Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಲಮಟ್ಟಿ: ಶಿಲೆಯಂತಿದ್ದ ವಿದ್ಯಾರ್ಥಿಗಳನ್ನು ಮೂರ್ತಿಯನ್ನಾಗಿ ಮಾಡಲು ನೀವು ಕಲಿತ ಶಾಲೆ ಹಾಗೂ ಗುರುಗಳು ಕಾರಣ, ಕಲಿತ ಶಾಲೆಯನ್ನು ಸದಾ ಸ್ಮರಿಸಿ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಂ.ವಿ. ಪಾಟೀಲ ಹೇಳಿದರು.ಸಮೀಪದ ವಂದಾಲ ಗ್ರಾಮದ ಶ್ರೀ ಶಾಕಂಬರಿ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಭಾನುವಾರ ಆ ಶಾಲೆಯ ೨೦೦೦ ನೇ ವರ್ಷ ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸಾಹಿತಿ, ಶಿಕ್ಷಕ ಅಶೋಕ ಹಂಚಲಿ ಮಾತನಾಡಿ, ೨೫ ವರ್ಷಗಳ ನಂತರೂ ಎಲ್ಲ ಶಿಷ್ಯ ಬಳಗದ ಹೆಸರು ಅವರ ವಿಶೇಷತೆಗಳನ್ನು ಹೇಳಿ ಬೆರಗುಗೊಳಿಸಿದ ಸಾಹಿತಿ ಶಿಕ್ಷಕ ಅಶೋಕ ಹಂಚಲಿ, ಆಧುನಿಕ ಕಾಲದಲ್ಲಿಯೂ ಗುರು- ಶಿಷ್ಯರ ಸಂಬಂಧಗಳನ್ನು ವಿವಿಧ ಉದಾಹರಣೆಗಳ ಮೂಲಕ, ಹರಿಶ್ಚಂದ್ರ ಕಾವ್ಯದ ಚಂದ್ರಮತಿಯ ಪ್ರಲಾಪದ ಭಾಗವನ್ನು ಹಳಗನ್ನಡದ ಕಾವ್ಯ ಭಾಗದಂತೆಯೇ ಹೇಳಿ ಕೇಳುಗರನ್ನು ರೋಮಾಂಚನಗೊಳ್ಳುವಂತೆ ಮಾಡಿದರು.ನಿವೃತ್ತ ಶಿಕ್ಷಕ ಎಂ.ಬಿ.ಗುಡದಿನ್ನಿ, ಎಸ್. ಎಸ್ ಭಾವಿಕಟ್ಟಿ, ಸಿ.ವಿ. ಖೇಡದ, ಬಿ.ಎನ್. ವಂದಾಲ, ಡಿ.ಜಿ. ಪಿಂಜಾರ, ಜಿ.ಎಸ್. ಪತ್ತಾರ, ಎಚ್.ಸಿ.ಭಜಂತ್ರಿ,…
ವಿಜಯಪುರ: ವಿದ್ಯಾರ್ಥಿನಿಯರು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ, ಸಾಧನೆಗೈದು ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತರುವಂತೆ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಕರೆ ನೀಡಿದರು.ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಸೋಮವಾರ ಜರುಗಿದ ೨೦೨೪-೨೫ನೇ ಸಾಲಿನ ಕಾಲೇಜ್ ಸಂಸತ್ತು, ಕ್ರೀಡೆ, ಎನ್.ಎಸ್.ಎಸ್., ಭಾರತೀಯ ಸೇವಾ ದಳ, ರೋರ‍್ಸ್ ಮತ್ತು ರೇಂರ‍್ಸ್, ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿನಿಯರು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ವಿಧ್ಯಾಬ್ಯಾಸದೊಂದಿಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ವಿಶ್ರಾಂತ ಸಹ ಶಿಕ್ಷಕರಾದ ತೋಟಯ್ಯ ಶಿರೋಳಮಠ ಹಾಗೂ ರಾಷ್ಟ್ರ ಮಟ್ಟದ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಸಂಗೀತ ಶಿಕ್ಷಕ ಹಿರಿಯ ಕನ್ನಡಭಾಷಾ ಉಪನ್ಯಾಸಕ ಸಿದ್ದು ಸಾವಳಸಂಗ ಅವರಿಗೆ ಸನ್ಮಾನಿಸಲಾಯಿತು. ೨೦೨೩-೨೪ನೇ ಸಾಲಿನಲ್ಲಿ ದ್ವೀತಿಯ ಪಿಯುಸ ವಾರ್ಷಿಕ ಪರೀಕ್ಷೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಕಾಲೇಜಿಗೆ ಪ್ರಥಮ…
ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಪಿಯುಸಿ ಮತ್ತು ಪಿಯು ಸಮಾನಾಂತರ ಕೋರ್ಸ್ಗಳ ಹೊಸದಾಗಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ : ೨೩-೦೭-೨೦೨೪ರವರೆಗೆ ವಿಸ್ತರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಅಂತರ್‌ರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕ ವತಿಯಿಂದ ಜರ್ಮನಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮೆ:ಟ್ಯಾಲೆಂಟ್ ಆರೇಂಜ್ ಸಂಸ್ಥೆಯು ಭಾರತ ದೇಶದಿಂದ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿಎಸ್‌ಸಿ/ಜಿಎನ್‌ಎಂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗ ಕಲ್ಪಿಸಲು ಮುಂದಾಗಿದ್ದು, ಜರ್ಮನಿಯಲ್ಲಿ ಕೆಲಸ ನಿರ್ವಹಿಸಲು ಆಸಕ್ತ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಜರ್ಮನಿಯಲ್ಲಿ ಕೆಲಸ ನಿರ್ವಹಿಸಲು ಉತ್ಸುಕರಾದ ಅಭ್ಯರ್ಥಿಗಳನ್ನು ಸಂಸ್ಥೆ ವತಿಯಿಂದ ಆಯ್ಕೆ ಮಾಡಿ ಅವರಿಗೆ ಕೇರಳ ರಾಜ್ಯದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ ೮ ತಿಂಗಳ ಕಾಲ ಜರ್ಮನ್ ಭಾಷೆ ಬಗ್ಗೆ ತರಬೇತಿ ನೀಡುತ್ತಿದ್ದು, ತರಬೇತಿಯೊಂದಿಗೆ ಊಟ ಮತ್ತು ಉಚಿತ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ.ನರ್ಸಿಂಗ್ ಪೂರ್ಣಗೊಳಿಸಿದ ಉದ್ಯೋಗಾಕಾಂಕ್ಷಿಗಳು ಕಾರ್ಮಿಕ ಅಧಿಕಾರಿಗಳ ಕಚೇರಿ, ಅಲ್ಲಾಪುರ ಓಣಿ, ಸಿಂದಗಿ ನಾಕಾ ಕಾರ್ಮಿಕ ಭವನ ವಿಜಯಪುರ ಕಚೇರಿಯಲ್ಲಿ ನೊಂದಾಯಿಸಿಕೊಳ್ಳಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೊ: ೯೧೬೪೨೬೫೫೪೨ ಸಂಖ್ಯೆಗೆ ಸಂಪರ್ಕಿಸುವಂತೆ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಸಿಂದಗಿಯ ವಿವಿಧ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೋಮವಾರ ಭೇಟಿ ನೀಡಿ ತಾಲೂಕಾ ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿದರು.ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಆಧಾರ ನೊಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ, ದಾಖಲೆಗಳನ್ನು ಆಧಾರದೊಂದಿಗೆ ಜೋಡಣೆಯ ಪ್ರಗತಿ ಮಾಹಿತಿ, ಜಾತಿ-ಆದಾಯ ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.ಸಿಂದಗಿ ಉಪನೊಂದಣಾಧಿಕಾರಿಗಳ ಕಚೇರಿ ಹಾಗೂ ಪುರಸಭೆ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸುಧಾರಣೆಗೆ ಸಲಹೆ-ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಅಫಜಲಪುರ: ಪಟ್ಟಣದ ಸ್ವರಸಾಧನ ಸಂಗೀತ ಪಾಠಶಾಲೆಯಲ್ಲಿ ಗುರುಪೂರ್ಣಿಮೆ ಆಚರಿಸಲಾಯಿತು.ಕಾರ್ಯಕ್ರಮವನ್ನು ಮೃತ್ಯಂಜಯ ಸ್ವಾಮಿಕಳ್ಳಿಮಠ ಉದ್ಘಾಟಿಸಿ ಮಾತನಾಡುತ್ತಾ ಸಂಗೀತಕ್ಕೆ ಎಲ್ಲರನ್ನು ಸೇಳೆಯುವ ಶಕ್ತಿ ಇದೆ. ಅದಕ್ಕೆ ದೇಶ, ಭಾಷೆಯ ಗಡಿ ಇಲ್ಲ. ಪಂಡಿತ ಪುಟ್ಟರಾಜ್ ಕವಿ ಗವಾಯಿಗಳು ದೇಶಾದ್ಯಂತ ಲಕ್ಷಾಂತರ ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆದು ಬದುಕು ರೂಪಿಸಿದ್ದಾರೆ. ಅವರ ನೆನಪಿನಲ್ಲಿ ಗುರುಪೂರ್ಣಿಮೆಯಂದು ಸ್ಮರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ಬಸವ ಅನುಯಾಯಿ ಅಮೃತರಾವ್ ಪಾಟೀಲ ಮಾತನಾಡುತ್ತಾ ಸಂಗೀತ ಎನ್ನುವುದು ನಮ್ಮ ಮನಸ್ಸಿನ ಮೇಲಾಗುವ ದಾಳಿ ತಡೆದು ಮುದ ನೀಡುವ ಮಾದಕತೆಯಾಗಿದೆ. ಸಂಗೀತ ಬರೀ ಕಲೆಯಲ್ಲ ಇದೊಂದು ಬದುಕು ಕಟ್ಟಿಕೊಡುವ ಸಾಧನವಾಗಿದೆ. ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಕಲಿತ ಅನೇಕ ಅಂಧ, ಅನಾಥ ಮಕ್ಕಳು ಇಂದು ಸಂಗೀತ ಸೇವೆ ಸಲ್ಲಿಸುವ ಮೂಲಕ ಜೀವನ ನಡೆಸುತ್ತಿದ್ದಾರೆ ಇದಕ್ಕೆಲ್ಲ ಪಂಡಿತ ಪುಟ್ಟರಾಜ ಗವಾಯಿಗಳ ಕೊಡುಗೆಯಾಗಿದೆ ಇಂದು ಅವರನ್ನು ಸ್ಮರಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು. ಸಂಗೀತ ಪಾಠ ಶಾಲೆಯ ಶಿಕ್ಷಕ ಸಂತೋಷ ಕಾಮಶೇಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರ ಸಾಧನ ಪಾಠ ಶಾಲೆಯ…
ಅಫಜಲಪುರ: ತಾಲೂಕಿನ ಆನೂರ ಗ್ರಾಮ ಪಂಚಾಯಿತಿಯಲ್ಲಿ ಹಡಪದ ಅಪ್ಪಣ್ಣ ಶರಣರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಗ್ರಾ.ಪಂ ಅಧ್ಯಕ್ಷ ನಿಂಗಣ್ಣ ಕಲಶೆಟ್ಟಿ ಪೂಜೆ ಸಲ್ಲಿಸಿದರು.ಅವರು ನಂತರ ಮಾತನಾಡುತ್ತಾ ಹಡಪದ ಅಪ್ಪಣ್ಣ ಶರಣರು ಕಾಯಕನಿಷ್ಠರಾಗಿದ್ದು ಸಮಾಜ ಸುಧಾರಣೆಗಾಗಿ ಸಾಕಷ್ಟು ಶ್ರಮಿಸಿದ್ದಾರ. ಅವರು ಕೇವಲ ಒಂದು ಜಾತಿಗೆ ಸೀಮಿತರಾದ ಶರಣರಲ್ಲ ಹೀಗಾಗಿ ಅವರ ವಿಚಾರಗಳನ್ನು ಎಲ್ಲರೂಪಾಲಿಸುವಂತಾಗಬೇಕು ಎಂದರು.ಈ ಸಂದರ್ಭದಲ್ಲಿ ಪ್ರಮುಖರಾದ ಮನೋಹರ ಹಿಪ್ಪರಗಿ, ಮಲ್ಲಣಗೌಡ ಪಾಟೀಲ, ಬಸವರಾಜ ಖ್ಯಾದಾಗೋಳ, ಹಣಮಂತ ನಾವಿ, ಬಸವರಾಜ ನಾವಿ, ಶ್ರೀಶೈಲ ದೇವರಮನಿ, ರಾಜು ಉಮ್ಮನಗೋಳ, ಬಸವರಾಜ ಉಮ್ಮನಗೋಳ, ಚಂದ್ರಕಾಂತ ಭೂಸನೂರ, ದತ್ತು ಭಾಸಗಿ ಸೇರಿದಂತೆ ಅನೇಕರು ಇದ್ದರು.
ಅಫಜಲಪುರ: ಗುರು ಪೂರ್ಣಿಮೆ ಪ್ರಯುಕ್ತ ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಗುರುಸ್ತೋತ್ರ ಪಾರಾಯಣ ಮಆಡಲಾಯಿತು.ಪಟ್ಟಣದ ಶಂಕರ ಮಠದ ಕಾರ್ಯದರ್ಶಿ ಪಾಂಡುರಂಗ ಮೋಹರೀರ ಮಾತನಾಡುತ್ತಾ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದೊಡ್ಡವರು ಹೇಳಿದ್ದು ನಿಜಕ್ಕೂ ಸತ್ಯವಾದ ಮಾತಾಗಿದೆ. ನಾವು ಎಷ್ಟು ದೊಡ್ಡ ಸ್ಥಾನಕ್ಕೆ ಏರಿದರೂ ಕೂಡ ಅದಕ್ಕೆ ಕಾರಣ ಗುರುಗಳಾಗಿರುತ್ತಾರೆ ಎಂದ ಅವರು ಗುರುಸ್ಮರಣೆ ಮಾಡುವುದು ನಿಜಕ್ಕೂ ಪುಣ್ಯದ ಕೆಲಸ ಎಂದರು.ನಂತರ ಅಷ್ಟೋತ್ತರ ಪಾರಾಯಣ ಹಾಗೂ ಗುರುಸಪಾರ್ಯ ಸ್ತೋತ್ರಗಳ ಪಾರಾಯಣ ನಡೆಯಿತು.ಈ ಸಂದರ್ಭದಲ್ಲಿ ಮಠದ ಅರ್ಚಕರಾದ ದತ್ತಂಭಟ್ ಪುರೋಹಿತ, ಶಿವಭಟ್ ಪುರೋಹಿತ, ಶಾರದಾ ಭಜನಾ ಮಂಡಳಿ ಅಧ್ಯಕ್ಷೆ ನಂದಾ ಕುಲಕರ್ಣಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಆನಂದ ಆಲಮೇಲಕರ, ಹಣಮಂತ್ರಾವ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿ, ಸುಧೀರ ಆಲಮೇಲಕರ, ಮುರಾರಿ ಕುಲಕರ್ಣಿ, ಡಾ. ರಾಜೇಶ ಆಲಮೇಲಕರ, ರಾಘವೇಂದ್ರ ಚಿನವಾರ, ಅಚ್ಯುತ್ ಕುಲಕರ್ಣಿ, ಕಲ್ಯಾಣಿ ಚಿನವಾರ, ಪವನ ಅಲಬಾಳ ಸೇರಿದಂತೆ ಅನೇಕರು ಇದ್ದರು.
ಅಫಜಲಪುರ: ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಗುರುಪೂರ್ಣಿಮೆ ಸಂಭ್ರಮದಲ್ಲಿ ದತ್ತಾತ್ರೇಯರ ಭಕ್ತರು ದರ್ಶನ ಪಡೆದು ಮಿಂದೆದ್ದರು.ಪ್ರತಿವರ್ಷ ನಡೆಯುವ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ನಾನಾ ಭಾಗಗಳಿಂದ ಬರುವ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡರು. ದೇವಸ್ಥಾನದಲ್ಲಿ ನಸುಕಿನ ೩ ಗಂಟೆಗೆ ಕಾಕಡಾರತಿ, ಲಗುನ್ಯಾಸಪೂರ್ವಕ ರುದ್ರಾಭಿಷೇಕ, ಗುರುಪಾದುಕೆಗಳಿಗೆ ಕೇಸರ ಲೇಪನ ಸೇವೆ ನಡೆಯಿತು. ಬಳಿಕ ವ್ಯಾಸಪೂಜೆಯನ್ನು ದೇವಸ್ಥಾನದ ಪ್ರಾಂಗಣದಲ್ಲಿ ವಿಪ್ರಬಾಂಧವರು ನಡೆಸಿಕೊಟ್ಟರು. ನಂತರ ಬಂದ ಭಕ್ತರಿಗೆ ಅನ್ನದಾನ ನಡೆಯಿತು. ಸಾಯಂಕಾಲ ಪಲ್ಲಕ್ಕಿ ಸೇವೆ ನಡೆಯಿತು.ಈ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಮಹಾರಾಷ್ಟ್ರ, ಸೀಮಾಂಧ್ರ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಯ ಭಕ್ತರು ಆಗಮಿಸಿ ದತ್ತಾತ್ರೇಯ ಮಹಾರಾಜರ ದರ್ಶನಾಶಿರ್ವಾದ ಪಡೆದು ಪುನೀತರಾದರು. ಅಲ್ಲದೆ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ದೇವಸ್ಥಾನದ ವರೆಗೆ ಸರತಿ ಸಾಲಿನಲ್ಲಿ ನಿಂತು ದತ್ತ ಮಹಾರಾಜರ ದರ್ಶನ ಪಡೆದುಕೊಳ್ಳುವಂತಾಯಿತು.ಇನ್ನು ಗುರುಪೂರ್ಣಿಮೆ ಪ್ರಯುಕ್ತ ದೂರದೂರದಿಂದ ಬಂದಂತ ಸಾವಿರಾರು ಭಕ್ತರು ತಮ್ಮ ವಾಹನಗಳ…
ಚಡಚಣ: ರೇವತಗಾಂವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ರವಿವಾರದಂದು ಕಡ್ಲಿಗರ ಹುಣ್ಣಿಮೆಯ ನಿಮಿತ್ತ ದಹಿ ಹಂಡೆ(ಮೊಸರು ಗಡಿಗೆ) ಒಡೆಯುವ ಕಾರ್ಯ ಸಂಭ್ರಮದಿಂದ ನಡೆಯಿತು.ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದಹಿ ಹಂಡೆ(ಮೊಸರು ಗಡಿಗೆ)ಯನ್ನು ಹೊತ್ತುಕೊಂಡು ವಿವಿಧ ವಾದ್ಯ ವೈಭವಗಳೊಂದಿಗೆ ಕನ್ನಡ ಹಾಗೂ ಮರಾಠಿ ಭಜನೆಗಳನ್ನು ಹಾಡುತ್ತ, ಜೈ ಘೋಷ್ಯಗಳನ್ನು ಕೂಗುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ಆಗಮಿಸಿ ಅರ್ಧ ಗಂಟೆ ದೇವರ ನಾಮಸ್ಮರಣೆಯನ್ನು ಮಾಡುವುದರ ಮೂಲಕ ದಹಿ ಹಂಡೆ(ಮೊಸರು ಗಡಿಗೆ) ಒಡೆಯಲಾಯಿತು. ಮಕ್ಕಳು, ಯುವಕರು ಹಾಗೂ ಹಿರಿಯರು ದಹಿ ಹಂಡೆ(ಮೊಸರು ಗಡಿಗೆ)ಯ ಚೂರುಗಳನ್ನು ಆಯ್ದುಗಳಲು ಮುಗಿಬಿದ್ದಿದರು. ಕಾರಣ ಆ ಚೂರುಗಳನ್ನು ಮೊಸರು ಕಡಿಯುವ ಸ್ಥಳದ ಕೆಳಭಾಗ ಇಲ್ಲವೆ ದನದ ಕೊಟ್ಟಿಗೆಯಲ್ಲಿ ಹೂತು ಹಾಕಿದರೆ ಆ ಮನೆಯಲ್ಲಿ ಹೈನುಗಾರಿಕೆ ವೃದ್ಧಿಯಾಗುವುದೆಂಬ ನಂಬಿಕೆ.ದಹಿ ಹಂಡೆ ಹಿನ್ನಲೆ: ಗೋಕುಲದಲ್ಲಿ ಶ್ರೀಕೃಷ್ಣ ಗೋಪಿಕಾ ಸ್ತ್ರೀಯರು ಮಾಡಿದ ದಹಿ ಹಂಡೆ ಕಾರ್ಯಕ್ರಮ, ಶ್ರೀ ಕೃಷ್ಣನ ಅವತಾರಿ ಶ್ರೀ ಪಂಢರಪುರದ ಪಾಂಡುರಂಗನ ಆಷಾಢ ಏಕಾದಶಿಗೆ…
