ಕೊಲ್ಹಾರ: ತಾಲೂಕಿನ ಬಳೂತಿ ಗ್ರಾಮದ ಭಾವಿ ಬಸವೇಶ್ವರ ಹೆಜ್ಜೆ ಮೇಳ ಸಹಯೋಗದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ತಾಲೂಕು ಘಟಕ ಕೊಲ್ಹಾರ ವತಿಯಿಂದ ಬಳೂತಿ ಗ್ರಾಮದಲ್ಲಿ ” ಜಿಲ್ಲಾ ಮಟ್ಟದ ರಿವಾಯತ ಸಂಭ್ರಮ ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೀಬಿ ಫಾತೀಮಾಳ ಹತ್ತು ದಿನಗಳ ಜಾರತ ಉತ್ಸವ ಪ್ರಯುಕ್ತ ದಿನಾಂಕ ೨೫ ಮತ್ತು ೨೬ ರಂದು ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ನಾಗರದಿನ್ನಿಯ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳ ಸಾನಿಧ್ಯದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಎಸ್ ಜಾನಪದ ಬಾಲಾಜಿ ಉದ್ಘಾಟಿಸುವರು. ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗನೂರ) ಅಧ್ಯಕ್ಷತೆ ವಹಿಸುವರು. ಕೊಲ್ಹಾರ ತಾಲೂಕಾಧ್ಯಕ್ಷ ಮಲ್ಲಪ್ಪ ಗಣಿ ಹಾಗೂ ಜಿಲ್ಲಾ, ತಾಲೂಕಾ ಮತ್ತು ವಲಯ ಪದಾಧಿಕಾರಿಗಳು ಹಾಗೂ ಬಳೂತಿ ಗ್ರಾಮದ ಗಣ್ಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವದು.
ಜಿಲ್ಲೆಯ ವಿವಿಧ ಭಾಗಗಳಿಂದ ೧೦೧ ಹೆಜ್ಜೆ ಮೇಳ ಕಲಾ ತಂಡಗಳು ಪ್ರದರ್ಶನ ನೀಡಲಿವೆ. ಕಲಾತಂಡಗಳಿಗೆ ಸನ್ಮಾನ – ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

