Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗುರು-ಶಿಷ್ಯ ಪರಂಪರೆ ಭಾವಕ್ಕೆ ಜೀವಕಳೆ ತಂದ ಹಳೆ ಶಿಷ್ಯ ಬಳಗ
(ರಾಜ್ಯ ) ಜಿಲ್ಲೆ

ಗುರು-ಶಿಷ್ಯ ಪರಂಪರೆ ಭಾವಕ್ಕೆ ಜೀವಕಳೆ ತಂದ ಹಳೆ ಶಿಷ್ಯ ಬಳಗ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಗುರು-ಶಿಷ್ಯರ ಪವಿತ್ರ ಪರಂಪರೆಗೆ ಸಾಕ್ಷಿಯಾದ ಮಧುರ ಕ್ಷಣ | ಶಿಷ್ಯರಿಂದ ನಿವೃತ್ತ ಗುರುದ್ವಯರಿಗೆ ಸನ್ಮಾನ

ಚಿಕ್ಕಪಡಸಲಗಿ: ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಅಮೋಘ ಸೇವೆ ಸಲ್ಲಿಸಿ ಈಚೆಗೆ ಸೇವಾ ನಿವೃತ್ತರಾದ ಗುರುದ್ವಯರಿಗೆ ಹಳೆ ಶಿಷ್ಯ ಬಳಗ ಹೃದಯಸ್ಪರ್ಶಿ ಸನ್ಮಾನದೊಂದಿಗೆ ಗೌರವಿಸಿ ಧನ್ಯತಾಭಾವ ಮೆರೆದರು.
ಆಧುನಿಕತೆಯ ಸೊಗಡಿನಲ್ಲಿಂದು ದಿನೇದಿನೇ ಮರೆಯಾಗುತ್ತಿರುವ “ಗುರು-ಶಿಷ್ಯ” ಪವಿತ್ರ ಪರಂಪರೆ ಭಾವಕ್ಕೆ ಇಲ್ಲಿ ಹಳೆ ಶಿಷ್ಯ ಬಳಗ ಜೀವಕಳೆ ತಂದರು.
ಸುಮಾರು ಮೂರು,ನಾಲ್ಕು ದಶಕಗಳ ಕಾಲ ವಿದ್ಯಾರ್ಥಿಗಳ ಸಮೂಹಕ್ಕೆ ಕಲಿಕಾ ಜ್ಞಾನ ಧಾರೆ ಎರೆದು ಈಚೆಗೆ ವಯೋಸೇವಾ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ ಹಾಗೂ ಕನ್ನಡ ಪಂಡಿತ ಆರ್.ವಿ.ಕುಲಕರ್ಣಿ ಅವರಿಗೆ 1989-90 ನೇ ಸಾಲಿನ ಹಳೆ ಬ್ಯಾಚ್ ನಲ್ಲಿನ ಪ್ರಮುಖ ವಿದ್ಯಾರ್ಥಿಗಳು ಸೇರಿ ಕಲಿಸಿದ ಗುರುಗಳಿಗೆ ಕೃತಜ್ಞತೆ ಪೂರ್ವಕವಾಗಿ ಜಮಖಂಡಿ ನಗರದಲ್ಲಿ ಸನ್ಮಾನಿಸಿ ಗುರು ಪ್ರೇಮಭಾವ ತೋರಿದರು.
ಅಂದಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸವಿಕ್ಷಣಗಳ ರಸಧಾರೆಯಲ್ಲಿ ತೇಲಿದರು. ಉತ್ತಮ ಕಲಿಕಾಂಶಗಳ ಮೂಲಕ ನಮ್ಮಯ ಬದುಕಿನಲ್ಲಿ ಬೆಳಕು ಚೆಲ್ಲಿದ್ದಾರೆ. ಬದುಕು ರೂಪುಗೊಳ್ಳಲು ಪೂರಕವಾಗಿದ್ದಾರೆ. ಕ್ರಿಯಾಶೀಲ ಗುರುಗಳ ಸೇವೆ ಅನುಪಮವಾಗಿದೆ. ಸಾಮಾಜಿಕ ಹೊಣೆಗಾರಿಕೆ, ಚಿಂತನೆ, ಆಲೋಚನೆಗಳ ಮೂಲಕ ಜ್ಞಾನದ ಬೆಳಕು ಹೊಳೆಯುವಂತೆ ಮಾಡಿದ್ದಾರೆ. ಗುರುವೆಂಬ ಪದಗಳಿಗೆ ಮೌಲ್ಯಯುತ ಅರ್ಥ ಕಲ್ಪಿಸಿ ಪವಿತ್ರ ಕಾಯಕ ಗೈದಿದ್ದಾರೆ. ಶಾಲಾ ಮಕ್ಕಳಿಗೆ ಜೀವನ ನೀತಿ,ಆದರ್ಶ ರೀತಿ ಹೇಗಿರಬೇಕೆಂಬ ನೈತಿಕತೆಯ ಭಾವ ಬಿತ್ತಿ ಆದರ್ಶತನದ ಸನ್ಮಾರ್ಗ ಗುಣಗಳನ್ನು ಹೇಳಿಕೊಟ್ಟಿರುವ ಗುರುಗಳ ವಿಶ್ರಾಂತ ಜೀವನ ಆರೋಗ್ಯಕರವಾಗಿ ಸುಖಮಯವಾಗಿ ಸಾಗಲಿ ಎಂದು ಹಳೆ ಶಿಷ್ಯರು ತಮ್ಮ ಮೆಚ್ಚಿನ ಗುರುಗಳಿಗೆ ಶುಭ ಹಾರೈಸಿ ಪ್ರಸನ್ನತೆಯಿಂದ ಖುಷಿ ಹಂಚಿಕೊಂಡರು.
ಶಿಷ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಬಸವರಾಜ ಅನಂತಪುರ, ಹಳೆ ಶಿಷ್ಯರು ನೀಡಿದ ಪ್ರೀತಿ, ಅಭಿಮಾನದ ಸನ್ಮಾನ, ಗೌರವ ಮರೆಯಲಾಗದು. ನಿಮ್ಮಂಥ ಶಿಷ್ಯರು ಹೊಂದಿರುವ ಸದ್ಗುಣಗಳು ಇಂದಿನ ನವಪೀಳಿಗೆಗೆ ಮಾದರಿ. ಒಳ್ಳೆಯ ಗುಣಗಳನ್ನು ಹೊಂದಿರುವ ಜೀವಗಳಿಗೆ ಹಳೆಯ ನೆನಪುಗಳು ಕಾಡುವುದು ಸಹಜ. ಅದರಲ್ಲೂ ಬಾಲ್ಯದಲ್ಲಿನ ತುಂಟಾಟ, ಕಲಿತ ಅಕ್ಷರ ಜ್ಞಾನ, ಕಲಿಸಿದ ಗುರು,ಕಲಿತ ಶಾಲೆ,ಒಡನಾಡಿ ಸ್ನೇಹಿತರು ಹೀಗೆ ಹಳೆಯ ಸ್ಮರಣೀಯ ನೋಟಗಳು ಅಚ್ಚಳಿಯಾಗಿ ಉಳಿಸಿಕೊಂಡು ನೆನಪಿಸಿಕೊಳ್ಳುವದರಲ್ಲೇ ಒಂದು ರೀತಿಯ ಸಂತಸ, ನೆಮ್ಮದಿ, ರೋಮಾಂಚನ. ಮಾಸಿದ ಮೊಗಗಳಿಗೆ ನವಚೇತನ ನೀಡುತ್ತದೆ ಎಂದರು.
ಆರ್.ವ್ಹಿ. ಕುಲಕರ್ಣಿ ಮಾತನಾಡಿ, ಬಹುತೇಕ ಹಳೆಯ ವಿದ್ಯಾರ್ಥಿಗಳಲ್ಲಿ ವಿನಯತೆ, ಸದ್ಭಾವ ಗುಣಗಳು ಇನ್ನೂ ಜೀವಂತವಾಗಿವೆ. ಇಂಥ ಪ್ರಜ್ಞಾವಂತ,ವಿದ್ಯಾವಂತರೇ ಉತ್ತಮ ಸಮಾಜಕ್ಕೆ ಆಶಾಕಿರಣ. ಸಕಾರಾತ್ಮಕ, ಆದರ್ಶ ಗುಣಗಳ ವಿದ್ಯಾವಂತ ಯುವ ಸಮೂಹ ಇಂದಿನ ನಾಗರಿಕ ಸಮುದಾಯದ ಆಸ್ತಿ ಎಂದರು.
1989-90 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಳೆ ವಿದ್ಯಾರ್ಥಿಗಳಾದ ಲಕ್ಷ್ಮಣ ಬಡಿಗೇರ, ಸಿದ್ದು ಪಾಟೀಲ, ಶಬ್ಬಿರ ಮುಲ್ಲಾ, ಕಾಶೀನಾಥ್ ನಾವಿ, ಆರ್.ಎಂ.ಪಾಟೀಲ, ಸುರೇಶ ಕಡಕೋಳ,ಶ್ರೀಶೈಲ ಹರೋಲಿ, ಮೌನೇಶ್ ಬಡಿಗೇರ, ಗೋರೆಖಾನ ಸೇರಿದಂತೆ ಹಲ ಒಡನಾಡಿ ಆಪ್ತಮಿತ್ರ ಬಳಗ ಸೇರಿ ಅಭೂತಪೂರ್ವ ಸನ್ಮಾನ ಗುರುಗಳಿಗೆ ನೀಡಿ ಕೃತಜ್ಞತೆಯಿಂದ ಭಾವಪರಶರಾಗಿ ಧನ್ಯತೆ ಮೆರೆದರು. ಹಲವಾರು ಶಿಷ್ಯರು ನೆಚ್ಚಿನ ಗುರುಗಳ ಪಾದಗಳಿಗೆ ಶಿರಬಾಗಿ ನಮಸ್ಕರಿಸಿ ಗುರುಭಕ್ತಿ ತೋರಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.