Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ತಾಲೂಕಿನ ಢವಳಗಿ ಗ್ರಾಮದ ವಿಜಯವಾಣಿ ವರದಿಗಾರ ಜಿ.ಎನ್.ಬೀರಗೊಂಡ (ಮುತ್ತು) ಮತ್ತು ಡೈಲಿ ಸಾಲಾರ ವರದಿಗಾರ ಲಾಡ್ಲೆಮಶಾಕ ನದಾಫ ಆಯ್ಕೆಯಾಗಿದ್ದಾರೆ.ಜುಲೈ ೨೮ ರವಿವಾರದಂದು ವಿಜಯಪುರದ ಪೊಲೀಸ್ ಭವನದಲ್ಲಿ ನಡೆಯುತ್ತಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಮತ್ತು ಗಣ್ಯರ ಸಮ್ಮುಖದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಕೊಲ್ಹಾರ: ತಾಲೂಕಿನ ಬಳೂತಿ ಗ್ರಾಮದ ಭಾವಿ ಬಸವೇಶ್ವರ ಹೆಜ್ಜೆ ಮೇಳ ಸಹಯೋಗದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ತಾಲೂಕು ಘಟಕ ಕೊಲ್ಹಾರ ವತಿಯಿಂದ ಬಳೂತಿ ಗ್ರಾಮದಲ್ಲಿ ” ಜಿಲ್ಲಾ ಮಟ್ಟದ ರಿವಾಯತ ಸಂಭ್ರಮ ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಬೀಬಿ ಫಾತೀಮಾಳ ಹತ್ತು ದಿನಗಳ ಜಾರತ ಉತ್ಸವ ಪ್ರಯುಕ್ತ ದಿನಾಂಕ ೨೫ ಮತ್ತು ೨೬ ರಂದು ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ನಾಗರದಿನ್ನಿಯ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳ ಸಾನಿಧ್ಯದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಎಸ್ ಜಾನಪದ ಬಾಲಾಜಿ ಉದ್ಘಾಟಿಸುವರು. ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗನೂರ) ಅಧ್ಯಕ್ಷತೆ ವಹಿಸುವರು. ಕೊಲ್ಹಾರ ತಾಲೂಕಾಧ್ಯಕ್ಷ ಮಲ್ಲಪ್ಪ ಗಣಿ ಹಾಗೂ ಜಿಲ್ಲಾ, ತಾಲೂಕಾ ಮತ್ತು ವಲಯ ಪದಾಧಿಕಾರಿಗಳು ಹಾಗೂ ಬಳೂತಿ ಗ್ರಾಮದ ಗಣ್ಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವದು.ಜಿಲ್ಲೆಯ ವಿವಿಧ ಭಾಗಗಳಿಂದ ೧೦೧ ಹೆಜ್ಜೆ ಮೇಳ ಕಲಾ ತಂಡಗಳು ಪ್ರದರ್ಶನ ನೀಡಲಿವೆ. ಕಲಾತಂಡಗಳಿಗೆ ಸನ್ಮಾನ -…
– ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ, ಮೊ.೯೪೪೯೨೩೪೧೪೨ ದಿನವೆಲ್ಲ ಅದೆಷ್ಟೋ ಜನರನ್ನು ಭೇಟಿಯಾಗುತ್ತೇವೆ. ಹೊಸದಾಗಿ ಕೈ ಕುಲುಕಿದವರ ಮಾತುಗಳಿಗೆ ಮಾತ್ರ ಚೂಪಾಗುವ ಕಿವಿಗಳು, ಉಳಿದವರ ಮಾತುಗಳನ್ನು ಲೆಕ್ಕಾಚಾರದಲ್ಲಿ ಕೇಳಿಸಿಕೊಳ್ಳುತ್ತೇವೆ. ಇನ್ನು ಮನೆ ಮಂದಿಯ ಮಾತುಗಳನ್ನಂತೂ ಈ ಕಡೆಯಿಂದ ಕೇಳಿ ಆ ಕಡೆಯಿಂದ ಬಿಟ್ಟು ಬಿಡುತ್ತೇವೆ. ಬೇರೆಯವರೆಲ್ಲ ನಮ್ಮ ಮಾತುಗಳನ್ನು ಮೆಚ್ಚಿಕೊಳ್ಳಬೇಕು. ಹ್ಞೂಂಗುಡಬೇಕು. ಆದರೆ ಎದುರಿಗಿನವರ ಮಾತಿಗೆ ಬೇಸರದಿಂದ ತಲೆ ಅಲ್ಲಾಡಿಸುವ ವಿಚಿತ್ರ ಸ್ವಭಾವ ನಮ್ಮದು. ಇದೆಂತಹ ವೈರುದ್ಧವಿಲ್ಲವೇ? ಇತರರು ಮಾತುಗಳನ್ನು ತಿರಸ್ಕರಿಸಿದರಂತೂ ನೋವು ಬೇಸರ ಸಿಟ್ಟು ನೆತ್ತಿಗೇರುತ್ತದೆ. ನಮಗೆ ಬೇಕಾದ ಕಿವಿಗಳು ಜಗತ್ತಿನ ಅದ್ಯಾವ ಮೂಲೆಯಲ್ಲಿಯೇ ಅಡಗಿರಲಿ ಅವುಗಳನ್ನು ಬಿಡದೇ ಹಿಡಿದು, ಬೇಕಾದ ಬೇಡವಾದ ಭಾವಗಳೆಲ್ಲವನ್ನು ತುಂಬುತ್ತೇವೆ. ವಿಶ್ವ ವಿಖ್ಯಾತ ವ್ಯಕ್ತಿಗಳ ಜೀವನಗಾಥೆಯನ್ನು ತೆರೆದು ಸೂಕ್ಷ್ಮವಾಗಿ ಅವಲೋಕಿಸಿದರೆ ಆಸ್ಥೆಯಿಂದ ಆಲಿಸುವಿಕೆಯ ಗುಣವೇ ಅವರು ಹೀಗೆ ಶಾಶ್ವತವಾಗಿ ಉಳಿಯಲು ಕಾರಣ ಎಂಬುದು ಅರಿವಿಗೆ ಬರುತ್ತದೆ. ನಾವು ಕೇಳಿಸಿಕೊಳ್ಳುವ ಮಾತುಗಳಲ್ಲೆಲ್ಲ ಬಹು ಬೇಸರದಿಂದ ಪಡೆದುಕೊಳ್ಳುವುದು ಬುದ್ಧಿವಾದವನ್ನು. ಅರೆ ! ಇದೇನು ನಾನು ಇತರರ ಮಾತುಗಳನ್ನು…
ಯಡ್ರಾಮಿ ವಿರಕ್ತಮಠದಲ್ಲಿ ಪುಣ್ಯಾರಾಧನೆ | ಉಚಿತ ಆರೋಗ್ಯ ತಪಾಸಣೆ | ರಕ್ತದಾನ ಶಿಬಿರ ಯಡ್ರಾಮಿ: ಜೀವನದಲ್ಲಿನ ಅನೇಕ ಬಗೆಯ ತೊಂದರೆಗಳನ್ನು ಹೊತ್ತುಕೊಂಡು ಬಂದ ಭಕ್ತರ ಪಾಲಿಗೆ ಲಿಂ. ಸಿದ್ದರಾಮ ಮಹಾಸ್ವಾಮಿಗಳು ಕಷ್ಟಗಳ ನೀಗಿಸುವ ವೈದ್ಯರಂತಿದ್ದರು ಎಂದು ಸೊನ್ನದ ಡಾ.ಶಿವಾನಂದ ಮಹಾಸ್ವಾಮಿಗಳು ನುಡಿದರು.ಪಟ್ಟಣದ ಶ್ರೀ ಮುರುಘೇಂದ್ರ ಶಿವಯೋಗಿ ವಿರಕ್ತ ಮಠದಲ್ಲಿ ಬುಧವಾರ ಆಯೋಜಿಸಿದ್ದ ಲಿಂ.ಸಿದ್ಧರಾಮ ಮಹಾಸ್ವಾಮಿಗಳವರ ತೃತೀಯ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಪೂಜ್ಯ ಸಿದ್ಧರಾಮ ಮಹಾಸ್ವಾಮಿಗಳು ಸರಳ ಮತ್ತು ಸೌಮ್ಯ ಸ್ವಭಾವದವರು. ಹಾಗೆಯೇ ತ್ರಿಕಾಲ ಲಿಂಗ ಪೂಜಾ ನಿಷ್ಠರು ಆಗಿದ್ದರು. ಯಾವ ಗದ್ದಲ ಗೋಜಲುಗಳಿಲ್ಲದೇ ತಮ್ಮ ಬಳಿ ಭಕ್ತಿಯಿಂದ ಬರುವ ಭಕ್ತರ ತೊಂದರೆಗಳನ್ನು ಸಮಾಧಾನದಿಂದಲೇ ಆಲಿಸಿ ಸೂಕ್ತ ಪರಿಹಾರಗಳನ್ನು ನೀಡುವುದರ ಮೂಲಕ ಭಕ್ತರ ಪಾಲಿಗೆ ಆರಾಧ್ಯದೈವವಾಗಿದ್ದಾರೆ. ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆ ಸ್ಮರಣೀಯವಾಗಿದೆ ಎಂದರು.ಅವರು ಹಾಕಿಕೊಟ್ಟ ಸುಮಾರ್ಗದಲ್ಲಿಯೇ ಸದ್ಯದ ಪೀಠಾಧಿಪತಿಗಳಾದ ಸಿದ್ಧಲಿಂಗ ಸ್ವಾಮಿಗಳು ಸಮಾಜೋ ಧಾರ್ಮಿಕ ಸೇವೆ ಮುಂದುವರಿಸಿಕೊಂಡು ಹೋಗುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.ಪುಣ್ಯಸ್ಮರಣೆಯ ನಿಮಿತ್ತವಾಗಿ ಶ್ರೀ…
ದೇವರಹಿಪ್ಪರಗಿ: ಆಲಮಟ್ಟಿ ಆಣೆಕಟ್ಟಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು ತಕ್ಷಣವೇ ಚಿಮ್ಮಲಗಿ ಮುಖ್ಯ ಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಬೇಕೆಂದು ನಿವಾಳಖೇಡ ಗ್ರಾಮದ ರೈತರು ಆಗ್ರಹಿಸಿದ್ದಾರೆ.ತಾಲ್ಲೂಕು ಸೇರಿದಂತೆ ಮತಕ್ಷೇತ್ರದಲ್ಲಿ ವಾಡಿಕೆಯಂತೆ ಮುಂಗಾರಿನ ಬಹುತೇಕ ಮಳೆಗಳು ರೈತ ಸಮುದಾಯದ ನಿರೀಕ್ಷೆಯಂತೆ ಆಗದೇ ಇದ್ದು, ಇದೇ ಸಂದರ್ಭದಲ್ಲಿ ಕಾಲುವೆಗಳಿಗೆ ನೀರು ಪೂರೈಸುವ ಆಲಮಟ್ಟಿ ಆಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರು ಸಂಗ್ರಹವಾಗುತ್ತಿದೆ. ಜೊತೆಗೆ ಈಗ ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಆಲಮಟ್ಟಿ ಆಣೆಕಟ್ಟಿನಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಈ ನೀರನ್ನು ಕಾಲುವೆಗಳಿಗೆ ಹರಿಸಲು ಯಾವುದೇ ತೊಂದರೆಯಿಲ್ಲ. ಅದಕ್ಕಾಗಿ ತಕ್ಷಣವೇ ಕಾಲುವೆಗಳ ಮುಖಾಂತರ ನಿರಂತರ ನೀರು ಹರಿಸಿ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕು.ದೇವರಹಿಪ್ಪರಗಿ ಭಾಗದ ಚಿಮ್ಮಲಗಿ ಮುಖ್ಯ ಕಾಲುವೆ ಹಾಗೂ ನಾಗಠಾಣ ಉಪಕಾಲುವೆಗಳಿಗೆ ಕಾಲುವೆಯ ಕೊನೆಯ ಭಾಗದವರೆಗೂ ತಲುಪುವಂತೆ ಕೂಡಲೇ ನೀರು ಹರಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಗ್ರಾಮದ ರೈತಸಂಘದ ಪದಾಧಿಕಾರಿಗಳಾದ ಚನ್ನಪ್ಪ ಕಾರಜೋಳ, ಬಸವರಾಜ ಭಂಟನೂರ, ವಿನೋದ ತಳವಾರ,…
ಬಾಗೇವಾಡಿ ತಾಲೂಕಿನಾದ್ಯಂತ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ ಜಿ.ಪಂ.ಸಿಇಓ ರಿಷಿ ಆನಂದ ಸೂಚನೆ ವಿಜಯಪುರ: ಬಸವನ ಬಾಗೇವಾಡಿ ತಾಲೂಕಿನ ತಾಲೂಕಿನ ಯರನಾಳ ಮತ್ತು ಮುತ್ತಗಿ ಗ್ರಾಮ ಪಂಚಾಯತಿ ಹಾಗೂ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಬುಧವಾರ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಯರನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ೨೦೨೩-೨೪ನೇ ಸಾಲಿನಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ತೆರೆದ ಬಾವಿ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಯರನಾಳ ಗ್ರಾಮದಲ್ಲಿನ ಸರಕಾರಿ ಅಂಗನವಾಡಿವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಕಟ್ಟಡ, ಮಕ್ಕಳ ಹಾಜರಾತಿ, ದಾಸ್ತಾನು ಸಂಗ್ರಹಣೆ ಕೋಣೆ, ಸುತ್ತ-ಮುತ್ತಲಿನ ಸ್ವಚ್ಛತೆಯನ್ನು ವೀಕ್ಷಿಸಿ,ಅಂಗನವಾಡಿ ಕೇಂದ್ರದ ಸುತ್ತಲೂ ದಿನನಿತ್ಯ ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಳಿಕ ಗ್ರಾಮದಲ್ಲಿನ ಜಲ ಜೀವನ ಮಿಷನ್…
ವಿಜಯಪುರ: ಇಂಡಿ ವಿವಿಧ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬುಧವಾರ ಭೇಟಿ ನೀಡಿ ತಾಲೂಕಾ ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿದರು.ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬಾಕಿ ಕಡತಗಳ ಪರಿಶೀಲನೆ, ನ್ಯಾಯಾಲಯ ಪ್ರಕರಣಗಳ ಕಡತ, ಆಧಾರ ನೊಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ, ದಾಖಲೆಗಳನ್ನು ಆಧಾರದೊಂದಿಗೆ ಜೋಡಣೆಯ ಪ್ರಗತಿ ಮಾಹಿತಿ, ಜಾತಿ-ಆದಾಯ ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.ಇಂಡಿ ಪುರಸಭೆ ಕಚೇರಿಗೆ ಭೇಟಿ ನೀಡಿದ ಅವರು, ಡೆಂಗ್ಯೂ ನಿಯಂತ್ರಣಕ್ಕೆ ಫಾಗಿಂಗ್ ಸೇರಿದಂತೆ ಅಗತ್ಯ ಕ್ರಮ ವಹಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ ಅವರು, ಬಾಕಿ ಇರುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಸಂಗ್ರಹಿಸುವ ಆಸ್ತಿ ಕರ-ನೀರಿನ ಶುಲ್ಕ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಬೇಕು. ಪುರಸಭೆಯಲ್ಲಿ ನಿರ್ವಹಿಸುತ್ತಿರುವ ಇ-ಆಫೀಸ್‌ಗಳ ಮೂಲಕ ಕಡತಗಳ ಮಾಹಿತಿ ಪಡೆದುಕೊಂಡು ಅವರು, ಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಪಟ್ಟಣದಲ್ಲಿನ ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇಂಡಿ ಉಪ…
ಡೆಂಗ್ಯೂ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಭಿಮತ ವಿಜಯಪುರ: ಮನೆಯ ಸುತ್ತಮುತ್ತಲಿನ ಸಂಗ್ರಹಗೊಳ್ಳುವ ನೀರಿನಲ್ಲಿ ಉತ್ಪತ್ತಿಯಾಗುವ ಈಡೀಸ್ ಸೊಳ್ಳೆಗಳು ಕಚ್ಚುವ ಮೂಲಕ ಡೆಂಗ್ಯೂ ಹರಡಲಿರುವುದರಿಂದ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕರೆ ನೀಡಿದರು.ಇಂಡಿಯ ಮಿನಿ ವಿಧಾನಸೌಧದ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ಡೆಂಗ್ಯೂ ಜನಜಾಗೃತಿಯ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮಳೆಗಾಲ ಆರಂಭವಾಗಿರುವುದರಿಂದ ವಿವಿಧ ನೀರು ಸಂಗ್ರಹವಾಗದಂತೆ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ನೋಡಿಕೊಳ್ಳಬೇಕು. ಘನತ್ಯಾಜ್ಯ ವಸ್ತುಗಳನ್ನು ವಿಂಗಡಿಸಿ ವಿಲೇ ಮಾಡಬೇಕು, ಸಂಗ್ರಹಿಸಿರುವ ಮನೆಯಲ್ಲಿನ ತೊಟ್ಟಿ ಬ್ಯಾರಲ್, ಡ್ರಮ್‌ಗಳಲ್ಲಿ ಸಂಗ್ರಹ ಮಾಡಿದ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಚಗೊಳಿಸುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಎಂದು ಹೇಳಿದರು.ಡೆಂಗ್ಯೂ ಜಾಗೃತಿ ಜಾಥಾವು ಇಂಡಿಯ ಮಿನಿ ವಿಧಾನಸೌಧದಿಂದ ಬಸವೇಶ್ವರ ಸರ್ಕಲ್, ಮಹಾವೀರ ಸರ್ಕಲ್ ಮಾರ್ಗವಾಗಿ ಸಂಚಾರಿ ಜಾಗೃತಿ ಮೂಡಿಸಿತು.ಕಾರ್ಯಕ್ರಮದಲ್ಲಿ ಇಂಡಿ ಉಪ ವಿಭಾಗಾಧಿಕಾರಿ ಆಬೀದ ಗದ್ಯಾಳ, ತಹಶೀಲ್ದಾರ ಸಂಜಯ…
ಜು.27ರಂದು ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ನೂತನ ಟ್ರಾಮಾ ಸೆಂಟರ್ & ಎಮರ್ಜೆನ್ಸಿ ಮೆಡಿಸಿನ್ ಕಟ್ಟಡದ ಉದ್ಘಾಟನೆ
ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಂಶೋಧನ ಕೇಂದ್ರದ ನೂತನ ಟ್ರಾಮಾ ಸೆಂಟರ್ ಮತ್ತು ಎಮರ್ಜೆನ್ಸಿ ಮೆಡಿಸಿನ್ ಕಟ್ಟಡದ ಉದ್ಘಾಟನೆ ಸಮಾರಂಭ ಜುಲೈ 27 ರಂದು ಶನಿವಾರ ಬೆಳಿಗ್ಗೆ 9.30 ಗಂಟೆಗೆ ನಡೆಯಲಿದೆ.ಯಡಿಯೂರು-ಡಂಬಳ-ಗದಗ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಜಿ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಬೆಳಗಾವಿ ಕೆಎಲ್‌ಇ ಸಂಸ್ಥೆಯ ಚೇರ್‌ಮನ್ ಮತ್ತು ಕಾಹೆರ್ ಕುಲಾಧಿಪತಿ ಪ್ರಭಾಕರ ಬಿ. ಕೋರೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಾಧಿಪತಿ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ವಿ. ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆರ್. ಎಂ. ಹೊನ್ನುಟಗಿ ಉಪಸ್ಥಿತರಿರಲಿದ್ದಾರೆ ಎಂದು ವಿವಿ ರಜಿಸ್ಟ್ರಾರ್…
ಮುದ್ದೇಬಿಹಾಳ: ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಶ್ರೀ ವೀರಭದ್ರೇಶ್ವರ ಜಾತ್ರೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತ್ಯಂತ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.ಪಟ್ಟಣದ ಕುಂಬಾರ ಗಲ್ಲಿಯಲ್ಲಿರುವ ಶ್ರೀ ಗ್ರಾಮ ದೇವತೆ ದೇವಸ್ಥಾನದಲ್ಲಿ ಕರೆದಿದ್ದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ವಿವರಿಸಲಾಯಿತು.ಅ.೧೬ ದೇವಸ್ಥಾನದ ಕಳಸ ಇಳಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವದು. ೧೯ರಂದು ಮಹಾಸ್ವಾಮಿಗೆ ಮಹಾರುದ್ರಾಭಿಷೇಕ, ೨೦ ರಂದು ಬೆಳಿಗ್ಗೆ ೫ಕ್ಕೆ ದೇವಸ್ಥಾನದ ಮೂಲ ಮೂರ್ತಿಗೆ ಮಹಾರುದ್ರಾಭಿಷೇಕ, ಉತ್ಸವ ಮೂರ್ತಿ, ಕಳಶ ಹಾಗೂ ಪಲ್ಲಕ್ಕಿಯನ್ನು ತಂಗಡಗಿಯ ಕೃಷ್ಣಾ ನದಿಗೆ ಗಂಗಸ್ಥಕ್ಕೆ ಕರೆದೊಯ್ಯಲಾಗುವದು. ಗಂಗಾಸ್ನಾನದ ಬಳಿಕ ಪುರ ಪ್ರವೇಶ, ೯ಗಂಟೆಗೆ ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಪಿಲೆಕಮ್ಮ ದೇವಸ್ಥಾನದಿಂದ ಪುರವಂತರ ಸೇವೆಯೊಂದಿಗೆ ಬಸವೇಶ್ವರ ವೃತ್ತ, ಗಾಂಧಿ ರಸ್ತೆ, ಸರಾಫ್ ಬಜಾರ ಮೂಲಕ ಭವ್ಯ ಮೆರವಣಿಯೊಂದಿಗೆ ದೇವಸ್ಥಾನಕ್ಕೆ ತಲುಪುವದು. ನಂದರ ಮಹಾನೈವೇದ್ಯ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರೊ ಐ.ಬಿ.ಹಿರೇಮಠ ಪ್ರಕಟಿಸಿದರು.ಈ ವೇಳೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಪು.ಸದಸ್ಯ ಚನ್ನಪ್ಪ ಕಂಠಿ,…
