ಅಫಜಲಪುರ: ಗುರು ಪೂರ್ಣಿಮೆ ಪ್ರಯುಕ್ತ ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಗುರುಸ್ತೋತ್ರ ಪಾರಾಯಣ ಮಆಡಲಾಯಿತು.
ಪಟ್ಟಣದ ಶಂಕರ ಮಠದ ಕಾರ್ಯದರ್ಶಿ ಪಾಂಡುರಂಗ ಮೋಹರೀರ ಮಾತನಾಡುತ್ತಾ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದೊಡ್ಡವರು ಹೇಳಿದ್ದು ನಿಜಕ್ಕೂ ಸತ್ಯವಾದ ಮಾತಾಗಿದೆ. ನಾವು ಎಷ್ಟು ದೊಡ್ಡ ಸ್ಥಾನಕ್ಕೆ ಏರಿದರೂ ಕೂಡ ಅದಕ್ಕೆ ಕಾರಣ ಗುರುಗಳಾಗಿರುತ್ತಾರೆ ಎಂದ ಅವರು ಗುರುಸ್ಮರಣೆ ಮಾಡುವುದು ನಿಜಕ್ಕೂ ಪುಣ್ಯದ ಕೆಲಸ ಎಂದರು.
ನಂತರ ಅಷ್ಟೋತ್ತರ ಪಾರಾಯಣ ಹಾಗೂ ಗುರುಸಪಾರ್ಯ ಸ್ತೋತ್ರಗಳ ಪಾರಾಯಣ ನಡೆಯಿತು.
ಈ ಸಂದರ್ಭದಲ್ಲಿ ಮಠದ ಅರ್ಚಕರಾದ ದತ್ತಂಭಟ್ ಪುರೋಹಿತ, ಶಿವಭಟ್ ಪುರೋಹಿತ, ಶಾರದಾ ಭಜನಾ ಮಂಡಳಿ ಅಧ್ಯಕ್ಷೆ ನಂದಾ ಕುಲಕರ್ಣಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಆನಂದ ಆಲಮೇಲಕರ, ಹಣಮಂತ್ರಾವ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿ, ಸುಧೀರ ಆಲಮೇಲಕರ, ಮುರಾರಿ ಕುಲಕರ್ಣಿ, ಡಾ. ರಾಜೇಶ ಆಲಮೇಲಕರ, ರಾಘವೇಂದ್ರ ಚಿನವಾರ, ಅಚ್ಯುತ್ ಕುಲಕರ್ಣಿ, ಕಲ್ಯಾಣಿ ಚಿನವಾರ, ಪವನ ಅಲಬಾಳ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

