ಅಫಜಲಪುರ: ಪಟ್ಟಣದ ಸ್ವರಸಾಧನ ಸಂಗೀತ ಪಾಠಶಾಲೆಯಲ್ಲಿ ಗುರುಪೂರ್ಣಿಮೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮೃತ್ಯಂಜಯ ಸ್ವಾಮಿಕಳ್ಳಿಮಠ ಉದ್ಘಾಟಿಸಿ ಮಾತನಾಡುತ್ತಾ ಸಂಗೀತಕ್ಕೆ ಎಲ್ಲರನ್ನು ಸೇಳೆಯುವ ಶಕ್ತಿ ಇದೆ. ಅದಕ್ಕೆ ದೇಶ, ಭಾಷೆಯ ಗಡಿ ಇಲ್ಲ. ಪಂಡಿತ ಪುಟ್ಟರಾಜ್ ಕವಿ ಗವಾಯಿಗಳು ದೇಶಾದ್ಯಂತ ಲಕ್ಷಾಂತರ ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆದು ಬದುಕು ರೂಪಿಸಿದ್ದಾರೆ. ಅವರ ನೆನಪಿನಲ್ಲಿ ಗುರುಪೂರ್ಣಿಮೆಯಂದು ಸ್ಮರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಬಸವ ಅನುಯಾಯಿ ಅಮೃತರಾವ್ ಪಾಟೀಲ ಮಾತನಾಡುತ್ತಾ ಸಂಗೀತ ಎನ್ನುವುದು ನಮ್ಮ ಮನಸ್ಸಿನ ಮೇಲಾಗುವ ದಾಳಿ ತಡೆದು ಮುದ ನೀಡುವ ಮಾದಕತೆಯಾಗಿದೆ. ಸಂಗೀತ ಬರೀ ಕಲೆಯಲ್ಲ ಇದೊಂದು ಬದುಕು ಕಟ್ಟಿಕೊಡುವ ಸಾಧನವಾಗಿದೆ. ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಕಲಿತ ಅನೇಕ ಅಂಧ, ಅನಾಥ ಮಕ್ಕಳು ಇಂದು ಸಂಗೀತ ಸೇವೆ ಸಲ್ಲಿಸುವ ಮೂಲಕ ಜೀವನ ನಡೆಸುತ್ತಿದ್ದಾರೆ ಇದಕ್ಕೆಲ್ಲ ಪಂಡಿತ ಪುಟ್ಟರಾಜ ಗವಾಯಿಗಳ ಕೊಡುಗೆಯಾಗಿದೆ ಇಂದು ಅವರನ್ನು ಸ್ಮರಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು. ಸಂಗೀತ ಪಾಠ ಶಾಲೆಯ ಶಿಕ್ಷಕ ಸಂತೋಷ ಕಾಮಶೇಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರ ಸಾಧನ ಪಾಠ ಶಾಲೆಯ ಮಕ್ಕಳಿಂದ ಸಂಗೀತ ಸೇವೆ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಚಂದು ದೇಸಾಯಿ, ನಿವೃತ್ತ ವಲಯ ಅರಣ್ಯಾಧಿಕಾರಿ ಬಸವರಾಜ ಬೆಟ್ಟಜೇವರ್ಗಿ ಮುಖಂಡರಾದ ಪಿ.ಸಿ.ತಾವರಖೇಡ ಕಲಾವಿದರಾದ ಶ್ರೀಮಂತ ಪತ್ತಾರ, ಸೌರಭ ಮನ್ಮಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

