ಚಡಚಣ: ರೇವತಗಾಂವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ರವಿವಾರದಂದು ಕಡ್ಲಿಗರ ಹುಣ್ಣಿಮೆಯ ನಿಮಿತ್ತ ದಹಿ ಹಂಡೆ(ಮೊಸರು ಗಡಿಗೆ) ಒಡೆಯುವ ಕಾರ್ಯ ಸಂಭ್ರಮದಿಂದ ನಡೆಯಿತು.
ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದಹಿ ಹಂಡೆ(ಮೊಸರು ಗಡಿಗೆ)ಯನ್ನು ಹೊತ್ತುಕೊಂಡು ವಿವಿಧ ವಾದ್ಯ ವೈಭವಗಳೊಂದಿಗೆ ಕನ್ನಡ ಹಾಗೂ ಮರಾಠಿ ಭಜನೆಗಳನ್ನು ಹಾಡುತ್ತ, ಜೈ ಘೋಷ್ಯಗಳನ್ನು ಕೂಗುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ಆಗಮಿಸಿ ಅರ್ಧ ಗಂಟೆ ದೇವರ ನಾಮಸ್ಮರಣೆಯನ್ನು ಮಾಡುವುದರ ಮೂಲಕ ದಹಿ ಹಂಡೆ(ಮೊಸರು ಗಡಿಗೆ) ಒಡೆಯಲಾಯಿತು. ಮಕ್ಕಳು, ಯುವಕರು ಹಾಗೂ ಹಿರಿಯರು ದಹಿ ಹಂಡೆ(ಮೊಸರು ಗಡಿಗೆ)ಯ ಚೂರುಗಳನ್ನು ಆಯ್ದುಗಳಲು ಮುಗಿಬಿದ್ದಿದರು. ಕಾರಣ ಆ ಚೂರುಗಳನ್ನು ಮೊಸರು ಕಡಿಯುವ ಸ್ಥಳದ ಕೆಳಭಾಗ ಇಲ್ಲವೆ ದನದ ಕೊಟ್ಟಿಗೆಯಲ್ಲಿ ಹೂತು ಹಾಕಿದರೆ ಆ ಮನೆಯಲ್ಲಿ ಹೈನುಗಾರಿಕೆ ವೃದ್ಧಿಯಾಗುವುದೆಂಬ ನಂಬಿಕೆ.
ದಹಿ ಹಂಡೆ ಹಿನ್ನಲೆ: ಗೋಕುಲದಲ್ಲಿ ಶ್ರೀಕೃಷ್ಣ ಗೋಪಿಕಾ ಸ್ತ್ರೀಯರು ಮಾಡಿದ ದಹಿ ಹಂಡೆ ಕಾರ್ಯಕ್ರಮ, ಶ್ರೀ ಕೃಷ್ಣನ ಅವತಾರಿ ಶ್ರೀ ಪಂಢರಪುರದ ಪಾಂಡುರಂಗನ ಆಷಾಢ ಏಕಾದಶಿಗೆ ಆಳಂದಿಯ ಜ್ಞಾನೇಶ್ವರ ಹಾಗೂ ಗೂದೇಹುಂದಿ ತುಕಾರಾಮ ದಿಂಢಿಗಳ ಸಂಗಮದಿಂದ ಕಾಲಕ್ರಮೇಣ ಗ್ರಾಮದ ಶ್ರೀ ಸದ್ಗುರು ಸಿಂಹಗಢ ಮಹಾರಾಜರು ಸಂತಮಂಡಳಿಯವರು ಪಂಢರಪುರದ ಆಷಾಢ ಏಕಾದಶಿಗೆ ಹೋಗಿ ಬಂದವರನ್ನು ದ್ವಾದಶಿಗೆ ಹೋಗಿ ಗ್ರಾಮದವರು ಸಂತರನ್ನು ಕರೆತಂದು ಕಡ್ಲಿಗರ ಹುಣ್ಣಿಮೆಯ ದಿವಸ ದಹಿ ಹಂಡೆ(ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮವನ್ನು ಶ್ರೀ ಸದ್ಗುರು ಸಿಂಹಗಢ ಮಹಾರಾಜರು ಆಚರಿಸುತ್ತ ಬಂದ ಸಂಪ್ರದಾಯವನ್ನು ಇಂದಿನವರೆಗೂ ಗ್ರಾಮಸ್ಥರು ಮುಂದುವರೆಸಿಕೊಂಡು ಬಂದಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

