ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಹಕಾರ ಸಂಘಗಳು ನಿಯಮಾನುಸಾರ ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿರುವ ಸಹಕಾರ ಸಂಘಗಳನ್ನು ಪುನಶ್ಚೇತನ-ರದ್ಧತಿ ಮಾಡಲು ಕ್ರಮವಹಿಸಲಾಗುತ್ತಿದ್ದು, ಈ ಕುರಿತು ಸಹಕಾರ ಸಂಘಗಳ ಉಪ ನಿಬಂಧಕರು ಆಕ್ಷೇಪಣೆಗಳನ್ನು ಆಹ್ವಾನಿಸದ್ದಾರೆ.
ಜಿಲ್ಲೆಯ ಭಾರತ ಮುದ್ರಣಾಲಯ ಸಹಕಾರ ಸಂಘ ನಿ., ವಿಜಯಪುರ, ಜಾಪೂರ ಬ್ರಿಕ್ಸ್ ಮತ್ತು ಟಾಯಿಲ್ಸ್ ಕೂಲಿಕಾರರ ಸಹಕಾರ ಸಂಘ ನಿ., ವಿಜಯಪುರ, ಶ್ರೀ ಸಿದ್ದೇಶ್ವರ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘ ನಿ.,ವಿಜಯಪುರ ಹಾಗೂ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘ ನಿ., ಗ್ಯಾಂಗಬಾವಡಿ, ವಿಜಯಪುರ ಸಂಘಗಳು ದೀರ್ಘಕಾಲದಿಂದ ಸ್ಥಗಿತ ಅಥವಾ ಸಮಾಪನೆಗೊಂಡಿದ್ದು, ಕಾರ್ಯ ನಿರ್ವಹಿಸದೇ ಇರುವುದಾಗಿ ತಿಳಿದು ಬಂದಿದೆ.
ಅಂತಿಮವಾಗಿ ಈ ಪ್ರಕಟಣೆಗಳ ಮೂಲಕ ಆಕ್ಷೇಪಣೆ, ಹೇಳಿಕೆಗಳನ್ನು ಆಹ್ವಾನಿಸಲಾಗಿದ್ದು, ಏಳು ದಿನಗಳೊಳಗಾಗಿ ಖುದ್ದಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಹಾಜರಾಗಿ,ತಮ್ಮ ಹೇಳಿಕೆ ದಾಖಲೆ ಸಲ್ಲಿಸುವಂತೆ ವಿಜಯಪುರದ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
