ಮುದ್ದೇಬಿಹಾಳ: ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಶ್ರೀ ವೀರಭದ್ರೇಶ್ವರ ಜಾತ್ರೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತ್ಯಂತ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಪಟ್ಟಣದ ಕುಂಬಾರ ಗಲ್ಲಿಯಲ್ಲಿರುವ ಶ್ರೀ ಗ್ರಾಮ ದೇವತೆ ದೇವಸ್ಥಾನದಲ್ಲಿ ಕರೆದಿದ್ದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ವಿವರಿಸಲಾಯಿತು.
ಅ.೧೬ ದೇವಸ್ಥಾನದ ಕಳಸ ಇಳಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವದು. ೧೯ರಂದು ಮಹಾಸ್ವಾಮಿಗೆ ಮಹಾರುದ್ರಾಭಿಷೇಕ, ೨೦ ರಂದು ಬೆಳಿಗ್ಗೆ ೫ಕ್ಕೆ ದೇವಸ್ಥಾನದ ಮೂಲ ಮೂರ್ತಿಗೆ ಮಹಾರುದ್ರಾಭಿಷೇಕ, ಉತ್ಸವ ಮೂರ್ತಿ, ಕಳಶ ಹಾಗೂ ಪಲ್ಲಕ್ಕಿಯನ್ನು ತಂಗಡಗಿಯ ಕೃಷ್ಣಾ ನದಿಗೆ ಗಂಗಸ್ಥಕ್ಕೆ ಕರೆದೊಯ್ಯಲಾಗುವದು. ಗಂಗಾಸ್ನಾನದ ಬಳಿಕ ಪುರ ಪ್ರವೇಶ, ೯ಗಂಟೆಗೆ ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಪಿಲೆಕಮ್ಮ ದೇವಸ್ಥಾನದಿಂದ ಪುರವಂತರ ಸೇವೆಯೊಂದಿಗೆ ಬಸವೇಶ್ವರ ವೃತ್ತ, ಗಾಂಧಿ ರಸ್ತೆ, ಸರಾಫ್ ಬಜಾರ ಮೂಲಕ ಭವ್ಯ ಮೆರವಣಿಯೊಂದಿಗೆ ದೇವಸ್ಥಾನಕ್ಕೆ ತಲುಪುವದು. ನಂದರ ಮಹಾನೈವೇದ್ಯ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರೊ ಐ.ಬಿ.ಹಿರೇಮಠ ಪ್ರಕಟಿಸಿದರು.
ಈ ವೇಳೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಪು.ಸದಸ್ಯ ಚನ್ನಪ್ಪ ಕಂಠಿ, ಪ್ರಮುಖರಾದ ಅಪ್ಪಣ್ಣ ಸಿದ್ದಾಪೂರ, ಮಹಾಂತಪ್ಪ ನಾವದಗಿ, ಬಾಲಪ್ಪ ನಾಗಠಾಣ, ಶಿವಾನಂದ ಹಿರೇಮಠ, ಬಾಲಪ್ಪ ನಾಗಠಾಣ, ಎಸ್.ಬಿ.ಕನ್ನೂರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

