Author: editor.udayarashmi@gmail.com

ಮುದ್ದೇಬಿಹಾಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ತಾಲೂಕಿನ ಢವಳಗಿ ಗ್ರಾಮದ ವಿಜಯವಾಣಿ ವರದಿಗಾರ ಜಿ.ಎನ್.ಬೀರಗೊಂಡ (ಮುತ್ತು) ಮತ್ತು ಡೈಲಿ ಸಾಲಾರ ವರದಿಗಾರ ಲಾಡ್ಲೆಮಶಾಕ ನದಾಫ ಆಯ್ಕೆಯಾಗಿದ್ದಾರೆ.ಜುಲೈ ೨೮ ರವಿವಾರದಂದು ವಿಜಯಪುರದ ಪೊಲೀಸ್ ಭವನದಲ್ಲಿ ನಡೆಯುತ್ತಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಮತ್ತು ಗಣ್ಯರ ಸಮ್ಮುಖದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Read More

ವಿಜಯಪುರ: ಅಹಿಂದ ಹೆಸರು ಹೇಳಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ದಲಿತರ ವಿರೋಧಿಯಾಗಿದೆ ಎಂದು ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಆರೋಪಿಸಿದರು.ಬುಧವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ಮಾಡಿದ್ದಾರೆ. ಈ ಹಗರಣದಲ್ಲಿ ಸಚಿವರ ತಲೆದಂಡ ಆಗಿದ್ದು, ಅನೇಕರನ್ನು ಬಂಧನ ಮಾಡಲಾಗಿದೆ. ಅಹಿಂದ ನಾಯಕರು ಎಂದು ಬಿಂಬಿಸಿ ದಲಿತರಿಗೆ ಕಾಂಗ್ರೆಸ್ ವಂಚಿಸುತ್ತಿದ್ದು, ಕಾಂಗ್ರೆಸ್ ದಲಿತರ ವಿರೋಧಿಯಾಗಿದೆ ಎಂದರು.ರಾಜ್ಯ ಸರ್ಕಾರ ಆಡಳಿತಕ್ಕೆ ಬಂದಮೇಲೆ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ಹಾಗೂ ದಲಿತರ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ದಲಿತ ನಾಯಕರು ಅಂತ ಹೇಳಿ ವಂಚನೆ‌ಮಾಡುತ್ತಿದ್ದಾರೆ. ವಾಲ್ಮೀಕಿ, ಮುಡಾ ಸೇರಿದಂತೆ ಅನೇಕ ಹಗರಣಗಳು ಇವರ ಮೇಲೆ ಇರುವುದರಿಂದ ಸಿಎಂ ಸಿದ್ಧರಾಮಯ್ಯ ಅವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ದಲಿತರ ಪರವಾಗಿರುವ ಏಕೈಕ ಪಕ್ಷ ಎಂದರೆ ಅದು ಬಿಜೆಪಿ. ಬಿಜೆಪಿ ಯಾವಾಗಲೂ ದಲಿತರ ಪರವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಇದೇ…

Read More

ತನಿಖಾ ತಂಡ ರಚಿಸಿ, ಮರು ಸಮೀಕ್ಷೆ ಮಾಡಿ ನಷ್ಟಗೊಂಡ ಎಲ್ಲರಿಗೂ ಪರಿಹಾರ ನೀಡುವಂತೆ ರೈತಸಂಘ ಆಗ್ರಹ ವಿಜಯಪುರ: ಫಸಲ್ ಬಿಮಾ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಸರಕಾರದ ವತಿಯಿಂದ ತನಿಖಾ ತಂಡ ರಚಿಸಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡಿ ನಷ್ಟಗೊಂಡ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಬೀಗ ಹಾಕುವುದರ ಮೂಲಕ ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಸಂಖ್ಯಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡಬೇಕೆಂದು ರೈತರು ಪಟ್ಟು ಹಿಡಿದರು.ಬೆಳಿಗ್ಗೆಯಿಂದಲೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕಡೆಗೆ ಜಮಾಯಿಸಿದ ರೈತರು ಮಧ್ಯಾಹ್ನದ ಹೊತ್ತಿಗೆ ನೂರಾರು ಜನ ಜಮಾಯಿಸಿ ಫಸಲ್ ಬಿಮಾ ಯೋಜನೆಯಲ್ಲಿ ಒಂದು ದೊಡ್ಡಮಟ್ಟದ ಅನ್ಯಾಯವಾಗಿದೆ, ರಾಜ್ಯ ಸರಕಾರವೇ ಬರಗಾಲ ಎಂದು ಘೋ಼ಷಣೆ…

Read More

ಗುರು-ಶಿಷ್ಯರ ಪವಿತ್ರ ಪರಂಪರೆಗೆ ಸಾಕ್ಷಿಯಾದ ಮಧುರ ಕ್ಷಣ | ಶಿಷ್ಯರಿಂದ ನಿವೃತ್ತ ಗುರುದ್ವಯರಿಗೆ ಸನ್ಮಾನ ಚಿಕ್ಕಪಡಸಲಗಿ: ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಅಮೋಘ ಸೇವೆ ಸಲ್ಲಿಸಿ ಈಚೆಗೆ ಸೇವಾ ನಿವೃತ್ತರಾದ ಗುರುದ್ವಯರಿಗೆ ಹಳೆ ಶಿಷ್ಯ ಬಳಗ ಹೃದಯಸ್ಪರ್ಶಿ ಸನ್ಮಾನದೊಂದಿಗೆ ಗೌರವಿಸಿ ಧನ್ಯತಾಭಾವ ಮೆರೆದರು.ಆಧುನಿಕತೆಯ ಸೊಗಡಿನಲ್ಲಿಂದು ದಿನೇದಿನೇ ಮರೆಯಾಗುತ್ತಿರುವ “ಗುರು-ಶಿಷ್ಯ” ಪವಿತ್ರ ಪರಂಪರೆ ಭಾವಕ್ಕೆ ಇಲ್ಲಿ ಹಳೆ ಶಿಷ್ಯ ಬಳಗ ಜೀವಕಳೆ ತಂದರು.ಸುಮಾರು ಮೂರು,ನಾಲ್ಕು ದಶಕಗಳ ಕಾಲ ವಿದ್ಯಾರ್ಥಿಗಳ ಸಮೂಹಕ್ಕೆ ಕಲಿಕಾ ಜ್ಞಾನ ಧಾರೆ ಎರೆದು ಈಚೆಗೆ ವಯೋಸೇವಾ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ ಹಾಗೂ ಕನ್ನಡ ಪಂಡಿತ ಆರ್.ವಿ.ಕುಲಕರ್ಣಿ ಅವರಿಗೆ 1989-90 ನೇ ಸಾಲಿನ ಹಳೆ ಬ್ಯಾಚ್ ನಲ್ಲಿನ ಪ್ರಮುಖ ವಿದ್ಯಾರ್ಥಿಗಳು ಸೇರಿ ಕಲಿಸಿದ ಗುರುಗಳಿಗೆ ಕೃತಜ್ಞತೆ ಪೂರ್ವಕವಾಗಿ ಜಮಖಂಡಿ ನಗರದಲ್ಲಿ ಸನ್ಮಾನಿಸಿ ಗುರು ಪ್ರೇಮಭಾವ ತೋರಿದರು.ಅಂದಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸವಿಕ್ಷಣಗಳ ರಸಧಾರೆಯಲ್ಲಿ ತೇಲಿದರು. ಉತ್ತಮ ಕಲಿಕಾಂಶಗಳ ಮೂಲಕ ನಮ್ಮಯ ಬದುಕಿನಲ್ಲಿ ಬೆಳಕು ಚೆಲ್ಲಿದ್ದಾರೆ.…

Read More

ಮುದ್ದೇಬಿಹಾಳ: ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ತಾರನಾಳ ಅವರ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು ಬಡ ರೋಗಿಗಳಿಗೆ ಬ್ರೆಡ್, ಹಣ್ಣು, ಬಿಸ್ಕತ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.ಈ ವೇಳೆ ಸಿಕಂದರ ಜಾನ್ವೇಕರ, ರಫೀಕ ಶಿರೋಳ, ಸಿ.ಜಿ.ವಿಜಯಕರ, ಬಾಬಾ ಪಟೇಲ, ಮಂಜುನಾಥಗೌಡ ಪಾಟೀಲ, ಪ್ರಶಾಂತ ತಾರನಾಳ, ರಮೆಶ ಇಂಗಳಗಿ, ವಿಜಯಕುಮಾರ ಚೌವ್ಹಾಣ, ಪರಶುರಾಮ ಬಯ್ಯಾಪೂರ, ವಿರೂಪಾಕ್ಷಿ ಕ್ಷತ್ರಿ, ರಂಜಾನ ನದಾಫ, ಲಕ್ಷö್ಮಣ ಚೌವ್ಹಾಣ, ಬಸವರಾಜ ಕೊಳೂರ, ಸಮೀರ ದ್ರಾಕ್ಷಿ, ಶರಣು ಚಲವಾದಿ, ಪ್ರಶಾಂತ ರಾಠೋಡ, ಸಂಗಮೆಶ ಚಲವಾದಿ ಸೇರಿದಂತೆ ಮತ್ತೀತರರು ಇದ್ದರು.

Read More

ಮುದ್ದೇಬಿಹಾಳ: ಕುರಿಮರಿಯೊಂದನ್ನು ರಕ್ಷಿಸಲು ಹರಿಯುವ ನೀರಿಗಿಳಿದು ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ನಾಗಬೇನಾಳ ಸಮೀಪದ ಚೆಕ್‌ಪೋಸ್ಟ್ ಬಳಿ ನಡೆದಿದೆ.ಮೃತ ದುರ್ದೈವಿಯನ್ನು ಮಂಜುನಾಥ ಮಾದರ(೨೮) ಎಂದು ಗುರುತಿಸಲಾಗಿದೆ.ನಾರಾಯಣಪೂರ ಎಡದಂಡೆ ಕಾಲುವೆ ಬಳಿ ಕುರಿಕಾಯಲು ಹೋದಾಗ ಕುರಿಮರಿಯೊಂದು ಜಾರಿ ಕಾಲುವೆಗೆ ಬಿದ್ದಿದೆ. ಮರಿ ರಕ್ಷಣೆ ಮಾಡಲು ಕಾಲುವೆ ಜಿಗಿದ ಕುರಿಗಾಹಿ ಕುರಿಮರಿಯನ್ನು ರಕ್ಷಿಸಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.ಘಟನಾ ಸ್ಥಳಕ್ಕೆ ಬಾಗೇವಾಡಿಯ ಡಿಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸೈ ಸಂಜಿವ ತಿಪ್ಪಾರೆಡ್ಡಿ ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಶವಕ್ಕಾಗಿ ಶೋಧ ನಡೆಸಿದ್ದಾರೆ.

Read More

ಮುದ್ದೇಬಿಹಾಳ: ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದ ೨೫ನೇ ವರ್ಷದ ವಿಜಯೋತ್ಸವದ ಹಿನ್ನೆಲೆ ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿಯ ವತಿಯಿಂದ ಪಟ್ಟಣದ ಹಳೆಯ ತಹಶೀಲ್ದಾರ ಕಚೇರಿಯ ಬಳಿ ಇರುವ ಸೈನಿಕ ಮೈದಾನದಲ್ಲಿ ಜು.೨೬ ರಂದು ಬೆಳಿಗ್ಗೆ ೧೦ರಿಂದ ವಿವಿಧ ದೇಶಭಕ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಸ್ಥಾಪಕ ಗೌರವಾಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಹೇಳಿದರು.ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದ ಸಮಯದಲ್ಲಿ ಹುತಾತ್ಮರಾದ ತಾಲೂಕಿನ ಸೈನಿಕರ ಮನೆಗಳಿಂದ ಅವರ ಭಾವಚಿತ್ರ ಸಮೇತ ಜ್ಯೋತಿ ಯಾತ್ರೆ ಪಟ್ಟಣದ ವೀರಯೋಧ ದಾವಲಸಾಬ ಕಂಬಾರ ಅವರ ಮನೆಗೆ ಬರಲಿದೆ. ಅಲ್ಲಿಂದ ಭವ್ಯವಾದ ಮೆರವಣಿಗೆ ನಡೆಯಲಿದೆ. ನಂತರ ಸೈನ್ಯದಲ್ಲಿಎಲ್ಲವೂ ಉನ್ನತ ಹುದ್ದೆಯಲ್ಲಿರುವವರನ್ನ ಪರಿಚರಿಸುವ ಕಾರ್ಯ ನಡೆಯಲಿದೆ. ಒಟ್ಟಾರೆಯಾಗಿ ಕಾರ್ಯಕ್ರಮ ಅದ್ಭುತವಾಗಿ ನಡೆಯಲಿದ್ದು ಎಲ್ಲ ದೇಶಪ್ರೇಮಿಗಳು ಭಾಗಿಯಾಗಿ ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.ಈ ವೇಳೆ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕಲಾಲ ಮಾತನಾಡಿ, ಆಪರೇಶನ್ ವಿಜಯ ದಿವಸವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಬೇಕೆಂದು…

Read More

ವಿಜಯಪುರ: ಕಾಯಕ ಎಂಬುದು ಶ್ರೇಷ್ಠವಾಗಿದ್ದು ಅದು ವ್ಯಕ್ತಿಯ ಘನತೆಯನ್ನು ಹೆಚ್ಚಿಸುತ್ತದೆ. ಕಾಯಕ ಯಾವುದಾದರೂ ಅದನ್ನು ಶ್ರದ್ಧೆಯಿಂದ ಮಾಡಬೇಕು, ಅಂದಾಗ ಮಾತ್ರ ವೃತ್ತಿ ಗೌರವ ಹೆಚ್ಚಾಗುತ್ತದೆ ಎಂದು ಎ ಆರ್ ಹತ್ತಿ ಹೇಳಿದರು.ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ರಾಜೀವ್ ಗಾಂಧಿ ಸ್ಮಾರಕ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಎಚ್. ಎಲ್. ತಾಳಿಕೋಟಿಯವರ ಸೇವಾ ನಿವೃತ್ತಿ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರುನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಾಯಕಕ್ಕೆ ಇನ್ನೊಂದು ಹೆಸರು ಎಂದರೆ ಅದು ಎಚ್ ಎಲ್ ತಾಳಿಕೋಟೆಯವರು. ಅವರು ವಿದ್ಯಾರ್ಥಿಗಳ ಪಾಲಿನ ಪಾಲಕರಾಗಿ ನಿಷ್ಠೆಯಿಂದ ಸೇವೆ ಮಾಡಿದ್ದಾರೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಪಂ ಸದಸ್ಯ ಎನ್‍ ಪಿ ನಾಯ್ಕೋಡಿ, ಈ ಶಾಲೆ ಪ್ರಾರಂಭದಿಂದಲೂ ಇವರು ಮನೆ ಮನೆಗೆ ಹೋಗಿ ಶಾಲೆ ಬಿಟ್ಟ ಮಕ್ಕಳನ್ನು ಮನವೊಲಿಸಿ ಶಾಲೆಗೆ ಸೇರಿಸಿದವರು. ಎಷ್ಟೋ ಪಾಲಕರಿಗೆ ಬುದ್ಧಿವಾದವನ್ನು ಹೇಳಿ ಅವರ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಅವರ ಬಾಳಿನಲ್ಲಿ ಬೆಳಕಾದವರು ಎಂದರು.ಮತ್ತೋರ್ವ ಶಾಲೆಯ ಶಿಕ್ಷಕರಾದ ಜಡ್. ಎಮ್. ಮಾಶ್ಯಾಲರವರು ಮಾತನಾಡಿ, ತಾಳಿಕೋಟಿಯವರು…

Read More

ಸಿಂದಗಿ: “140 ಕೋಟಿ ಜನ ಮನದುಂಬಿ ಸ್ವಾಗತಿಸಿದ ಏಕ್ ಭಾರತ ಸದೃಢ ಭಾರತ ಎಂಬಂತೆ ಮೋದಿಜಿಯವರ 3.0 ಬಜೆಟ್ ನಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಕೈಗಾರಿಕಾ, ಉತ್ಪಾದನೆ, ಸೇರಿದಂತೆ 9 ಅಂಶಗಳನ್ನು ಒಳಗೊಂಡಿದೆ. ಮಹಿಳೆಯರು, ಉದ್ಯಮಿದಾರರಿಗೆ ಬಡವರ, ಶ್ರಮಿಕರ, ಕಾರ್ಮಿಕರ, ಮಧ್ಯಮ ವರ್ಗದವರ ಆರ್ಥಿಕವಾಗಿ ಮೇಲೆತ್ತುವ ಬಜೆಟ್ ಇದಾಗಿದೆ. ಜೊತೆಗೆ 4 ಕೋಟಿ ವೇತನದಾರಿಗೆ ಮತ್ತು ಪಿಂಚಣಿದಾರರಿಗೆ ಅನುಕೂಲ ಆಗುವ ಬಜೆಟ್ ಇದಾಗಿದ್ದು, ಭಾರತ ವಿಶ್ವಗುರು ಆಗುವುದರಲ್ಲಿ ಎರಡು ಮಾತಿಲ್ಲ” – ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ)ಬಿಜೆಪಿ ಮುಖಂಡರು, ಸಿಂದಗಿ

Read More