ವಿಜಯಪುರ: ಕಾಯಕ ಎಂಬುದು ಶ್ರೇಷ್ಠವಾಗಿದ್ದು ಅದು ವ್ಯಕ್ತಿಯ ಘನತೆಯನ್ನು ಹೆಚ್ಚಿಸುತ್ತದೆ. ಕಾಯಕ ಯಾವುದಾದರೂ ಅದನ್ನು ಶ್ರದ್ಧೆಯಿಂದ ಮಾಡಬೇಕು, ಅಂದಾಗ ಮಾತ್ರ ವೃತ್ತಿ ಗೌರವ ಹೆಚ್ಚಾಗುತ್ತದೆ ಎಂದು ಎ ಆರ್ ಹತ್ತಿ ಹೇಳಿದರು.
ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ರಾಜೀವ್ ಗಾಂಧಿ ಸ್ಮಾರಕ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಎಚ್. ಎಲ್. ತಾಳಿಕೋಟಿಯವರ ಸೇವಾ ನಿವೃತ್ತಿ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಾಯಕಕ್ಕೆ ಇನ್ನೊಂದು ಹೆಸರು ಎಂದರೆ ಅದು ಎಚ್ ಎಲ್ ತಾಳಿಕೋಟೆಯವರು. ಅವರು ವಿದ್ಯಾರ್ಥಿಗಳ ಪಾಲಿನ ಪಾಲಕರಾಗಿ ನಿಷ್ಠೆಯಿಂದ ಸೇವೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಪಂ ಸದಸ್ಯ ಎನ್ ಪಿ ನಾಯ್ಕೋಡಿ, ಈ ಶಾಲೆ ಪ್ರಾರಂಭದಿಂದಲೂ ಇವರು ಮನೆ ಮನೆಗೆ ಹೋಗಿ ಶಾಲೆ ಬಿಟ್ಟ ಮಕ್ಕಳನ್ನು ಮನವೊಲಿಸಿ ಶಾಲೆಗೆ ಸೇರಿಸಿದವರು. ಎಷ್ಟೋ ಪಾಲಕರಿಗೆ ಬುದ್ಧಿವಾದವನ್ನು ಹೇಳಿ ಅವರ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಅವರ ಬಾಳಿನಲ್ಲಿ ಬೆಳಕಾದವರು ಎಂದರು.
ಮತ್ತೋರ್ವ ಶಾಲೆಯ ಶಿಕ್ಷಕರಾದ ಜಡ್. ಎಮ್. ಮಾಶ್ಯಾಲರವರು ಮಾತನಾಡಿ, ತಾಳಿಕೋಟಿಯವರು ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿ, ನಮ್ಮ ಸಂಸ್ಥೆಗೆ ಮಾರ್ಗದರ್ಶನ ನೀಡಿದ್ದಾರೆ. ರಾಜೀವ್ ಗಾಂಧಿ ಸ್ಮಾರಕ ಪ್ರೌಢಶಾಲೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಂತಗೌಡ ಚೌದ್ರಿ, ಸಾಹೇಬ ಪಟೇಲ್, ಮುರುಡಿ, ನ್ಯಾಮತ್ ಬಾಷಾ ಹುಣಚಾಳ, ಮಲ್ಲು ಭಜಂತ್ರಿ, ಆನಂದ್ ಗೌಡರ, ರಿಯಾಜ್ ಯಡ್ರಾಮಿ ಎಸ್ ಡಿ ಎಂ ಸಿ ಅಧ್ಯಕ್ಷ ಇಸ್ಮಾಯಿಲ್ ತಂಗಡಿಗೆ ಉಪಸ್ಥಿತರಿದ್ದರು
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಊರಿನ ಗಣ್ಯ ವ್ಯಕ್ತಿಗಳಿಂದ ಎಚ್ ಎಲ್ ತಾಳಿಕೋಟಿ ದಂಪತಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಸಂಸ್ಥೆಯ ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರಾದ ಎನ್ ಎಲ್ ಗುಗ್ಗುರಿ, ಎಬಿ ನಾಯಕ್, ಬಿ ಎನ್ ಸಜ್ಜನ್, ಎಸ್ ಎಂ ತಂಗಡಗಿ ಮಾ ಶಾಕ್ ತಾಳಿಕೋಟಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕರಾದ ಎಲ್ ಡಿ ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಎ ಬಿ ನಾಯಕ್ ಸ್ವಾಗತಿಸಿದರು. ಮಾಶಾಕ್ ತಾಳಿಕೋಟಿ ಹೊಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

