ಎಲ್ಲರಿಗೂ ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಆದರೆ ನಾವು ಆ ಸವಾಲುಗಳನ್ನು ಕಷ್ಟಗಳನ್ನು ಹೇಗೆ ನೋಡುತ್ತೇವೆ ಎನ್ನುವುದು ನಮ್ಮ ಜೀವನವನ್ನು ಬದಲಾಯಿಸುತ್ತದೆ. ನೇರವಾಗಿ ಹೇಳಬೇಕೆಂದರೆ ನಾವು ಸವಾಲುಗಳನ್ನು ನೋಡುವ ದೃಷ್ಟಿಕೋನ ನಮ್ಮ ಜೀವನದ ಯಶಸ್ಸನ್ನು ನಿರ್ಧರಿಸುತ್ತದೆ. ಕಷ್ಟಗಳಿಗೆ ಕುಗ್ಗುವವರು ಸಾಮಾನ್ಯರಾಗುತ್ತಾರೆ. ಕುಗ್ಗದ, ಕುಸಿಯದ ಸಾಮಾನ್ಯ ಜನರೇ ಅಸಾಮಾನ್ಯರಾಗುತ್ತಾರೆ. ಅಂದರೆ, ಅಸಾಮಾನ್ಯರು ಅದೇ ಸವಾಲುಗಳನ್ನು ನೋಡುವ ನೋಟವನ್ನು ಬದಲಿಸಿ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮಹಾನ್ ಸಾಧಕರಾಗುತ್ತಾರೆ.ದೃಷ್ಟಿಕೋನವೆಂದರೆ..?‘ಬದುಕಿನಲ್ಲಿ ನಡೆವ ಘಟನೆಗಳನ್ನು ಸನ್ನಿವೇಶಗಳನ್ನು ನೋಡುವ, ಅರ್ಥೈಸಿಕೊಳ್ಳುವ ಮತ್ತು ಅವುಗಳಿಗೆ ಪ್ರತಿಕ್ರಿಯಿಸುವ ಒಂದು ವಿಶಿಷ್ಟವಾದ ಮಾನಸಿಕ ಶೈಲಿಯೇ ದೃಷ್ಟಿಕೋನ.’ ಸರಳವಾಗಿ ಹೇಳಬೇಕೆಂದರೆ, ’ಪರಿಸ್ಥಿತಿಗಳು ಹೇಗಿವೆ ಎನ್ನುವುದಕ್ಕಿಂತ ಅವುಗಳನ್ನು ನಾವು ಹೇಗೆ ನೋಡುತ್ತೇವೆ ಎನ್ನುವುದೇ ದೃಷ್ಟಿಕೋನ.ನಿಮ್ಮ ದೃಷ್ಟಿಕೋನವನ್ನು ದಿನನಿತ್ಯದ ಬದುಕಿನಲ್ಲಿ ಇನ್ನಷ್ಟು ಉತ್ತಮಗೊಳಿಸಲು ಇಲ್ಲಿವೆ ಕೆಲವು ಪ್ರಾಯೋಗಿಕ ಮತ್ತು ಸುಲಭ ಸಲಹೆಗಳು ದೈಹಿಕ ಭಂಗಿದೇಹಕ್ಕೂ ಮನಸ್ಸಿಗೂ ನೇರ ಸಂಬಂಧವಿದೆ. ಮುಖ ಸಿಂಡರಿಸಿಕೊಂಡು…
