ಮುದ್ದೇಬಿಹಾಳ: ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದ ೨೫ನೇ ವರ್ಷದ ವಿಜಯೋತ್ಸವದ ಹಿನ್ನೆಲೆ ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿಯ ವತಿಯಿಂದ ಪಟ್ಟಣದ ಹಳೆಯ ತಹಶೀಲ್ದಾರ ಕಚೇರಿಯ ಬಳಿ ಇರುವ ಸೈನಿಕ ಮೈದಾನದಲ್ಲಿ ಜು.೨೬ ರಂದು ಬೆಳಿಗ್ಗೆ ೧೦ರಿಂದ ವಿವಿಧ ದೇಶಭಕ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಸ್ಥಾಪಕ ಗೌರವಾಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಹೇಳಿದರು.
ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದ ಸಮಯದಲ್ಲಿ ಹುತಾತ್ಮರಾದ ತಾಲೂಕಿನ ಸೈನಿಕರ ಮನೆಗಳಿಂದ ಅವರ ಭಾವಚಿತ್ರ ಸಮೇತ ಜ್ಯೋತಿ ಯಾತ್ರೆ ಪಟ್ಟಣದ ವೀರಯೋಧ ದಾವಲಸಾಬ ಕಂಬಾರ ಅವರ ಮನೆಗೆ ಬರಲಿದೆ. ಅಲ್ಲಿಂದ ಭವ್ಯವಾದ ಮೆರವಣಿಗೆ ನಡೆಯಲಿದೆ. ನಂತರ ಸೈನ್ಯದಲ್ಲಿಎಲ್ಲವೂ ಉನ್ನತ ಹುದ್ದೆಯಲ್ಲಿರುವವರನ್ನ ಪರಿಚರಿಸುವ ಕಾರ್ಯ ನಡೆಯಲಿದೆ. ಒಟ್ಟಾರೆಯಾಗಿ ಕಾರ್ಯಕ್ರಮ ಅದ್ಭುತವಾಗಿ ನಡೆಯಲಿದ್ದು ಎಲ್ಲ ದೇಶಪ್ರೇಮಿಗಳು ಭಾಗಿಯಾಗಿ ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.
ಈ ವೇಳೆ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕಲಾಲ ಮಾತನಾಡಿ, ಆಪರೇಶನ್ ವಿಜಯ ದಿವಸವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಬೇಕೆಂದು ಎಲ್ಲ ಪದಾಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದು ಕಾರ್ಯಕ್ರಮದ ರೂಪರೇಷೆ ಅಚ್ಚುಕಟ್ಟಾಗಿ ತಯಾರಿಸಲಾಗಿದೆ. ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಯ ಒಬ್ಬ ದಕ್ಷ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ತಾಲೂಕಿನ ಎಲ್ಲ ದೇಶಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದರು.
ಈ ವೇಳೆ ಮಹಾಂತೇಶ ಬೂದಿಹಾಳಮಠ, ಪುನೀತ ಹಿಪ್ಪರಗಿ, ಸಂತೋಷ ಬಾದರಬಂಡಿ, ರಾಜಶೇಖರ ಹೊಳಿ, ರವೀಂದ್ರ ಬಿರಾದಾರ, ನಬೀಸಾ ನದಾಫ, ಹಣಮಂತ ನಲವಡೆ, ರಾಜು ಬಳ್ಳೊಳ್ಳಿ, ಶ್ರೀಕಾಂತ ಹಿರೇಮಠ, ಸೋಮನಗೌಡ ಬಿರಾದಾರ, ಶೇಖರ ಢವಳಗಿ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

