Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ್ ಘೋಷ ಅವರು ಜು.೨೮ ಹಾಗೂ ೨೯ರಂದು ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಜು.೨೮ರಂದು ವಿಜಯಪುರಕ್ಕೆ ಆಗಮಿಸಿ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳ ವಸತಿ ನಿಲಯ, ರೈತ ಸಂಪರ್ಕ ಕೇಂದ್ರ, ಪಿ.ಎಚ್.ಸಿ., ಸಿ.ಹೆಚ್.ಸಿ, ಆಸ್ಪತ್ರೆಗಳ ಕ್ಷೇತ್ರ ವೀಕ್ಷಣೆ ಹಾಗೂ ಪರಿಶೀಲನೆ ನಡೆಸಿ ನಂತರ ಮುಂಗಾರು ಋತುವಿನ ವಿಪತ್ತು ನಿರ್ವಹಣೆಯ ಯೋಜನೆಯ ಪರಿಶೀಲನೆ ಹಾಗೂ ಇತರೆ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.ಜು.೨೯ರಂದು ಬೆಳಿಗ್ಗೆ ೧೦-೩೦ರಿಂದ ೧-೩೦ರವರೆಗೆ ಸಭೆ ನಡೆಸಿ, ೧-೩೦ರಿಂದ ಕ್ಷೇತ್ರ ವೀಕ್ಷಣೆ ನಡೆಸಿ, ವಿಜಯಪುರದಿಂದ ಕಲ್ಬುರ್ಗಿ ಮೂಲಕ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರ: ಕಾರ್ಗಿಲ್ ಯುದ್ಧದದಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ನೆನೆಯುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯ ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಹೇಳಿದ್ದಾರೆ.ಶುಕ್ರವಾರ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.24 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಗಡಿಯನ್ನು ಅತೀಕ್ರಮಿಸಿದ್ದ ಪಾಕಿಸ್ತಾನಿ ಸೈನಿಕರನ್ನು ಭಾರತೀಯ ಯೋಧರು ಸದೆಬಡಿದು ಗೆಲುವು ಸಾಧಿಸಿದರು. ಈ ಯುದ್ಧದಲ್ಲಿ ಹಲವಾರು ಸೈನಿಕರು ಪ್ರಾಣ ತ್ಯಾಗ ಮಾಡಿದರು. ಅಲ್ಲದೇ, ಅನೇಕ ಯೋಧರು ಗಾಯಗೊಂಡಿದ್ದರು. ಈ ಯುದ್ಧದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸೈನಿಕರನ್ನು ನೆನೆದು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.ವಿದ್ಯಾರ್ಥಿಗಳಾದ ಅನುಪ್ರಿಯಾ ಕುಲಕರ್ಣಿ ಮತ್ತು ಪೃಥ್ವಿ ಕೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಯೋಧರು ಪ್ರತಿಹೆಜ್ಜೆಗೂ ಎದುರಾದ ಪ್ರಾಣಾಪಾಯ ಲೆಕ್ಕಿಸದೇ ನಡೆಸಿದ ಹೋರಾಟದ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಯೋಧರ…
ವಿಜಯಪುರ: ಹಿಂದುಸ್ತಾನ ಕೋಕಾ ಕೋಲಾ ಬೆವೆರಜಿಸ್ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ಐತಿಹಾಸಿಕ ಮಮದಾಪುರ ಕೆರೆಯ ಪುನರುಜ್ಜೀವನ ಕಾಮಗಾರಿಗೆ ದಿ.28 ರವಿವಾರ ಬೆ.10.30ಗಂ. ಮಮದಾಪುರ ಕೆರೆ ಆವರಣದಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಭೂಮಿ ಪೂಜೆ ಸಲ್ಲಿಸಲಿದ್ದಾರೆ.ಈ ಯೋಜನೆಯಲ್ಲಿ ಬಾಂದಾರ ನಿರ್ಮಾಣ ಹಾಗೂ 800 ಮೀಟರ್ ಟ್ಯಾಂಕ್ ಬಾಂದಾರಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಫೆನ್ಸಿಂಗ್ ಮತ್ತು ಹ್ಯಾಂಡ್ರೈಲ್‌ಗಳನ್ನು ಸ್ಥಾಪಿಸುವುದು, ಫುಟ್‌ಪಾತ್‌ಗಳನ್ನು ರಚಿಸುವುದು ಮತ್ತು ಮಕ್ಕಳ ಆಟದ ಪ್ರದೇಶವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಅಲ್ಲದೇ, ಸಿದ್ದೇಶ್ವರ ಸ್ವಾಮೀಜಿ ಅವರ ಸ್ಮರಣಾರ್ಥ ಅರಣ್ಯೀಕರಣದ ಉಪಕ್ರಮವು ಕೆರೆಯ ಸುತ್ತಲಿನ 1,654 ಎಕರೆಗಳನ್ನು ಒಳಗೊಂಡಿದೆ. ಯೋಜನೆ ಪೂರ್ಣಗೊಂಡರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಲಿದೆ.ಇದೇ ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ 25 ಸರಕಾರಿ ಪ್ರೌಢ ಶಾಲೆಗಳಿಗೆ ಏಕಸ್ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಿಂದ ನೀಡಿದ ಸ್ಮಾರ್ಟ್ ಕ್ಲಾಸ್ ಬೋರ್ಡ್ಗಳನ್ನು ನೀಡಿದ್ದು, ಬೆ.11ಗಂ. ಮಮದಾಪುರ ಕೆಪಿಎಸ್ ಪ್ರೌಢಶಾಲೆಯಲ್ಲಿ ಉದ್ಘಾಟಿಸಲಾಗುವುದು.ಈ ಸಂದರ್ಭದಲ್ಲಿ ಮಮದಾಪುರ ವಿರಕ್ತಮಠದ ಪರಮ ಪೂಜ್ಯ ಅಭಿನವ ಮುರುಘೇಂದ್ರ…
ವಿಜಯಪುರ: ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯು ವಿಶಾಲವಾಗಿದೆ. ಸಾಂಪ್ರದಾಯಿಕ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು ತುಂಬುವುದರ ಮೇಲೆ ಕೇಂದ್ರೀಕರಿಸಿ, ಮಕ್ಕಳ ಜ್ಞಾನವನ್ನು ವಿಸ್ತರಿಸಿ, ವ್ಯಕ್ತಿತ್ವದ ಬೆಳವಣಿಗೆಗೆ ಸಹಕರಿಸಬೇಕು ಎಂದು ಡೈಟ್ ಕಾಲೇಜಿನ ಪ್ರಾಚಾರ್ಯ ಉಮಾದೇವಿ ಸೊನ್ನದ ಹೇಳಿದರು.ಅವರು ಇಟ್ಟಂಗಿಹಾಳ ರಸ್ತೆಯಲ್ಲಿರುವ ಏಕ್ಸಲೆಂಟ್ ಶಾಲೆಯಲ್ಲಿ ಶುಕ್ರವಾರದಂದು ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಹಾಗೂ ಏಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ವಿದ್ಯಾಲಯ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಗತಿವಿಧಿ, ಪ್ರಾಂತ ಮಟ್ಟದ ಶಿಕ್ಷಕ ಸ್ವಾಧ್ಯಾಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಉತ್ತಮ ಗುಣಮಟ್ಟದ, ಸಾರ್ವತ್ರಿಕ, ಸಮಗ್ರ ಶಿಕ್ಷಣದ ಮೂಲಕ ಸಮಾನ ಜ್ಞಾನಾಧಾರಿತ ಸಮಾಜ ಸ್ಥಾಪಿಸುವಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು. ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಡಾ.ಮೀನಾ ಚಂದಾವರ್ಕರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪುನರುತ್ಥಾನದ ಉದ್ದೇಶದಿಂದ ಈ ಸಂಸ್ಥೆಯು ಸಮಗ್ರ ಭಾರತೀಯ ದೃಷ್ಟಿಕೋನದ ಆಧಾರದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ, ಪಠ್ಯಕ್ರಮ, ವ್ಯವಸ್ಥೆ ಮತ್ತು ವಿಧಾನಗಳನ್ನು ವಿಕಸಿಸುವ ಗುರಿಯನ್ನು…
ವಿಜಯಪುರ: ಜು.೨೬ “ಕಾರ್ಗಿಲ್ ವಿಜಯ ದಿವಸ್” ನಮ್ಮ ದೇಶದ ಗಡಿಯನ್ನು ಅತಿಕ್ರಮಿಸುವ ಮೂಲಕ ಯುದ್ಧಕ್ಕೆ ಬಂದ ಶತ್ರು ದೇಶ ಪಾಕಿಸ್ತಾನದ ಸೈನಿಕರನ್ನು, ನಮ್ಮ ದೇಶದ ಹೆಮ್ಮಯ ಸೈನಿಕರು ಹೊಡೆದೋಡಿಸುವ ಮೂಲಕ ನಮ್ಮ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದ ದಿನ.ನಮ್ಮ ತಾಯಿ ಭಾರತಾಂಬೆಯ ರಕ್ಷಣೆಗಾಗಿ ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಹಾಗೂ ಗಾಯಗೊಂಡ ಸಾವಿರಾರು ವೀರ ಯೋಧರನ್ನು ಸ್ಮರಿಸುತ್ತಾ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುವ ಈ ಸುಸಂದರ್ಭದಲ್ಲಿ ಶುಕ್ರವಾರ ತಾಲೂಕು ಪಂಚಾಯತ ವಿಜಯಪುರ ಸಭಾಭವನದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹೊಂಗಯ್ಯ ಹಾಗೂ ಸಹಾಯಕ ನಿರ್ದೇಶಕ (ಗ್ರಾ.ಉ) ಮಸಳಿ ಅವರ ಸಮ್ಮುಖದಲ್ಲಿ ಎಲ್ಲ ಅಧಿಕಾರಿ ಸಿಬ್ಬಂದಿ ವರ್ಗದವರೆಲ್ಲರ ಉಪಸ್ಥಿತಿಯಲ್ಲಿ ತಾಯ್ನಾಡಿಗಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ ಮಾಜಿ ಸೈನಿಕರಾದ ಎಸ್ ಆರ್ ಕಟ್ಟಿ ಮತ್ತು ಬಿ ಆರ್ ರಾಥೋಡ ಸರ್ ಅವರಿಗೆ ಹೃದಯ ಸ್ಪರ್ಶಿ ನಮನಗಳನ್ನು ತಿಳಿಸಿ ಈರ್ವರಿಗೂ ಸತ್ಕರಿಸಲಾಯಿತು.
ಬಂಜಾರಾ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ ಕುರಿತು ಮುಖ್ಯ ಗುರುಗಳ ಸಭೆ ವಿಜಯಪುರ: ಪರೀಕ್ಷೆ ಶಾಲಾ ಶಿಕ್ಷಣ ಬದುಕಿನ ಅವಿಭಾಜ್ಯ ಅಂಗ. ಸದ್ಯ ಶಾಲಾ ಶಿಕ್ಷಣದಲ್ಲಿ ಪರೀಕ್ಷೆ ಒಂದು ಪ್ರಧಾನ ಭಾಗವೇ ಆಗಿ ಬಿಟ್ಟಿದೆ. ಅದರಲ್ಲಿ ಬೇರೆ ಬೇರೆ ತರಗತಿಗಳಲ್ಲಿ ವಿವಿಧ ಹಂತದ ಪರೀಕ್ಷೆಗಳಿರುವುದು ಗೊತ್ತಿರುವ ವಿಷಯವೇ. ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಿ ಆ ಮೂಲಕ ವಿದ್ಯಾರ್ಥಿಯ ಮುಂದಿನ ಕಲಿಕಾ ಕಾರ್ಯತಂತ್ರಗಳನ್ನು ರೂಪಿ, ವಿದ್ಯಾರ್ಥಿಗಳ ಉತ್ತೀರ್ಣತೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಪಾಸು ಅಥವಾ ಫೈಲು ಎಂಬುನ್ನು ನಿರ್ಧರಿಸುವುದಕ್ಕೆ ಪರೀಕ್ಷೆ ಪ್ರಧಾನ ಸಲಕರಣೆಯೂ ಆಗಿದೆ ಎಂದು ಶಿಕ್ಷಣ ಸಂಯೋಜಕರಾದ ಎಲ್.ಎಸ್.ಬಿರಾದಾರರವರು ಹೇಳಿದರು.ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ ಕುರಿತು ಶಾಲಾ ಮುಖ್ಯ ಗುರುಗಳ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು. ಶಾಲೆಯ ಶಿಕ್ಷಕರು ಬೆಳಗಿನ ಜಾವ ಎದ್ದು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಮೊಬೈಲ್ ಪೋನ್ ಮೂಲಕ ಕರೆ ಮಾಡಿ ಬೆಳಗಿನ…
ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಕಾಲೇಜ್ ಪ್ರಾಣಿ ಶಾಸ್ತ್ರ ವಿಭಾಗದಿಂದ ಬೂತನಾಳ ಕೆರೆ ಆವರಣದಲ್ಲಿ ತರಬೇತಿ & ಉಪನ್ಯಾಸ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಮತ್ತು ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಭೂತನಾಳ ಸಂಯೋಜನ ಅಡಿಯಲ್ಲಿ ಬೂತನಾಳ ಕೆರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಮತ್ತು ಉಪನ್ಯಾಸವನ್ನು ಕಾರ್ಯಕ್ರಮದಲ್ಲಿ ವೈಜ್ಞಾನಿಕ ಮೀನು ಸಾಕಾಣಿಕೆ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಮೀನುಗಾರಿಕೆ, ಮತ್ತು ಮೀನುಗಳ ಪೌಷ್ಟಿಕಾಂಶದ ಮೌಲ್ಯಗಳು, ಜಲಚರ ಸಾಕಣೆ, ಅಲಂಕಾರಿಕ ಮೀನುಗಳು, ವಿವಿಧ ಜಾತಿಯ ಮೀನುಗಳನ್ನು ಗುರುತಿಸುವುದು ಹೇಗೆ, ಸಂರಕ್ಷಣೆ ತಂತ್ರಗಳು, ಉದ್ಯಮಶೀಲತೆಗೆ ಸಂಬಂಧಿಸಿದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಫಿಶ್ ಗೇರ್ ಮತ್ತು ಬಲೆಗಳನ್ನು ಉಪಯೋಗಿಸಿ ಮೀನನ್ನು ಹಿಡಿಯುವ ವಿಧಾನಗಳನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಉದ್ಘಾಟಕರಾಗಿ ವಿಜಯಪುರದ ಭೂತನಾಳ ಕೆರೆ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಮುಖ್ಯಸ್ಥ ಡಾ.ವಿಜಯ್ ಎಸ್ ಅಥನೂರ್,…
ಚಡಚಣ: ತಾಲೂಕಿನ ಜಿಗಜೇವಣಿ ಗ್ರಾಮದ ಗದ್ಯಾಳ ವಸ್ತಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಲ್ಲಪ್ಪ ಶಿವಪ್ಪ ವಾಘಮೋರೆ ಅವರಿಗೆ ‘ಕವಿ ಚಕ್ರವರ್ತಿ ರನ್ನ ಪ್ರಶಸ್ತಿ’ ಪ್ರಧಾನ ಮಾಡಲಾಯಿತು.ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಮಲ್ಲಪ್ಪ ಅವರು ಶಿಕ್ಷಕರಾಗಿ ಕಳೆದ 24 ವರ್ಷಗಳಿಂದ ಅಕ್ಷರದ ಜ್ಞಾನಾರ್ಜನೆಯನ್ನು ಮಕ್ಕಳಿಗೆ ನೀಡುತ್ತಾ ಬಂದಿರುವುದನ್ನು ಗುರುತಿಸಿ, ಮುಧೋಳದ ಮೇಘ ಮೇತ್ರಿ ಕನ್ನಡ ಸಾಹಿತ್ಯ ಸಂಘವು ಮುಧೋಳ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡ ರನ್ನ ಸಾಹಿತ್ಯ ಸಂಭ್ರಮ-2024 ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ, ಗೌರವಿಸಿದರು.ಇವರ ಸಾಧನೆಗೆ ಶಾಲೆಯ ಎಸ್.ಡಿ.ಎಂ.ಸಿ ಮಂಡಳಿಯ ಸರ್ವ ಸದಸ್ಯರು ಹಾಗೂ ಶಿಕ್ಷಕರ ವೃಂದ ಸೇರಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.
ತಾಳಿಕೋಟಿ: ಪಟ್ಟಣದ ಮುಸ್ಲಿಂ ಸಮಾಜದ ಪ್ರತಿಷ್ಠಿತ ದಿ. ಮುಸ್ಲಿಮ್ ಕೋ-ಆಪರೇಟಿವ್ಹ ಬ್ಯಾಂಕ್ ಲಿ.ಇದರ 2023-24 ನೇ ಸಾಲಿನ ವರ್ಷದಲ್ಲಿ ರೂ. 53.57 ಲಕ್ಷ ಲಾಭವನ್ನು ಹೊಂದಿದ್ದು ಇದರಲ್ಲಿ ರೂ.15 ಲಕ್ಷ ಆದಾಯ ತೆರಿಗೆಯನ್ನು ಸಲ್ಲಿಸಿ ರೂ.38.57 ಲಕ್ಷ ನಿವ್ವಳ ಲಾಭವನ್ನು ಗಳಿಸಿರುತ್ತದೆ ಎಂದು ಬ್ಯಾಂಕ್ ಅಧ್ಯಕ್ಷ ಡಿ.ಎಲ್.ಚೌದ್ರಿ ಹೇಳಿದರು.ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವರದಿ ವರ್ಷದಲ್ಲಿ ಬ್ಯಾಂಕ್ ಗ್ರೇಡ್ 1 ರಲ್ಲಿ ಮುಂದುವರೆದಿದೆ. 2023-24 ಮಾರ್ಚ್ ಅಂತ್ಯದವರೆಗೆ ಬ್ಯಾಂಕಿನ ಒಟ್ಟು ಸದಸ್ಯರ ಸಂಖ್ಯೆ 5514 ಇದ್ದು, ರೂ.183.70 ಲಕ್ಷ ಶೇರು ಬಂಡವಾಳ ಹೊಂದಿದೆ.ರೂ.139.38 ಲಕ್ಷ ಕಾಯ್ದಿಟ್ಟ ನಿಧಿಗಳು. ರೂ.4697.74ಲಕ್ಷ ಠೇವು ಹಣ ಸಂಗ್ರಹವಾಗಿದ್ದು. ವರ್ಷಂತ್ಯಕ್ಕೇರೂ. 2931.45 ಲಕ್ಷ ಸಾಲವನ್ನು ನೀಡಲಾಗಿದೆ ಎಂದರು.ಈ ಬ್ಯಾಂಕ್ ಪ್ರತಿವರ್ಷ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಇದಕ್ಕೆ ಪ್ರಮುಖ ಕಾರಣೀಕರ್ತರು ಯಾವತ್ತೂ ಬ್ಯಾಂಕಿನ ಸದಸ್ಯರು, ಗ್ರಾಹಕರು, ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ವಿಶೇಷವಾಗಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಕಳಕಳಿ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ…
ಇಂಡಿ: ಗೊಳಸಾರ ಮಠದ ಧಾರ್ಮಿಕ, ಅಧ್ಯಾತ್ಮಿಕ ಮತ್ತು ಜನಪರ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳು ಅನನ್ಯವೆಂದು ಶಿಬಿರದ ಸಂಚಾಲಕ ಬಿಎಲ್ಡಿಇ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಹೇಳಿದರು.ಅವರು ವಿಜಯಪುರದ ಬಿ ಎಲ್ ಡಿ ಈ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ವತಿಯಿಂದ ಗೊಳಸಾರದ ಶ್ರೀ ಪುಂಡಲಿಂಗೇಶ್ವರ ಮಹಾಶಿವಯೋಗಿಗಳ ೪೫ ನೆಯ ಪುಣ್ಯಾರಾಧನೆ ಮಹೋತ್ಸವದ ನಿಮಿತ್ತ ಬ್ರಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಶಿಬಿರವನ್ನು ಅಭಿನವ ತ್ರಿಮೂರ್ತಿ ಶಿವಯೋಗಿಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಅಭಿನವ ಪುಂಡಲಿಂಗ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು.ಈ ಶಿಬಿರದಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ರೋಗಿಗಳನ್ನು ಪರೀಕ್ಷಿಸಿ, ಉಚಿತವಾಗಿ ಔಷದೋಪಚಾರಗಳನ್ನು ಮಾಡಲಾಯಿತು.ಸುಮಾರು ೬೦ ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು ೫೦ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ರೋಗಿಗಳಿಗೆ ಬಿ ಎಲ್ಡಿಇ ಆಸ್ಪತ್ರೆಗೆ ದಾಖಲಾಗಲು ಶಿಫಾರಸ್ಸು ಮಾಡಲಾಯಿತು.೨೦ ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಪೂಜಾರಿ…
