ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತ್ಯಾಗ, ಹುತಾತ್ಮರ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಶಾಂತಿ, ಸಹನೆ, ಸಹಕಾರದಿಂದ ಆಚರಿಸಬೇಕು ಎಂದು ಪಿಎಸೈ ಪ್ರೇಮಾ ಚೌರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಮಂಗಳವಾರ ಮೊಹರಂ ಹಬ್ಬದ ನಿಮಿತ್ಯ ಜರುಗಿದ ಶಾಂತಿಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದ ೪ ಮಸೀದೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಅಗತ್ಯವಾಗಿದೆ. ಅದಕ್ಕಾಗಿ ಸಹಕಾರ ನೀಡಲು ವಿನಂತಿಸಿ, ಇಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ. ಎಲ್ಲರೂ ಶಾಂತಿ, ಸಹನೆ ಯಿಂದ ಪರಸ್ಪರ ಹಬ್ಬಗಳ ಆಚರಣೆಗೆ ಸಹಕಾರ ನೀಡಬೇಕು ಅಹಿತಕರ ಘಟನೆಗಳು ಜರುಗದಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕು ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಮಹಿಬೂಬ್ ಹುಂಡೇಕಾರ ಹಾಗೂ ಶಂಕರಗೌಡ ಪಾಟೀಲ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಕಾಸಪ್ಪ ಜಮಾದಾರ, ಎಂ.ಎಚ್.ಪಾನಪರೋಷ್, ಮಹ್ಮದ್‌ರಫೀಕ್ ಮೋಮಿನ್, ನಿಂಗು ಯಂಭತ್ನಾಳ, ಬಲವಂತ ಹೊನ್ನಮೀಸಿ, ಮಲ್ಲು ಜಮಾದಾರ, ಶಂಕರ ಜಮಾದಾರ, ಜಾನು ಗುಡಿಮನಿ, ಭೀಮಾಶಂಕರ ಮಿಂಚನಾಳ, ರಾವುತ್ ಎಸ್.ಟಿ, ಜಿ.ಎಮ್.ಹಿರೇಮಠ, ಹನುಮಂತ ಸಣ್ಣಕ್ಕಿ, ಯಾಕೂಬ್ ಶಹಾಪೂರ, ಜೆ.ಎನ್.ವಡ್ಡೋಡಗಿ, ಪಿ.ಡಿ.ಹಂಗರಗಿ ಸಿಬ್ಬಂದಿ ಸಿದ್ದು ಗಂಗನಳ್ಳಿ, ಶ್ರೀಕಾಂತ ಶಿನ್ನೂರ ಇದ್ದರು.

